July OTT Release: ಜುಲೈ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುವ 5 ಸಿನಿಮಾ, ವೆಬ್ ಸರಣಿಗಳ ವಿವರ
- July OTT Release: ಜುಲೈ ತಿಂಗಳಿನಲ್ಲಿ ಒಟಿಟಿಯಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆಯಾಗಲಿವೆ. ಕಮಾಂಡರ್ ಕರಣ್ ಸಕ್ಸೆನಾ, ಮಿರ್ಜಾಪುರ್ ಸೀಸನ್ 3, ವೈಲ್ಡ್ ವೈಲ್ಡ್ ಪಂಜಾಬ್ ಸೇರಿದಂತೆ ಹಲವು ಸಿನಿಮಾ ವೆಬ್ ಸರಣಿಗಳು ರಿಲೀಸ್ ಆಗಲಿವೆ.
- July OTT Release: ಜುಲೈ ತಿಂಗಳಿನಲ್ಲಿ ಒಟಿಟಿಯಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆಯಾಗಲಿವೆ. ಕಮಾಂಡರ್ ಕರಣ್ ಸಕ್ಸೆನಾ, ಮಿರ್ಜಾಪುರ್ ಸೀಸನ್ 3, ವೈಲ್ಡ್ ವೈಲ್ಡ್ ಪಂಜಾಬ್ ಸೇರಿದಂತೆ ಹಲವು ಸಿನಿಮಾ ವೆಬ್ ಸರಣಿಗಳು ರಿಲೀಸ್ ಆಗಲಿವೆ.
(1 / 6)
ಜುಲೈ ತಿಂಗಳಿನಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಸಿನಿಮಾಗಳು ಮತ್ತು ವೆಬ್ ಸರಣಿಗಳು ರಿಲೀಸ್ ಆಗಲಿವೆ. ಕಮಾಂಡರ್ ಕರಣ್ ಸಕ್ಸೆನಾ, ಮಿರ್ಜಾಪುರ್ ಸೀಸನ್ 3, ವೈಲ್ಡ್ ವೈಲ್ಡ್ ಪಂಜಾಬ್ ಸೇರಿದಂತೆ ಹಲವು ಸಿನಿಮಾ ವೆಬ್ ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿವೆ.
(2 / 6)
ವೈಲ್ಡ್ ವೈಲ್ಡ್ ಪಂಜಾಬ್: ವರುಣ ಶರ್ಮಾ, ಸನಿ ಸಿಂಹ, ಮನಜೋತ್ ಸಿಂಹ ಮತ್ತು ಜಸ್ಸಿ ಗಿಲ್ ನಟನೆಯ 'ವೈಲ್ಡ್ ವೈಲ್ಡ್ ಪಂಜಾಬ್" ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದು ಜುಲೈ 10ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
(3 / 6)
ಕಮಾಂಡರ್ ಕರಣ್ ಸಕ್ಸೆನಾ : ಗುರ್ಮೀತ್ ಚೌಧರಿ ಅವರ ಆಕ್ಷನ್ ಥ್ರಿಲ್ಲರ್ ವೆಬ್ ಸರಣಿಯು RAW ಏಜೆಂಟ್ ಕಮಾಂಡರ್ ಕರಣ್ ಸಕ್ಸೇನಾ ಅವರ ಸಾಹಸ ಕಥೆಯನ್ನು ಆಧರಿಸಿದೆ. ಕಮಾಂಡರ್ ಕರಣ್ ಸಕ್ಸೆನಾ ಸಿನಿಮಾವು ಜುಲೈ 8, 2024 ರಂದು Disney+Hotstar ನಲ್ಲಿ ರಿಲೀಸ್ ಆಗಲಿದೆ.
(4 / 6)
ಮಿರ್ಜಾಪುರ ಸೀಸನ್ 3: ಮಿರ್ಜಾಪುರ' ಮೂರನೇ ಸೀಸನ್ ರಾಜಕೀಯ, ದ್ರೋಹ ಮತ್ತು ಕೌಟುಂಬಿಕ ಕಲಹಗಳ ಹೊಸ ಕಥೆಯೊಂದಿಗೆ ಬರಲಿದೆ. ಈ ಸರಣಿಯನ್ನು ಜುಲೈ 9, 2024 ರಂದು ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾಗಲಿದೆ.
(5 / 6)
'ಕಾಕುಡ' ಒಂದು ಹಾರರ್-ಕಾಮಿಡಿ ಚಿತ್ರವಾಗಿದ್ದು, ಸೋನಾಕ್ಷಿ ಸಿನ್ಹಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ಜುಲೈ 12, 2024 ರಿಂದ ZEE5 ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಇತರ ಗ್ಯಾಲರಿಗಳು