ಒಟಿಟಿಯಲ್ಲಿ ಈ ವಾರ ಒಟ್ಟು 29 ಸಿನಿಮಾ, ವೆಬ್‌ ಸೀರೀಸ್‌ ತೆರೆಕಾಣಲಿವೆ, 12 ಸ್ಟ್ರೀಮಿಂಗ್ ಇದ್ದರೆ, ಇನ್ನು 12 ಸ್ಪೆಷಲ್ ಮೂವಿಗಳು-ott news ott movies releases this week on netflix amazon prime jio cinema manwat murders uks ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ ಈ ವಾರ ಒಟ್ಟು 29 ಸಿನಿಮಾ, ವೆಬ್‌ ಸೀರೀಸ್‌ ತೆರೆಕಾಣಲಿವೆ, 12 ಸ್ಟ್ರೀಮಿಂಗ್ ಇದ್ದರೆ, ಇನ್ನು 12 ಸ್ಪೆಷಲ್ ಮೂವಿಗಳು

ಒಟಿಟಿಯಲ್ಲಿ ಈ ವಾರ ಒಟ್ಟು 29 ಸಿನಿಮಾ, ವೆಬ್‌ ಸೀರೀಸ್‌ ತೆರೆಕಾಣಲಿವೆ, 12 ಸ್ಟ್ರೀಮಿಂಗ್ ಇದ್ದರೆ, ಇನ್ನು 12 ಸ್ಪೆಷಲ್ ಮೂವಿಗಳು

ರಜಾ ಕಾಲದಲ್ಲಿ ಹೇಗಪ್ಪ ಟೈಮ್ ಕಳೆಯೋದು ಅಂತ ಚಿಂತೆ ಬೇಡ. ಈ ವಾರ ಬರೋಬ್ಬರಿ 29 ಒಟಿಟಿ ರಿಲೀಸ್‌ ಇವೆ. ಈ ಪೈಕಿ 12 ಸ್ಪೆಷಲ್ ಮೂವಿಸ್‌, ವೆಬ್‌ಸೀರೀಸ್ ಇವೆ. ಯಾವ ಒಟಿಟಿಯಲ್ಲಿ ಏನಿದೆ - ಇಲ್ಲಿದೆ ವಿವರ.

ಒಟಿಟಿಯಲ್ಲಿ ಈ ವಾರ ಒಟ್ಟು 29 ಸಿನಿಮಾ, ವೆಬ್‌ ಸೀರೀಸ್‌ ತೆರೆಕಾಣಲಿವೆ. (ಸಾಂಕೇತಿಕ ಚಿತ್ರ)
ಒಟಿಟಿಯಲ್ಲಿ ಈ ವಾರ ಒಟ್ಟು 29 ಸಿನಿಮಾ, ವೆಬ್‌ ಸೀರೀಸ್‌ ತೆರೆಕಾಣಲಿವೆ. (ಸಾಂಕೇತಿಕ ಚಿತ್ರ)

ದೇಶಾದ್ಯಂತ ಜನರು ದಸರಾ ರಜೆ, ನವರಾತ್ರಿ ರಜೆಯ ಮೂಡ್‌ನತ್ತ ಹೊರಳತೊಡಗಿದ್ದಾರೆ. ಸ್ವಲ್ಪ ಮನರಂಜನೆ ಬೇಕಲ್ವ. ಸಹಜವಾಗಿಯೇ ಒಟಿಟಿ ಕಡೆಗೆ ಗಮನಹರಿಸ್ತಾರೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳೂ ಸಿನಿ ರಸಿಕರ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿವೆ. ಅಂದ ಹಾಗೆ ಈ ವಾರ ಅಂದರೆ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 6ನೇ ತಾರೀಖಿನವರೆಗೆ ಒಟಿಟಿಯಲ್ಲಿ ಒಟ್ಟು ಸಿನಿಮಾ ಮತ್ತು ವೆಬ್‌ ಸೀರೀಸ್‌ ಸೇರಿ 29 ಒಟಿಟಿಗಳು ತೆರೆಕಾಣಲಿವೆ. ಈ ಪೈಕಿ 12 ಸ್ಟ್ರೀಮಿಂಗ್ ಇದ್ದರೆ, ಇನ್ನು 12 ಸ್ಪೆಷಲ್ ಮೂವಿಗಳು ಇವೆ. ಇವಕ್ಕೆ ಹೊರತಾಗಿ ಕನ್ನಡ ಸಿನಿಮಾ ಪುರುಷೋತ್ತಮ ಪ್ರಸಂಗ ನಿನ್ನೆ (ಸೆಪ್ಟೆಂಬರ್ 30) ಅಮೆಜಾನ್ ಪ್ರೈಮ್‌ ಒಟಿಟಿಗೆ ಬಂದಿದೆ. ಉಳಿದ ಒಟಿಟಿಗಳ ವಿವರ ನೋಡೋಣ.

ನೆಟ್‌ಫ್ಲಿಕ್ಸ್ ಒಟಿಟಿ

ಟಿಮ್‌ ಧಿಲ್ಲೋನ್ (ಇಂಗ್ಲಿಷ್ ಚಲನಚಿತ್ರ) - ಅಕ್ಟೋಬರ್ 1

ಮೇಕಿಂಗ್ ಇಟ್ ಇನ್ ಮಾರ್ಬೆಲ್ಲಾ (ಸ್ವೀಡಿಷ್ ವೆಬ್ ಸೀರೀಸ್) - ಅಕ್ಟೋಬರ್ 1

ಲವ್ ಈಸ್ ಬ್ಲೈಂಡ್ ಸೀಸನ್ 7 (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 2

ಚೆಫ್ಸ್ ಟೇಬಲ್ (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 2

ಅನ್‌ಸಾಲ್ವ್ಡ್‌ ಮಿಸ್ಟರೀಸ್‌ ವಾಲ್ಯೂಮ್‌ 5 (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 2

ಹಾರ್ಟ್ ಸ್ಟಾಪರ್ ಸೀಸನ್ 3 (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 3

ನಿಂಜಾಗೊ: ಡ್ರಾಗನ್ಸ್ ರೈಸಿಂಗ್ ಸೀಸನ್ 2 ಭಾಗ 2 (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 3

ಕಂಟ್ರೋಲ್‌ (CTRL) (ಹಿಂದಿ ಚಲನಚಿತ್ರ) - ಅಕ್ಟೋಬರ್ 4

ಇಟ್ಸ್‌ ವಾಟ್‌ ಇನ್‌ಸೈಡ್‌ (ಇಂಗ್ಲಿಷ್ ಮೂವಿ)- ಅಕ್ಟೋಬರ್ 4

ಪ್ಲಾಟ್‌ಫಾರ್ಮ್ 2 (ಇಂಗ್ಲಿಷ್ ಚಲನಚಿತ್ರ)- ಅಕ್ಟೋಬರ್ 4

ರಾನ್ಮಾ 1/2 (ಜಪಾನೀಸ್ ವೆಬ್ ಸರಣಿ) - ಅಕ್ಟೋಬರ್ 5

ದಿ ಸೆವೆನ್ ಡೆಡ್ಲಿ ಸಿನ್ಸ್ ಫೋರ್ ನೈಟ್ಸ್ ಆಫ್ ದಿ ಅಪೋಕ್ಯಾಲಿಪ್ಸ್ ಸೀಸನ್ 2 (ಜಪಾನೀಸ್ ವೆಬ್ ಸೀರೀಸ್) - ಅಕ್ಟೋಬರ್ 6

ಅಮೆಜಾನ್ ಪ್ರೈಮ್ OTT

ಬೋಟ್‌ (ತಮಿಳು ಚಲನಚಿತ್ರ) - ಅಕ್ಟೋಬರ್ 1

ಚಾಲೆಂಜರ್ಸ್ (ಇಂಗ್ಲಿಷ್ ಚಲನಚಿತ್ರ) - ಅಕ್ಟೋಬರ್ 1

ದಿ ಲೆಜೆಂಡ್ ಆಫ್ ವ್ಯಾಕ್ಸ್ ಮೆಷಿನ್ ಸೀಸನ್ 3 (ಇಂಗ್ಲಿಷ್ ವೆಬ್ ಸರಣಿ) - ಅಕ್ಟೋಬರ್ 3

ಹೌಸ್ ಆಫ್ ಸ್ಪಾಯ್ಲ್ಸ್ (ಇಂಗ್ಲಿಷ್ ಚಲನಚಿತ್ರ) - ಅಕ್ಟೋಬರ್ 3

ಕ್ಲೌಡ್ ಮೌಂಟೇನ್ (ಚೀನೀ ಚಲನಚಿತ್ರ) - ಅಕ್ಟೋಬರ್ 3

ದಿ ಟ್ರೈಬ್ (ಹಿಂದಿ ರಿಯಾಲಿಟಿ ಶೋ) - ಅಕ್ಟೋಬರ್ 4

ಜಿಯೋ ಸಿನಿಮಾ ಒಟಿಟಿ

ಅರಣ್ಮನೈ 4 (ಹಿಂದಿ ಡಬ್ಬಿಂಗ್ ತಮಿಳು ಚಲನಚಿತ್ರ) - ಅಕ್ಟೋಬರ್ 1

ಅಮರ್ ಪ್ರೇಮ್ ಕಿ ಪ್ರೇಮ್ ಕಹಾನಿ (ಹಿಂದಿ ಚಲನಚಿತ್ರ) - ಅಕ್ಟೋಬರ್ 4

ದಿ ಸಿಂಪ್ಸನ್ಸ್ ಸೀಸನ್ 36 (ಇಂಗ್ಲಿಷ್ ವೆಬ್ ಸರಣಿ) - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ OTT - ಸೆಪ್ಟೆಂಬರ್ 30

ಆನಂದಪುರಂ ಡೈರೀಸ್ (ಮಲಯಾಳಂ ಚಲನಚಿತ್ರ)- ಮನೋರಮಾ ಮ್ಯಾಕ್ಸ್ OTT- ಅಕ್ಟೋಬರ್ 4

ಮನ್ವತ್ ಮರ್ಡರ್ಸ್ (ಹಿಂದಿ ವೆಬ್ ಸರಣಿ)- ಸೋನಿ ಲೈವ್ OTT- ಅಕ್ಟೋಬರ್ 4

ವೇರ್ ಈಸ್ ವಂಡಾ (ಜರ್ಮನ್ ವೆಬ್ ಸರಣಿ) - ಆಪಲ್ ಪ್ಲಸ್ ಟಿವಿ - ಅಕ್ಟೋಬರ್ 4

ಹನ್ನೆರಡು ಸ್ಪೆಷಲ್ ಒಟಿಟಿ: ಹಿಂದಿ ಚಲನಚಿತ್ರ ದಿ ಸಿಗ್ನೇಚರ್, ಅಮರ್ ಪ್ರೇಮ್ ಕಿ ಪ್ರೇಮ್ ಕಹಾನಿ, ತಮನ್ನಾ, ರಾಶಿ ಖನ್ನಾ ಅಭಿನಯದ ಹಾರರ್ ಮೂವಿ ಅರಣ್ಮನೈ 4, ಹಿಂದಿ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ ಮಾನ್ವತ್ ಮರ್ಡರ್ಸ್ ಕೂಡ ಈ 29 ರಲ್ಲಿವೆ, ಈ ಪೈಕಿ 10 ಸಿನಿಮಾಗಳು, ವೆಬ್‌ಸೀರಿಸ್ ಮತ್ತು ರಿಯಾಲಿಟಿ ಶೋ ಸೇರಿ ಒಟ್ಟು 12 ಸ್ಪೆಷಲ್ ಎಂದು ಗುರುತಿಸಿಕೊಂಡಿವೆ. ನೆಟ್‌ಫ್ಲಿಕ್ಸ್ ಒಂದರಲ್ಲೇ 12 ಒಟಿಟಿ ಬಿಡುಗಡೆಯಾಗುತ್ತಿರುವುದು ಕೂಡ ಗಮನಸೆಳೆದಿದೆ.

mysore-dasara_Entry_Point