ಕನ್ನಡ ಸುದ್ದಿ  /  ಮನರಂಜನೆ  /  Panchayat 3 Ott: ಒಟಿಟಿಗೆ ಬಂತು ಪಂಚಾಯತ್‌ 3 ವೆಬ್‌ ಸರಣಿ; ರಿಲೀಸ್‌ ಆಯ್ತು 8 ಸಂಚಿಕೆಗಳು, ಭರಪೂರ ಕಾಮಿಡಿ ಕಣ್ತುಂಬಿಕೊಳ್ಳಿ

Panchayat 3 OTT: ಒಟಿಟಿಗೆ ಬಂತು ಪಂಚಾಯತ್‌ 3 ವೆಬ್‌ ಸರಣಿ; ರಿಲೀಸ್‌ ಆಯ್ತು 8 ಸಂಚಿಕೆಗಳು, ಭರಪೂರ ಕಾಮಿಡಿ ಕಣ್ತುಂಬಿಕೊಳ್ಳಿ

Panchayat 3 in OTT: ಪಂಚಾಯತ್‌ 3 ವೆಬ್‌ ಸರಣಿಯಲ್ಲಿ ಜಿತೇಂದ್ರ ಕುಮಾರ್ ಜತೆಗೆ ನೀನಾ ಗುಪ್ತಾ, ರಘುಬೀರ್ ಯಾದವ್, ಸಾನ್ವಿಕಾ, ಚಂದನ್ ರಾಯ್, ದುರ್ಗೇಶ್ ಕುಮಾರ್, ಅಶೋಕ್ ಪಾಠಕ್, ಫೈಸಲ್ ಮಲಿಕ್ ಮತ್ತು ಸುನೀತಾ ರಾಜ್ವರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Panchayat 3 OTT: ಒಟಿಟಿಗೆ ಬಂತು ಪಂಚಾಯತ್‌ 3 ವೆಬ್‌ ಸರಣಿ; ರಿಲೀಸ್‌ ಆಯ್ತು 8 ಸಂಚಿಕೆ
Panchayat 3 OTT: ಒಟಿಟಿಗೆ ಬಂತು ಪಂಚಾಯತ್‌ 3 ವೆಬ್‌ ಸರಣಿ; ರಿಲೀಸ್‌ ಆಯ್ತು 8 ಸಂಚಿಕೆ

ಬೆಂಗಳೂರು: ಒಟಿಟಿಯಲ್ಲಿ ಪಂಚಾಯತ್‌ ಅತ್ಯಂತ ಜನಪ್ರಿಯ ಹಾಸ್ಯ ವೆಬ್‌ ಸರಣಿಯಾಗಿದೆ. ಆಧುನಿಕ ಭಾರತದ ಗ್ರಾಮೀಣ ಜೀವನದ ಕಥಹಾಂದ ಹೊಂದಿರುವ ಪಂಚಾಯತ್‌ ವೆಬ್‌ ಸರಣಿಯ ಮೂರನೇ ಸರಣಿ ಇದೀಗ ಬಿಡುಗಡೆಯಾಗಿದೆ. ಇದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಅಭಿಷೇಕ್‌ ತ್ರಿಪಾಠಿ ಎಂಬ ಎಂಜಿನಿಯರಿಂಗ್‌ ಪದವೀಧರರನ ಸುತ್ತ ಪಂಚಾಯತ್‌ 3 ವೆಬ್‌ ಸರಣಿಯ ಕಥೆ ಇರಲಿದೆ. ಈತ ಫುಲೇರಾದಲ್ಲಿ ಪಂಚಾಯತ್‌ ಕಾರ್ಯದರ್ಶಿಯಾಗುತ್ತಾನೆ. ಮೂರನೇ ಸರಣಿಯಲ್ಲಿ ಹಳ್ಳಿಯ ರಾಜಕೀಯದ ಸುತ್ತ ಹಲವು ಘಟನೆಗಳನ್ನು ತೋರಿಸಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಪಂಚಾಯತ್‌ 3

ಪಂಚಾಯತ್‌ 3 ವೆಬ್‌ ಸರಣಿಯನ್ನು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ವೀಕ್ಷಿಸಬಹುದು. ಒಂದೇ ದಿನ ಎಲ್ಲಾ ಎಪಿಸೋಡ್‌ಗಳು ರಿಲೀಸ್‌ ಆಗಿವೆ. ಈ ಸರಣಿ ಪ್ರಿಯರು ಒಂದೇ ಗುಕ್ಕಿನಲ್ಲಿ ಕುಳಿತು ನೋಡಬಹುದು.

ಪಂಚಾಯತ್‌ 3 ಕಥೆ

ಪಂಚಾಯತ್‌ ವೆಬ್‌ ಸರಣಿಯ ಹಿಂದಿನ ಸರಣಿಯಲ್ಲಿ ಅಭಿಷೇಕ್‌ ತ್ರಿಪಾಠಿ ರಾಜಕೀಯದಲ್ಲಿ ತೊಡಗಿಸಿಕೊಂಡ ಕಾರಣ ಹೊಸ ಹಳ್ಳಿಗೆ ವರ್ಗಾವಣೆಯಾಗುತ್ತಾರೆ. ಮೂರನೇ ಸೀಸನ್‌ನಲ್ಲಿ ಅಭಿಷೇಕ್‌ "ಸಚಿವ್‌" ಆಗಿ ಆಗಮಿಸಿದ್ದಾರೆ. ಮಂಜು ದೇವಿ ಮತ್ತು ಬ್ರಿಜ್ ಭೂಷಣ್ ಭೂಷಣ್ ಮತ್ತು ಅವರ ಪತ್ನಿ ಕ್ರಾಂತಿ ದೇವಿಯೂ ಇದ್ದಾರೆ. ಇದೇ ಸಮಯದಲ್ಲಿ ಅಭಿಷೇಕ್ ಮತ್ತು ರಿಂಕಿ ನಡುವಿನ ಪ್ರಣಯವನ್ನು ಪಂಚಾಯತ್‌ 3ಯಲ್ಲಿ ವೀಕ್ಷಿಸಬಹುದು.

ಪಂಚಾಯತ್‌ ಸೀಸನ್‌ 3 ಪ್ರಚಾರದ ಸಂದರ್ಭದಲ್ಲಿ ನಿರ್ದೇಶಕ ದೀಪಕ್‌ ಕುಮಾರ್‌ ಮಿಶ್ರಾ ಅವರು ಇನ್ನೂ ಎರಡು ಸೀಸನ್‌ ಬಿಡುಗಡೆ ಮಾಡುವ ಸೂಚನೆ ನೀಡಿದ್ದಾರೆ. "ನಾವು ನಾಲ್ಕನೇ ಸೀಸನ್‌ ಕಥೆ ಬರೆಯಲು ಆರಂಭಿಸಿದ್ದೇವೆ. ನಮಗೆ ಎರಡು ಸೀಸನ್‌ಗಳ ನಡುವೆ ಯಾವುದೇ ವಿರಾಮವಿಲ್ಲ. ಮೂರನೇ ಸೀಸನ್‌ ಮುಗಿದಿದೆ. ನಾವು ನಾಲ್ಕು ಮತ್ತು ಐದನೇ ಸೀಸನ್‌ ಮಾಡುವ ಕುರಿತು ಯೋಚಿಸಿದ್ದೇವೆ. ಸೀಸನ್‌ ನಾಲ್ಕರ ಕಥೆಯ ಕುರಿತು ನಮಗೆ ಸ್ಪಷ್ಟ ಕಲ್ಪನೆ ಇದೆ. ಐದನೇ ಸೀಸನ್‌ ಕುರಿತು ಕೊಂಚ ಅಂದಾಜಿದೆ" ಎಂದು ಅವರು ಹೇಳಿದ್ದಾರೆ.

ಪಂಚಾಯತ್‌ 3ಯಲ್ಲಿ ಯಾರೆಲ್ಲ ನಟಿಸಿದ್ದಾರೆ?

ಜಿತೇಂದ್ರ ಕುಮಾರ್ ಅವರು ಪಂಚಾಯತ್ ಕಾರ್ಯದರ್ಶಿ ಅಭಿಷೇಕ್ ತ್ರಿಪಾಠಿ ಪಾತ್ರವನ್ನು ನಿರ್ವಹಿಸುತ್ತಾರೆ . ಫುಲೇರಾದಲ್ಲಿ ತಮ್ಮ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ. ನೀನಾ ಗುಪ್ತಾ ಅವರು ಮಂಜು ದೇವಿಯಾಗಿ ಕಾಣಿಸಿಕೊಂಡಿದ್ದಾರೆ, ಅವರು ಪ್ರಧಾನ್ ಆಗಿದ್ದಾರೆ. ರಘುಬೀರ್ ಯಾದವ್ ಮಂಜು ದೇವಿಯ ಪತಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಕೆಲಸಗಳನ್ನು ಇವರೇ ಮಾಡುತ್ತಾರೆ. ಈ ಸರಣಿಯಲ್ಲಿ ಸಾನ್ವಿಕಾ, ಚಂದನ್ ರಾಯ್, ದುರ್ಗೇಶ್ ಕುಮಾರ್, ಅಶೋಕ್ ಪಾಠಕ್, ಫೈಸಲ್ ಮಲಿಕ್ ಮತ್ತು ಸುನೀತಾ ರಾಜ್ವರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024