ಕನ್ನಡ ಸುದ್ದಿ  /  ಮನರಂಜನೆ  /  Hollywood Ott : ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌, ದಿ ಫಸ್ಟ್‌ ಒಮೆನ್‌, ಹೌಸ್‌ ಆಫ್‌ ದಿ ಡ್ರಾಗನ್‌; ಸದ್ಯದಲ್ಲಿಯೇ ಒಟಿಟಿಗೆ ಆಗಮನ

Hollywood OTT : ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌, ದಿ ಫಸ್ಟ್‌ ಒಮೆನ್‌, ಹೌಸ್‌ ಆಫ್‌ ದಿ ಡ್ರಾಗನ್‌; ಸದ್ಯದಲ್ಲಿಯೇ ಒಟಿಟಿಗೆ ಆಗಮನ

Most-Awaited Hollywood OTT Releases: ಒಟಿಟಿಯಲ್ಲಿ ಸದ್ಯದಲ್ಲಿಯೇ ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌ , ದಿ ಫಸ್ಟ್‌ ಒಮೆನ್‌, ಹೌಸ್‌ ಆಫ್‌ ದಿ ಡ್ರಾಗನ್‌ ಸೀಸನ್‌ 2, ಕುಂಗ್ ಫೂ ಪಾಂಡ 4 ಸಿನಿಮಾಗಳು, ವೆಬ್‌ಸರಣಿಗಳು ಬಿಡುಗಡೆಯಾಗಲಿವೆ.

Hollywood OTT Releases: ಸದ್ಯದಲ್ಲಿಯೇ ಒಟಿಟಿಗೆ ಹೊಸ ಹಾಲಿವುಡ್‌ ಸಿನಿಮಾಗಳ ಆಗಮನ
Hollywood OTT Releases: ಸದ್ಯದಲ್ಲಿಯೇ ಒಟಿಟಿಗೆ ಹೊಸ ಹಾಲಿವುಡ್‌ ಸಿನಿಮಾಗಳ ಆಗಮನ

2024ರಲ್ಲಿ ವೈವಿಧ್ಯಮಯವಾದ ಹಾಲಿವುಡ್‌ ಸಿನಿಮಾಗಳು, ವೆಬ್‌ ಸರಣಿಗಳು ಬಿಡುಗಡೆಯಾಗಿವೆ. ನೆಟ್‌ಫ್ಲಿಕ್ಸ್‌, ಪ್ರೈಮ್‌ ವಿಡಿಯೋ, ಜಿಯೋಸಿನಿಮಾ, ಝೀ5 ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಹಾಲಿವುಡ್‌ ಸಿನಿಮಾ, ಸರಣಿಗಳು ಬೇಗ ರಿಲೀಸ್‌ ಆಗಲೆಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ಖುಷಿಯ ಸಮಾಚಾರವೆಂದರೆ ಸಾಕಷ್ಟು ಹೊಸ ಹಾಲಿವುಡ್‌ ಸಿನಿಮಾಗಳು ಒಟಿಟಿಗೆ ಲಗ್ಗೆಯಿಡಲು ಸಜ್ಜಾಗಿವೆ. ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌: ದಿ ಲಾಸ್ಟ್‌ ಎಂಪೈರ್‌, ಹೌಸ್‌ ಆಫ್‌ ದಿ ಡ್ರಾಗನ್‌ ಸೀಸನ್‌ 2 ಸೇರಿದಂತೆ ಹಲವು ಸಿನಿಮಾಗಳು ಸದ್ಯದಲ್ಲಿಯೇ ಒಟಿಟಿಯಲ್ಲಿ ರಿಲೀಸ್‌ ಆಗಲಿವೆ.

ಟ್ರೆಂಡಿಂಗ್​ ಸುದ್ದಿ

ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌ (Godzilla X Kong)

ಅಮೆಜಾನ್‌ ಪ್ರೈಮ್‌ ವಿಡಿಯೋ ಮತ್ತು ಯೂಟ್ಯೂಬ್‌ ಟಿವಿಯಲ್ಲಿ ಮೇ ಅಥವಾ ಜೂನ್‌ ತಿಂಗಳಲ್ಲಿ ರಿಲೀಸ್‌ ಆಗುವ ಸೂಚನೆ ದೊರಕಿದೆ. ‘ಗಾಡ್ಜಿಲ್ಲಾ x ಕಾಂಗ್: ದಿ ನ್ಯೂ ಎಂಪೈರ್’ ಎಂಬುದು ಆಡಮ್ ವಿಂಗಾರ್ಡ್ ನಿರ್ದೇಶಿಸಿದ 2024 ರ ಅಮೇರಿಕನ್ ಮಾನ್‌ಸ್ಟಾರ್‌ ಸಿನಿಮಾ. ಲೆಜೆಂಡರಿ ಪಿಕ್ಚರ್ಸ್‌ ನಿರ್ಮಾಣ, ವಾರ್ನರ್ ಬ್ರದರ್ಸ್ ಪಿಕ್ಚರ್ಸ್‌ ವಿತರಣೆಯ ಈ ಸಿನಿಮಾವು "ಗಾಡ್ಜಿಲ್ಲಾ ವರ್ಸಸ್ ಕಾಂಗ್" (2021)ನ ಮುಂದುವರೆದ ಅಧ್ಯಾಯ. ಇದು ಗಾಡ್ಜಿಲ್ಲಾ ಸರಣಿಯಲ್ಲಿ 38 ನೇ ಮತ್ತು ಕಿಂಗ್ ಕಾಂಗ್ ಸರಣಿಯಲ್ಲಿ 13 ನೇ ಸಿನಿಮಾವಾಗಿದೆ. ರೆಬೆಕಾ ಹಾಲ್, ಬ್ರಿಯಾನ್ ಟೈರಿ ಹೆನ್ರಿ, ಡಾನ್ ಸ್ಟೀವನ್ಸ್, ಕೇಯ್ಲೀ ಹಾಟಲ್, ಅಲೆಕ್ಸ್ ಫರ್ನ್ಸ್ ಮತ್ತು ಫಾಲಾ ಚೆನ್ ಅವರೊಂದಿಗೆ ಹಾಲ್, ಹೆನ್ರಿ ಮತ್ತು ಹಾಟಲ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ದಿ ಫಸ್ಟ್‌ ಒಮೆನ್‌ (The First Omen)

ಜುಲೈ 2024ರಲ್ಲಿ ಒಟಿಟಿಯಲ್ಲಿ ದಿ ಫಸ್ಟ್‌ ಒಮೆನ್‌ ಸಿನಿಮಾ ಬಿಡುಗಡೆಯಾಗಲಿದೆ. ಇದು 2024ರ ಸೂಪರ್‌ನ್ಯಾಚುರಲ್‌ ಹಾರರ್‌ ಸಿನಿಮಾ. ಅರ್ಕಾಶಾ ಸ್ಟೀವನ್ಸನ್ ನಿರ್ದೇಶಿಸಿದ ಈ ಸಿನಿಮಾವು ಅಲೌಕಿಕ ಅನುಭವ ನೀಡುತ್ತದೆ. 1976 ರ ಚಲನಚಿತ್ರ "ದಿ ಓಮೆನ್" ಗೆ ಸಂಬಂಧಪಟ್ಟಿದೆ. ದಿ ಓಮೆನ್ ಸರಣಿಯ ಆರನೇ ಕಂತಾಗಿದೆ. ನೆಲ್ ಟೈಗರ್ ಫ್ರೀ, ತೌಫೀಕ್ ಬರ್ಹೋಮ್, ಸೋನಿಯಾ ಬ್ರಾಗಾ, ರಾಲ್ಫ್ ಇನೆಸನ್ ಮತ್ತು ಬಿಲ್ ನಿಘಿ ನಟಿಸಿದ್ದಾರೆ.

ಹೌಸ್‌ ಆಫ್‌ ದಿ ಡ್ರಾಗನ್‌ ಸೀಸನ್‌ 2

ಜಿಯೋ ಸಿನಿಮಾದಲ್ಲಿ ಜೂನ್‌ 16ರಂದು ಬಿಡುಗಡೆಯಾಗಲಿದೆ. ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್ 2 ಎನ್ನುವುದು "ಗೇಮ್ ಆಫ್ ಥ್ರೋನ್ಸ್" ಸ್ಪಿನ್‌ಆಫ್ "ಹೌಸ್ ಆಫ್ ದಿ ಡ್ರ್ಯಾಗನ್" ನ ಎರಡನೇ ಸೀಸನ್‌. ಮೊದಲ ಸೀಸನ್ ಅಕ್ಟೋಬರ್ 2022 ರಲ್ಲಿ ಮುಕ್ತಾಯವಾಗಿತ್ತು.

ಕುಂಗ್ ಫೂ ಪಾಂಡ 4 (Kung Fu Panda 4)

ಕುಂಗ್‌ ಫೂ ಪಾಂಡ ಸಿನಿಮಾವು ಮಕ್ಕಳು ಮತ್ತು ದೊಡ್ಡವರಿಗೆ ಅಚ್ಚುಮೆಚ್ಚು. ಇದೀಗ ಕುಂಗ್ ಫೂ ಪಾಂಡ 4 ಒಟಿಟಿಯಲ್ಲಿ ಬಿಡುಗಡೆಯಾಗಲು ಎಲ್ಲರೂ ಕಾಯುತ್ತಿದೆ. "ಕುಂಗ್ ಫೂ ಪಾಂಡ 4" ಸಮರ ಕಲೆಗಳನ್ನು ಒಳಗೊಂಡಿರುವ 2024 ರ ಅಮೇರಿಕನ್ ಅನಿಮೇಟೆಡ್ ಹಾಸ್ಯ ಸಿನಿಮಾ. ಇದನ್ನು ಡ್ರೀಮ್‌ವರ್ಕ್ಸ್ ಅನಿಮೇಷನ್ ನಿರ್ಮಿಸಿದೆ ಮತ್ತು ಯುನಿವರ್ಸಲ್ ಪಿಕ್ಚರ್ಸ್ ಬಿಡುಗಡೆ ಮಾಡಿದೆ. ಇದು ಕುಂಗ್ ಫೂ ಪಾಂಡಾ ಸರಣಿಯ ನಾಲ್ಕನೇ ಭಾಗ. ಮೈಕ್ ಮಿಚೆಲ್ ನಿರ್ದೇಶಿಸಿದ ಮತ್ತು ಸ್ಟೆಫನಿ ಮಾ ಸ್ಟೈನ್ ಸಹ-ನಿರ್ದೇಶನದ ಈ ಚಿತ್ರದಲ್ಲಿ ಜ್ಯಾಕ್ ಬ್ಲ್ಯಾಕ್, ಡಸ್ಟಿನ್ ಹಾಫ್‌ಮನ್ ಮುಂತಾದವರು ನಟಿಸಿದ್ದಾರೆ. ಇದೇ ಏಪ್ರಿಲ್‌ 26ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಲಿದೆ.

IPL_Entry_Point