ಒಟಿಟಿಗೆ ಬಂದ ಮಲಯಾಳಂನ ಕ್ರೈಂ ಥ್ರಿಲ್ಲರ್‌ ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ ಚಿತ್ರದ ವೀಕ್ಷಣೆ ಎಲ್ಲಿ?-ott news ott malayalam crime thriller this week where to watch cid ramachandran retd si on ott mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಗೆ ಬಂದ ಮಲಯಾಳಂನ ಕ್ರೈಂ ಥ್ರಿಲ್ಲರ್‌ ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ ಚಿತ್ರದ ವೀಕ್ಷಣೆ ಎಲ್ಲಿ?

ಒಟಿಟಿಗೆ ಬಂದ ಮಲಯಾಳಂನ ಕ್ರೈಂ ಥ್ರಿಲ್ಲರ್‌ ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ ಚಿತ್ರದ ವೀಕ್ಷಣೆ ಎಲ್ಲಿ?

ಮಲಯಾಳಂ ಕ್ರೈಂ ಥ್ರಿಲ್ಲರ್ ಶೈಲಿಯ ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಿದೆ. ಕೊಲೆ ಪ್ರಕರಣವೊಂದರ ಸುತ್ತ ಇಡೀ ಚಿತ್ರ ಸುತ್ತುತ್ತದೆ. ಕಲಾಭವನ್ ಶಾಜನ್, ಬೈಜು ಸಂತೋಷ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಒಟಿಟಿ ಬಂತು ಮಲಯಾಳಂನ ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ ಸಿನಿಮಾ
ಒಟಿಟಿ ಬಂತು ಮಲಯಾಳಂನ ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ ಸಿನಿಮಾ

OTT Malayalam Crime Thriller: ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾವೊಂದು ಇದೀಗ ನಾಲ್ಕು ತಿಂಗಳ ಬಳಿಕ ಒಟಿಟಿ ಅಂಗಳ ಪ್ರವೇಶಿಸಿದೆ. ಮೇ 17ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯವಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು ಈ ಸಿನಿಮಾ. ಬಳಿಕ IMDbಯಲ್ಲಿಯೂ ಉತ್ತಮ ರೇಟಿಂಗ್ ಪಡೆದುಕೊಂಡಿತ್ತು.

ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ

ಮಲಯಾಳಂ ಕ್ರೈಂ ಥ್ರಿಲ್ಲರ್ ಶೈಲಿಯ ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ ಸಿನಿಮಾ ಇಂದಿನಿಂದ (ಸೆಪ್ಟೆಂಬರ್ 20) ಮನೋರಮಾ ಮ್ಯಾಕ್ಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಸನೂಪ್ ಸತ್ಯನ್ ನಿರ್ದೇಶನದ ಈ ಚಿತ್ರದಲ್ಲಿ ಕಲಾಭವನ್ ಶಾಜನ್, ಬೈಜು ಸಂತೋಷ್ ಮತ್ತು ಸುಧೀರ್ ಕರಮಾನ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಶಾಜಾನ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕಥೆ ಊರ್ಮಿಳಾ ಎಂಬ ಗೃಹಿಣಿಯ ಕೊಲೆ ಪ್ರಕರಣದ ಸುತ್ತ ಸುತ್ತುತ್ತದೆ. ನಿರ್ದೇಶಕ ಸನೂಪ್ ಸತ್ಯನ್ ಈ ಇನ್ವೆಸ್ಟಿಗೇಷನ್‌ ಥ್ರಿಲ್ಲರ್ ಚಿತ್ರದ ಮೂಲಕ ಪ್ರೇಕ್ಷಕನನ್ನು ಸೀಟಿನ ತುದಿಗೆ ತಂದು ಕೂರಿಸಿದ್ದಾರೆ.

ಡೊಪಮೈನ್@2.22 ಚಿತ್ರವೂ ಒಟಿಟಿಗೆ ಆಗಮನ

ಇಂದು (ಸೆ. 20) ಇನ್ನೊಂದು ತಮಿಳಿನ ಡೊಪಮೈನ್@2.22 ಶೀರ್ಷಿಕೆಯ ಥ್ರಿಲ್ಲರ್ ಚಿತ್ರ ಕೂಡ ಒಟಿಟಿಗೆ ಆಗಮಿಸಿದೆ. ಥಿಯೇಟರ್‌ನಲ್ಲಿ ರಿಲೀಸ್‌ ಆಗದ ಈ ಸಿನಿಮಾ, ನೇರವಾಗಿ ಡಿಜಿಟಲ್ ಪ್ರೀಮಿಯರ್‌ ಆಗಿದೆ. ಬಿಡುಗಡೆ ಬಗ್ಗೆಯೂ ಹೆಚ್ಚು ಪ್ರಚಾರ ಮಾಡದ ಈ ಸಿನಿಮಾ, ಅಮೆಜಾನ್‌ ಪ್ರೈಮ್ ವಿಡಿಯೋ ಒಟಿಟಿಗೆ ಬಂದಿದೆ. ಚಿತ್ರದ ಟ್ರೇಲರ್ ಕುತೂಹಲ ಮೂಡಿಸಿದೆ. ವಿಭಿನ್ನ ಶೀರ್ಷಿಕೆಯ ಈ ಚಿತ್ರವು ಥ್ರಿಲ್ಲರ್ ಶೈಲಿಯ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ. ತಮಿಳಿನ ಡೊಪಮೈನ್@2.22 ಚಿತ್ರವನ್ನು ಉಚಿತವಾಗಿ ನೋಡುವ ಅವಕಾಶವಿಲ್ಲ. ಪ್ರೈಮ್ ವಿಡಿಯೋ ಒಟಿಟಿಯಲ್ಲಿ ರೂ.99 ಬಾಡಿಗೆ ಪಾವತಿಸಿ ವೀಕ್ಷಿಸಬೇಕು.

ಈ ಹಾರರ್‌ ಸಿನಿಮಾವನ್ನೂ ನೋಡಿ

ಒಟಿಟಿಯಲ್ಲಿ ಹಾರರ್‌ ಕಂಟೆಂಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ಹಾರರ್‌ ಪ್ರೇಮಿಗಳು ಫ್ಯಾಂಟಸಿ ಹಾರರ್‌ ಥ್ರಿಲ್ಲರ್ ಪ್ರಕಾರದ ಸಿನಿಮಾ ಮತ್ತು ವೆಬ್‌ ಸರಣಿ ನೋಡಲು ವೀಕ್ಷಿಸಲು ಇಷ್ಟಪಡುತ್ತಿದ್ದಾರೆ. ಅದರಲ್ಲೂಈ ಮಾರ್ವೆಲ್ ಕಂಪನಿಯ ಬಗ್ಗೆ ಹೆಚ್ಚಿನದನ್ನು ಹೇಳುವ ಅವಶ್ಯಕತೆ ಇಲ್ಲ. ಇದೀಗ ಮಾರ್ವೆಲ್‌ ಕಡೆಯಿಂದ Agatha All Along ಎಂಬ ಹಾರರ್‌ ಫ್ಯಾಂಟಸಿ ವೆಬ್‌ ಸರಣಿ ಬಿಡುಗಡೆಯಾಗಿದೆ. ಅಗಾಥಾ ಆಲ್ ಅಲಾಂಗ್ ಸೆಪ್ಟೆಂಬರ್ 18 ರಿಂದ ಸ್ಟ್ರೀಮಿಂಗ್‌ ಆಗುತ್ತಿದೆ. ಅದೂ ಎರಡು ಭಾಷೆಗಳಲ್ಲಿ ರಿಲೀಸ್‌ ಆಗಿದೆ. ಅಂದರೆ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

mysore-dasara_Entry_Point