OTT Malayalam Comedy Movie: ಒಟಿಟಿಯತ್ತ ಮುಖಮಾಡಿದ ಹೊಸ ಮಲಯಾಳಂ ಕಾಮಿಡಿ ಸಿನಿಮಾ; ಹೊಟ್ಟೆ ಹುಣ್ಣಾಗುವಂತೆ ನಗುತ್ತಾ ನೋಡಿ ಈ ಫಿಲಂ-ott news ott malayalam comedy movie bharathanatyam ott release date streaming platform movie story cast pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott Malayalam Comedy Movie: ಒಟಿಟಿಯತ್ತ ಮುಖಮಾಡಿದ ಹೊಸ ಮಲಯಾಳಂ ಕಾಮಿಡಿ ಸಿನಿಮಾ; ಹೊಟ್ಟೆ ಹುಣ್ಣಾಗುವಂತೆ ನಗುತ್ತಾ ನೋಡಿ ಈ ಫಿಲಂ

OTT Malayalam Comedy Movie: ಒಟಿಟಿಯತ್ತ ಮುಖಮಾಡಿದ ಹೊಸ ಮಲಯಾಳಂ ಕಾಮಿಡಿ ಸಿನಿಮಾ; ಹೊಟ್ಟೆ ಹುಣ್ಣಾಗುವಂತೆ ನಗುತ್ತಾ ನೋಡಿ ಈ ಫಿಲಂ

OTT Malayalam Comedy Movie: ಮಲಯಾಳಂ ಕಾಮಿಡಿ ಸಿನಿಮಾಗಳು ತಮ್ಮ ನೈಜತೆಯಿಂದ ಗಮನ ಸೆಳೆಯುತ್ತವೆ. ಮಲಯಾಳಂನ ಕಾಮಿಡಿ ಸಿನಿಮಾವೊಂದು ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ಒಟಿಟಿಯತ್ತ ಮುಖ ಮಾಡುತ್ತಿದೆ. ಇನ್ನೆರಡು ದಿನಗಳಲ್ಲಿ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದು.

ಭರತನಾಟ್ಯಂ ಮಲಯಾಳಂ ಸಿನಿಮಾ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಭರತನಾಟ್ಯಂ ಮಲಯಾಳಂ ಸಿನಿಮಾ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

OTT Malayalam Comedy Movie: ಮಲಯಾಳಂ ಸಿನಿಮಾಗಳಲ್ಲಿ ದೇಶ ವಿದೇಶಗಳಲ್ಲಿ ಸಾಕಷ್ಟು ಪ್ರೇಕ್ಷಕರಿದ್ದಾರೆ. ವಿಶೇಷವಾಗಿ ಒಟಿಟಿಯಲ್ಲಿ ಮಲಯಾಳಂ ಕಂಟೆಂಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಹಜತೆಗೆ ಹತ್ತಿರವಾಗಿರುವ ಕಥೆಗಳನ್ನು ಹೊಂದಿರುವ ಮಲಯಾಳಂ ಸಿನಿಮಾಗಳಲ್ಲಿ ದೇಶ ಭಾಷೆ ಗಡಿ ಮೀರಿ ಎಲ್ಲರಿಗೂ ಇಷ್ಟವಾಗುತ್ತದೆ. ಈಗ ಬಹುತೇಕ ಮಲಯಾಳಂ ಸಿನಿಮಾಗಳು ಒಟಿಟಿಯಲ್ಲಿ ಕನ್ನಡಕ್ಕೆ ಡಬ್ಬಿಂಗ್‌ ಆಗುತ್ತವೆ. ಹೀಗಾಗಿ, ಕನ್ನಡಿಗರೂ ಮಲಯಾಳಂ ಸಿನಿಮಾಗಳನ್ನು ತಮ್ಮದೇ ಭಾಷೆಯಲ್ಲಿ ನೋಡುವ ಅವಕಾಶ ದೊರಕುತ್ತದೆ. ಈ ವಾರ ಯಾವುದಾದರೂ ಹೊಸ ಮಲಯಾಳಂ ಸಿನಿಮಾ ನೋಡಬೇಕೆನ್ನುವವರಿಗೆ ಸಂತೋಷದ ಸುದ್ದಿಯಿದೆ. ಕಳೆದ ತಿಂಗಳು ತೆರೆಕಂಡ ಭರತನಾಟ್ಯಂ (bharathanatyam movie) ಈ ವಾರ ಒಟಿಟಿಗೆ ಪ್ರವೇಶಿಸುತ್ತಿದೆ. ಇನ್ನೆರಡು ದಿನಗಳಲ್ಲಿ ಈ ಸಿನಿಮಾ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ಚಿತ್ರದ ಕುರಿತು ಚಿತ್ರಮಂದಿರದಲ್ಲಿ ವೀಕ್ಷಿಸಿರುವ ಪ್ರೇಕ್ಷಕರು ಪಾಸಿಟಿವ್‌ ವಿಮರ್ಶೆ ನೀಡಿದ್ದಾರೆ. ಇದು ಫೀಲ್‌ ಗುಡ್‌ ಮೂವಿ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಭರತನಾಟ್ಯಂ ಒಟಿಟಿ ಬಿಡುಗಡೆ ದಿನಾಂಕ

ಭರತನಾಟ್ಯಂ ಎಂಬ ಹೊಸ ಮಲಯಾಳಂ ಸಿನಿಮಾ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಆಗಸ್ಟ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಮನೋರಮಾ ಮ್ಯಾಕ್ಸ್ ಒಟಿಟಿಯಲ್ಲಿ ಮುಂದಿನ ಶುಕ್ರವಾರದಿಂದ (ಸೆಪ್ಟೆಂಬರ್ 27) ಈ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ. ನಿಮ್ಮಲ್ಲಿ ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಜಿಯೋ ಸಿನಿಮಾ, ಜೀ5 ಒಟಿಟಿ ಚಂದಾದಾರಿಕೆ ಇದ್ದರೆ ಈ ಸಿನಿಮಾ ನೋಡಲು ಸಾಧ್ಯವಿಲ್ಲ. ಭರತನಾಟ್ಯಂ ನೋಡಲು ನೀವು ಮನೋರಮಾ ಮ್ಯಾಕ್ಸ್‌ ಹೊಂದಿರಬೇಕು. ಅಥವಾ ಹಲವು ಒಟಿಟಿಗಳ ವೀಕ್ಷಣೆಗೆ ಅವಕಾಶ ನೀಡುವ ಒಟಿಟಿಪ್ಲೇಯಂತಹ ಆನ್‌ಲೈನ್‌ ಸ್ಟ್ರೀಮಿಂಗ್‌ ತಾಣಗಳ ಚಂದಾದಾರಿಕೆ ಪಡೆದಿರಬೇಕು.

ಭರತನಾಟ್ಯಂ ಸಿನಿಮಾದ ಕುರಿತು

ಭರತನಾಟ್ಯ ಸಿನಿಮಾದ ಶೀರ್ಷಿಕೆ ನೋಡಿ ಇದು ಆ ಸಾಂಪ್ರದಾಯಿಕ ಭರತನಾಟ್ಯ ನೃತ್ಯದ ಕಥೆ ಹೊಂದಿದೆ ಎಂದರೆ ತಪ್ಪಾಗುತ್ತದೆ. ವಾಸ್ತವವಾಗಿ ಇದೊಂದು ಕಾಮಿಡಿ ಫ್ಯಾಮಿಲಿ ಡ್ರಾಮಾ. ಚಿತ್ರದ ಪ್ರಮುಖ ಪಾತ್ರಧಾರಿ ಭರತನ್ ನಾಯರ್ (ಸಾಯಿ ಕುಮಾರ್) ಹೆಸರನ್ನು ಈ ಚಿತ್ರಕ್ಕೆ ಇಡಲಾಗಿದೆ. ಹೀಗಾಗಿ ಇದು ಭರತನಾಟ್ಯವಲ್ಲ ಇದು ಭರತನ್‌ ನಾಟ್ಯ ಎಂದುಕೊಳ್ಳಬಹುದು. ಈ ಸಿನಿಮಾಕ್ಕೆ ಕೃಷ್ಣದಾಸ್ ಮುರಳಿ ನಿರ್ದೇಶನ ಮಾಡಿದ್ದಾರೆ. ಇಡೀ ಚಲನಚಿತ್ರವು ಭರತನ್, ಅವನ ಮಗ ಶಶಿ (ಸೈಜು ಕುರುಪ್) ಮತ್ತು ಭರತನ್ ರಹಸ್ಯವಾಗಿ ಕಾಪಾಡಿಕೊಂಡು ಬಂದಿರುವ ಎರಡನೇ ಕುಟುಂಬದ ಸುತ್ತ ಸುತ್ತುತ್ತದೆ.

ಭರತನಾಟ್ಯಂ ಸಿನಿಮಾದ ಪಾತ್ರವರ್ಗ

ಸೈಜು ಕುರುಪ, ಸಾಯಿ ಕುಮಾರ್‌, ಕಲಾರಂಜಿನಿ, ಅಭಿರಾಮ್‌ ರಾಧಕೃಷ್ಣನ್‌, ಶ್ರುತಿ ಸುರೇಶ್‌, ಗಂಗಾ ಮೀರಾ, ಮನಿಕಂಠನ್‌, ನಂದು ಪೊಡುವಲ್‌, ಸೋಹನ್‌ ಸೀನುಲಲ್‌, ಸಲೀಮ್‌ ಹಾಸನ್‌, ಕೃಷ್ಣದಾಸ್‌ ಮುರಳಿ, ದಿವ್ಯ ಎಂ ನಾಯರ್‌, ಸ್ವಾತಿದಾಸ್‌ ಪ್ರಭು, ಶ್ರೀಜಾ ರವಿ ಮುಂತಾದವರು ಭರತನಾಟ್ಯಂ ಸಿನಿಮಾದಲ್ಲಿ ನಟಿಸಿದ್ದಾರೆ.

ಒಟಿಟಿಯಲ್ಲಿದೆ ಹಲವು ಮಲಯಾಳಂ ಸಿನಿಮಾಗಳು

ಇತ್ತೀಚಿಗೆ ಹಲವು ಮಲಯಾಳಂ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಕಾಮಿಡಿ, ಥ್ರಿಲ್ಲರ್‌, ಕ್ರೈಮ್‌ ಜಾನರ್‌ನ ಹಲವು ಸಿನಿಮಾಗಳು ಸ್ಟ್ರೀಮಿಂಗ್‌ ಆಗುತ್ತಿವೆ. ಇವುಗಳಲ್ಲಿ ಬಹುತೇಕ ಸಿನಿಮಾಗಳು ಕನ್ನಡದಲ್ಲೂ ಸ್ಟ್ರೀಮಿಂಗ್‌ ಆಗುತ್ತಿದೆ. ಜೀ5ನಲ್ಲಿ ನುನಕ್ಕುಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಸೋನಿ ಲಿವ್‌ ಒಟಿಟಿಯಲ್ಲಿ ತಲವನ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ವಾಜಾ, ನೆಟ್‌ಫ್ಲಿಕ್ಸ್‌ನಲ್ಲಿ ಅಡಿಯೋಸ್‌ ಅಮಿಗೋ, ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ವಿಶೇಷಂ ಮುಂತಾದ ಸಿನಿಮಾಗಳು ಇತ್ತೀಚೆಗೆ ಬಿಡುಗಡೆಯಾಗಿವೆ.

mysore-dasara_Entry_Point