Prasanna Vadanam OTT: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ ಪ್ರಸನ್ನ ವದನಂ ಸಿನಿಮಾ; ಸುಹಾಸ್ ನಟನೆಯ ಈ ಸಿನಿಮಾವನ್ನು ಮನೆಯಲ್ಲೇ ನೋಡಿ
Prasanna Vadanam OTT: ಒಟಿಟಿಯಲ್ಲಿ ಪ್ರಸನ್ನ ವದನಂ ಎಂಬ ತೆಲುಗು ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಮನೆಯಲ್ಲಿ ಕುಳಿತು ಒಟಿಟಿಯಲ್ಲಿ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾ ನೋಡಲು ಬಯಸುವವರಿಗೆ ಪ್ರಸನ್ನ ವದನಂ ಸಿನಿಮಾದ ಕುರಿತು ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು: ಒಟಿಟಿಯಲ್ಲಿ ಭಾರತೀಯ ವಿವಿಧ ಭಾಷೆಯ ಸಿನಿಮಾಗಳು ಆಗಾಗ ಟ್ರೆಂಡಿಂಗ್‌ನಲ್ಲಿ ಇರುತ್ತವೆ. ಇತ್ತೀಚೆಗೆ ಕನ್ನಡದ ಬ್ಲಿಂಕ್ ಸಿನಿಮಾವನ್ನು ಕನ್ನಡಿಗರು ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಪ್ರೇಕ್ಷಕರು ಒಟಿಟಿಯಲ್ಲಿ ನೋಡಿ ಇಷ್ಟಪಟ್ಟಿದ್ದರು. ಇದೇ ರೀತಿ ಇದೀಗ ಪ್ರಸನ್ನ ವದನಂ ಎಂಬ ತೆಲುಗು ಸಿನಿಮಾ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈಗಾಗಲೇ ಈ ಸಿನಿಮಾ ಒಟಿಟಿಯಲ್ಲಿ ಸುಮಾರು 50 ದಶಲಕ್ಷ ಸ್ಟ್ರೀಮಿಂಗ್ ನಿಮಿಷಗಳಷ್ಟು ವೀಕ್ಷಣೆ ಪಡೆದಿದೆ.
ಹಾಸ್ಯನಟ-ನಾಯಕ-ಪ್ರತಿಭಾವಂತ ನಟ ಸುಹಾಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷ ರೈಟರ್ ಪದ್ಮಭೂಷಣ್ ಸಿನಿಮಾದ ಮೂಲಕ ಭರ್ಜರಿ ಹಿಟ್ ತನ್ನದಾಗಿಸಿಕೊಂಡರು. ಶ್ರೀರಂಗನೀತುಲು ಸಿನಿಮಾ ಹಿನ್ನೆಡೆ ಅನುಭವಿಸಿತು. ಈ ವರ್ಷ ಇವರ ನಟನೆಯ ಅಂಬಾಜಿಪೇಟ್ ಮ್ಯಾರೇಜ್ ಬ್ಯಾಂಡ್ ಸಿನಿಮಾ ಕೂಡ ಚಿತ್ರಮಂದಿರಗಳಲ್ಲಿ ಯಶಶಸ್ಸು ಪಡೆದಿತ್ತು. ಇತ್ತೀಚೆಗೆ ಒಟಿಟಿಯಲ್ಲಿ ಸುಹಾಸ್ ಸಿನಿಮಾಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಇದೀಗ ಪ್ರಸನ್ನ ವದನಂ ಸಿನಿಮಾವೂ ಟ್ರೆಂಡಿಂಗ್‌ನಲ್ಲಿದೆ. ಒಟಿಟಿಯಲ್ಲಿ ರಿಲೀಸ್ ಆದ ಎರಡೇ ದಿನದಲ್ಲಿ ಇದು ಟಾಪ್ ಟ್ರೆಂಡಿಂಗ್‌ಗೆ ಬಂದಿದೆ.
ಆಹಾ ಒಟಿಟಿಯಲ್ಲಿ ಪ್ರಸನ್ನ ವದನಂ
ಅಂದಹಾಗೆ ಪ್ರಸನ್ನ ವದನಂ ಸಿನಿಮಾ ಯಾವ ಒಟಿಟಿಯಲ್ಲಿದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಝೀ5 ಮುಂತಾದ ಒಟಿಟಿಗಳಲ್ಲಿ ಈ ಸಿನಿಮಾವಿಲ್ಲ. ಆಹಾ ಎಂಬ ಓಟಿಟಿಯಲ್ಲಿ ಪ್ರಸನ್ನ ವದನಂ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಒಟಿಟಿ ಪ್ಲೇಯಂತಹ ಸೇವೆಗಳಿಗೆ ಚಂದಾದಾರರಾಗಿರುವವರಿಗೆ ಆಹಾ ಸೇರಿದಂತೆ ಹಲವು ಒಟಿಟಿಗಳು ದೊರಕುತ್ತವೆ.
ಆಹಾ ಒಟಿಟಿಯಲ್ಲಿ ಪ್ರಸನ್ನ ವದನಂ ಕೇವಲ ಎರಡು ದಿನಗಳಲ್ಲಿ 50 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳ ಗಡಿಯನ್ನು ದಾಟಿದೆ ಎಂದು ಹೇಳಲಾಗಿದೆ. ಇನ್ನೊಂದು ದಿನದಲ್ಲಿ ಚಿತ್ರ ಆ ಹೊಸ ಮೈಲಿಗಲ್ಲು ತಲುಪುವ ನಿರೀಕ್ಷೆಯಿದೆ.
ಪ್ರಸನ್ನ ವದನಂ ಚಿತ್ರವನ್ನು ಅರ್ಜುನ್ ವೈಕೆ ನಿರ್ದೇಶಿಸಿದ್ದಾರೆ. ವಿಭಿನ್ನ ಪರಿಕಲ್ಪನೆಯೊಂದಿಗೆ ಚಿತ್ರ ನಿರ್ಮಿಸಲಾಗಿದೆ. ಫೇಸ್ ಬ್ಲೈಂಡ್ ಎಂಬ ಅಸ್ವಸ್ಥತೆ ಇರುವ ನಾಯಕ ಸುಹಾಸ್‌ಗೆ ಈ ಚಿತ್ರದಲ್ಲಿ ಜನರ ಮುಖವನ್ನು ಗುರುತಿಸಲಾಗದ ಸಮಸ್ಯೆ ಇದೆ. ಈ ಥ್ರಿಲ್ಲರ್ ಸಿನಿಮಾದಲ್ಲಿ ಸುಹಾಸ್ ಫೇಸ್ ಬ್ಳೈಂಡ್ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ.
ಪ್ರಸನ್ನ ವಾದನಂ ಚಿತ್ರದಲ್ಲಿ ಸುಹಾಸ್‌ಗೆ ಪಾಯಲ್ ರಾಧಾಕೃಷ್ಣ ನಟಿಸಿದ್ದಾರೆ. ವಿವಾ ಹರ್ಷ, ರಾಶಿ ಸಿಂಗ್, ನಿತಿನ್ ಪ್ರಸನ್ನ, ಸಾಯಿ ಶ್ವೇತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ಬುಲ್ಗಾನಿನ್ ಸಂಗೀತ ಸಂಯೋಜಿಸಿದ್ದು, ಎಸ್.ಚಂದ್ರಶೇಖರನ್ ಛಾಯಾಗ್ರಹಣ ಮಾಡಿದ್ದಾರೆ. ಲಿಟಲ್ ಥಾಟ್ಸ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮಣಿಕಂಠ ಮತ್ತು ಪ್ರಸಾದ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಆಹಾ ಒಟಿಟಿಯಲ್ಲಿ ಪ್ರಸನ್ನ ವದನಂ ಬಳಿಕದ ಸ್ಥಾನಗಳನ್ನು ಸರ್ಕಾರ್ ಸೀಸನ್ 4 ಗೇಮ್ ಶೋ, ವಿದ್ಯಾವಸುಲ, ಗೀತಾಂಜಲಿ ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಬೇಬಿ ಸಿನಿಮಾ ಕೂಡ ಟಾಪ್-5ರಲ್ಲಿ ಟ್ರೆಂಡಿಂಗ್‌ನಲ್ಲಿದೆ. ಪ್ರೇಮಲು ಮತ್ತು ಮೈ ಡಿಯರ್ ಡೊಂಗ ಚಿತ್ರಗಳು ಅಗ್ರ ಹತ್ತರಲ್ಲಿವೆ.