ಮಹಾಭಾರತ ಕನ್ನಡ ಧಾರಾವಾಹಿ ಮತ್ತೆ ನೋಡಲು ಬಯಸುವಿರಾ? ಈ ಒಟಿಟಿಯಲ್ಲಿ ಪುರಾಣ ಮಹಾಕಾವ್ಯದ ಎಲ್ಲಾ ಸರಣಿಗಳು ಲಭ್ಯ
Mahabharata Kannada Series: ಹಳೆಯ ಮಹಾಭಾರತ ಕನ್ನಡ ಧಾರಾವಾಹಿ ಮತ್ತು ಮಹಾಭಾರತ ಕನ್ನಡ ವೆಬ್ ಸರಣಿಯನ್ನು ಮತ್ತೆ ನೋಡಲು ಬಯಸುವವರು ಸಾಕಷ್ಟು ಜನರು ಇದ್ದಾರೆ. ಮಹಾಭಾರತ ಕಥೆಯನ್ನು ಮತ್ತೆ ಮನೆಯಲ್ಲಿ ಕುಳಿತು ನೋಡಲು ಬಯಸುವವರಿಗೆ ಇಲ್ಲಿದೆ ಒಟಿಟಿ ಅಪ್‌ಡೇಟ್.

Mahabharata kannada season: ಪುರಾಣಗಳಿಗೆ ಸಂಬಂಧಪಟ್ಟ ಸೀರಿಯಲ್‌ಗಳನ್ನು ನೋಡಲು ಹೆಚ್ಚಿನವರು ಇಷ್ಟಪಡಬಹುದು. ಮಹಾಭಾರತ, ರಾಮಾಯಣದ ಕಥೆಗಳನ್ನು ನೋಡಲು ಬಹುತೇಕರು ಬಯಸುತ್ತಾರೆ. ಹಿಂದಿಯಲ್ಲಿ ಮಹಾಭಾರತ ಸೀರಿಯಲ್ ಜನಪ್ರಿಯತೆ ಪಡೆದಿದೆ. ಹಿಂದಿಯ ಮಹಾಭಾರತ ಕೆಲವು ವರ್ಷಗಳ ಹಿಂದೆ ಕನ್ನಡಕ್ಕೂ ಆಗಮಿಸಿತ್ತು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಹಾಭಾರತದ ಡಬ್ಬಿಂಗ್ ವರ್ಷನ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗಲೂ ಜನರು ಇಂಟರ್‌ನೆಟ್‌ನಲ್ಲಿ ಕನ್ನಡ ಮಹಾಭಾರತ ಸೀರಿಯಲ್ ಎಂದು ಸರ್ಚ್ ಮಾಡುತ್ತಿದ್ದಾರೆ. ಮಹಾಭಾರತ ಕನ್ನಡ ಸೀರಿಯಲ್ ಅನ್ನು ಎಲ್ಲಿ? ಯಾವ ಒಟಿಟಿಯಲ್ಲಿ ನೋಡಬಹುದೆಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಒಟಿಟಿಯಲ್ಲಿ ನೋಡಿ ಮಹಾಭಾರತ ಸೀರಿಯಲ್
ಹಳೆಯ ಸೀರಿಯಲ್‌ಗಳನ್ನು ನೋಡಲು ಇಷ್ಟಪಡುವ ಪ್ರೇಕ್ಷಕರಿಗೆ "ಮಹಾಭಾರತ ಕನ್ನಡ ಸೀರಿಯಲ್" ಇಷ್ಟವಾಗಬಹುದು. ಈ ಮಳೆಗಾಲದಲ್ಲಿ ಮನೆಯಲ್ಲಿ ಕುಳಿತು ಬೇಸರವಾದಗ ಮಹಾಭಾರತದ ಕಥೆಗಳನ್ನು ನೆನಪಿಸಿಕೊಳ್ಳಬಹುದು. ಕನ್ನಡದ ಮಹಾಭಾರತ ವೆಬ್ ಸರಣಿಯು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯಲ್ಲಿದೆ. ಆಸಕ್ತರು ಈ ಒಟಿಟಿಯಲ್ಲಿ ಮಹಾಭಾರತ ಎಂದು ಹುಡುಕಿ ಈ ವೆಬ್ ಸರಣಿಯನ್ನು ನೋಡಬಹುದು.
ಮಹಾಭಾರತ ವೆಬ್ ಸರಣಿಯನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಕನ್ನಡ ಮತ್ತು ಹಿಂದಿ ಎಂಬ ಎರಡು ಭಾಷೆಗಳಲ್ಲಿ ನೋಡಲು ಅವಕಾಶವಿದೆ.
ಉಚಿತವಾಗಿ ಮಹಾಭಾರತ ಧಾರಾವಾಹಿ ನೋಡಬೇಕೆ?
ಒಟಿಟಿಗೆ ಚಂದಾದಾರಿಕೆ ಮಾಡಿಕೊಂಡಿಲ್ಲ. ಬೇರೆಲ್ಲಾದರೂ ಉಚಿತವಾಗಿ ಮಹಾಭಾರತ ಸೀರಿಯಲ್ ನೋಡಬಹುದೇ? ಎಂದು ಆಲೋಚಿಸುವವರು ಸ್ಟಾರ್ ಸುವರ್ಣದ ಹಳೆಯ ಮಹಾಭಾರತ ಸೀರಿಯಲ್ ನೋಡಬಹುದು.
2020ರಲ್ಲಿ ಸ್ಟಾರ್ ಸುವರ್ಣದಲ್ಲಿ ಮಹಾಭಾರತ ಸೀರಿಯಲ್ ಆರಂಭವಾಗಿತ್ತು. ಮಹಾಭಾರತದ ಕನ್ನಡ ಡಬ್ ವರ್ಷನ್‌ನ ಹಳೆಯ ಸಂಚಿಕೆಗಳನ್ನು ಈಗಲೂ ಸಾಕಷ್ಟು ಜನರು ನೋಡುತ್ತಿದ್ದಾರೆ. ಸ್ವಸ್ತಿಕ್ ಪ್ರೊಡಕ್ಷನ್ಸ್ ಕಂಪನಿ ನಿರ್ಮಿಸಿದ ಮಹಾಭಾರತ ಧಾರಾವಾಹಿಯು ಒಂದು ದಶಕದ ಹಿಂದೆಯೇ ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಸುಮಾರು 276 ಸಂಚಿಕೆಗಳಲ್ಲಿ ಪ್ರಕಟವಾಗಿತ್ತು. ಹಿಂದಿಯ ಸ್ಟಾರ್ ಪ್ಲಸ್ ವಾಹಿನಿಯಲ್ಲಿದ್ದ ಈ ಸೀರಿಯಲ್ ಅನ್ನು ನಾಲ್ಕು ವರ್ಷದ ಹಿಂದೆ ಕನ್ನಡಕ್ಕೆ ಡಬ್ ಮಾಡಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಮಾಡಲಾಗಿತ್ತು.
ಮಹಾಭಾರತ ಧಾರಾವಾಹಿಗೆ ಸುಮಾರು ಐವರು ನಿರ್ದೇಶಕರಿದ್ದಾರೆ. ಸಿದ್ದಾರ್ಥ್ ಆನಂದ್, ಮುಕೇಶ್ ಕುಮಾರ್ ಸಿಂಗ್ ಮುಂತಾದವರು ಆಕ್ಷನ್ ಕಟ್ ಹೇಳಿದ ಧಾರಾವಾಹಿ ಇದಾಗಿದೆ. ಈ ಸೀರಿಯಲ್‌ನಲ್ಲಿ ಸೌರಭ್ ರಾಜ್ ಜೈನ್, ಶಾಹೀರ್ ಶೇಕ್, ಪೂಜಾ ಶರ್ಮಾ, ಆರವ್ ಚೌಧರಿ, ಪ್ರಣೀತ್ ಭಟ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಸ್ಮಾಯಿಲ್ ದರ್ಬಾರ್ ಹಾಗೂ ಅಜಯ್-ಅತುಲ್ ಸಂಗೀತ ನೀಡಿದ್ದಾರೆ.

ವಿಭಾಗ