OTT Movies: ಈ ಶುಕ್ರವಾರ ಒಟಿಟಿಯಲ್ಲಿ 8 ಹೊಸ ಸಿನಿಮಾ, ಶೋ ಬಿಡುಗಡೆ; ಮನೆಯಲ್ಲೇ ಮಸ್ತ್ ಮನರಂಜನೆ
Friday OTT releases (April 5): ಈ ಶುಕ್ರವಾರ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಆಪಲ್ ಟಿವಿ, ಲಯನ್ಸ್‌ಗೇಟ್ ಪ್ಲೇ, ಝೀ5 ಮುಂತಾದ ಒಟಿಟಿಗಳಲ್ಲಿ ಸ್ಕೂಪ್, ಹೌ ಟು ಡೇಟ್ ಬಿಲ್ಲಿ ವಾಲ್ಸ್ , ದಿ ಆಂಟಿಸೋಷಿಯಲ್ ನೆಟ್‌ವರ್ಕ್: ಮೆಮೆಸ್ ಟು ಮೇಯಮ್, ಪ್ಯಾರಾಸೈಟ್: ದಿ ಗ್ರೇ ಸೇರಿದಂತೆ ಹಲವು ಸಿನಿಮಾ, ವೆಬ್‌ಸರಣಿಗಳು ಬಿಡುಗಡೆಯಾಗುತ್ತಿವೆ.
ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಆಪಲ್ ಟಿವಿ, ಲಯನ್ಸ್‌ಗೇಟ್ ಪ್ಲೇ, ಝೀ5 ಮುಂತಾದ ಒಟಿಟಿಗಳಿಗೆ ಚಂದಾದಾರರಾಗಿರುವವರಿಗೆ ಈ ವಾರ ಮಸ್ತ್ ಮನರಂಜನೆ ಕಾಯುತ್ತಿದೆ. ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು ಈ ಶುಕ್ರವಾರ (ಏಪ್ರಿಲ್ 5) ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಈ ಏಪ್ರಿಲ್ ತಿಂಗಳಲ್ಲಿ ಪೇಮಲು, ಲಾಲ್ ಸಲಾಮ್, ಲಂಬಸಂಗಿ, ಭೀಮಾ, ಗಾಮಿ, ಸಿರೇನ್ ಮುಂತಾದ ಸಿನಿಮಾಗಳು ಬಿಡುಗಡೆಯಾಗಲಿವೆ. ಸದ್ಯ ಏಪ್ರಿಲ್ 5ರಂದು ಬಿಡುಗಡೆಯಾಗುವ ಸಿನಿಮಾ ಮತ್ತು ಶೋಗಳ ವಿವರ ಪಡೆಯೋಣ.
ಸ್ಕೂಪ್-(ನೆಟ್‌ಫ್ಲಿಕ್ಸ್)
ನೆಟ್‌ಫ್ಲಿಕ್ಸ್‌ನಲ್ಲಿ ಸ್ಕೂಪ್ ಹೆಸರಿನ ಹೊಸ ಬಯೊಗ್ರಾಫಿಕಲ್ ಫಿಲ್ಮ್ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಪ್ರಿನ್ಸ್ ಆಂಡ್ರ್ಯೂ ಅವರು ಸಂದರ್ಶನವೊಂದರಲ್ಲಿ ಜೆಫ್ರಿ ಎಪ್‌ಸ್ಟೀನ್ ಜತೆಗೆ ಇರುವ ಸಂಬಂಧದ ಕುರಿತು ಮಾತನಾಡಿದ್ದರು. ಇದೀಗ ಈ ವಿಷಯ ಸಿನಿಮಾವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಹೌ ಟು ಡೇಟ್ ಬಿಲ್ಲಿ ವಾಲ್ಸ್ (ಅಮೆಜಾನ್ ಪ್ರೈಮ್)
ಅಮೆಲಿಯಾ ಜತೆ ಪ್ರೀತಿಗೆ ಬಿದ್ದ ಆರ್ಚಿ ಬದುಕಿನ ಕಥೆಯಿದು. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಏಪ್ರಿಲ್ 5ರಂದು ರಿಲೀಸ್ ಆಗುತ್ತಿದೆ.
ದಿ ಆಂಟಿಸೋಷಿಯಲ್ ನೆಟ್‌ವರ್ಕ್: ಮೆಮೆಸ್ ಟು ಮೇಯಮ್ (ನೆಟ್‌ಫ್ಲಿಕ್ಸ್)
ಒಂದೇ ಬಗೆಯ ಸಿನಿಮಾ ನೋಡಿ ಬೋರ್ ಆದವರಿಗೆ ಈ ಡಾಕ್ಯುಮೆಂಟರಿ ಸಿನಿಮಾ ಇಷ್ಟವಾಗಬಹುದು. ಇದು ಜಾರ್ಜಿಯೊ ಆಂಗೆಲಿನಿ ಮತ್ತು ಆರ್ತರ್ ಜೋನ್ಸ್ ನಿರ್ಮಾಣದ ಸಿನಿಮಾ. ಯುವಕರ ಗುಂಪೊಂದು ಒಂದು ವೆಬ್‌ಸೈಟ್ ರಚಿಸುತ್ತದೆ. ಆ ವೆಬ್‌ಸೈಟ್ ನಿಜವಾದ ಜಗತ್ತಿಗೆ ಭಯ ಹುಟ್ಟಿಸುತ್ತದೆ. ಇದೇ ಇದರ ಕಥೆ.
ಪ್ಯಾರಾಸೈಟ್: ದಿ ಗ್ರೇ (ನೆಟ್‌ಫ್ಲಿಕ್ಸ್)
ನಿಮಗೆ ಕೊರಿಯಾನ್ ಡ್ರಾಮಾ ಇಷ್ಟಾನ? ಹಾಗಾದರೆ ಪ್‌ಯಾರಾ ಸೈಟ್ ದಿ ಗ್ರೇ ಎಂಬ ಹಾರರ್ ಸೈಂಟಿಫಿಕ್ ಫಿಕ್ಷನ್ ಡ್ರಾಮಾ ನಿಮಗಾಗಿ ಕಾಯುತ್ತಿದೆ. ಭೂಮಿಯ ಮೇಲೆ ನಿಯಂತ್ರಣ ತೆಗೆದುಕೊಳ್ಳಲು ಅಗೋಚರ ವ್ಯಕ್ತಿಗಳು ದಾಳಿ ನಡೆಸುವ ವಿಷಯ ಇದರಲ್ಲಿದೆ.
ದಿ ಬ್ರಿಕ್‌ಲೇಯರ್ (ಲಯನ್ಸ್‌ಗೇಟ್ ಪ್ಲೇ)
ಇದು ಸಾಹಸಭರಿತ ಮನರಂಜನಾ ಸಿನಿಮಾ, ಪೌಲ್ ಲಿಂಡ್‌ಸೇ ಕಾದಂಬರಿ ಆಧರಿತವಾಗಿದೆ. ಈ ಶುಕ್ರವಾರ ಇದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಶುಗರ್ (ಆಪಲ್ ಟಿವಿ ಪ್ಲಸ್)
ಶುಗರ್ ಹೆಸರಿನ ಹೊಸ ವೆಬ್ ಸರಣಿಯನ್ನು ಆಪಲ್ ಟಿವಿಯಲ್ಲಿ ವೀಕ್ಷಿಸಬಹುದು.
ತಂತ್ರ (ಆಹಾ ಒಟಿಟಿ)
ಇದು ಶ್ರೀನಿವಾಸ್ ಗೋಪಿಶೆಟ್ಟಿ ನಿರ್ದೇಶನದ ಹಾರರ್ ಸಿನಿಮಾ. ಅನನ್ಯ ನಾಗಲ್ಲಾ, ಧನುಶ್ ರಘುಮಂದ್ರಿ ಮತ್ತು ಟೆಂಬರ್ ವಂಶಿ ಮುಂತಾದವರು ನಟಿಸಿರುವ ತೆಲುಗು ಸಿನಿಮಾ ಇದಾಗಿದೆ.
ಫೆರಿ (ಝೀ5)
ಫೆರಿ ಹೆಸರಿನ ಸಿನಿಮಾವೊಂದು ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಸೌಮೆಂದ್ರ ಪಾಧಿ ನಿರ್ದೇಶನದ ಈ ಸಿನಿಮಾದಲ್ಲಿ ಒಬ್ಬ ಅನಾಥ ಹುಡುಗ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಪಡೆಯುತ್ತಾನೆ. ಆತನಿಗೆ ಅಲ್ಲಿ ಶ್ರೀಮಂತ ವಿದ್ಯಾರ್ಥಿಗಳಿಂದ ಉಂಟಾಗುವ ಪರಿಸ್ಥಿತಿಯ ಕಥೆಯನ್ನು ಈ ಸಿನಿಮಾ ಹೊಂದಿದೆ.