ಕನ್ನಡ ಸುದ್ದಿ  /  ಮನರಂಜನೆ  /  Ott Release Today: ಇಂದು 10+ ಹೊಸ ಸಿನಿಮಾ, ವೆಬ್‌ ಸರಣಿಗಳು ಒಟಿಟಿಯಲ್ಲಿ ಬಿಡುಗಡೆ; ಚೈತ್ರಾ ಜೆ ಆಚಾರ್‌ ಸಿನಿಮಾ ಮಿಸ್‌ ಮಾಡಬೇಡಿ

OTT Release Today: ಇಂದು 10+ ಹೊಸ ಸಿನಿಮಾ, ವೆಬ್‌ ಸರಣಿಗಳು ಒಟಿಟಿಯಲ್ಲಿ ಬಿಡುಗಡೆ; ಚೈತ್ರಾ ಜೆ ಆಚಾರ್‌ ಸಿನಿಮಾ ಮಿಸ್‌ ಮಾಡಬೇಡಿ

OTT release this week: ಈ ವಾರ ಒಟಿಟಿಯಲ್ಲಿ ಹಲವು ಹೊಸ ಸಿನಿಮಾಗಳು, ಸರಣಿಗಳು ಬಿಡುಗಡೆಯಾಗುತ್ತಿವೆ. ಅಪರೂಪಕ್ಕೆ ಕನ್ನಡ ಸಿನಿಮಾವೂ ರಿಲೀಸ್‌ ಆಗುತ್ತಿದೆ. ದಿ ಕಾರ್ಪ್ಸ್ ವಾಷರ್, ಎ ಫ್ಯಾಮಿಲಿ ಅಫೇರ್, ದಿ ವರ್ಲ್ ವಿಂಡ್, ವಂಡ್ಲಾ, ಆವೇಶಂ (ಹಿಂದಿ) ಸೇರಿದಂತೆ ಹಲವು ಸಿನಿಮಾ-ಸರಣಿಯನ್ನು ಈ ವೀಕೆಂಡ್‌ನಲ್ಲಿ ನೋಡಬಹುದು.

OTT Release Today: ಇಂದು 10+ ಹೊಸ ಸಿನಿಮಾ, ವೆಬ್‌ ಸರಣಿಗಳು ಒಟಿಟಿಯಲ್ಲಿ ಬಿಡುಗಡೆ
OTT Release Today: ಇಂದು 10+ ಹೊಸ ಸಿನಿಮಾ, ವೆಬ್‌ ಸರಣಿಗಳು ಒಟಿಟಿಯಲ್ಲಿ ಬಿಡುಗಡೆ

OTT release today: ಮೊದಲೆಲ್ಲ ಶುಕ್ರವಾರ ಬಂತೆಂದರೆ ಯಾವ ಸಿನಿಮಾ ಯಾವ ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಪೇಪರ್‌ ನೋಡಲಾಗುತ್ತಿತ್ತು. ಈಗ ಎಚ್‌ಟಿ ಕನ್ನಡ ಸೇರಿದಂತೆ ಹಲವು ಆನ್‌ಲೈನ್‌ನಲ್ಲಿ ಪ್ರತಿವಾರ ಬಿಡುಗಡೆಯಾಗುವ ಸಿನಿಮಾಗಳ ವಿವರ ದೊರಕುತ್ತದೆ. ಈಗ ಜನರು ಕೇವಲ ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಸಿನಿಮಾದ ಕುರಿತು ಮಾತ್ರ ವಿವರ ಪಡೆಯುತ್ತಿಲ್ಲ. ಜನರಿಗೆ ಪ್ರತಿವಾರ ಯಾವ ಸಿನಿಮಾ, ವೆಬ್‌ ಸರಣಿ, ವೆಬ್‌ ಶೋ ಒಟಿಟಿಗಳಲ್ಲಿ ಪ್ರಸಾರವಾಗುತ್ತಿದೆ ಎಂಬ ಕುತೂಹಲವಿರುತ್ತದೆ. ಈಗ ಥಿಯೇಟರ್‌ಗಳಿಗಿಂತ ಒಟಿಟಿಗಳ ಮೂಲಕ ಜನರು ಮನರಂಜನೆ ಪಡೆಯುತ್ತಿದ್ದಾರೆ. ಕಲ್ಕಿ, ಕಾಟೇರ, ಬ್ಲಿಂಕ್‌ನಂತಹ ಸಿನಿಮಾ ಬಂದರೆ ಮಾತ್ರ ಥಿಯೇಟರ್‌ಗೆ ಹೋಗ್ತಿವಿ ಎಂಬ ಮನಸ್ಥಿತಿ ಈಗ ಸಿನಿಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಈ ಶುಕ್ರವಾರ (ಜೂನ್‌ 28) ಮತ್ತು ನಾಳೆ ನಾಡಿದ್ದು ಯಾವೆಲ್ಲ ಸಿನಿಮಾಗಳು, ವೆಬ್‌ ಸರಣಿಗಳು ಒಟಿಟಿಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವಿವರ ಪಡೆಯೋಣ.

ಈಗ ಬಹುತೇಕರು ಒಂದಲ್ಲ ಒಂದು ಒಟಿಟಿಗೆ ಚಂದಾದಾರರಾಗಿರುತ್ತಾರೆ. ಒಟಿಟಿಗೆ ಚಂದಾದಾರರಾಗಲು ಸಾಧ್ಯವಿಲ್ಲದೆ ಇರುವವರು ಒಟಿಟಿಗಳಲ್ಲಿ ಲಭ್ಯವಿರುವ ಉಚಿತ ಸಿನಿಮಾ, ವೆಬ್‌ ಸರಣಿಗಳನ್ನು ನೋಡುತ್ತಾರೆ. ಈ ವಾರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್‌ ಸೇರಿದಂತೆ ಹತ್ತು ಹಲವು ಭಾಷೆಗಳಲ್ಲಿ ಹಲವು ಹೊಸ ಸಿನಿಮಾ, ಸರಣಿಗಳು ಬಿಡುಗಡೆಯಾಗುತ್ತಿವೆ. ಯಾವೆಲ್ಲ ಸಿನಿಮಾಗಳು, ಯಾವೆಲ್ಲ ಒಟಿಟಿಗಳಲ್ಲಿ ಬಿಡುಗಡೆಯಾಗುತ್ತಿವೆ ಎಂಬ ವಿವರ ಇಲ್ಲಿದೆ.

ಒಟಿಟಿಯಲ್ಲಿ ಕನ್ನಡ ಸಿನಿಮಾ

ಈ ವಾರ ಒಟಿಟಿಯಲ್ಲಿ ಚೈತ್ರಾ ಜೆ ಆಚಾರ್‌ ನಟನೆಯ ಹ್ಯಾಪಿ ಬರ್ತ್‌ ಡೇ ಟು ಮಿ ಎಂಬ ಸಿನಿಮಾ ರಿಲೀಸ್‌ ಆಗುತ್ತಿದೆ. ಚೈತ್ರಾ ಜೆ ಆಚಾರ್‌ ನಟನೆಯ ಈ ಸಿನಿಮಾ ಏರ್‌ಟೆಲ್‌ಎಕ್ಸ್‌ಟ್ರೀಮ್‌, ಹಂಗಾಮಾ ಪ್ಲೇ, ವೋಡಾಫೋನ್‌ಟಿವಿ, ವಿಟಿ, ಟಾಟಾಪ್ಲೇ ಬಿಂಗ್‌ ಒಟಿಟಿಗಳಲ್ಲಿ ರಿಲೀಸ್‌ ಆಗಲಿದೆ. ಈ ಸಿನಿಮಾದಲ್ಲಿ ಒಂದಿಷ್ಟು ಬೋಲ್ಡ್‌ ಪದಗಳು ಇದ್ದು, ಸೆನ್ಸಾರ್‌ನವರು ಕತ್ತರಿ ಪ್ರಯೋಗ ಅಥವಾ ಬೀಪ್‌ ಸೌಂಡ್‌ ಮಾಡೋದು ಬೇಡ ಎಂದು ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ.

ಟ್ರೆಂಡಿಂಗ್​ ಸುದ್ದಿ

ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಹೊಸ ಸಿನಿಮಾ, ಸರಣಿಗಳು

ದಿ ಕಾರ್ಪ್ಸ್ ವಾಷರ್ (ಇಂಗ್ಲಿಷ್ ಚಲನಚಿತ್ರ) - ಜೂನ್ 28

ಎ ಫ್ಯಾಮಿಲಿ ಅಫೇರ್ (ಇಂಗ್ಲಿಷ್ ಚಲನಚಿತ್ರ)- ಜೂನ್ 28

ದಿ ವರ್ಲ್ ವಿಂಡ್ (ಕೊರಿಯನ್ ವೆಬ್ ಸರಣಿ) - ಜೂನ್ 28

ಓನಿಂಗ್‌ ಮ್ಯಾನ್‌ಹಟ್ಟನ್ (ಇಂಗ್ಲಿಷ್ ವೆಬ್ ಸರಣಿ) - ಜೂನ್ 28

ಭಜೆ ವಾಯು ವೆಲ್ಯಾ (ತೆಲುಗು ಚಲನಚಿತ್ರ)- ಜೂನ್ 28

ಅಮೆಜಾನ್ ಪ್ರೈಮ್ ವಿಡಿಯೋ

ಶರ್ಮಾಜಿ ಕಿ ಬೇಟಿ (ಹಿಂದಿ ಚಲನಚಿತ್ರ)- ಜೂನ್ 28

ಸಿವಿಲ್‌ ವಾರ್‌ (ಇಂಗ್ಲಿಷ್ ಚಲನಚಿತ್ರ) - ಜೂನ್ 28

ಆಪಲ್ ಪ್ಲಸ್ ಟಿವಿ ಒಟಿಟಿ

ವಂಡ್ಲಾ (ಇಂಗ್ಲಿಷ್ ವೆಬ್ ಸರಣಿ) - ಜೂನ್ 28

ಫ್ಯಾನ್ಸಿ ಡ್ಯಾನ್ಸ್ (ಇಂಗ್ಲಿಷ್ ಚಲನಚಿತ್ರ)- ಜೂನ್ 28

ಅವೇಶಮ್ (ಹಿಂದಿ ಡಬ್ಬಿಂಗ್ ಚಲನಚಿತ್ರ) - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ - ಜೂನ್ 28

ರೌತು ಕಿ ರಾಜ್ (ಹಿಂದಿ ಚಲನಚಿತ್ರ)- G5 OTT- ಜೂನ್ 28

ಹಿಗುಟಾ (ಮಲಯಾಳಂ ಚಲನಚಿತ್ರ)- ಸೈನಾ ಪ್ಲೇ OTT- ಜೂನ್ 28

ಒಟಿಟಿಯಲ್ಲಿ ಹಿಂದಿ ಸಿನಿಮಾಗಳು

ಹಿಂದಿಯಲ್ಲಿ ಹಲವು ಸಿನಿಮಾ, ವೆಬ್‌ ಸರಣಿಗಳು ಬಿಡುಗಡೆಯಾಗಲಿವೆ. ಅವುಗಳಲ್ಲಿ, ಶರ್ಮಾಜಿ ಕಿ ಬೇಟಿ, ಕೌಟುಂಬಿಕ ಹಾಸ್ಯ ಪ್ರಕಾರದ ಹಿಂದಿ ಚಲನಚಿತ್ರವು ಆಸಕ್ತಿದಾಯಕವಾಗಿರುತ್ತದೆ. ಈ ಚಲನಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

ಹಾಲಿವುಡ್ ಆಕ್ಷನ್ ಥ್ರಿಲ್ಲರ್

ಹಾಲಿವುಡ್ ಆಕ್ಷನ್ ಸಿನಿಮಾ ಸಿವಿಲ್ ವಾರ್ ಕೂಡ ಅಮೆಜಾನ್ ಪ್ರೈಮ್ ನಲ್ಲಿ ಕುತೂಹಲ ಮೂಡಿಸಲಿದೆ. ಸ್ಪೈಡರ್ ಮ್ಯಾನ್ ಸರಣಿಯ ನಾಯಕಿ ಕ್ರಿಸ್ಟನ್ ಡನ್ಸ್ಟ್ ಅಭಿನಯದ ಆಕ್ಷನ್ ಥ್ರಿಲ್ಲರ್ ಇಂಗ್ಲಿಷ್ ಜೊತೆಗೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಹಾಗಾಗಿ ಆ್ಯಕ್ಷನ್ ಸಿನಿಮಾ ಪ್ರಿಯರಿಗೆ ಇದು ಇಷ್ಟವಾಗಬಹುದು. ಕೆಲವೊಂದು ಸಿನಿಮಾ, ವೆಬ್‌ ಸರಣಿಗಳು ಕನ್ನಡ ಭಾಷೆ ಆಯ್ಕೆಯಲ್ಲೂ ಲಭ್ಯವಿದೆ.