ಕನ್ನಡ ಸುದ್ದಿ  /  ಮನರಂಜನೆ  /  Karataka Damanaka Ott: ಕರಟಕ ದಮನಕ ಒಟಿಟಿಗೆ ಯಾವಾಗ? ಶಿವರಾಜ್‌ ಕುಮಾರ್‌, ಪ್ರಭುದೇವ್‌ ಸಿನಿಮಾವನ್ನು ಮನೆಯಲ್ಲೇ ನೋಡಿ

Karataka Damanaka OTT: ಕರಟಕ ದಮನಕ ಒಟಿಟಿಗೆ ಯಾವಾಗ? ಶಿವರಾಜ್‌ ಕುಮಾರ್‌, ಪ್ರಭುದೇವ್‌ ಸಿನಿಮಾವನ್ನು ಮನೆಯಲ್ಲೇ ನೋಡಿ

Karataka Damanaka OTT Release: ಯೋಗರಾಜ್‌ ಭಟ್‌ ನಿರ್ದೇಶನದ, ಹ್ಯಾಟ್ರಿಕ್‌ ಹೀರೋ ಶಿವ ರಾಜ್‌ಕುಮಾರ್‌ ಮತ್ತು ಪ್ರಭುದೇವ್‌ ನಟನೆಯ ಕರಟಕ ದಮನಕ ಸಿನಿಮಾವನ್ನು ಒಟಿಟಿಯಲ್ಲಿ ಸದ್ಯದಲ್ಲಿಯೇ ನೋಡಬಹುದು. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಮಾರ್ಚ್‌ 8ರಂದು ಬಿಡುಗಡೆಯಾಗಿತ್ತು.

Karataka Damanaka OTT: ಕರಟಕ ದಮನಕ ಒಟಿಟಿ
Karataka Damanaka OTT: ಕರಟಕ ದಮನಕ ಒಟಿಟಿ

ಬೆಂಗಳೂರು: ಈ ವರ್ಷದ ಆರಂಭದಿಂದಲೂ ಶಿವ ರಾಜ್‌ಕುಮಾರ್‌ ಮತ್ತು ಪ್ರಭುದೇವ್‌ ಅಭಿನಯದ ಕರಟಕ ದಮನಕ ಸಿನಿಮಾ ಬಹುನಿರೀಕ್ಷೆ ಹುಟ್ಟುಹಾಕಿತ್ತು. ಪಂಚತಂತ್ರದ ಗುಳ್ಳೆನರಿಗಳ ಹೆಸರಿನ ಈ ಸಿನಿಮಾಕ್ಕೆ ಯೋಗರಾಜ್‌ ಭಟ್‌ ಆಕ್ಷನ್‌ ಕಟ್‌ ಹೇಳಿದ್ದರು. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಈ ಸಿನಿಮಾವು ಮಾರ್ಚ್‌ 8ರಂದು ರಿಲೀಸ್‌ ಆಗಿತ್ತು. ಅದೇ ಸಮಯದಲ್ಲಿ ರಾಜ್ಯದ ಬಹುತೇಕ ಕಡೆ ಬರಗಾಲ ತಾಂಡವವಾಡುತ್ತಿತ್ತು. ವಿಶೇಷವೆಂದರೆ ಕರಟಕ ದಮನಕ ಸಿನಿಮಾದಲ್ಲೂ ನೀರಿನ ಬವಣೆಯ ಕಥೆಯಿತ್ತು. ಆದರೆ, ಸಿನಿಪ್ರಿಯರು ನಿರೀಕ್ಷೆ ಪಟ್ಟಷ್ಟು ಕರಟಕ ದಮನಕ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಕರಟಕ ದಮನಕ ಒಟಿಟಿ ಬಿಡುಗಡೆ ದಿನಾಂಕ

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಕರಟಕ ದಮನಕ ಸಿನಿಮಾ ಬಿಡುಗಡೆಯಾಗುವ ಸೂಚನೆಯಿದೆ. ಮುಂದಿನ ತಿಂಗಳು ಅಂದರೆ ಮೇನಲ್ಲಿ ಒಟಿಟಿಗೆ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಕರಟಕ ದಮನಕ ಒಟಿಟಿ ಬಿಡುಗಡೆ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಈಗ ಶಿವಣ್ಣ ಕೇವಲ ಕನ್ನಡ ನಟರಲ್ಲ. ಅವರಿಗೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಕರಟಕ ದಮನಕ ಒಟಿಟಿ ಬಿಡುಗಡೆಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಎಲ್ಲರಿಗೂ ಒಂದು ಊರು ಇರುತ್ತದೆ. ಆ ಊರನ್ನು ಬಿಟ್ಟು ಬಂದ ಮೇಲೆ ಪುನಃ ಹೋದಾಗ ಅಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಆ ವಿಷಯ ಇಟ್ಟುಕೊಂಡು ಸಾಕಷ್ಟು ಮನೋರಂಜನೆಯ ಅಂಶಗಳೊಂದಿಗೆ ಕರಟಕ ದಮನಕವನ್ನು ಯೋಗರಾಜ್‌ ಭಟ್‌ ನಿರ್ದೇಶನ ಮಾಡಿದ್ದಾರೆ.

ಯೋಗರಾಜ್‌ ಭಟ್‌ ನಿರ್ದೇಶನದ ಶಿವಣ್ಣ ಮತ್ತು ಪ್ರಭುದೇವ್‌ ಮುಖ್ಯಪಾತ್ರದಲ್ಲಿ ನಟಿಸಿರುವ ಕರಟಕ ದಮನಕ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಶಿವಣ್ಣನ ಸಿನಿಮಾವೆಂದ ಮೇಲೆ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳ ಪ್ರೇಕ್ಷಕರೂ ಕುತೂಹಲದಿಂದ ಕಾಯುತ್ತಿದ್ದರು. ಆದರೆ, ಬಾಕ್ಸ್‌ ಆಫೀಸ್‌ನಲ್ಲಿ ಬರಪೂರ ಫಸಲು ಪಡೆಯಲು ಸಿನಿಮಾ ಯಶಸ್ವಿಯಾಗಲಿಲ್ಲ. ಇದೇ ಸಮಯದಕ್ಕೆ ಸಾಕಷ್ಟು ಜನರು ಈ ಚಿತ್ರವನ್ನು ಒಟಿಟಿಗೆ ಬಂದ ಮೇಲೆ ನೋಡೋಣ ಎಂದು ಕಾಯುತ್ತಿದ್ದಾರೆ.

ಕರಟಕ ದಮನಕ ಸಿನಿಮಾ ಮಾರ್ಚ್‌ 8ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ್‌ ಕಾಂಬಿನೇಷನ್‌ನ ಚಿತ್ರ ಒಂದಿಷ್ಟು ಪ್ರೇಕ್ಷಕರಿಗೆ ಇಷ್ಟವಾಗಿದೆ. ಪ್ರಭುದೇವ್‌ ಕಾಮಿಡಿ ಟೈಮಿಂಗ್ಸ್‌ ಕೂಡ ವರ್ಕ್‌ ಆಗಿತ್ತು. ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ ಜತೆ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಪ್ರಿಯಾ ಆನಂದ್‌ ಇದ್ದರು. ಈ ಚಿತ್ರದಲ್ಲಿ ರಾಕ್‌ಲೈನ್‌ ವೆಂಕಟೇಶ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ರಂಗಾಯಣ ರಘು, ರವಿ ಶಂಕರ್‌, ಭರಣಿ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿರುವ ಈ ಸಿನಿಮಾಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ.

 

IPL_Entry_Point