OTT Kannada Movies: ಜಗ್ಗೇಶ್‌ ನಟನೆಯ ರಂಗನಾಯಕ ಸೇರಿದಂತೆ 3 ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ-ott news new kannada movies streaming on ott ranganayaka chilli chicken scam 1770 watch online pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott Kannada Movies: ಜಗ್ಗೇಶ್‌ ನಟನೆಯ ರಂಗನಾಯಕ ಸೇರಿದಂತೆ 3 ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

OTT Kannada Movies: ಜಗ್ಗೇಶ್‌ ನಟನೆಯ ರಂಗನಾಯಕ ಸೇರಿದಂತೆ 3 ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

OTT Kannada Movies: ಒಟಿಟಿಗೆ ಕನ್ನಡ ಸಿನಿಮಾಗಳು ಸದ್ದಿಲ್ಲದೆ ಎಂಟ್ರಿ ನೀಡುವ ಟ್ರೆಂಡ್‌ ಮುಂದುವರೆದಿದೆ. ಜಗ್ಗೇಶ್‌ ನಟನೆಯ ರಂಗನಾಯಕ ಸೇರಿದಂತೆ ಮೂರು ಕನ್ನಡ ಸಿನಿಮಾಗಳು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಆಸಕ್ತಿ ಇರುವವರು ಟಿವಿ, ಮೊಬೈಲ್‌, ಕಂಪ್ಯೂಟರ್‌ನಲ್ಲಿ ನೋಡಬಹುದು.

ಜಗ್ಗೇಶ್‌ ನಟನೆಯ ರಂಗನಾಯಕ ಸೇರಿದಂತೆ 3 ಕನ್ನಡ ಸಿನಿಮಾ ಒಟಿಟಿಗೆ ಆಗಮನ
ಜಗ್ಗೇಶ್‌ ನಟನೆಯ ರಂಗನಾಯಕ ಸೇರಿದಂತೆ 3 ಕನ್ನಡ ಸಿನಿಮಾ ಒಟಿಟಿಗೆ ಆಗಮನ

OTT Kannada Movies: ಒಟಿಟಿಯಲ್ಲಿ ಕನ್ನಡ ಸಿನಿಮಾಗಳು ರಿಲೀಸ್‌ ಆಗುವುದು ಅಪರೂಪವಾಗಿದೆ. ಕೋಟಿ, ಶೆಫ್‌ ಚಿದಂಬರ ಎಂದು ಕೆಲವು ಸಿನಿಮಾಗಳು ಮಾತ್ರ ಕಾಣಿಸುತ್ತವೆ. ಕನ್ನಡ ವಿಭಾಗದಲ್ಲಿ ಇತರೆ ಭಾಷೆಗಳಿಂದ ಡಬ್ಬಿಂಗ್‌ ಆದ ಅಥವಾ ಧ್ವನಿ ಮಾತ್ರ ಕನ್ನಡ ಇರುವ ಸಿನಿಮಾಗಳು ಕಾಣಿಸುತ್ತವೆ. ಇಂತಹ ಸಮಯದಲ್ಲಿ ಒಟಿಟಿಗಳಲ್ಲಿ ಕೆಲವು ಸಿನಿಮಾಗಳು ಸದ್ದಿಲ್ಲದೆ ಆಗಮಿಸುತ್ತವೆ. ಇನ್ನು ಕೆಲವು ಸಿನಿಮಾಗಳನ್ನು ಸರ್ಚ್‌ನಲ್ಲಿ ಹೋಗಿ ಹುಡುಕಿದರೆ ಮಾತ್ರ ದೊರಕುತ್ತವೆ. ಆದರೆ, ಇತ್ತೀಚೆಗೆ ಮೂರು ಕನ್ನಡ ಸಿನಿಮಾಗಳು ಒಟಿಟಿಗೆ ಆಗಮಿಸಿವೆ. ಅವುಗಳಲ್ಲಿ ನವರಸ ನಾಯಕ ಜಗ್ಗೇಶ್‌ ಸಿನಿಮಾವೂ ಸೇರಿದೆ.

ರಂಗನಾಯಕ- ಜಗ್ಗೇಶ್‌ ಸಿನಿಮಾ ಒಟಿಟಿಗೆ

ರಂಗನಾಯಕ ಈ ವರ್ಷ ಬಹುನಿರೀಕ್ಷೆ ಹುಟ್ಟಿಸಿ ನಿರೀಕ್ಷೆ ಹುಸಿಗೊಳಿಸಿದ ಸಿನಿಮಾ. ಗುರುಪ್ರಸಾದ್‌ ನಿರ್ದೇಶನದ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಮಠ, ಎದ್ದೇಳು ಮಂಜುನಾಥದ ಬಳಿಕ ಈ ಸಿನಿಮಾ ಡಿಫರೆಂಟ್‌ ಆಗಿರಬಹುದು ಎಂದು ಪ್ರೇಕ್ಷಕರು ಊಹಿಸಿದ್ದರು. ಆದರೆ, ಡಬಲ್‌ ಮೀನಿಂಗ್‌ ಡೈಲಾಗ್‌, ಮುಖಗಳನ್ನು ಝೂಮ್‌ ಆಗಿ ತೋರಿಸಿ ಸರಿಯಾದ ಕಥೆಯಿಲ್ಲದೆ ಪ್ರೇಕ್ಷಕರಿಗೆ ಬೇಸರ ಹುಟ್ಟುಹಾಕಿತ್ತು. ಈ ಸಿನಿಮಾದ ನೆಗೆಟಿವ್‌ ವಿಮರ್ಶೆಗಳು ಹೆಚ್ಚಾಗಿ ಜಗ್ಗೇಶ್‌ ಕೊನೆಗೆ ಕ್ಷಮೆ ಯಾಚಿಸಿದ್ದರು. ಮೊದಲ ದಿನ ಸಿನಿಮಾ ನೋಡಿದವರು ಈ ಸಿನಿಮಾಕ್ಕೆ ಕೆಟ್ಟದ್ದಾಗಿ ಬಯ್ಯೋದನ್ನು ನೋಡಿ ಮತ್ತೆ ಯಾರೂ ಸಿನಿಮಾ ನೋಡಲು ಹೋಗಿರಲಿಲ್ಲ. ಈ ರೀತಿ ನೀವು ಥಿಯೇಟರ್‌ಗೆ ಹೋಗಿ ನೋಡಿಲ್ಲದಿದ್ದರೆ ಮನೆಯಲ್ಲೇ ಕುಳಿತು ಈಗ ನೋಡಬಹುದು. ಇದೀಗ ಈ ಸಿನಿಮಾ ಝೀ5ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಆಸಕ್ತಿ ಇದ್ದವರು ವೀಕ್ಷಿಸಬಹುದು.

ಚಿಲ್ಲಿ ಚಿಕನ್‌

ತೀಕ್‌ ಪ್ರಜೋಶ್‌ ಚೊಚ್ಚಲ ನಿರ್ದೇಶನದ ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಕೇರಳದ ನಿರ್ದೇಶಕರು ಮತ್ತು ಮಣಿಪುರ, ಮೇಘಾಲಯ, ಚೆನ್ನೈನ ಕಲಾವಿದರು ನಟಿಸಿರುವ ಸಿನಿಮಾವಿದು. ಆದರ್ಶ್‌ (ಶೃಂಗಾ ಬಿವಿ) ಸಣ್ಣ ಚೈನೀಸ್‌ ಫುಡ್‌ ಸ್ಟಾಲ್‌ ಇಟ್ಟುಕೊಂಡಿದ್ದಾನೆ. ಇದೇ ಫುಡ್‌ ಸ್ಟಾಲ್‌ ಅನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸುವ ಕನಸಲ್ಲಿದ್ದಾನೆ. ಅಂದರೆ, ದೊಡ್ಡ ಹೋಟೆಲ್‌ ನಿರ್ಮಿಸುವ ಕನಸು ಈತನದ್ದು. ಈತನ ಜತೆ ಖಬಾ (ಬಿಜೋಮ್‌ ತಂಗಜಮ್‌), ಜಿಂಪಾ (ಜಿಂಪಾ ಸಂಗ್ಪೊ ಭಾಟಿಯಾ), ಅಜೊಯ್‌ (ವಿಕ್ಟರ್‌ ಥೊಡಮ್‌) ಮತ್ತು ಜಾಸೊನ್‌ (ತೊಮತಿನ್‌ ತಾಖೊಮ್‌) ಎಂಬ ನಾಲ್ವರು ಕೆಲಸಗಾರರು ಇದ್ದಾರೆ. ಒಂದು ರಾತ್ರಿ ಕುಡಿದ ಮತ್ತಿನಲ್ಲಿ ಇವರು ಮಾಡಿದ ಯಡವಟ್ಟು ಸಿನಿಮಾವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯುತ್ತದೆ. ಈ ಸಿನಿಮಾ ಅಮೆಜಾನ್‌ ಪ್ರೈಂ ವಿಡಿಯೋ ಸ್ಟ್ರೀಮಿಂಗ್‌ ಆಗುತ್ತಿದೆ

ಸ್ಕ್ಯಾಮ್ 1770

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ 'ಸ್ಕ್ಯಾಮ್ 1770 ಎಂಬ ಸಿನಿಮಾವೂ ರಿಲೀಸ್‌ ಆಗಿದೆ. ಮೆಡಿಕಲ್‌ ಸೀಟ್‌ ಹಗರಣದ ಕಥೆ ಇರುವ ಈ ಚಿತ್ರಕ್ಕೆ ವಿಕಾಸ್‌ ಪುಷ್ಪಗಿರಿ ಆಕ್ಷನ್‌ ಕಟ್‌ ಹೇಳಿದ್ದಾರೆ. ರಂಜನ್, ಬಿ. ಸುರೇಶ, ಶ್ರೀನಿವಾಸ್​ಪ್ರಭು, ನಿಶ್ಚಿತಾ, ರಾಘು ಶಿವಮೊಗ್ಗ, ಹರಿಣಿ ನಟಿಸಿರುವ ಈ ಸಿನಿಮಾವನ್ನು ಮನೆಯಲ್ಲೇ ನೋಡಬಹುದು.