ಶೀಘ್ರದಲ್ಲೇ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಆಗಸ್ಟ್‌ 23 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾದ ಪೌಡರ್‌ ಕನ್ನಡ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ಶೀಘ್ರದಲ್ಲೇ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಆಗಸ್ಟ್‌ 23 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾದ ಪೌಡರ್‌ ಕನ್ನಡ ಸಿನಿಮಾ

ಶೀಘ್ರದಲ್ಲೇ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಆಗಸ್ಟ್‌ 23 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾದ ಪೌಡರ್‌ ಕನ್ನಡ ಸಿನಿಮಾ

ಆಗಸ್ಟ್‌ 23 ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆದ ಪೌಡರ್‌ ಕನ್ನಡ ಸಿನಿಮಾ ಅಕ್ಟೋಬರ್‌ 4 ರಿಂದ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ. ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಈ ಚಿತ್ರದಲ್ಲಿ ದಿಗಂತ್, ಧನ್ಯಾ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ ಹಾಗೂ ಇನ್ನಿತರರು ನಟಿಸಿದ್ದಾರೆ.

ಶೀಘ್ರದಲ್ಲೇ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಆಗಸ್ಟ್‌ 23 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾದ ಪೌಡರ್‌ ಕನ್ನಡ ಸಿನಿಮಾ
ಶೀಘ್ರದಲ್ಲೇ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಆಗಸ್ಟ್‌ 23 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾದ ಪೌಡರ್‌ ಕನ್ನಡ ಸಿನಿಮಾ

ಆಗಸ್ಟ್‌ 23 ರಂದು ಚಿತ್ರಮಂದಿರದಲ್ಲಿ ತೆರೆ ಕಂಡ ಡಾರ್ಕ್‌ ಕಾಮಿಡಿ ಪೌಡರ್‌ ಸಿನಿಮಾ ಇದೀಗ ಒಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಅಕ್ಟೋಬರ್‌ 4 ರಿಂದ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ. ಸಿನಿಮಾ ರಿಲೀಸ್‌ ಆಗಿ ಒಂದೂವರೆ ತಿಂಗಳ ನಂತರ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.

ಮಾದಕ ದ್ರವ್ಯ ಸಾಗಾಟದ ಕಥೆ ಇರುವ ಸಿನಿಮಾ

 ಮಾದಕ ದ್ರವ್ಯ ರವಾನೆಯಲ್ಲಿ ಸಮಸ್ಯೆಯಾಗಿ ತಪ್ಪಿಹೋದ ವಸ್ತುಗಳನ್ನು ಮರುಪಡೆಯುವ ಪ್ರಕ್ರಿಯೆಯಲ್ಲಿ ವಿಲನ್‌ ಹಾಗೂ ಆತನ ಗ್ಯಾಂಗ್‌ ಏನೆಲ್ಲಾ ಪ್ರಯತ್ನ ಮಾಡುತ್ತದೆ. ಅದರಿಂದ ಏನು ಸಮಸ್ಯೆ ಅನುಭವಿಸುತ್ತಾರೆ ಅನ್ನೋದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರವನ್ನು ಜನಾರ್ಧನ್ ಚಿಕ್ಕಣ್ಣ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ದಿಗಂತ್, ಧನ್ಯಾ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ರವಿಶಂಕರ್ ಗೌಡ, ಗೋಪಾಲ್ ಕೃಷ್ಣ ದೇಶಪಾಂಡೆ ಹಾಗೂ ಇನ್ನಿತರರು ನಟಿಸಿದ್ದಾರೆ. ಜುಲೈ 12 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವು ಆಗಸ್ಟ್ 23 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಆಯ್ತು. ಸುಮಾರು 50 ದಿನಗಳ ನಂತರ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ಅಮೆಜಾನ್‌ ಪ್ರೈಂ ವಿಡಿಯೋ ಈ ಚಿತ್ರದ ಡಿಜಿಟಲ್‌ ಹಕ್ಕುಗಳನ್ನು ಖರೀದಿಸಿದೆ. ಈ ಸಿನಿಮಾ ನಿಜಕ್ಕೂ ಒಂದೊಳ್ಳೆ ಎಂಟರ್‌ಟೈನರ್‌, ಒಳ್ಳೆ ಕಾಮಿಡಿ ದೃಶ್ಯಗಳಿವೆ ಎಂದು ನೋಡಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡವರು ಚಿತ್ರವನ್ನು ಈಗ ಮನೆಯಲ್ಲೇ ಕುಳಿತು ನೋಡಬಹುದು.

ಕೆಆರ್‌ಜಿ ಸ್ಟುಡಿಯೋಸ್‌ ನಿರ್ಮಾಣದ ಪೌಡರ್‌ ಚಿತ್ರ

ಪೌಡರ್‌ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್‌, ದಿ ವೈರಲ್‌ ಫೀವರ್‌ ಬ್ಯಾನರ್‌ ಅಡಿ ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್‌, ವಿಜಯ್‌ ಸುಬ್ರಮನಿಯನ್‌, ಅರುಣ್‌ ಕುಮಾರ್ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದಾರೆ.

ಇತ್ತೀಚೆಗೆ ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿರುವ ಕನ್ನಡ ಸಿನಿಮಾಗಳಿಗೆ ತೆಲುಗು ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದಕ್ಕಾಗಿಯೇ ಬಹುತೇಕ ಚಲನಚಿತ್ರಗಳು ತೆಲುಗು ಡಬ್ಬಿಂಗ್ ಅಥವಾ ಉಪಶೀರ್ಷಿಕೆಗಳೊಂದಿಗೆ ಸ್ಟ್ರೀಮ್ ಆಗುತ್ತಿವೆ. ಇತ್ತೀಚಿನ ದಿನಗಳಲ್ಲಿ, ಕೆಲವು ಇಂಟ್ರಸ್ಟಿಂಗ್‌ ಕನ್ನಡ ಸಿನಿಮಾಗಳು OTTಯನ್ನು ಪ್ರವೇಶಿಸಿವೆ. ಇತ್ತೀಚೆಗೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಫ್ಯಾಮಿಲಿ ಡ್ರಾಮಾ ಎಂಬ ಕನ್ನಡ ಸಿನಿಮಾ ಎಂಟ್ರಿ ಕೊಟ್ಟಿದೆ. ಇದಲ್ಲದೇ ಕನ್ನಡದ ಬ್ಲಿಂಕ್, ಭೀಮ, ಚಿಲ್ಲಿ ಚಿಕನ್ ಸಿನಿಮಾಗಳೂ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಮತ್ತು ಅನಾವರಣ ಎಂಬ ಇನ್ನೊಂದು ಕನ್ನಡ ಸಿನಿಮಾ ಕಳೆದ ತಿಂಗಳು ನಮ್ಮ ಫ್ಲಿಕ್ಸ್ OTT ನಲ್ಲಿ ಬಿಡುಗಡೆಯಾಗಿದೆ. ಕ್ರಶ್, ಒಂದು ಗಂಟೆಯ ಕಥೆ, ಆನ್‌ಲೈನ್ ಮದುವೆ ಆಫ್‌ಲೈನ್ ಶೋಭನ ಮುಂತಾದ ಕನ್ನಡ ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್‌ ಆಗಿವೆ.