ಕನ್ನಡ ಸುದ್ದಿ  /  ಮನರಂಜನೆ  /  Ott Releases: ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ಹಬ್ಬ; ಆರ್ಟಿಕಲ್‌ 370 ಸೇರಿದಂತೆ ಹಲವು ಸಿನಿಮಾ, ವೆಬ್‌ ಸರಣಿಗಳು ರಿಲೀಸ್‌

OTT releases: ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ಹಬ್ಬ; ಆರ್ಟಿಕಲ್‌ 370 ಸೇರಿದಂತೆ ಹಲವು ಸಿನಿಮಾ, ವೆಬ್‌ ಸರಣಿಗಳು ರಿಲೀಸ್‌

OTT releases to watch this weekend: ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ಹಲವು ಹೊಸ ಸಿನಿಮಾಗಳು, ವೆಬ್‌ ಸರಣಿಗಳು ರಿಲೀಸ್‌ ಆಗುತ್ತಿವೆ. ಆರ್ಟಿಕಲ್‌ 370, ಡ್ಯೂನ್‌ ಪಾರ್ಟ್‌ 2, ಸೈಲೆನ್ಸ್‌ 2, ರೆಬೆಲ್‌ ಮೂನ್‌ ಮುಂತಾದ ಸಿನಿಮಾಗಳನ್ನು ಮನೆಯಲ್ಲೇ ನೋಡಬಹುದು.

ಆರ್ಟಿಕಲ್‌ 370 ಸೇರಿದಂತೆ ಹಲವು ಸಿನಿಮಾ, ವೆಬ್‌ ಸರಣಿಗಳು ಒಟಿಟಿಯಲ್ಲಿ ಬಿಡುಗಡೆ
ಆರ್ಟಿಕಲ್‌ 370 ಸೇರಿದಂತೆ ಹಲವು ಸಿನಿಮಾ, ವೆಬ್‌ ಸರಣಿಗಳು ಒಟಿಟಿಯಲ್ಲಿ ಬಿಡುಗಡೆ

OTT releases this week: ಒಟಿಟಿಯಲ್ಲಿ ಈ ವಾರ ಹಲವು ಹೊಸ ವೆಬ್‌ಸರಣಿಗಳು, ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಚಿತ್ರಮಂದಿರಗಳಲ್ಲಿ ಸೂಪರ್‌ಹಿಟ್‌ ಆಗಿರುವ ಇತ್ತೀಚಿನ ಸಿನಿಮಾಗಳನ್ನು ಮನೆಯಲ್ಲೇ ನೋಡಬಹುದು. ಬಾಲಿವುಡ್‌, ಹಾಲಿವುಡ್‌ ಸಿನಿಮಾಗಳು, ಹೊಸ ವೆಬ್‌ ಸರಣಿಗಳು, ಶೋಗಳು ರಿಲೀಸ್‌ ಆಗುತ್ತಿವೆ. ಈ ಬೇಸಿಗೆಯ ಬಿಸಿಯಲ್ಲಿ ಮನೆಯ ಹೊರಗೆ ಹೋಗಿ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದು ಕಷ್ಟ ಎನ್ನುವವರು ಒಟಿಟಿಗಳಲ್ಲಿಯೇ ಮನರಂಜನೆ ಪಡೆಯಬಹುದು.

ಟ್ರೆಂಡಿಂಗ್​ ಸುದ್ದಿ

ಆರ್ಟಿಕಲ್‌ 370

ಜಿಯೋ ಸಿನಿಮಾದಲ್ಲಿ ಆರ್ಟಿಕಲ್‌ 370 ನೋಡಬಹುದು. ಯಾಮಿ ಗೌತಮ್‌ ಈ ಸಿನಿಮಾದಲ್ಲಿ ಇಂಟಲಿಜೆನ್ಸ್‌ ಆಫೀಸರ್‌ ಆಗಿ ನಟಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಆದಿತ್ಯ ಸುಹಾಸ್‌ ಜಂಭಾಲೆ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಪ್ರಿಯಾಮಣಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. 370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿರುವ ಕುರಿತು ಈ ಚಿತ್ರ ತಿಳಿಸುತ್ತದೆ.. ಯಾಮಿ ಇಲ್ಲಿ ಝೂನಿ ಹಕ್ಸರ್ ಎಂಬ ಗುಪ್ತಚರ ಅಧಿಕಾರಿಯಾಗಿ ನಟಿಸಿದ್ದಾರೆ. ಆಗಸ್ಟ್ 5, 2019 ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿತು ಮತ್ತು ಅದನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

ಯಾಮಿ ಗೌತಮ್‌
ಯಾಮಿ ಗೌತಮ್‌

ಡ್ಯೂನ್‌: ಪಾರ್ಟ್‌ 2

ನೆಟ್‌ ಫ್ಲಿಕ್ಸ್‌ನಲ್ಲಿ ಡ್ಯೂನ್‌: ಪಾರ್ಟ್‌ 2 ರಿಲೀಸ್‌ ಆಗಲಿದೆ. ಡೆನಿಸ್ ವಿಲ್ಲೆನ್ಯೂವ್ ನಿರ್ದೇಶನದ ಸೈಂಟಿಫಿಕ್‌ ಸಿನಿಮಾವಾಗಿದೆ. ಟಿಮೊಥಿ ಚಾಲಮೆಟ್, ಝೆಂಡಾಯಾ, ರೆಬೆಕಾ ಫರ್ಗುಸನ್, ಆಸ್ಟಿನ್ ಬಟ್ಲರ್, ಫ್ಲಾರೆನ್ಸ್ ಪಗ್ ಮತ್ತು ಇತರರು ನಟಿಸಿದ್ದಾರೆ. ಮಾರ್ಚ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 685.3 ದಶಲಕ್ಷ ಡಾಲರ್‌ ಗಳಿಸಿದೆ.

ಡ್ಯೂನ್‌ ಪಾರ್ಟ್‌ 2
ಡ್ಯೂನ್‌ ಪಾರ್ಟ್‌ 2

ರೆಬೆಲ್ ಮೂನ್ - ಭಾಗ ಎರಡು: ದಿ ಸ್ಕಾರ್ಗಿವರ್

ಝಾಕ್ ಸ್ನೈಡರ್ ನಿರ್ದೇಶಣದ ಸೈಂಟಿಫಿಕ್‌ ಅಡ್ವೆಂಚರ್‌ಫ್ರ್ಯಾಂಚೈಸ್‌ನ ಎರಡನೇ ಕಂತು ಇದಾಗಿದೆ. ರೆಬೆಲ್ ಮೂನ್ - ಭಾಗ 1: ಎ ಚೈಲ್ಡ್ ಆಫ್ ಫೈರ್ ನಾಲ್ಕು ತಿಂಗಳ ಹಿಂದೆ ರಿಲೀಸ್‌ ಆಗಿತ್ತು. ಭಾಗ ಎರಡರಲ್ಲಿ ನಟರಾದ ಜಿಮೊನ್ ಹೌನ್ಸೌ ಮತ್ತು ಬೇ ಡೂನಾ ಜನರಲ್ ಟೈಟಸ್ ಮತ್ತು ನೆಮೆಸಿಸ್ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ರೆಬೆಲ್‌ ಮೂನ್‌
ರೆಬೆಲ್‌ ಮೂನ್‌

ಸೈಲೆನ್ಸ್‌ 2

ಝೀ 5ನಲ್ಲಿ ಸೈಲೆನ್ಸ್‌ 2 ನೋಡಬಹುದು. ಅಬನ್ ಭರುಚಾ ಡಿಯೋಹಾನ್ಸ್ ನಿರ್ದೇಶನದ ಸೈಲೆನ್ಸ್ 2 ಚಿತ್ರದಲ್ಲಿ ಮನೋಜ್ ಬಾಜ್‌ಪೇಯಿ, ಪ್ರಾಚಿ ದೇಸಾಯಿ, ಸಾಹಿಲ್ ವೈದ್, ವಕ್ವಾರ್ ಶೇಖ್, ದಿನಕರ್ ಶರ್ಮಾ ಮತ್ತು ಪಾರುಲ್ ಗುಲಾಟಿ ನಟಿಸಿದ್ದಾರೆ. ಎಸಿಪಿ ಅವಿನಾಶ್ ವರ್ಮಾ ಆಗಿ ಮನೋಜ್ ಬಾಜಪೇಯಿ ಮತ್ತೆ ಕಾಣಿಸಿಕೊಂಡಿದ್ದಾರೆ. ಝೀ5ನಲ್ಲಿ ಏಪ್ರಿಲ್‌ 16ರಂದು ರಿಲೀಸ್‌ ಆಗಿದೆ.

ಸೈಲೆನ್ಸ್‌ 2
ಸೈಲೆನ್ಸ್‌ 2

ಎನಿವನ್‌ ಬಟ್‌ ಯೂ

ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಇಬ್ಬರು ಅಪರಿಚಿತರು ಭೇಟಿಯಾದ ಸಮಯದಲ್ಲಿ ತಪ್ಪು ತಿಳುವಳಿಕೆಯಿಂದ ಬದ್ಧ ವೈರಿಗಳಾಗುತ್ತಾರೆ. ವಿಲ್‌ ಗ್ಲಕ್‌ ನಿರ್ದೇಶನದ ಈ ಸಿನಿಮಾವು ವಿಲಿಯಂ ಶೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ಮಚ್ ಅಡೋ ಎಬೌಟ್ ನಥಿಂಗ್‌ನಿಂದ ಕೊಂಚ ಸ್ಪೂರ್ತಿ ಪಡೆದಿದೆ.

ಎನಿವನ್‌ ಬಟ್‌ ಯೂ
ಎನಿವನ್‌ ಬಟ್‌ ಯೂ

ಡ್ರೀಮ್‌ ಸೀನರಿಯೊ

ಲಯನ್ಸ್‌ಗೇಟ್‌ ಪ್ಲೇನಲ್ಲಿ ಬಿಡುಗಡೆಯಾಗಿದೆ. ಪೌಲ್‌ ಮ್ಯಾಥ್ಯೂಸ್‌ ಆಗಿ ನಿಕೋಲಸ್‌ ಕೇಜ್‌ ನಟಿಸಿದ್ದಾರೆ. ಕ್ರಿಸ್ಟೋಫರ್‌ ಬಾರ್ಗಿಲ್‌ ನಿರ್ದೇಶನದ ಈ ಸಿನಿಮಾ 2023ರಲ್ಲಿ ಬಿಡುಗಡೆಯಾಗಿತ್ತು.

IPL_Entry_Point