Raayan OTT Release Official: ಅಧಿಕೃತವಾಗಿ ರಾಯನ್ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ; ಯಾವಾಗ, ಎಲ್ಲಿ ವೀಕ್ಷಣೆ?
ಭಾರೀ ನಿರೀಕ್ಷೆಗಳ ನಡುವೆ ಜುಲೈ 26 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ರಾಯನ್ ಚಿತ್ರಕ್ಕೆ ದೊಡ್ಡ ಮಟ್ಟದ ಮೆಚ್ಚುಗೆ ಸಿಕ್ಕಿತ್ತು. ಸಂಪೂರ್ಣ ಆಕ್ಷನ್ ಎಂಟರ್‌ಟೈನರ್ ಆಗಿ ಧನುಷ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಇದೇ ಸಿನಿಮಾ ಒಟಿಟಿಗೆ ಆಗಮಿಸಲು ಸಿದ್ಧವಾಗಿದೆ. ಹಾಗಾದರೆ, ಯಾವಾಗಿನಿಂದ, ಯಾವ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮ್ ಆಗಲಿದೆ? ಇಲ್ಲಿದೆ ಮಾಹಿತಿ.
Raayan OTT Release Official: ಕಾಲಿವುಡ್ ಸ್ಟಾರ್ ನಟ ಧನುಷ್ ನಟನೆಯ 50ನೇ ಸಿನಿಮಾ ರಾಯನ್ ಇತ್ತೀಚೆಗಷ್ಟೇ ತೆರೆಕಂಡಿತ್ತು. ಧನುಷ್ ಚೊಚ್ಚಲ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೂ ಈ ಚಿತ್ರ ಕುತೂಹಲ ಮೂಡಿಸಿತ್ತು. ಚಿತ್ರ ಬಿಡುಗಡೆಗೂ ಮುನ್ನವೇ ಅಷ್ಟೊಂದು ಹೈಪ್ ಕ್ರಿಯೇಟ್ ಮಾಡದ ಈ ಸಿನಿಮಾ, ರಿಲೀಸ್ ಬಳಿಕ ಕಲೆಕ್ಷನ್ ವಿಚಾರದಲ್ಲಿ ದೊಡ್ಡ ಮಟ್ಟದ ಕಮಾಯಿ ಮಾಡಿತ್ತು. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸಲು ರೆಡಿಯಾಗಿದೆ.
ಭಾರೀ ನಿರೀಕ್ಷೆಗಳ ನಡುವೆ ಜುಲೈ 26 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ರಾಯನ್ ಚಿತ್ರಕ್ಕೆ ದೊಡ್ಡ ಮಟ್ಟದ ಮೆಚ್ಚುಗೆ ಸಿಕ್ಕಿತ್ತು. ಸಂಪೂರ್ಣ ಆಕ್ಷನ್ ಎಂಟರ್‌ಟೈನರ್ ಆಗಿ ಧನುಷ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ತೆಲುಗಿನಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಗಳಿಕೆಯಲ್ಲಿಯೂ ಒಂದಡಿ ಮುಂದೆಯೇ ಹೆಜ್ಜೆ ಇರಿಸಿದ್ದ ರಾಯನ್ ಸಿನಿಮಾ, 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ನಟರಾದ ಎಸ್.ಜೆ. ಸೂರ್ಯ, ಪ್ರಕಾಶ್ ರಾಜ್, ವರಲಕ್ಷ್ಮಿ ಶರತ್ ಕುಮಾರ್, ಸೆಲ್ವ ರಾಘವನ್, ಅಪರ್ಣಾ ಬಾಲಮುರಳಿ, ದುಶಾರ ವಿಜಯನ್ ಮುಂತಾದವರು ನಟಿಸಿದ್ದಾರೆ. ರಿವೇಂಜ್ ಥ್ರಿಲ್ಲರ್ ಸಿನಿಮಾದಲ್ಲಿ, ಧನುಷ್ ಪಾತ್ರವೂ ಅಷ್ಟೇ ಖಡಕ್ಕಾಗಿತ್ತು.
150 ಕೋಟಿ ಕಲೆಕ್ಷನ್
ಈಗಾಗಲೇ ಇನ್ನೂ ಹಲವೆಡೆ ಪ್ರದರ್ಶನ ಕಾಣುತ್ತಿರುವ, ಒಳ್ಳೆಯ ಕಲೆಕ್ಷನ್ ಮುಂದುವರಿಸಿರುವ ರಾಯನ್ ಸಿನಿಮಾ ಈ ವರೆಗೂ 150 ಕೋಟಿ ಕಲೆಕ್ಷನ್ ಮಾಡಿದೆ. ಹೀಗೆ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿರುವ ಈ ಸಿನಿಮಾ, ಇದೀಗ ಒಟಿಟಿ ಬಿಡುಗಡೆಯ ಹೊಸ್ತಿಗೆ ಬಂದಿದೆ. ಅಂದರೆ, ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಈ ಹಿಂದೆ ಆಗಸ್ಟ್ 30ರಂದು ಈ ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗಿತ್ತು. ಆದರೆ, ಇದೀಗ ಅದಕ್ಕೂ ಮುನ್ನ ಅಂದರೆ ಆಗಸ್ಟ್ 26ರಂದು ಅಮೆಜಾನ್ ಪ್ರೈಮ್ ಒಟಿಟಿಗೆ ರಾಯನ್ ಎಂಟ್ರಿಕೊಡಲಿದೆ. ಈ ಸಿನಿಮಾಕ್ಕೆ ಒಳ್ಳೆಯ ಮೊತ್ತವನ್ನೇ ನೀಡಿ ಡಿಜಿಟಲ್ ಹಕ್ಕುಗಳನ್ನು ಪಡೆದಿಕೊಂಡಿದೆ ಪ್ರೈಂ ವಿಡಿಯೋ.
ಏನಿದು ರಾಯನ್ ಕಥೆ?
ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿರುವ ಧನುಷ್ ತನ್ನ ತಮ್ಮಂದಿರು ಮತ್ತು ತಂಗಿಯ ಜತೆಗೆ ಚೆನ್ನೈನಲ್ಲಿ ಸಣ್ಣ ಹೊಟೇಲ್ ನಡೆಸುತ್ತ ಜೀವನ ಸಾಗಿಸುತ್ತಿರುವಾತ. ಕೆಲವು ಅನಾಹುತಗಳಿಂದ ಧನುಷ್ ಕುಟುಂಬದ ಮೇಲೆ ಶತ್ರುಗಳ ಕಣ್ಣು ಬೀಳುತ್ತದೆ. ಸುಂದರ ಕುಟುಂಬಕ್ಕೆ ಕುತ್ತು ಬಂದೊದಗುತ್ತದೆ. ಅಲ್ಲಿಂದ ರಾಯನ್ ಹೇಗೆ ಗ್ಯಾಂಗ್‌ಸ್ಟರ್ ರೂಪ ಪಡೆದುಕೊಂಡು ಅವರೆಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ? ಹೇಗೆ ರಕ್ತದೋಕುಳಿಯನ್ನೇ ಹರಿಸುತ್ತಾನೆ ಎಂಬುದೇ ರಾಯನ್ ಸಿನಿಮಾದ ಒಂದೆಳೆ.
ಎ.ಆರ್. ರೆಹಮಾನ್ ಸಂಗೀತ
ರಾಯನ್ ಚಿತ್ರದಲ್ಲಿ ದುಷಾರ ವಿಜಯನ್ ಧನುಷ್ ಅವರ ತಂಗಿ ದುರ್ಗಾ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ಕಾಳಿದಾಸ್ ಜಯರಾಂ, ವರಲಕ್ಷ್ಮಿ ಶರತ್ ಕುಮಾರ್, ಸರವಣನ್, ದಿಲೀಪನ್, ಇಳವರಸು ಮುಂತಾದವರು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಕಲಾನಿಧಿ ಮಾರನ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಓಂ ಪ್ರಕಾಶ್ ಅವರ ಕ್ಯಾಮರಾ, ಪ್ರಸನ್ನ ಜಿಕೆ ಅವರ ಸಂಕಲನ, ಎ.ಆರ್ ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕಿದೆ.