Aadujeevitham OTT: ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ ಸಿನಿಮಾವನ್ನು ಮನೆಯಲ್ಲೇ ನೋಡಿ, ಇಲ್ಲಿದೆ ಒಟಿಟಿ ಬಿಡುಗಡೆ ವಿವರ
Aadujeevitham OTT Release: ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ ಸಿನಿಮಾವನ್ನು ಇದೇ ಮೇ 26 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಆಡು ಜೀವಿತಂ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ.
ಬೆಂಗಳೂರು: ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಸಾಕಷ್ಟು ಜನರು ಕಾಯುತ್ತಿರಬಹುದು. ಈ ಮಲಯಾಳಂ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದೆ ಇರುವವರು ಸದ್ಯದಲ್ಲಿಯೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಬೆನ್ಯಮಿನ್ ಬರೆದ 2008ರ ಮಲಯಾಳಂ ಕಾದಂಬರಿ ಆಡುಜೀವಿತಂ ಆಧರಿತ "ಆಡುಜೀವಿತಂ ದಿ ಗಾಟ್ ಲೈಫ್ ಸಿನಿಮಾ"ದ ಕುರಿತು ಸಿನಿಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಭಾರತ ಮತ್ತು ಅಮೆರಿಕದ ಸಹ ನಿರ್ಮಾಣದಲ್ಲಿ ನಿರ್ಮಾಣಗೊಂಡ ಈ ಸಿನಿಮಾವು ಚಿತ್ರಮಂದಿರಗಳಲ್ಲಿ ಮಾರ್ಚ್ 28ರಂದು ರಿಲೀಸ್ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಎಂಟ್ರಿ ನೀಡುವ ಕುರಿತು ಸೂಚನೆ ದೊರಕಿದೆ.
ಆಡುಜೀವಿತಂ ಒಟಿಟಿ ಬಿಡುಗಡೆ ವಿವರ
ವರದಿಗಳ ಪ್ರಕಾರ ಆಡುಜೀವಿತಂ ಸಿನಿಮಾವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಇದೇ ಮೇ 26ರಂದು ಬಿಡುಗಡೆಯಾಗಲಿದೆ. ಈಗಾಗಲೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಆಡಿ ಜೀವಿತಂ ಸಿನಿಮಾದ ಒಟಿಟಿ ಹಕ್ಕುಗಳನ್ನು ಖರೀದಿಸಿದೆ. ಬಿಡುಗಡೆ ದಿನಾಂಕದ ಕುರಿತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ವರದಿಗಳ ಪ್ರಕಾರ ಮೇ 26ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಹೀಗಾಗಿ, ಸದ್ಯದಲ್ಲಿಯೇ ಈ ಕುರಿತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ನಜೀಬ್ ಕುರಿತು ಹೇಳಿದ್ದರು. "2008ರಲ್ಲಿ ಬ್ಲಾಸ್ಸಿ ಅವರು ಈ ಸಿನಿಮಾದ ಕುರಿತು ನನ್ನಲ್ಲಿ ಮೊದಲು ತಿಳಿಸಿದರು. ಆರಂಭದಲ್ಲಿ ಈ ಕ್ಯಾರೆಕ್ಟರ್ ಹೇಗೆ ಮಾಡಲಿ ಎಂದು ಯೋಚಿಸಿದೆ. ನಿಜವಾಗಿ ಇರುವ ನಜೀಬ್ ಅವರನ್ನು ನೋಡಿ ಬಳಿಕ ಆ ಕ್ಯಾರೆಕ್ಟರ್ ಮಾಡ್ಲ? ಕಾದಂಬರಿ ಓದಿ ನನ್ನ ಮನದಲ್ಲಿ ಮೂಡಿರುವ ನಜೀಬ್ ಪಾತ್ರ ಮಾಡ್ಲ? ಎಂದು ಯೋಚಿಸಿದೆ. ಕೊನೆಗೆ ರಿಯಲ್ ನಜೀಬ್ ಅವರನ್ನು ನೋಡದೆ ಆ ಪಾತ್ರವನ್ನು ಮಾಡಲು ಬಯಸಿದೆ. ಇದೇ ನಜೀಬ್‌ನನ್ನು ನೀವು ಸಿನಿಮಾದಲ್ಲಿ ನೋಡಿದ್ದೀರಿ" ಎಂದು ಪೃಥ್ವಿರಾಜ್ ಸುಕುಮಾರನ್ ಹೇಳಿದ್ದರು.
ಬ್ಲಾಸ್ಲಿ ನಿರ್ದೇಶನದಲ್ಲಿ ಆಡುಜೀವಿತಂ ಸಿನಿಮಾ ತೆರೆಕಂಡಿತ್ತು. ಕೇರಳದ ವ್ಯಕ್ತಿಯೊಬ್ಬರು ಸೌದಿಯಲ್ಲಿ ಕಷ್ಟದ ಜೀವನ ನಡೆಸಿದ ಕಥೆಯನ್ನು ಇದು ಹೊಂದಿತ್ತು. ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ಒಟಿಟಿಯಲ್ಲಿ ಲಭ್ಯವಿರಲಿದೆ. ಕನ್ನಡದಲ್ಲಿ ಹೊಂಬಾಳೆ ಫಿಲಂಸ್ ಈ ಸಿನಿಮಾ ವಿತರಣೆ ಹಕ್ಕನ್ನು ಪಡೆದುಕೊಂಡಿತ್ತು. ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್ ವತಿಯಿಂದ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಮೇ 26ರಂದು ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದಾಗಿದೆ.
ಬಾಕ್ಸ್ ಆಫೀಸ್ ಗಳಿಕೆಯಲ್ಲೂ ದಾಖಲೆ
ಆಡು ಜೀವಿತಂ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. 2008ರ ಬೆಸ್ಟ್ ಸೆಲ್ಲಿಂಗ್ ಕಾದಂಬರಿ ಆಡುಜೀವಿತಂ ಆಧರಿತ ಸಿನಿಮಾ ಇದಾಗಿದೆ. ಇದು ಬೆನ್ನಿಮಿನ್ ಬರೆದ ಕಾದಂಬರಿ. ನಜೀಬ್ ಎಂಬ ಮಲಯಾಳಿ ವಲಸಿಗ ಗಲ್ಪ್ ದೇಶದಲ್ಲಿ ಅನುಭವಿಸಿದ ಕಷ್ಟದ ಕುರಿತ ಕಥೆಯನ್ನು ಈ ಸಿನಿಮಾ ಹೊಂದಿದೆ. ಸೌದಿ ಅರೇಬಿಯಾದಲ್ಲಿ ಈ ವಲಸಿಗ ಜೀತದಾಳುವಿನಂತೆ ಮರುಭೂಮಿಯಲ್ಲಿ ಬದುಕಿರುತ್ತಾನೆ. ಆತ ಅಲ್ಲಿಂದ ಭಾರತಕ್ಕೆ ವಾಪಸ್ ಬರಲು ಮಾಡುವ ಪ್ರಯತ್ನವನ್ನು ಆಡುಜೀವಿತಂ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)