ಕಲ್ಕಿ 2898 ಎಡಿ ಸಿನಿಮಾ ಈ ತಿಂಗಳೇ ಒಟಿಟಿಯಲ್ಲಿ ಬಿಡುಗಡೆ; ಪ್ರಭಾಸ್ ಸಿನಿಮಾವನ್ನು ಯಾವಾಗ, ಎಲ್ಲಿ ನೋಡಬಹುದು? ಇಲ್ಲಿದೆ ವಿವರ
Kalki 2898 ad OTT Release Date: ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾ ಕಲ್ಕಿ 2898 ಎಡಿ ಇದೇ ಆಗಸ್ಟ್ 23ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಬೆಂಗಳೂರು: ಒಟಿಟಿ ಸಿನಿಮಾ ಪ್ರಿಯರು ಕಾತರದಿಂದ ಕಾಯುತ್ತಿರುವ ಈ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾ ಕಲ್ಕಿ 2898 ಎಡಿ ಒಟಿಟಿಯತ್ತ ಮುಖ ಮಾಡಿದೆ. ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾ ಕಲ್ಕಿ 2898 ಎಡಿ ಇದೇ ಆಗಸ್ಟ್ 23ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ವರದಿಗಳು ತಿಳಿಸಿವೆ. ಕಲ್ಕಿ 2898 ಎಡಿ ಸಿನಿಮಾವು ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ. ನಾನಾ ಕಾರಣಗಳಿಂದ ಚಿತ್ರಮಂದಿರಗಳಲ್ಲಿ ಈ ಸೈನ್ಸ್ ಫಿಕ್ಷನ್ ಸಿನಿಮಾ ನೋಡಲಾಗದವರು ಇದೀಗ ಮನೆಯಲ್ಲಿಯೇ ಕುಳಿತು ಕಲ್ಕಿ ಲೋಕವನ್ನು ಕಣ್ತುಂಬಿಕೊಳ್ಳಲು ಸಿದ್ಧರಾಗಬಹುದು.
ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾವು ಡೈಸ್ಟೊಪಿಯನ್ ಫ್ಯೂಚರ್ ಕಥೆ ಹೊಂದಿದೆ. ಅಂದರೆ, ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ಸಂಭವಿಸಿದ 6 ಸಾವಿರ ವರ್ಷಗಳ ಬಳಿಕ ಏನಾಗಲಿದೆ ಎಂಬ ಭವಿಷ್ಯದ ದೃಷ್ಟಿಕೋನವನ್ನು ಈ ಸಿನಿಮಾ ಹೊಂದಿದೆ. ಕ್ರಿಸ್ತ ಶಕ 2898ರಲ್ಲಿ ಕಾಶಿ ಮಾತ್ರ ಉಳಿಯಲಿದ್ದು, ಅಲ್ಲಿನ ಜನರು ಅಲ್ಲಿ ಬದುಕಲಾಗದೆ ಪರಿತಪಿಸುವಂತಹ ಮತ್ತು ಕಾಂಪ್ಲೆಕ್ಸ್ ಎಂಬ ಕೃತಕ ಜಗತ್ತಿನಲ್ಲಿ ವಾಸಿಸಲು ಬಯಸುವಂತಹ ಚಿತ್ರಣ ಈ ಸಿನಿಮಾದಲ್ಲಿದೆ. ಇಷ್ಟು ಮಾತ್ರವಲ್ಲದೆ ಪುರಾಣದ ಪ್ರಮುಖ ಪಾತ್ರಗಳು ಈ ಸಿನಿಮಾದಲ್ಲಿ ವಾಪಸ್ ಬಂದಿವೆ. ಅಶ್ವತ್ಥಾಮ, ಕೃಷ್ಣ, ಅರ್ಜುನ, ಕರ್ಣರು ಈ ಚಿತ್ರದಲ್ಲಿ ಕಲ್ಕಿ ಸಿನಿಮಾದಲ್ಲಿದ್ದಾರೆ.
ಒಟಿಟಿಯಲ್ಲಿ ನೋಡಿ ಕಲ್ಕಿ ಸಿನಿಮಾ
ಆಗಸ್ಟ್ 23ರಂದು ಕಲ್ಕಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡುವ ಕುರಿತು ಅಮೆಜಾನ್ ಪ್ರೈಮ್ ವಿಡಿಯೋ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಬಹುತಾರಾಗಣದ ಕಲ್ಕಿ 2898 ಎಡಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಾಡಿದೆ. 3ಡಿಯಲ್ಲೂ ನೋಡುವ ಅವಕಾಶವಿರುವುದರಿಂದ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರೇಕ್ಷಕರಿಗೆ ಒಳ್ಳೆಯ ಅನುಭವ ನೀಡಿದೆ.
ಕಲ್ಕಿ 2898 ಎಡಿ ಸಿನಿಮಾ ಜೂನ್ 27ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಕಮಲ್ ಹಾಸನ್ ನಟಿಸಿರುವ ಯಾಸ್ಕಿನ್ ಇರುವ ಕಾಂಪ್ಲೆಕ್ಸ್‌ನಲ್ಲಿ ವಾಸಿಸಲು ಬಯಸುವ ಭೈರವ ಎಂಬ ವ್ಯಕ್ತಿಯ ಕಥೆಯ ಸುತ್ ಈ ಸಿನಿಮಾದ ಕಥೆಯಿದೆ. ಭೈರವ ಬುಜ್ಜಿ ಎಂಬ ಕಾರಿನಲ್ಲಿ ಸುತ್ತಾಡುತ್ತಾನೆ. ಈ ಕಾರಿನ ಎಐ ಡ್ರಾಯ್ಡ್‌ಗೆ ಕೀರ್ತಿ ಸುರೇಶ್ ಧ್ವನಿ ನೀಡಿದ್ದಾರೆ. ಈತನಿಗೆ ಅಶ್ವತ್ಥಾಮ ಎದುರಾಗುತ್ತಾನೆ. ಅಂತಿಮವಾಗಿ ಭೈರವನ ಗುರಿ ಬದಲಾಗುತ್ತದೆಯೇ? ಯಾಸ್ಕಿನ್ ಜತೆಗಿನ ಯುದ್ಧದಲ್ಲಿ ಗೆಲುವು ಯಾರಿಗೆ? ಭೈರವನಿಗೆ ಸಾವಾಗಲಿದೆಯೇ? ಅಶ್ವತ್ಥಾಮನ ಕೆಲಸ ಪೂರ್ಣಗೊಳ್ಳುವುದೇ? ಇತ್ಯಾದಿ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಉಳಿದಿವೆ.
ಆದರೆ, ಯಾಸ್ಕಿನ್ ಎನ್ನುವ ಪಾತ್ರ ಅರ್ಜುನ, ಭೈರವ ಕರ್ಣನಾಗಿರಲಿದ್ದು, ಇವರಿಬ್ಬರ ಮುಖಾಮುಖಿ, ಯುದ್ಧಕ್ಕೆ ಕಲ್ಕಿ ಸಿನಿಮಾದ ಮುಂದಿನ ಭಾಗ ಸಾಕ್ಷಿಯಾಗಲಿದೆ. ಒಟ್ಟಾರೆ, ಕಲ್ಕಿ 2898 ಎಡಿ ಸಿನಿಮಾವನ್ನು ಥಿಯೇಟರ್‌ಗಳಲ್ಲಿ ನೋಡದೆ ಇರುವವರು ಅಥವಾ ಥಿಯೇಟರ್‌ನಲ್ಲಿ ನೀಡಿದ್ದು, ಮತ್ತೊಮ್ಮೆ ಮನೆಯಲ್ಲೇ ನೋಡೋಣ ಎಂದುಕೊಳ್ಳುವವರು ಈ ಆಗಸ್ಟ್ 23ರಂದು ಒಟಿಟಿಯಲ್ಲಿ ಕಲ್ಕಿಯನ್ನು ಕಣ್ತುಂಬಿಕೊಳ್ಳಬಹುದು. ಕಲ್ಕಿ ಸಿನಿಮಾ ಒಟಿಟಿ ಬಿಡುಗಡೆ ಕುರಿತು ಅಮೆಜಾನ್ ಪ್ರೈಮ್ ವಿಡಿಯೋ ಈ ಸ್ವಾತಂತ್ರ್ಯ ದಿನದ ಸಮಯದಲ್ಲಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.