OTT releases: ಚಿಯಾನ್ ವಿಕ್ರಮ್ ನಟನೆಯ ತಂಗಲಾನ್‌ನಿಂದ ದಿ ಪೆಂಗ್ವಿನ್‌ವರೆಗೆ- ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸಿನಿಹಬ್ಬ
OTT releases: ಈ ವಾರಾಂತ್ಯದಲ್ಲಿ ಮನೆಯಲ್ಲಿ ಕುಳಿತು ಹೊಸ ಸಿನಿಮಾ, ವೆಬ್ ಸರಣಿ ನೋಡಲು ಬಯಸುವವರಿಗೆ ಜಿಯೋ ಸಿನೆಮಾ, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗಳಲ್ಲಿ ಹಲವು ಹೊಸ ಸಿನಿಮಾಗಳು ಕಾಯುತ್ತಿವೆ. ಚಿಯಾನ್ ವಿಕ್ರಮ್ ನಟನೆಯ ತಂಗಲಾನ್ ಚಿತ್ರವು ಸೆಪ್ಟೆಂಬರ್ 20ರಂದು ಬಿಡುಗಡೆಯಾಗುತ್ತಿದೆ.
OTT releases: ಪ್ರತಿಶುಕ್ರವಾರ ಬಂತೆಂದರೆ ಯಾವ ಹೊಸ ಸಿನಿಮಾ, ವೆಬ್ ಸರಣಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ಒಟಿಟಿ ಪ್ಲೇ, ಜಿಯೋ ಸಿನಿಮಾ, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜೀ5 ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಈ ವಾರ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ವಿಶೇಷವಾಗಿ ಕೆಜಿಎಫ್ ಹಿನ್ನೆಲೆಯ ತಂಗಲಾನ್ ಚಿತ್ರವನ್ನು ಮನೆಯಲ್ಲೇ ನೋಡಲು ಸಾಕಷ್ಟು ಜನರು ಕಾಯುತ್ತಿದ್ದಾರೆ. ಚಿಯಾನ್ ವಿಕ್ರಮ್ ನಟನೆಯ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಇಂದು ರಿಲೀಸ್ ಆಗುತ್ತಿದೆ. ನೆಟ್‌ಫ್ಲಿಕ್ಸ್, ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ಹಾಟ್‌ಸ್ಟಾರ್‌ನಲ್ಲೂ ಹಲವು ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವೀಕೆಂಡ್‌ಗೆ ಯಾವೆಲ್ಲ ಸಿನಿಮಾ ನೋಡಬಹುದು ಎಂದು ನೋಡೋಣ.
ತಂಗಲಾನ್ (ನೆಟ್‌ಫ್ಲಿಕ್ಸ್)
ಸೆಪ್ಟೆಂಬರ್ 20ರಿಂದ ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಚಿಯಾನ್ ವಿಕ್ರಮ್ ನಟನೆಯ ತಂಗಲಾನ್ ಸಿನಿಮಾ ಬಿಡುಗಡೆಯಾಗಲಿದೆ. ಕೋಲಾರ ಚಿನ್ನದ ಗಣಿಯ ಹಳೆ ಜಮಾನದ ಕಥೆ ಹೊಂದಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಇನ್ನೂ ನೋಡಿಲ್ಲವೆಂದಾದರೆ ಇನ್ಮುಂದೆ ಮನೆಯಲ್ಲಿಯೇ ಅಥವಾ ಎಲ್ಲಿ ಬೇಕೆಂದರಲ್ಲಿ ಆನ್‌ಲೈನ್‌ನಲ್ಲಿ ನೋಡಬಹುದು.
ಅಗಥಾ ಆಲ್ ಅಲಾಂಗ್ (ಡಿಸ್ನಿ ಪ್ಲಸ್ ಹಾಟ್‌ಸ್ಟಾರ್)
ವಾಂಡಾ ವಿಷನ್‌ನ ಸ್ಪಿನ್ ಆಫ್ ವೆಬ್ ಸರಣ ಇದಾಗಿದೆ. ಅಘತಾ ಮಾಟಗಾತಿಯ ಕಥೆಯನ್ನು ಇದು ಹೊಂದಿದೆ. ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್ ಬಿಡುಗಡೆ ಮಾಡಿರುವ ಈ ವೆಬ್ ಸರಣಿಯಲ್ಲಿ ಹಾರರ್ ಜತೆ ಡಾರ್ಕ್ ಹ್ಯೂಮರ್ ಅಥವಾ ಹಾಸ್ಯವೂ ಇರಲಿದೆ.
ಜೋ ತೇರಾ ಹೈ ವೋ ಮೇರಾ ಹೈ (ಜಿಯೋ ಸಿನಿಮಾ)
ಚಹ ಮಾರಾಟಗಾರನೊಬ್ಬನ ಕಥೆ ಇದಾಗಿದೆ. ರಾಜ್ ತ್ರಿವೇದಿ ನಿರ್ದೇಶಣದ ಈ ಸಿನಿಮಾದಲ್ಲಿ ಪರೇಶ್ ರಾವಲ್, ಅಮಿತ್ ಸಿಯೆಲ್, ಸೋನಾಲಿ ಕುಲಕರ್ಣಿ ನಟಿಸಿದ್ದಾರೆ.
ಕಪಿಲ್ ಶರ್ಮಾ ಶೋ ಸೀಸನ್ 2 (ನೆಟ್‌ಫ್ಲಿಕ್ಸ್)
ಕಾಮಿಡಿಯನ್ ಕಪಿಲ್ ಶರ್ಮಾ ಶೋ ಕೂಡ ಈ ವಾರ ಬಿಡುಗಡೆಯಾಗುತ್ತಿದೆ. ಬಾಲಿವುಡ್ ನಟರು ಮತ್ತು ಪ್ರಮುಖ ಸೆಲೆಬ್ರಿಟಿಗಳು ಈ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾನ್‌ಸ್ಟಾರ್: ದಿ ಲೈಲಿ ಆಂಡ್ ಇರಿಕ್ ಮೆನೆಡೆನ್ಸ್ ಸ್ಟೋರಿ (ನೆಟ್‌ಫ್ಲಿಕ್ಸ್)
ಸತ್ಯ ಕಥೆ ಆಧರಿತ ಕ್ರೈಮ್ ಸ್ಟೋರಿ ಇದಾಗಿದೆ. ಮೆನೆಡೆನ್ ಬ್ರದರ್ಸ್‌ಗಳ ಕಥೆಯಾಗಿದೆ. ತಮ್ಮ ಹೆತ್ತವರನ್ನು 1989ರಲ್ಲಿ ಹತ್ಯೆ ಮಾಡಿರುವ ಆರೋಪ ಇವರ ಮೇಲಿದೆ. ಈ ಸರಣಿಯು ಈ ಹತ್ಯೆ ಪ್ರಕರಣದ ಕುರಿತು ಸಾಕಷ್ಟು ವಿವರ ಬಿಚ್ಚಿಡಲಿದೆ.
ಮತ್ಸ್ಯಗಂಧ (ಕನ್ನಡ)
ಪೃಥ್ವಿ ಅಂಬಾರ್ ನಟಿಸಿರುವ ಕನ್ನಡ ಸಿನಿಮಾ ಮತ್ಸ್ಯಗಂಧವನ್ನು ಈ ವಾರ ಒಟಿಟಿಯಲ್ಲಿ ನೋಡಬಹುದು. ಸಿನಿಬಜಾರ್‌ನಲ್ಲಿ ಈ ಸಿನಿಮಾ ರೆಂಟ್‌ಗೆ ಬಿಡುಗಡೆಯಾಗಿದೆ. “ಮತ್ಸ್ಯಗಂಧ’ ಸಿನಿಮಾದಲ್ಲಿ ಪೃಥ್ವಿ ಅಂಬರ್ ಮಾತ್ರವಲ್ಲದೆ ಪ್ರಶಾಂತ್ ಸಿದ್ಧಿ, ನಾಗರಾಜ್ ಬೈಂದೂರ್, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಮುಂತಾದವರು ನಟಿಸಿದ್ದಾರೆ.
ದಿ ಪೆಂಗ್ವಿನ್ (ಜಿಯೋ ಸಿನಿಮಾ)
ಪೆಚ್ಚಿ (ತಮಿಳು) (ಅಮೆಜಾನ್ ಪ್ರೈಮ್ ವಿಡಿಯೋ)
ಮಾರುತಿ ನಗರ ಸುಬ್ರಹ್ಮಣ್ಯಂ (ತೆಲುಗು- ಅಹಾ)
ಇದನ್ನೂ ಓದಿ: Malavika Mohanan: ಮೇಡಂ ನಿಮ್ಮ ಮದುವೆ ಯಾವಾಗ? ಅಭಿಮಾನಿಯ ಪ್ರಶ್ನೆಗೆ ತಂಗಲಾನ್ ನಟಿ ಮಾಳವಿಕಾ ಮೋಹನನ್ ಹೀಗಂದ್ರು
ವಿಭಾಗ