ಕಿಲ್ಲರ್ ಸೂಪ್ ನೋಡಿದಿರಾ? ಕೊಂಕಣ ಸೇನ್ ಶರ್ಮಾ- ಮನೋಜ್ ಬಾಜಪೇಯಿ ಉಣಬಡಿಸಿದ ಡಾರ್ಕ್ ಕಾಮಿಡಿ ಸರಣಿ ವಿಮರ್ಶೆ
Killer Soup review: ಅಭಿಷೇಕ್ ಚೌಬೆ ಅವರು ಡಾರ್ಕ್ ಕಾಮಿಡಿ ಮತ್ತು ಇನ್ವೆಷ್ಟಿಗೇಷನ್‌ನ ದುಷ್ಟ ಮಿಶ್ರಣದೊಂದಿಗೆ ಈ ವೆಬ್ ಸರಣಿ ನಿರ್ಮಿಸಿದ್ದಾರೆ. ಕೊಂಕಣ್ ಸೇನ್‌ಶರ್ಮಾ, ಮನೋಜ್ ಬಾಜ್‌ಪೇಯಿ ಮುಖ್ಯಪಾತ್ರಗಳಲ್ಲಿ ನಟಿಸಿರುವ ಕಿಲ್ಲರ್ ಸೂಪ್ ಸರಣಿಯ ವಿಮರ್ಶೆ ಇಲ್ಲಿದೆ. ವಿಮರ್ಶಕರು: ಸಂತಾನು ದಾಸ್ (ಹಿಂದೂಸ್ತಾನ್ ಟೈಮ್ಸ್, ಎಂಟರ್‌ಟೇನ್‌ಮೆಂಟ್).

Killer Soup Series Review: ನೆಟ್‌ಫ್ಲಿಕ್ಸ್‌ನಲ್ಲಿ ಕಿಲ್ಲರ್ ಸೂಪ್ ಎಂಬ ವೆಬ್ ಸರಣಿ ಆರಂಭವಾಗಿದೆ. ಕೊಂಕಣ ಸೇನ್ ಶರ್ಮಾ ಮತ್ತು ಮನೋಜ್ ಬಾಜಪೇಯಿ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಸರಣಿ ತನ್ನ ಮೊದಲ ಕಂತಿನಲ್ಲಿಯೇ ಕುತೂಹಲ ಕೆರಳಿಸಿದೆ. ಸ್ವಾತಿ (ಕೊಂಕಣ ಸೇನ್ ಶರ್ಮಾ) ಶೀಘ್ರದಲ್ಲಿ ಸ್ವಂತ ರೆಸ್ಟೂರೆಂಟ್ ತೆರೆಯುವ ಹಂಬಲದಲ್ಲಿದ್ದಾಳೆ. ತನ್ನ ಪತಿ ಪ್ರಭಾಕರ್ ಪ್ರಭು ಶೆಟ್ಟಿಗೆ (ಮನೋಜ್ ಬಾಜಪೇಯಿ) ಪಾಯ ಸೂಪ್ ಸಿದ್ಧಪಡಿಸಿ ನೀಡಲು ಮಾತ್ರ ಗೊತ್ತಿರುವವಳು. ಅಡುಗೆಯಲ್ಲಿ ಅಸಮರ್ಥಳಾದರೂ ಇವರಿಬ್ಬರ ನಡುವೆ ಅಚ್ಚರಿಯಾಗುವಂತೆ ಬಾಂಧವ್ಯ ಆರಂಭದಲ್ಲಿ ಕಾಣಿಸುತ್ತದೆ.
ಅಭಿಷೇಕ್ ಚೌಬೆಯವರ ಹೊಸ ಸರಣಿಯಾದ ಕಿಲ್ಲರ್ ಸೂಪರ್‌ನಲ್ಲಿ ಹಲವು ವಿಷಯಗಳು ಭಯಾನಕವಾಗಿ, ಹುಚ್ಚುಚ್ಚಾಗಿದೆ. ಚಿತ್ರವಿಚಿತ್ರ ಹಾಸ್ಯಗಳ ನಡುವೆ ಅಲ್ಲಲ್ಲಿ ಕಣ್ಣೀರೂ ತರಿಸುತ್ತದೆ. ದುಷ್ಟತನವೂ ಇಲ್ಲಿದೆ. ಮನರಂಜನೆಯೂ ಇದೆ. ಗಮನವಿಟ್ಟು ಆಸ್ವಾದಿಸಿದವರಿಗೆ ಹೆಚ್ಚು ರುಚಿಕರ ಎನಿಸಬಹುದು.
ಡಾರ್ಕ್ ಕಾಮಿಡಿ
ಮೈಂಜೂರ್ ಎಂಬ ಕಾಲ್ಪನಿಕ ಊರಿನಲ್ಲಿ ಕಿಲ್ಲರ್ ಸೂಪ್ ಘಟನಾವಳಿ ನಡೆಯುತ್ತದೆ. ಸರಣಿ ಆರಂಭವಾಗುವುದು ಹೀಗೆ.. ಅಲ್ಲೊಂದು ಹೊರಗಿನಿಂದ ಶಾಂತವಾಗಿ, ಸಾಮಾನ್ಯವಾಗಿ ಕಾಣಿಸುವ ಮನೆ ಇರುತ್ತದೆ. ಅಲ್ಲಿ ಗಂಡ ಹೆಂಡತಿ ಇರುತ್ತಾರೆ. ಪ್ರಭು ತನ್ನ ಗಾಢ ಬಣ್ಣದ ಅಂಗಿ ಧರಿಸುತ್ತಾನೆ. ಸ್ವಾತಿ ಪಾಯ ಸೂಪು ತಯಾರಿಸುತ್ತಾಳೆ. ಆದರೆ, ದಿನದ ಅಂತ್ಯದ ವೇಳೆಗೆ ಪರಿಸ್ಥಿತಿಗಳು ಕೆಟ್ಟದಾಗಿ ಬದಲಾಗುತ್ತವೆ. ಸ್ವಾತಿಯು ಮಸಾಜ್ ಮಾಡುವ ಉಮೇಶ್ ಜತೆ ಸಂಬಂಧ ಹೊಂದಿದ್ದಾಳೆ ಎಂದು ಪ್ರಭುವಿಗೆ ತಿಳಿಯುತ್ತದೆ. ಇದು ಸುಳ್ಳೋ ಸತ್ಯವೋ ಎಂದು ಯೋಚಿಸಬೇಕಾದ ಸಂಗತಿ. ಇವನಿಗೆ ಅರವಿಂದ್ ಶೆಟ್ಟಿ (ಸಯಾಂಜಿ ಶಿಂಧೆ) ಎಂಬ ಭ್ರಷ್ಟ ಸಹೋದರ ಇದ್ದಾನೆ.
ಕಿಲ್ಲರ್ ಸೂಪ್‌ನಲ್ಲಿ ಹಲವು ಸುಳ್ಳುಗಳು ಒಂದರ ನಂತರ ಒಂದರಂತೆ ರಾಶಿಯಾಗಿ ಕಾಣಿಸುತ್ತವೆ. ಸ್ವಾತಿ ತನ್ನ ಪತಿಯನ್ನೇ ಬದಲಾಯಿಸಲು ಪ್ರಯತ್ನಿಸುತ್ತಾಳ? ಉಮೇಶ್‌ನನ್ನು ಸ್ವಾತಿ ಹೇಗೆ ಕುಶಲತೆಯಿಂದ ನಿರ್ವಹಿಸುತ್ತಾಳೆ ಎನ್ನುವುದು ರೋಚಕವಾಗಿದೆ. ಈ ಸರಣಿಯಲ್ಲಿ ಪೊಲೀಸ್ (ನಾಸರ್) ಮತ್ತು ಅವನ ಜತೆಗೆ ಎಎಸ್‌ಐ ತೂಪಲ್ಲಿ (ಅನ್ಬುತಾಸನ್) ಇದ್ದಾರೆ.
ಕಿಲ್ಲರ್ ಸೂಪ್ ಸರಣಿಯು ಎಂಟು ಗಂಟೆ ಅವಧಿಯ ಸಂಚಿಕೆಗಳನ್ನು ಹೊಂದಿದೆ. ಮೊದಲ ನಾಲ್ಕು ಸಂಚಿಕೆಗಳು ಮ್ಯಾಜಿಕ್ ರಿಯಾಲಿಸಂ ಮತ್ತು ಪಾಪ್ ಸಂಸ್ಕೃತಿಯಿಂದ ಎರವಲು ಪಡೆದಂತೆ ಕಾಣಿಸುತ್ತದೆ. ಒಳಸಂಚುಗಳು, ಅಪಘಾತಗಳು, ಬ್ಲ್ಯಾಕ್‌ಮೇಲ್, ಸಾವು ಇತ್ಯಾದಿಗಳು ಈ ಸರಣಿಯಲ್ಲಿದೆ.
ಉನೈಜಾ ಮರ್ಚೆಂಟ್, ಅನಂತ್ ತ್ರಿಪಾಠಿ ಮತ್ತು ಹರ್ಷದ್ ನಲವಾಡೆ ಬರೆದಿರುವ ಸ್ಕ್ರಿಪ್ಟ್ ಯಾವಾಗಲೂ ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಇರುವ ಧಾವಂತ ಹೊಂದಿರುತ್ತದೆ. ಇದೇ ಕಾರಣಕ್ಕೆ ಕಿಲ್ಲರ್ ಸೂಪ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಒಳಸಂಚುಗಳು ಇವೆ. ಸರಣಿಯ ಅಂತ್ಯಗಳಿಗೆ ಹಲವು ಪಾತ್ರಗಳಿಗೆ ನಿರ್ದಿಷ್ಟ ಅಂತ್ಯ ಹಾಡಲು ಪರದಾಡುವುದನ್ನು ಗಮನಿಸಬಹುದು. ಅನುಜ್ ರಾಕೇಶ್ ಧವನ್ ಕ್ಯಾಮೆರಾ ಕೆಲಸವೂ ಗಮನ ಸೆಳೆಯುತ್ತದೆ.
ಸರಣಿಗೆ ಕೊಂಕಣ ಸೇನ್‌ಶರ್ಮಾರೇ ಬೆನ್ನೆಲುಬು
ಈ ಸರಣಿಯಲ್ಲಿ ಕೊಂಕಣ ಸೇನ್‌ಶರ್ಮಾ ನಟನೆ ಗಮನ ಸೆಳೆಯುತ್ತದೆ. ಅವರು ಈ ಸರಣಿಯನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಈ ಕಿಲ್ಲರ್ ಸೂಪ್‌ನಲ್ಲಿ ಪ್ರತಿಕಾರವು ಪ್ರಮುಖ ಅಂಶ. ಇದೇ ಸಮಯದಲ್ಲಿ ಕೊಂಕಣ ಸೇನ್‌ಶರ್ಮಾರಿಗೆ ನಟನೆಯಲ್ಲಿ ಮನೋಜ್ ಬಾಜಪೇಯಿ ಸಮರ್ಥ ಬೆಂಬಲ ಒದಗಿಸುತ್ತಾರೆ. ಒಟ್ಟಾರೆ ಕಿಲ್ಲರ್ ಸೂಪ್‌ನಲ್ಲಿ ರೋಚಕತೆಯೊಂದಿಗೆ ಮನರಂಜನೆಯೂ ಢಾಳಾಗಿದೆ.
