Pavi Caretaker OTT: ಒಟಿಟಿಯತ್ತ ಮುಖಮಾಡಿದ ಪವಿ ಕೇರ್‌ ಟೇಕರ್‌, ದಿಲೀಪ್‌ ನಟನೆಯ ಮಲಯಾಳಂ ಸಿನಿಮಾ ಮನೆಯಲ್ಲೇ ನೋಡಿ-ott news malayalamam movie pavi caretaker ott release date when and where to watch dileep comedy film pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Pavi Caretaker Ott: ಒಟಿಟಿಯತ್ತ ಮುಖಮಾಡಿದ ಪವಿ ಕೇರ್‌ ಟೇಕರ್‌, ದಿಲೀಪ್‌ ನಟನೆಯ ಮಲಯಾಳಂ ಸಿನಿಮಾ ಮನೆಯಲ್ಲೇ ನೋಡಿ

Pavi Caretaker OTT: ಒಟಿಟಿಯತ್ತ ಮುಖಮಾಡಿದ ಪವಿ ಕೇರ್‌ ಟೇಕರ್‌, ದಿಲೀಪ್‌ ನಟನೆಯ ಮಲಯಾಳಂ ಸಿನಿಮಾ ಮನೆಯಲ್ಲೇ ನೋಡಿ

Pavi Caretaker OTT release date: ದಿಲೀಪ್‌ ನಟನೆಯ ಕಾಮಿಡಿ ಸಿನಿಮಾ ಪವಿ ಕೇರ್‌ ಟೇಕರ್‌ ಒಟಿಟಿಯತ್ತ ಮುಖ ಮಾಡುತ್ತಿದೆ. ಮನೋರಮಾ ಮ್ಯಾಕ್ಸ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. ಪವಿ ಕೇರ್‌ ಟೇಕರ್‌ಗೆ ವಿನೀತ್‌ ಕುಮಾರ್‌ ನಿರ್ದೇಶನವಿದೆ.

ಪವಿ ಕೇರ್‌ ಟೇಕರ್‌ ಒಟಿಟಿ ಬಿಡುಗಡೆ ದಿನಾಂಕ
ಪವಿ ಕೇರ್‌ ಟೇಕರ್‌ ಒಟಿಟಿ ಬಿಡುಗಡೆ ದಿನಾಂಕ

Pavi Caretaker OTT: ದಿಲೀಪ್‌ ಪ್ರಮು ಪಾತ್ರದಲ್ಲಿ ನಟಿಸಿರುವ ಪವಿ ಕೇರ್‌ಟೇಕರ್‌ ಸಿನಿಮಾವು ಏಪ್ರಿಲ್‌ 2024ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ವಿನೀತ್‌ ಕುಮಾರ್‌ ನಿರ್ದೇಶನದ ಈ ಸಿನಿಮಾದ ಕುರಿತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಪವಿ ಕೇರ್‌ಟೇಕರ್‌ ಸಿನಿಮಾವು ಒಟಿಟಿಯತ್ತ ಮುಖ ಮಾಡುತ್ತಿದೆ. ಈ ಸಿನಿಮಾ ಒಟಿಟಿಯಲ್ಲಿ ಈ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ನಾನಾ ಕಾರಣಗಳಿಂದ ಒಟಿಟಿ ರಿಲೀಸ್‌ ವಿಳಂಬವಾಗಿತ್ತು.

ಪವಿ ಕೇರ್‌ಟೇಕರ್‌ ಒಟಿಟಿ ಬಿಡುಗಡೆ ದಿನಾಂಕ

ಮಲಯಾಳಂನ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ ಮನೋರಮಾ ಮ್ಯಾಕ್ಸ್‌ನಲ್ಲಿ ಸೆಪ್ಟೆಂಬರ್‌ 6ರಿಂದ ಪವಿ ಕೇರ್‌ಟೇಕರ್‌ ಸ್ಟ್ರೀಮಿಂಗ್‌ ಆಗಲಿದೆ. ಸೆಪ್ಟೆಂಬರ್‌ 6ರ ಶುಕ್ರವಾರ ಮಧ್ಯರಾತ್ರಿಯಿಂದ ಸ್ಟ್ರೀಮಿಂಗ್‌ ಆರಂಭವಾಗಲಿದೆ. ದಿಲೀಪ್‌ ನಟನೆಯ ಈ ಸಿನಿಮಾ ಮಲಯಾಳಂ ಭಾಷೆಯಲ್ಲಿ ಮಾತ್ರ ರಿಲೀಸ್‌ ಆಗಲಿದೆ. ಈ ಸಿನಿಮಾದ ಒಟಿಟಿ ಬಿಡುಗಡೆ ಕುರಿತು ಮನೋರಮಾ ಮ್ಯಾಕ್ಸ್‌ ತನ್ನ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.

ಪವಿ ಕೇರ್‌ಟೇಕರ್‌ ಕಥೆ

ಕೇರಳದ ವಸತಿ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುವ ಪವಿತ್ರನ್ ಅಕಾ ಪವಿ ಎಂಬ ಪಾತ್ರದಲ್ಲಿ ದಿಲೀಪ್ ಕಾಣಿಸಿಕೊಂಡಿದ್ದಾರೆ. ಅವಿವಾಹಿತನಾಗಿರುವ ಪವಿ ತನ್ನ ಮುದ್ದಿನ ನಾಯಿ 'ಬ್ರೋ' ಜೊತೆ ಮಾಜಿ ಪೋಲೀಸ್ ಮರಿಯಮ್ಮನ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಾರೆ. ಹೆಚ್ಚು ಆದಾಯ ಗಳಿಸುವ ಸಲುವಾಗಿ ಹಲವು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಅಪಾರ್ಟ್ಮೆಂಟ್ ನಿವಾಸಿಗಳ ವೈಯಕ್ತಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಯುವತಿಯೊಬ್ಬಳು ಮರಿಯಮ್ಮನ ಮನೆಗೆ ಪವಿಯ ಹೊಸ ರೂಮ್‌ಮೇಟ್ ಆಗಿ ಹೋದಾಗ ಅನೇಕ ವಿಚಾರಗಳು ಬೆಳಕಿಗೆ ಬರುತ್ತವೆ.

ಸಿನಿಮಾದ ತಾರಾಗಣ

ಈ ಸಿನಿಮಾದಲ್ಲಿ ದಿಲೀಪ್ ಜೊತೆಗೆ ಹಿರಿಯ ನಟ ರಾಧಿಕಾ ಶರತ್‌ಕುಮಾರ್, ಜಾನಿ ಆಂಟೋನಿ, ಧರ್ಮಜನ್ ಬೋಲ್ಗಟ್ಟಿ, ಶ್ರೇಯಾ ರುಕ್ಮಿಣಿ, ಸ್ವಾತಿ ಕೊಂಡೆ, ರೋಸ್ಮಿ, ಜೂಹಿ ಜಯಕುಮಾರ್, ದಿಲೀನಾ, ಸ್ಪಡಿಕಮ್ ಜಾರ್ಜ್, ಜಿನು ಬೆನ್, ಮತ್ತು ದೀಪು ಜಿ ಪಣಿಕ್ಕರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ನಿರ್ದೇಶಕ ವಿನೀತ್ ಕೂಡ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾನು ತಾಹಿರ್ ಕ್ಯಾಮೆರಾ ನಿರ್ದೇಶಕರಾಗಿದ್ದಾರೆ. ಚಿತ್ರಕ್ಕೆ ದೀಪು ಜೋಸೆಫ್ ಸಂಕಲನವಿದೆ. ದಿಲೀಪ್‌ ತನ್ನ ಸ್ವಂತ ಬ್ಯಾನರ್‌ ಗ್ರ್ಯಾಂಡ್ ಪ್ರೊಡಕ್ಷನ್ಸ್‌ನಡಿ ಪವಿ ಕೇರ್‌ಟೇಕರ್ ಅನ್ನು ನಿರ್ಮಿಸಿದ್ದಾರೆ.

ಲಾಲ್‌ ಸಲಾಮ್‌ ಯಾವಾಗ ರಿಲೀಸ್‌

ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾ ಕೊನೆಗೂ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ರಜನಿಕಾಂತ್‌, ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಲಾಲ್‌ ಸಲಾಮ್‌ ಸೆಪ್ಟೆಂಬರ್‌ 20ರಂದು ಸನ್‌ನೆಕ್ಸ್ಟ್‌ನಲ್ಲಿ ರಿಲೀಸ್‌ ಆಗಲಿದೆ.