Merry Christmas OTT: ಕತ್ರಿನಾ ಕೈಫ್, ವಿಜಯ್ ಸೇತುಪತಿ ನಟನೆಯ ಮೇರಿ ಕ್ರಿಸ್ಮಸ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ, ಇಲ್ಲಿದೆ ವಿವರ
Merry Christmas OTT release: ಶ್ರೀರಾಮ್ ರಾಘವನ್ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾದಲ್ಲಿ ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.
Merry Christmas OTT release: ಶ್ರೀರಾಮ್ ರಾಘವನ್ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ "ಮೇರಿ ಕ್ರಿಸ್ಮಸ್" ವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸದೆ ಇರುವವರಿಗೆ ಸಿಹಿಸುದ್ದಿ. ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಮುಖ್ಯಪಾತ್ರದಲ್ಲಿ ನಟಿಸಿರುವ ಮೇರಿ ಕ್ರಿಸ್ಮಸ್ ಸಿನಿಮಾವನ್ನು ಸದ್ಯದಲ್ಲಿಯೇ ಮನೆಯಲ್ಲಿಯೇ ವೀಕ್ಷಿಸಬಹುದು. ಈ ಕುರಿತು ಒಟಿಟಿ ಪಾಲುದಾರ ಸಂಸ್ಥೆಯು ಗುರುವಾರ ಘೋಷಣೆ ಮಾಡಿದೆ.
ಒಟಿಟಿಯಲ್ಲಿ ಮೇರಿ ಕ್ರಿಸ್ಮಸ್ ಸಿನಿಮಾ
ಮೇರಿ ಕ್ರಿಸ್ಮಸ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ನೆಟ್‌ಫ್ಲಿಕ್ಸ್ ಇಂಡಿಯಾವು ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿದೆ. "ಈ ವರ್ಷ ಕ್ರಿಸ್ಮಸ್ ಬೇಗನೇ ಬರುತ್ತಿದೆ. ಕ್ರಿಸ್ಮಸ್‌ನ ಅತ್ಯುತ್ತಮ ಉಡುಗೊರೆ ಬಿಚ್ಚಿ ನೋಡಲು ಇದು ಅತ್ಯುತ್ತಮ ಸಮಯ. ಮೇರಿ ಕ್ರಿಸ್ಮಸ್ ಸಿನಿಮಾವನ್ನು ನಾಳೆಯಿಂದ (ಇಂದಿನಿಂದ- ಮಾರ್ಚ್ 8) ಸ್ಟ್ರೀಮಿಂಗ್ ಆಗಲಿದೆ" ಎಂದು ನೆಟ್‌ಫ್ಲಿಕ್ಸ್ ಟ್ವೀಟ್ ಮಾಡಿದೆ. ಅಂದರೆ, ಇಂದಿನಿಂದ ನೆಟ್‌ಫ್ಲಿಕ್ಸ್ ಚಂದಾದಾರರು ಒಟಿಟಿಯಲ್ಲಿ ಮೇರಿ ಕ್ರಿಸ್ಮಸ್ ಸಿನಿಮಾ ವೀಕ್ಷಿಸಬಹುದು.
ಮೇರಿ ಕ್ರಿಸ್ಮಸ್ ಸಿನಿಮಾದ ಬಗ್ಗೆ
ಪ್ರಣಯ, ಅಪರಾಧ, ಸಸ್ಪೆನ್ಸ್ ಕಥಾಹಂದರದ ಮೇರಿ ಕ್ರಿಸ್ಮಸ್ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ರಾಘವನ್ ನಿರ್ದೇಶನದ ಈ ಸಿನಿಮಾ ನಿಯೋ ನಾಯರ್ ಕಥೆ ಹೇಳುತ್ತದೆ. 1980ರ ದಶಕದ ಬಾಂಬೆಯ ಕಥೆಯನ್ನು ಹೊಂದಿದೆ. ಆಲ್ಬರ್ಟ್ (ವಿಜಯ್) ನಗರಕ್ಕೆ ಆಗಮಿಸುತ್ತಾರೆ. ಕ್ರಿಸ್ಮಸ್ ಮುನ್ನಾ ದಿನ ಒಂಟಿಯಾಗಿರುವ ತಾಯಿ ಮಾರಿಯಾ (ಕತ್ರಿನಾ ಕೈಫ್) ಮತ್ತು ಮಗುವನ್ನು ಭೇಟಿಯಾಗುತ್ತಾರೆ. ಅದೇ ರೀತಿ ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಿದ್ದಂತೆ ಮಾರಿಯಾಳ ಫ್ಲಾಟ್‌ನಲ್ಲಿ ಮೃತದೇಹ ಪತ್ತೆಯಾಗುತ್ತದೆ. ಕಥೆಯಲ್ಲಿ ಹೊಸ ತಿರುವು ಪಡೆದು ನಾನಾ ಸ್ವರೂಪ ಪಡೆದುಕೊಳ್ಳುತ್ತದೆ.
ಮೇರಿ ಕ್ರಿಸ್ಮಸ್ ಸಿನಿಮಾದ ಹಿಂದಿ ಆವೃತ್ತಿಯಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ತಿನ್ನು ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಆವೃತ್ತಿಯಲ್ಲಿ ರಾಧಿಕಾ ಶರತ್‌ಕುಮಾರ್, ಷಣ್ಮುಗರಾಜ, ಕೆವಿನ್ ಜೇ ಬಾಬು ಮತ್ತು ರಾಜೇಶ್ ವಿಲಿಯಮ್ಸ್ ನಟಿಸಿದ್ದಾರೆ.
ಈ ಸಿನಿಮಾದ ವಿಮರ್ಶೆಯನ್ನು ಹಿಂದೂಸ್ತಾನ್ ಟೈಮ್ಸ್ ಈಗಾಗಲೇ ಪ್ರಕಟಿಸಿದೆ. "ಈಗಿನ ಬಹುತೇಕ ಸಿನಿಮಾಗಳ ನರೇಷನ್ ಮತ್ತು ದೃಶ್ಯಗಳಲ್ಲಿ ಅವಸರ ಕಾಣುತ್ತದೆ. ಆದರೆ, ಮೇರಿ ಕ್ರಿಸ್ಮಸ್ ಸಿನಿಮಾ ನಿಧಾನವಾಗಿ ಉರಿಯುವ ಬೆಂಕಿ. ವೀಕ್ಷಕರನ್ನು ಶೀಘ್ರದಲ್ಲಿ ಕಥೆಯೊಳಗೆ ಸೆಳೆದುಕೊಂಡು, ಕುರ್ಚಿಗೆ ಅಂಟಿಕೊಂಡು ಕುಳಿತುಕೊಂಡು ವೀಕ್ಷಿಸುವಂತೆ ಮಾಡುತ್ತದೆ. ಈ ಸಿನಿಮಾದಲ್ಲಿ ಕೆಲವೊಂದು ಡಲ್ ಸೀನ್‌ಗಳೂ ಇವೆಯೇ? ಸಿನಿಮಾ ಬೋರಿಂಗ್ ಆಗುವುದೇ? ಆಳವಾಗಿ ಅರ್ಥಮಾಡಿಕೊಂಡು ನೋಡಬಹುದಾದ ಸುಂದರ ಸಿನಿಮಾವಿದು" ಎಂದು ಹಿಂದೂಸ್ತಾನ್ ಟೈಮ್ಸ್ ಈ ಚಿತ್ರವನ್ನು ವಿಮರ್ಶೆ ಮಾಡಿದೆ.
ಕತ್ರಿನಾ ಕೈಫ್ ಅವರ ಮುಂದಿನ ಸಿನಿಮಾ ಜೀ ಲೇ ಝಾರಾ. ಇದು ಫರ್ಹಾನ್ ಅಕ್ತಾರ್ ಅವರ ರೋಡ್ ಮೂವಿ. ಆಲಿಯಾ ಭಟ್ ಮತ್ತು ಪ್ರಿಯಾಂಕ ಚೋಪ್ರಾ ಕೂಡ ಈ ಸಿನಿಮಾದಲ್ಲಿದ್ದಾರೆ. ಕಳೆದ ತಿಂಗಳು ಶ್ರೀರಾಮ್ ರಾಘವನ್ ನಿರ್ಮಾಣದ, ವರುಣ್ ಗ್ರೋವರ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿರುವ "ಆಲ್ ಇಂಡಿಯಾ ರಾಂಕ್" ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಇದೀಗ ಈ ನಿರ್ದೇಶಕರು ಆಗಸ್ತ್ಯ ನಂದಾ ಮತ್ತು ಧರ್ಮೇಂದ್ರರ ಪಿರೆಯಿಡ್ ವಾರ್ ಡ್ರಾಮಾ ಸಿನಿಮಾ "ಇಕ್ಕೀಸ್" ನಿರ್ದೇಶಿಸುತ್ತಿದ್ದಾರೆ.