ತೆಲುಗು ನಟ ನಾನಿಯ ‘ಸರಿಪೋದಾ ಶನಿವಾರಂ’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಯಾವಾಗಿನಿಂದ ಸ್ಟ್ರೀಮಿಂಗ್‌?-ott news saripodhaa sanivaaram ott release date nani s j surya starrer movie to stream on netflix check date mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ತೆಲುಗು ನಟ ನಾನಿಯ ‘ಸರಿಪೋದಾ ಶನಿವಾರಂ’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಯಾವಾಗಿನಿಂದ ಸ್ಟ್ರೀಮಿಂಗ್‌?

ತೆಲುಗು ನಟ ನಾನಿಯ ‘ಸರಿಪೋದಾ ಶನಿವಾರಂ’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಯಾವಾಗಿನಿಂದ ಸ್ಟ್ರೀಮಿಂಗ್‌?

ಆಗಸ್ಟ್ 29 ರಂದು ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದ್ದ ನಾನಿ ಮತ್ತು ತಮಿಳಿನ ಎಸ್‌ಜೆ ಸೂರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಸರಿಪೋದಾ ಶನಿವಾರಂ ಸಿನಿಮಾ ಇದೀಗ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಈ ಸಿನಿಮಾವನ್ನು ವಿವೇಕ್ ಆತ್ರೇಯ ನಿರ್ದೇಶಿಸಿದ್ದಾರೆ.

ತೆಲುಗು ನಟ ನಾನಿಯ ‘ಸರಿಪೋದಾ ಶನಿವಾರಂ’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ
ತೆಲುಗು ನಟ ನಾನಿಯ ‘ಸರಿಪೋದಾ ಶನಿವಾರಂ’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

Saripodhaa Sanivaaram OTT: ತೆಲುಗು ನ್ಯಾಚುರಲ್‌ ಸ್ಟಾರ್‌ ಎಂದೇ ಕರೆಸಿಕೊಳ್ಳುವ ನಟ ನಾನಿ ನಟನೆಯ ಸರಿಪೋದಾ ಶನಿವಾರಂ ಸಿನಿಮಾ ಇತ್ತೀಚೆಗಷ್ಟೇ ಚಿತ್ರಮಂದಿರಕ್ಕೆ ಆಗಮಿಸಿತ್ತು. ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿಯೂ ಈ ಸಿನಿಮಾ ಡಬ್‌ ಆಗಿ ತೆರೆಕಂಡಿತ್ತು. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದ ಈ ಸಿನಿಮಾ ವಿಮರ್ಶೆ ದೃಷ್ಟಿಯಿಂದಲೂ ಮುಂದಿತ್ತು. ಕಲೆಕ್ಷನ್‌ ವಿಚಾರದಲ್ಲಿಯೂ ಸದ್ದು ಮಾಡಿದ್ದ ಸರಿಪೋದಾ ಶನಿವಾರಂ ಸಿನಿಮಾ ಬರೋಬ್ಬರಿ 100 ಕೋಟಿ ಕಲೆಕ್ಷನ್‌ ಮಾಡಿತ್ತು. ಈಗ ಒಟಿಟಿಗೆ ಆಗಮಿಸಲು ತುದಿಗಾಲ ಮೇಲೆ ನಿಂತಿದೆ.

ಸರಿಪೋದಾ ಶನಿವಾರಂ ಸಿನಿಮಾವನ್ನು ವಿವೇಕ್ ಆತ್ರೇಯ ನಿರ್ದೇಶಿಸಿದ್ದಾರೆ. 2022ರಲ್ಲಿ ನಾನಿ ಜತೆಗೆ ಅಂಟೆ ಸುಂದರಾನಿಕಿ ಸಿನಿಮಾ ನಿರ್ದೇಶಿಸಿದ್ದ ವಿವೇಕ್‌, ಸರಿಪೋದಾ.. ಮೂಲಕ ಮತ್ತೆ ನಾನಿ ಜತೆ ಕೈ ಜೋಡಿಸಿದ್ದಾರೆ. ಆಗಸ್ಟ್ 29 ರಂದು ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದ್ದ ಸರಿಪೋದಾ ಶನಿವಾರಂ ಸಿನಿಮಾ, ಈಗಲೂ ಚಿತ್ರಮಂದಿರದಲ್ಲಿ ಮುನ್ನುಗ್ಗುತ್ತಿದೆ. ಸೆಪ್ಟೆಂಬರ್ 20 ರಂದು (ಶುಕ್ರವಾರ) ಈ ಸಿನಿಮಾ 30 ಲಕ್ಷ ಗಳಿಕೆ ಕಂಡಿದೆ. ಹೀಗಿರುವಾಗಲೇ ಈ ಸಿನಿಮಾದ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಹೊರಬಿದ್ದಿದೆ.

ತಮಿಳಿನ ಎಸ್ ಜೆ ಸೂರ್ಯ ವಿಲನ್

ಸರಿಪೋದಾ ಶನಿವಾರಂ ಸಿನಿಮಾದಲ್ಲಿ ಪ್ರಿಯಾಂಕಾ ಅರುಳ್ ಮೋಹನ್ ನಾಯಕಿಯಾಗಿ ನಟಿಸಿದರೆ, ತಮಿಳಿನ ಎಸ್.ಜೆ. ಸೂರ್ಯ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಅಭಿರಾಮಿ, ಅದಿತಿ ಬಾಲನ್ ಮತ್ತು ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿವಿವಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಡಿವಿವಿ ದಾನಯ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಯಾವ ಒಟಿಟಿಯಲ್ಲಿ ರಿಲೀಸ್‌?

ಸರಿಪೋದಾ ಶನಿವಾರಂ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಜನಪ್ರಿಯ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಸೆಪ್ಟೆಂಬರ್‌ 26ರಿಂದ ಸರಿಪೋದಾ ಶನಿವಾರಂ ಚಿತ್ರವನ್ನು ಸಿನಿಪ್ರೇಮಿಗಳ ಮುಂದೆ ತರುವುದಾಗಿ ನೆಟ್‌ಫ್ಲಿಕ್ಸ್‌ ಅಧಿಕೃತವಾಗಿ ಘೋಷಿಸಿದೆ. ತೆಲುಗು ಜೊತೆಗೆ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಈ ಚಿತ್ರ ಸ್ಟ್ರೀಮಿಂಗ್‌ ಆಗಲಿದೆ.

ಏನಿದು ಕಥೆ?

ಇನ್ನು ಕಥೆಯ ವಿಚಾರಕ್ಕೆ ಬಂದರೆ.. ಚಿತ್ರದಲ್ಲಿ ಸೂರ್ಯ (ನಾನಿ)ಗೆ ವಿಪರೀತ ಕೋಪ. ಆದರೆ ಆ ಕೋಪವನ್ನು ಆತ ಶನಿವಾರವಷ್ಟೇ ತೋರಿಸುತ್ತೇನೆ ಎಂದು ತಾಯಿಗೆ ಹೇಳುತ್ತಾನೆ. ಹೀಗಿರುವಾಗಲೇ ಸೋಕುಲ್‌ಪಾಲೆಂ ಸಿಐ ದಯಾನಂದ್ (ಎಸ್‌ಜೆ ಸೂರ್ಯ) ಒಬ್ಬ ಸ್ಯಾಡಿಸ್ಟ್ ಪೊಲೀಸ್ ಅಧಿಕಾರಿ. ಹೀಗಿರುವಾಗಲೇ ಸೂರ್ಯನ ಅಣ್ಣ ಕೂರ್ಮಾಚಲಂ (ಮುರಳಿಶರ್ಮ)ನಿಂದಾಗಿ ದಯಾನಂದನಿಗೆ ಬರಬೇಕಿದ್ದ ಕೋಟಿಗಟ್ಟಲೆ ಹಣ ಕೈತಪ್ಪುತ್ತದೆ. ಆತನ ಮೇಲೆ ದಯಾನಂದ್‌ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಆಗ ಸೂರ್ಯನಿಗೂ ಈ ವಿಚಾರ ತಿಳಿಯುತ್ತದೆ. ದಯಾನಂದ ವಿರುದ್ಧ ತಿರುಗಿ ಬೀಳುತ್ತಾನೆ. ಮುಂದೇನಾಗುತ್ತದೆ ಎಂಬುದೇ ಈ ಸಿನಿಮಾದ ಕಥೆ.

ಹಿಟ್‌ 3 ಶೂಟಿಂಗ್‌ನಲ್ಲಿ ಬಿಜಿ

ಸರಿಪೋದ ಶನಿವಾರಂ ಸಿನಿಮಾ ಬಳಿಕ ನಾನಿ ಎರಡು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಿರ್ದೇಶಕ ಶೈಲೇಶ್ ಕೋಲನು ಜೊತೆ ಹಿಟ್ 3 ಸಿನಿಮಾ ಶೂಟಿಂಗ್‌ ಹಂತದಲ್ಲಿದೆ. 2025ರ ಮೇ 1ರಂದು ಈ ಚಿತ್ರ ಬಿಡುಗಡೆಯಾಗಲಿದೆ. ದಸರಾ ಬಳಿಕ ನಾನಿ ಮತ್ತು ನಿರ್ದೇಶಕ ಶ್ರೀಕಾಂತ ಒದೆಲಾ ಜೋಡಿಯ ಹೊಸ ಸಿನಿಮಾ ಸೆಟ್ಟೇರಲಿದೆ.

mysore-dasara_Entry_Point