ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ ಈ ವಿಕೆಂಡ್‌ನಲ್ಲಿ ಬಿಡುಗಡೆ: ಉಂಡೆಖಿ, ಕುಕ್ಕಿಂಗ್‌ ಆಫ್‌ ಮರ್ಡರ್‌, ಡಾಕ್ಟರ್‌ ಹೂ ಸೇರಿದಂತೆ ಹೊಸ ಸರಣಿ, ಸಿನಿಮಾಗಳ ವಿವರ

ಒಟಿಟಿಯಲ್ಲಿ ಈ ವಿಕೆಂಡ್‌ನಲ್ಲಿ ಬಿಡುಗಡೆ: ಉಂಡೆಖಿ, ಕುಕ್ಕಿಂಗ್‌ ಆಫ್‌ ಮರ್ಡರ್‌, ಡಾಕ್ಟರ್‌ ಹೂ ಸೇರಿದಂತೆ ಹೊಸ ಸರಣಿ, ಸಿನಿಮಾಗಳ ವಿವರ

OTT releases to watch this weekend: ಈ ವಾರ ಉಂಡೆಖಿ, ಡಾಕ್ಟರ್ ಹೂ, ಕುಕಿಂಗ್ ಅಪ್ ಮರ್ಡರ್ ಸೇರಿದಂತೆ ಹಲವು ಹೊಸ ಸಿನಿಮಾಗಳು, ವೆಬ್‌ ಸರಣಿಗಳು ಈ ವೀಕೆಂಡ್‌ನಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಕ್ರೈಮ್ ಡ್ರಾಮಾದ ಮೂರನೇ ಸೀಸನ್ ನಿಂದ ಬ್ರಿಟಿಷ್ ಟೈಮ್ ಟ್ರಾವೆಲ್ ಸಾಹಸದವರೆಗೆ ಹಲವು ಸರಣಿಗಳನ್ನೂ ಈ ವಾರ ನೋಡಬಹುದು.

ಒಟಿಟಿಯಲ್ಲಿ ಈ ವಿಕೆಂಡ್‌ನಲ್ಲಿ ಬಿಡುಗಡೆ
ಒಟಿಟಿಯಲ್ಲಿ ಈ ವಿಕೆಂಡ್‌ನಲ್ಲಿ ಬಿಡುಗಡೆ

ಬೆಂಗಳೂರು: ಈ ವೀಕೆಂಡ್‌ನಲ್ಲಿ ಮನೆಯಲ್ಲಿಯೇ ಕುಳಿತು ಒಟಿಟಿಯಲ್ಲಿ ಯಾವುದಾದರೂ ಸಿನಿಮಾ, ವೆಬ್‌ ಸರಣಿಗಳನ್ನು ನೋಡಲು ಬಯಸುವಿರಾ? ಹಾಗಾದರೆ, ಹಲವು ಆಯ್ಕೆಗಳು ನಿಮಗೆ ಇವೆ. ಈ ವಾರ ಮಿಸ್ಟರಿ ಥ್ರಿಲ್ಲರ್‌ನಿಂದ ರೋಮಾಂಚಕ ಸಾಹಸದವರೆಗೆ ವಿವಿಧ ಹೊಸ ವೆಬ್‌ ಸರಣಿ, ಸಿನಿಮಾಗಳು ಬಿಡುಗಡೆಯಾಗಲಿವೆ. ಅಮೆಜಾನ್‌ ಪ್ರೈಮ್‌ ವಿಡಿಯೋ, ಸೋನಿಲೈವ್‌ ಸೇರಿದಂತೆ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವೀಕೆಂಡ್‌ನಲ್ಲಿ ಏನೆಲ್ಲ ನೋಡಬಹುದು ಎಂದು ನೋಡೋಣ.

ಟ್ರೆಂಡಿಂಗ್​ ಸುದ್ದಿ

ಆವೇಶಮ್: ಅಮೆಜಾನ್ ಪ್ರೈಮ್ ವಿಡಿಯೋ

ಜಿತು ಮಾಧವನ್ ಅವರ ಮಲಯಾಳಂ ಚಿತ್ರ ಆವೇಶಂ ಒಟಿಟಿಯಲ್ಲಿದೆ. ಏರೋನಾಟಿಕಲ್ ಎಂಜಿನಿಯರಿಂಗ್ ಮಾಡಲು ಕೇರಳದಿಂದ ಬೆಂಗಳೂರಿಗೆ ಬರುವ ಮೂವರು ಯುವ ವಿದ್ಯಾರ್ಥಿಗಳಾದ ಅಜು (ಹಿಪ್ಜ್ ಸ್ಟರ್), ಬೀಬಿ (ಮಿಥುನ್) ಮತ್ತು ಶಾಂತನ್ (ರೋಷನ್) ಅವರ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ಈ ಸಿನಿಮಾ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿದ್ದು, ಒಟಿಟಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ.

ಉಂಡೆಖಿ (ಸೀಸನ್ 3) - ಸೋನಿಲೈವ್

ಹರ್ಷ್ ಛಾಯಾ, ಸೂರ್ಯ ಶರ್ಮಾ, ಅಂಚಲ್ ಸಿಂಗ್, ಅಂಕುರ್ ರಾಠಿ, ದಿಬ್ಯೇಂದು ಭಟ್ಟಾಚಾರ್ಯ ಮತ್ತು ಇತರರು ನಟಿಸಿರುವ ಈ ಸರಣಿಯ ಸೀಸನ್ 3 ಅಟ್ವಾಲ್ಸ್ ಕುಟುಂಬದ ಮೇಲೆ ಕೇಂದ್ರೀಕರಿಸಿದೆ. ಕುಟುಂಬ ಕಾರ್ಯಕ್ರಮವೊಂದರಲ್ಲಿ ನರ್ತಕಿಯೊಬ್ಬರ ಆಘಾತಕಾರಿ ಸಾವು ಗೊಂದಲಕ್ಕೆ ಕಾರಣವಾಗುತ್ತದೆ. ಈ ಸರಣಿಯನ್ನೂ ಈ ವೀಕೆಂಡ್‌ನಲ್ಲಿ ನೋಡಬಹುದು.

ಕುಕಿಂಗ್ ಅಪ್ ಮರ್ಡರ್ - ನೆಟ್‌ಫ್ಲಿಕ್ಸ್‌

ಡಾಕ್ಯುಮೆಂಟರಿ ಸೀರಿಸ್‌ ಇಷ್ಟವಾದರೆ ಕುಕಿಂಗ್‌ ಆಫ್‌ ಮರ್ಡರ್‌: ಅನ್‌ಕವರಿಂಗ್‌ ದಿ ಸ್ಟೋರಿ ಆಫ್‌ ಸೀಸರ್‌ ರೋಮನ್‌ ನಿಮಗೆ ಇಷ್ಟವಾಗಬಹುದು. ಇದು ಸ್ಪ್ಯಾನಿಷ್‌ ಬಾಣಸಿಗನ ಕಥೆ. ಅವರ ಯಶಸ್ಸಿನ ಕಥೆ ನಿಮಗೂ ಇಷ್ಟವಾಗಬಹುದು.

ಡಾಕ್ಟರ್ ಹೂ - ಡಿಸ್ನಿ + ಹಾಟ್‌ಸ್ಟಾರ್‌

ಲೈಂಗಿಕ ಶಿಕ್ಷಣ ವಿಷಯದಿಂದ ಖ್ಯಾತಿ ಪಡೆದ ಎನ್ಕುಟಿ ಗತ್ವಾ ಹೊಸ ಡಾಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಈ ಸರಣಿಯ ಹದಿನೈದನೇ ವೈದ್ಯರಾಗಿದ್ದಾರೆ. ರಸೆಲ್ ಟಿ ಡೇವಿಸ್ ನೇತೃತ್ವದ ಈ ಸರಣಿಯನ್ನು ಮುನ್ನಡೆಸುತ್ತಿದ್ದಾರೆ.

ಪ್ರೆಟಿ ಲಿಟಲ್‌ ಲಯರ್ಸ್‌: ಸಮ್ಮರ್‌ ಸ್ಕೂಲ್‌- ಜಿಯೋ ಸಿನೆಮಾ

ಈ ಭಯಾನಕ, ಥ್ರಿಲ್ಲರ್, ನಾಟಕವು ಹದಿಹರೆಯದ ಹುಡುಗಿಯರ ಗುಂಪಿನ ಸುತ್ತ ಕೇಂದ್ರೀಕೃತವಾಗಿದೆ, ನಿಗೂಢ ದಾಳಿಕೋರನೊಬ್ಬ ಇವರನ್ನು ಹಿಂಸಿಸಲು ಆರಂಭಿಸಿದಾಗ ಈ ಹೆಣ್ಮಕ್ಕಳ ಜೀವನ ಹಾಳಾಗುತ್ತದೆ. ಸಾರಾ ಶೆಫರ್ಡ್ ಕಾದಂಬರಿಗಳಿಂದ ಅಳವಡಿಸಿಕೊಂಡ ಕಥೆಯಾಗಿದೆ.

IPL_Entry_Point