ಕನ್ನಡ ಸುದ್ದಿ  /  Entertainment  /  Ott News Mission Raniganj To Chithha Dhootha Ott Release This Week New Ott Release Web Series And Movies List Mnk

OTT Release this Week: ಬ್ಲಾಕ್‌ ಬಸ್ಟರ್‌ ವೀಕೆಂಡ್‌; ಒಟಿಟಿಗೆ ಬರ್ತಿವೆ ಸಾಲು ಸಾಲು ಸಿನಿಮಾ, ವೆಬ್‌ಸಿರೀಸ್‌ಗಳು

ಈ ವಾರ ಒಟಿಟಿ ವೇದಿಕೆಗೆ ಸೂಪರ್‌ ಹಿಟ್‌ ಸಿನಿಮಾಗಳ ಆಗಮನವಾಗುತ್ತಿದೆ. ಬಾಲಿವುಡ್‌ನ ಮಿಷನ್‌ ರಾಣಿಗಂಜ್‌ ಚಿತ್ರದಿಂದ ಹಿಡಿದು ಸಿದ್ಧಾರ್ಥ್‌ ನಟನೆಯ ಚಿತ್ತಾ ಚಿತ್ರ ಸ್ಟ್ರೀಮಿಂಗ್‌ ಆರಂಭಿಸಿವೆ.

OTT Release this Week: ಬ್ಲಾಕ್‌ ಬಸ್ಟರ್‌ ವೀಕೆಂಡ್‌; ಒಟಿಟಿಗೆ ಬರ್ತಿವೆ ಸಾಲು ಸಾಲು ಸಿನಿಮಾ, ವೆಬ್‌ಸಿರೀಸ್‌ಗಳು
OTT Release this Week: ಬ್ಲಾಕ್‌ ಬಸ್ಟರ್‌ ವೀಕೆಂಡ್‌; ಒಟಿಟಿಗೆ ಬರ್ತಿವೆ ಸಾಲು ಸಾಲು ಸಿನಿಮಾ, ವೆಬ್‌ಸಿರೀಸ್‌ಗಳು

OTT Release this Week: ಚಿತ್ರಪ್ರೇಮಿಗಳಿಗೆ ಈ ವಾರ ಒಟಿಟಿ ಬಿಗ್‌ ಸರ್ಪ್ರೈಸ್‌ ನೀಡುತ್ತಿದೆ. ಸಾಲು ಸಾಲು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸುತ್ತಿವೆ. ಇದೆಲ್ಲದರ ನಡುವೆ ಕೆಲವು ಚಿತ್ರಮಂದಿರದ ಬಳಿಕ ಒಟಿಟಿಗೆ ಆಗಮಿಸಿದರೆ, ಇನ್ನು ಕೆಲವು ವೆಬ್‌ಸರಣಿಗಳು ನೇರವಾಗಿ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿವೆ. ಆ ಪೈಕಿ ತೆಲುಗು ನಟ ನಾಗಚೈತನ್ಯ ಅವರ ಚೊಚ್ಚಲ ವೆಬ್‌ ಸರಣಿ ಧೂತ ಸ್ಟ್ರೀಮ್‌ ಆಗಲಿದೆ. ಇದೆಲ್ಲದರ ಜತೆಗೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದ್ದ ಸಿದ್ಧಾರ್ಥ್‌ ನಟನೆಯ ಚಿತ್ತಾ ಸಿನಿಮಾ ಸಹ ಒಟಿಟಿಗೆ ಆಗಮಿಸಿದೆ. ಹಾಗಾದರೆ ಯಾವ ಒಟಿಟಿ ವೇದಿಕೆಯಲ್ಲಿ ಯಾವೆಲ್ಲ ಸಿನಿಮಾ ರಿಲೀಸ್‌ ಆಗಲಿವೆ, ಈಗಾಗಲೇ ಆಗಿವೆ ಎಂಬುದರ ಮಾಹಿತಿ ಇಲ್ಲಿದೆ.

ಡಿಸ್ನಿ‌ ಪ್ಲಸ್ ಹಾಟ್‌ಸ್ಟಾರ್

ಚಿತ್ತಾ: ಸಿದ್ಧಾರ್ಥ್ ಅಭಿನಯದ ಚಿತ್ತಾ (ಚಿನ್ನ) ನ. 28 ರಂದು ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಚಿತ್ರವು ನ. 17 ರಂದು OTTಗೆ ಬರಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು, ಆದರೆ ಅದು ವಿಳಂಬವಾಯಿತು. ಇದೀಗ ನ. 28ರಂದು ಚಿತ್ತಾ ಚಿತ್ರ ಸ್ಟ್ರಿಮಿಂಗ್‌ ಆರಂಭಿಸಿದೆ. ಇದು ಮೂಲ ತಮಿಳು ಜತೆಗೆ ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗಿದೆ.

ಇಂಡಿಯಾನಾ ಜೋನ್ಸ್ ಮತ್ತು ಡಯಲ್ ಆಫ್ ಡೆಸ್ಟಿನಿ: ಡಿಸ್ನಿ+ ಹಾಟ್‌ಸ್ಟಾರ್ - ಡಿಸೆಂಬರ್ 1

ಮಾನ್‌ಸ್ಟರ್‌ ಇನ್‌ಸೈಡ್‌: ಡಿಸ್ನಿ+ ಹಾಟ್‌ಸ್ಟಾರ್ - ಡಿಸೆಂಬರ್ 1

ದಿ ಶೆಫರ್ಡ್: ಡಿಸ್ನಿ+ ಹಾಟ್‌ಸ್ಟಾರ್ - ಡಿಸೆಂಬರ್ 1

ಅಮೆಜಾನ್ ಪ್ರೈಮ್ ವಿಡಿಯೋ

ಧೂತ: ಟಾಲಿವುಡ್‌ ನಟ ನಾಗ ಚೈತನ್ಯ ಅವರ ಮೊದಲ OTT ವೆಬ್ ಸಿರೀಸ್‌ 'ಧೂತ' ಡಿಸೆಂಬರ್ 1 ರಂದು ಅಮೆಜಾನ್ ಪ್ರೈಮ್ ವಿಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಹಾರರ್ ಥ್ರಿಲ್ಲರ್ ಶೈಲಿಯ ಈ ಸಿರೀಸ್‌ ಅನ್ನು ವಿಕ್ರಮ್ ಕೆ ಕುಮಾರ್ ನಿರ್ದೇಶಿಸಿದ್ದಾರೆ.

ಶೆಹರ್ ಲಖೋಟ್: ಅಮೆಜಾನ್ ಪ್ರೈಮ್ ವಿಡಿಯೋ - ನವೆಂಬರ್ 30

ಕ್ಯಾಂಡಿ ಕೇನ್ ಲೇನ್: ಅಮೆಜಾನ್ ಪ್ರೈಮ್ ವಿಡಿಯೋ - ಡಿಸೆಂಬರ್ 1

ನೆಟ್‌ಫ್ಲಿಕ್ಸ್

ಮಿಷನ್ ರಾಣಿಗಂಜ್: ಅಕ್ಷಯ್ ಕುಮಾರ್ ಅಭಿನಯದ ಮಿಷನ್ ರಾಣಿಗಂಜ್ ಡಿಸೆಂಬರ್ 1 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಶುರುವಾಗಲಿದೆ. 1989ರಲ್ಲಿ ರಾಣಿಗಂಜ್ ಗಣಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಇಂಜಿನಿಯರ್ ಜಸ್ವಂತ್ ಸಿಂಗ್ ಹೇಗೆ ಅವರೆಲ್ಲರನ್ನು ರಕ್ಷಿಸಿದರು ಎಂಬುದರ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿಬಂದಿದೆ.

ಅಮೇರಿಕನ್ ಸಿಂಫನಿ - ನೆಟ್‌ಫ್ಲಿಕ್ಸ್ - ನವೆಂಬರ್ 29

ಬ್ಯಾಡ್ ಸರ್ಜನ್ - ನೆಟ್‌ಫ್ಲಿಕ್ಸ್ - ನವೆಂಬರ್ 29

ಫ್ಯಾಮಿಲಿ ಸ್ವಿಚ್ - ನೆಟ್‌ಫ್ಲಿಕ್ಸ್ - ನವೆಂಬರ್ 29

ಹಾರ್ಡ್‌ ಡೇಸ್‌ - ನೆಟ್‌ಫ್ಲಿಕ್ಸ್ - ನವೆಂಬರ್ 30

ಒಬ್ಲಿಟರೇಟೆಡ್ - ನೆಟ್‌ಫ್ಲಿಕ್ಸ್ - ನವೆಂಬರ್ 30

ಮೇ ಡಿಸೆಂಬರ್ - ನೆಟ್‌ಫ್ಲಿಕ್ಸ್ - ಡಿಸೆಂಬರ್ 1

ಸೋನಿ ಲಿವ್

ಮಾರ್ಟಿನ್ ಲೂಥರ್ ಕಿಂಗ್: ಸಂಪೂರ್ಣೇಶ್‌ ಬಾಬು ಅಭಿನಯದ ಮಾರ್ಟಿನ್ ಲೂಥರ್ ಕಿಂಗ್ ನವೆಂಬರ್ 29 ರಂದು ಸೋನಿ ಲಿವ್‌ನಲ್ಲಿ ಸ್ಟ್ರೀಮ್ ಆರಂಭಿಸಿದೆ.

ಜಿಯೋ ಸಿನಿಮಾ

800 - ಶ್ರೀಲಂಕಾದ ದಂತಕಥೆ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಜೀವನವನ್ನು ಆಧರಿಸಿದ ಚಲನಚಿತ್ರ '800' ಡಿಸೆಂಬರ್ 2 ರಂದು ಜಿಯೋ ಸಿನಿಮಾ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ