ಕನ್ನಡ ಸುದ್ದಿ  /  Entertainment  /  Ott News Manjummel Boys Movie Not Release Ott On April 5, Here Soubin Survival Film Ott New Release Date Pcp

Manjummel Boys OTT: ಮಂಜುಮ್ಮೇಲ್‌ ಬಾಯ್ಸ್‌ ಏಪ್ರಿಲ್‌ 5ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿಲ್ಲ, ಮತ್ತೆ ಯಾವಾಗ ರಿಲೀಸ್‌? ಇಲ್ಲಿದೆ ವಿವರ

Manjummel Boys OTT Release Date: ಮಲಯಾಳಂ ಭಾಷೆಯ ಸರ್ವೈವಲ್‌ ಸಿನಿಮಾ ಮಂಜುಮ್ಮೇಲ್‌ ಬಾಯ್ಸ್‌ ಒಟಿಟಿ ದಿನಾಂಕದ ಕುರಿತು ಹೊಸ ಅಪ್‌ಡೇಟ್‌ ಬಂದಿದೆ. ಮಂಜುಮ್ಮೇಲ್‌ ಬಾಯ್ಸ್‌ ಇದೇ ಏಪ್ರಿಲ್‌ 5ರಂದು ಒಟಿಟಿಯಲ್ಲಿ ರಿಲೀಸ್‌ ಆಗುತ್ತಿಲ್ಲ. ಈ ಸಿನಿಮಾವನ್ನು ಮನೆಯಲ್ಲೇ ನೋಡಲು ಮೇ ತಿಂಗಳವರೆಗೆ ಕಾಯಬೇಕು.

ಮಂಜುಮ್ಮೇಲ್‌ ಬಾಯ್ಸ್‌ ಒಟಿಟಿ ಬಿಡುಗಡೆ ದಿನಾಂಕ
ಮಂಜುಮ್ಮೇಲ್‌ ಬಾಯ್ಸ್‌ ಒಟಿಟಿ ಬಿಡುಗಡೆ ದಿನಾಂಕ

Manjummel Boys OTT Release Date: ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವ ಮಂಜುಮ್ಮೇಲ್‌ ಬಾಯ್ಸ್‌ ಸಿನಿಮಾವು ಇದೇ ಏಪ್ರಿಲ್‌ 5ರಂದು ಒಟಿಟಿಯಲ್ಲಿ ಬಿಡುಗಡೆಯಾಗುವುದಾಗಿ ಹೇಳಲಾಗಿತ್ತು. ಇದೀಗ ಚಿತ್ರತಂಡ ಈ ಕುರಿತು ಅಪ್‌ಡೇಟ್‌ ನೀಡಿದೆ. ಈ ವರ್ಷ ಸಾಕಷ್ಟು ಚರ್ಚೆಗೆ ಕಾರಣವಾದ ಮಂಜುಮ್ಮೇಲ್‌ ಬಾಯ್ಸ್‌ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್. ಪೊದುವಾಲ್, ಲಾಲ್ ಜೂನಿಯರ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್, ಅರುಣ್ ಕುರಿಯನ್, ಖಾಲಿದ್ ರೆಹಮಾನ್, ಚಂದು ಸಲೀಂಕುಮಾರ್, ಶೆಬಿನ್ ಬೆನ್ಸನ್ ಮತ್ತು ವಿಷ್ಣು ರೇಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಮಲಯಾಳಂನ ಸೂಪರ್‌ಹಿಟ್‌ ಸಿನಿಮಾ ಮಂಜುಮ್ಮೇಲ್‌ ಬಾಯ್ಸ್‌ ಒಟಿಟಿಯಲ್ಲಿ ನೋಡಬೇಕೆಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ತಮ್ಮ ಹತ್ತಿರದ ಸಿನಿಮಾ ಮಂದಿರಗಳಲ್ಲಿ ರಿಲೀಸ್‌ ಆಗದೆ ಇರುವುದು ಅಥವಾ ಇನ್ನಿತರ ಕಾರಣಗಳಿಂದ ಸಾಕಷ್ಟು ಜನರಿಗೆ ಇನ್ನೂ ಮಂಜುಮ್ಮೇಲ್‌ ಬಾಯ್ಸ್‌ ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಇಂತಹ ಜನರು ಮತ್ತು ಸದಾ ಒಟಿಟಿಯಲ್ಲಿ ಮಾತ್ರ ಸಿನಿಮಾ ನೋಡುವವರು ಒಟಿಟಿ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಇದೇ ಏಪ್ರಿಲ್‌ 5ರಂದು ರಿಲೀಸ್‌ ಆಗುವ ನಿರೀಕ್ಷೆಯಿತ್ತು. ಆದರೆ, ಚಿತ್ರತಂಡ ಈ ಮಾಹಿತಿಯನ್ನು ನಿರಾಕರಿಸಿದೆ.

ಮಂಜುಮ್ಮೇಲ್‌ ಬಾಯ್ಸ್‌ ಒಟಿಟಿ ಬಿಡುಗಡೆ ದಿನಾಂಕ

ಇದೀಗ ಮಂಜುಮ್ಮೇಲ್‌ ಬಾಯ್ಸ್‌ ಸಿನಿಮಾದ ನಿರ್ದೇಶಕರು ಏಪ್ರಿಲ್‌ 5ರಂದು ಒಟಿಟಿಯಲ್ಲಿ ರಿಲೀಸ್‌ ಆಗುತ್ತಿಲ್ಲ ಎಂದಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ಆಗಮಿಸಲು ಮೇ ತಿಂಗಳವರೆಗೆ ಕಾಯಬೇಕು ಎಂದಿದ್ದಾರೆ. ಈಗಲೂ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇದೇ ಸಮಯದಲ್ಲಿ ಮಂಜುಮ್ಮೇಲ್‌ ಬಾಯ್ಸ್‌ ಸಿನಿಮಾವನ್ನು ರಿಮೇಕ್‌ ಮಾಡುವ ಯೋಚನೆಯೂ ಚಿತ್ರತಂಡಕ್ಕೆ ಇಲ್ಲವೆಂಬ ಮಾಹಿತಿ ಬಂದಿದೆ.

"ಜಗತ್ತಿನ ಮೂಲೆಮೂಲೆಗಳಲ್ಲಿ ಇಂತಹ ಹುಡುಗರ ಗುಂಪು ಇದ್ದೇ ಇರುತ್ತದೆ. ಸ್ನೇಹ ಮತ್ತು ಪ್ರೀತಿ ಎನ್ನುವುದು ಯೂನಿವರ್ಸಲ್‌ ವಿಷಯ. ಮಂಜುಮ್ಮೇಲ್‌ ಬಾಯ್ಸ್‌ ಸಿನಿಮಾವು ಸತ್ಯ ಘಟನೆ ಆಧರಿತವಾಗಿದೆ. ಈ ಸಿನಿಮಾ ಕಾಲ್ಪನಿಕವಾಗಿದ್ದರೆ ಬೇರೆ ಭಾಷೆಯ ಕುರಿತು ಯೋಚಿಸಬಹುದಿತ್ತು" ಎಂದು ನಿರ್ದೇಶಕ ಚಿದಂಬರಂ ಹೇಳಿದ್ದಾರೆ.

ಮಂಜುಮ್ಮೇಲ್‌ ಬಾಯ್ಸ್‌ ಎನ್ನುವುದು ಸತ್ಯ ಘಟನೆ ಆಧರಿತ ಸಿನಿಮಾ. ಕೇರಳದ ಸ್ನೇಹಿತರ ಗುಂಪು ತಮಿಳುನಾಡಿನ ಕೊಡೈಕೆನಾಲ್‌ಗೆ ಪ್ರವಾಸಕ್ಕೆ ಹೋದಾಗ ನಡೆದ ಘಟನೆ ಆಧರಿತವಾಗಿದೆ. ಈ ಗೆಳೆಯರಲ್ಲಿ ಒಬ್ಬ ಆಳವಾದ ಕಂದಕಕ್ಕೆ ಬೀಳುತ್ತಾನೆ. ಆ ಕಂದಕಕ್ಕೆ ಬಿದ್ದವರು ಜೀವಂತವಾಗಿ ವಾಪಸ್‌ ಬಂದ ಉದಾಹರಣೆ ಇರುವುದಿಲ್ಲ. ಆತನನ್ನು ಅಲ್ಲಿಂದ ತೆಗೆಯದೆ ವಾಪಸ್‌ ಹೋಗುವುದಿಲ್ಲ ಎಂದು ಹಠತೊಟ್ಟ ಸ್ನೇಹಿತರು ಮಾಡುವ ಸಾಹಸದ ಕುರಿತು ಈ ಸಿನಿಮಾ ಬೆಳಕು ಚೆಲ್ಲಿದೆ. 2006 ರ ನೈಜ ಘಟನೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಕೊಚ್ಚಿ ಬಳಿಯ ಮಂಜುಮ್ಮೆಲ್ ಎಂಬ ಸಣ್ಣ ಊರಿನ ಸ್ನೇಹಿತರ ಗುಂಪಿನ ಕಥೆಯನ್ನು ಹೊಂದಿದೆ.

IPL_Entry_Point