ಕನ್ನಡ ಸುದ್ದಿ  /  Entertainment  /  Ott News Kannada Actor Bigboss Kannada Winner Roopesh Shetty Manku Bhai Foxy Rani Movie Released On Ott Watch Pcp

OTT Movies: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರೂಪೇಶ್‌ ಶೆಟ್ಟಿ ನಟನೆಯ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ಬಿಗ್‌ಬಾಸ್‌ ಕನ್ನಡ ಸೀಸನ್‌ 9 ಮತ್ತು ಬಿಗ್‌ಬಾಸ್‌ ಕನ್ನಡ ಓಟಿಟಿ ಸೀಸನ್‌ ಒಂದರ ವಿಜೇತ ರೂಪೇಶ್‌ ಶೆಟ್ಟಿ ನಟನೆಯ ಮಂಕು ಭಾಯ್‌ ಫಾಕ್ಸಿ ರಾಣಿ ಸಿನಿಮಾವು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

OTT Movies: ಮಂಕು ಭಾಯ್ ಫಾಕ್ಸಿ ರಾಣಿ ಒಟಿಟಿಯಲ್ಲಿ ಬಿಡುಗಡೆ
OTT Movies: ಮಂಕು ಭಾಯ್ ಫಾಕ್ಸಿ ರಾಣಿ ಒಟಿಟಿಯಲ್ಲಿ ಬಿಡುಗಡೆ

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 9 ಮತ್ತು ಬಿಗ್‌ಬಾಸ್‌ ಕನ್ನಡ ಓಟಿಟಿ ಸೀಸನ್‌ ಒಂದರ ವಿಜೇತ ರೂಪೇಶ್‌ ಶೆಟ್ಟಿ ನಟನೆಯ ಮಂಕು ಭಾಯ್‌ ಫಾಕ್ಸಿ ರಾಣಿ ಸಿನಿಮಾವು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. “ನನ್ನ ನಟನೆಯ, ಗಗನ್ ನಿರ್ದೇಶನದ ಸಿನಿಮಾ ಮಂಕು ಭಾಯಿ ಫಾಕ್ಸಿ ರಾಣಿ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ, ಈ ಕನ್ನಡ ಸಿನಿಮಾ ನೋಡಿ ಆಶೀರ್ವದಿಸಿ” ಎಂದು ರೂಪೇಶ್‌ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾದ ಕುರಿತು

ಮಂಕು ಭಾಯ್ ಫಾಕ್ಸಿ ರಾಣಿ ಕನ್ನಡ ಸಿನಿಮಾ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಈ ಚಿತ್ರದ ಹೀರೋ. ಇವರಿಗೆ ಹೀರೋಯಿನ್‌ ಆಗಿ ಬ್ರಹ್ಮಗಂಟು ಸೀರಿಯಲ್ ಕಲಾವಿದೆ ಗೀತಾ ಭಾರತಿ ಭಟ್ ನಟಿಸಿದ್ದರು. ಪ್ರಕಾಶ್‌ ತೂಮಿನಾಡ್‌, ಪಂಚಮಿ ರಾವ್‌, ಅರ್ಜುನ್‌ ಕಜೆ ಈ ಚಿತ್ರದ ತಾರಾಗಣದಲ್ಲಿದ್ದಾರೆ. ಗಗನ್ ಎಂ ನಿರ್ದೇಶನದ ಈ ಚಿತ್ರ ಇದೀಗ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಒಟಿಟಿ ಪ್ರಿಯರು ಈ ಸಿನಿಮಾ ನೋಡಬಹುದು.

ಮಂಗಳೂರು ಕನ್ನಡದ ಈ ಸಿನಿಮಾದಲ್ಲಿ ಲವ್‌, ಕಾಮಿಡಿ ಎಲ್ಲವೂ ಇದೆ. ದಪ್ಪಗಿನ ಹೆಣ್ಣನ್ನು ಮದುವೆಯಾಗುವ ಕಥೆಯನ್ನು ಹೊಂದಿದೆ. ಈ ಸಿನಿಮಾ ಕಳೆದ ವರ್ಷ ಜನವರಿ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಮಂಕು ಭಾಯ್ ಫಾಕ್ಸಿ ರಾಣಿ ಚಲನಚಿತ್ರದಲ್ಲಿ ಪ್ರೀತಿ, ನಿಗೂಢತೆಯ ಕಥೆ ಇದೆ. ವಿನ್ಯಾಸ್‌ ಮದ್ಯ ಶಮೀರ್ ಮುಡಿಪು ಸಂಗೀತ, ಎಂ.ಕೆ .ಕೆ.ಷಹಜನ್‌ ಛಾಯಾಗ್ರಹಣ, ಹಾಗೂ ಸುಶಾಂತ್‌ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನ ಇದೆ. ಈ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಇದರ ಫಸ್ಟ್‌ ಟ್ರ್ಯಾಕ್‌ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. "ಮಿಂಚಂತೆ ಮಿನುಗುತಿರೊ.." ಎಂಬ ಹಾಡು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿತ್ತು.

ಕರ್ನಾಟಕದ ಗಡಿಭಾಗ ಕಾಸರಗೋಡಿನಲ್ಲಿ ಜನಿಸಿದ ರೂಪೇಶ್‌ ಶೆಟ್ಟಿ ಯೂಟ್ಯೂಬರ್‌ ಆಗಿ ಕರಿಯರ್‌ ಆರಂಭಿಸಿದರು. ತುಳು ಕಾಮಿಡಿ ಆಲ್ಬಂ ಹಾಡುಗಳನ್ನು ಅಪ್ಲೋಡ್‌ ಮಾಡುತ್ತಿದ್ದರು. ಆರ್‌ಜೆ ಮತ್ತು ವಿಡಿಯೋ ಜಾಕಿಯಾಗಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ತುಳು ಸಿನಿಮಾ ದಿಬ್ಬಣದಲ್ಲಿ ಪೋಷಕ ನಟರಾಗಿ ಸಿನಿರಂಗಕ್ಕೆ ಎಂಟ್ರಿ ನೀಡಿದ್ದರು. 2015ರಲ್ಲಿ ಐಸ್‌ಕ್ರೀಮ್‌ ತುಳು ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಗಳಿಕೆ ಮಾಡಲಿಲ್ಲ. `ನಿಶಬ್ಧ 2',`ಡೇಂಜರ್ ಜೋನ್',`ಪಿಶಾಚಿ 2' ಮುಂತಾದ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.

ಹಲವು ತುಳು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿದ ಬಳಿಕ ಇವರು ಗಿರಿಗಿಟ್‌ ಎಂಬ ತಿಳು ಸಿನಿಮಾದಲ್ಲಿ ನಟಿಸಿದರು. ಇದು ಸೂಪರ್‌ಹಿಟ್‌ ಆಗಿತ್ತು. ಈ ಸಿನಿಮಾದಲ್ಲಿ ನಟನೆ ಮಾತ್ರವಲ್ಲೆ ರಾಕೇಶ್‌ ಕದ್ರಿ ಜತೆ ಈ ಸಿನಿಮಾದ ನಿರ್ದೇಶನವನ್ನೂ ಮಾಡಿದ್ದರು. ಇದಾದ ಬಳಿಕ ಗಮ್ಜಲ್‌ ಎಂಬ ಸಿನಿಮಾದಲ್ಲಿ ನಟಿಸಿದರು. ಮೂರೇ ದಿನದಲ್ಲಿ ಈ ಸಿನಿಮಾ ಲಾಭ ತಂದುಕೊಟ್ಟಿತ್ತು. ಇದಾದ ಬಳಿಕ ಇವರು ಬಿಗ್‌ಬಾಸ್‌ ಕನ್ನಡದಲ್ಲಿ ಗೆಲುವು ಪಡೆದರು.

IPL_Entry_Point