ಆಕ್ಷನ್‌, ಹಾರರ್‌, ರೊಮ್ಯಾಂಟಿಕ್‌... ಈ ವಾರ ಒಟಿಟಿಗೆ ಆಗಮಿಸುತ್ತಿರುವ ಟಾಪ್‌ 5 ಸಿನಿಮಾಗಳಿವು; ನಿಮ್ಮ ಆಯ್ಕೆ ಯಾವುದು?-ott news saripodhaa sanivaaram to demonte colony 2 top 5 ott movie releases this week netflix zee5 hotstar mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಆಕ್ಷನ್‌, ಹಾರರ್‌, ರೊಮ್ಯಾಂಟಿಕ್‌... ಈ ವಾರ ಒಟಿಟಿಗೆ ಆಗಮಿಸುತ್ತಿರುವ ಟಾಪ್‌ 5 ಸಿನಿಮಾಗಳಿವು; ನಿಮ್ಮ ಆಯ್ಕೆ ಯಾವುದು?

ಆಕ್ಷನ್‌, ಹಾರರ್‌, ರೊಮ್ಯಾಂಟಿಕ್‌... ಈ ವಾರ ಒಟಿಟಿಗೆ ಆಗಮಿಸುತ್ತಿರುವ ಟಾಪ್‌ 5 ಸಿನಿಮಾಗಳಿವು; ನಿಮ್ಮ ಆಯ್ಕೆ ಯಾವುದು?

OTT Releases This Week: ಒಟಿಟಿ ವೀಕ್ಷಕರಿಗೆ ಈ ವಾರ ಸಾಲು ಸಾಲು ಸಿನಿಮಾಗಳ ಹೂರಣ ಸಿಗಲಿದೆ. ಕಾಮಿಡಿ ಸಿನಿಮಾಗಳಿಂದ ಹಿಡಿದು ಆಕ್ಷನ್‌ ಜತೆಗೆ ಹಾರರ್‌ ಸಿನಿಮಾಗಳೂ ಈ ವಾರ ಒಟಿಟಿ ಅಂಗಳ ಪ್ರವೇಶಿಸುತ್ತಿವೆ. ಹೀಗಿವೆ ಟಾಪ್‌ 5 ಸಿನಿಮಾಗಳು.

ಈ ವಾರ ಒಟಿಟಿಗೆ ಆಗಮಿಸುತ್ತಿರುವ ಟಾಪ್‌ 5 ಸಿನಿಮಾಗಳಿವು
ಈ ವಾರ ಒಟಿಟಿಗೆ ಆಗಮಿಸುತ್ತಿರುವ ಟಾಪ್‌ 5 ಸಿನಿಮಾಗಳಿವು

OTT Releases This Week: ಈ ವಾರವೂ ಹಲವು ಚಿತ್ರಗಳು ಒಟಿಟಿ ಪ್ಲಾಟ್‌ಫಾರ್ಮ್‌ಗೆ ಬರಲು ಸಾಲುಗಟ್ಟಿ ನಿಂತಿವೆ. ಒಂದಕ್ಕಿಂತ ಒಂದು ವಿಭಿನ್ನ ಜಾನರ್‌ನ ಸಿನಿಮಾಗಳು ಈ ಸಲ ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ನ್ಯಾಚುರಲ್‌ ಸ್ಟಾರ್‌ ನಾನಿಯ ಸರಿಪೋದಾ ಶನಿವಾರಂ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ಈ ಚಿತ್ರದ ಜತೆಗೆ ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳೂ ಈ ವಾರ ಒಟಿಟಿಗೆ ಆಗಮಿಸಲಿವೆ. ಆ ಪೈಕಿ ಈ ವಾರ ಮಿಸ್‌ ಮಾಡದೇ ನೋಡಬೇಕಾದ ಟಾಪ್‌ 5 ಸಿನಿಮಾಗಳು ಇಲ್ಲಿವೆ ನೋಡಿ.

ಸರಿಪೋದಾ ಶನಿವಾರಂ

ನ್ಯಾಚುರಲ್ ಸ್ಟಾರ್ ಹೀರೋ ನಾನಿ ಅಭಿನಯದ ಆಕ್ಷನ್ ಡ್ರಾಮಾ ಚಿತ್ರ ಸರಿಪೋದಾ ಶನಿವಾರಂ ಬಾಕ್ಸ್ ಆಫೀಸ್‌ನಲ್ಲಿ ಹಿಟ್‌ ಪಟ್ಟ ಪಡೆದುಕೊಂಡಿದೆ. ಆಗಸ್ಟ್‌ 27ರಂದು ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದ್ದ ಈ ಸಿನಿಮಾ, ಇದೀಗ ಈ ವಾರ ಒಟಿಟಿಗೆ ಆಗಮಿಸುತ್ತಿದೆ. ಗುರುವಾರ (ಸೆಪ್ಟೆಂಬರ್ 26) ನೆಟ್‌ಫ್ಲಿಕ್ಸ್‌ನ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ತೆಲುಗು ಜೊತೆಗೆ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ. ವಿವೇಕ್ ಆತ್ರೇಯ ನಿರ್ದೇಶನದ ಈ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಚಿತ್ರದಲ್ಲಿ ಪ್ರಿಯಾಂಕಾ ಮೋಹನ್ ಮತ್ತು ಎಸ್‌ಜೆ ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಡಿಮಾಂಟಿ ಕಾಲೋನಿ 2

ಹಾರರ್ ಥ್ರಿಲ್ಲರ್ ಚಲನಚಿತ್ರ 'ಡಿಮಾಂಟಿ ಕಾಲೋನಿ 2' ಸೆಪ್ಟೆಂಬರ್ 27 ರಂದು ಜೀ5 OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತಮಿಳಿನಲ್ಲಿ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಅಜಯ್ ಜ್ಞಾನಮುತ್ತು ನಿರ್ದೇಶನದ ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ. ಡಿಮಾಂಟಿ ಕಾಲೋನಿ 2 ಚಿತ್ರವು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 27 ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ವಾಳಾ

ಮಲಯಾಳಂ ಕಾಮಿಡಿ ಡ್ರಾಮಾ ಸಿನಿಮಾ 'ವಾಳಾ: ಬಯೋಪಿಕ್ ಆಫ್ ಎ ಬಿಲಿಯನ್ ಬಾಯ್ಸ್' ಸಿನಿಮಾ ಸೆಪ್ಟೆಂಬರ್ 23 ರಂದು ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಆನಂದ್ ಮೆನನ್ ನಿರ್ದೇಶನದ ಈ ಚಿತ್ರವು ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಿಜು ಸನ್ನಿ, ಜ್ಯೋತಿಯಾರ್, ಅಮಿತ್, ಸಾಫ್ ಬ್ರೋಸ್ ಮತ್ತು ಅನುರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಲವ್‌ ಸಿತಾರಾ

ಸೋಭಿತಾ ಧೂಳಿಪಳ್ಳ ಅವರ ಚಿತ್ರ 'ಲವ್ ಸಿತಾರಾ' ನೇರವಾಗಿ ಜಿ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಈ ಶುಕ್ರವಾರ ಅಂದರೆ ಸೆಪ್ಟೆಂಬರ್ 27 ರಂದು ಜಿ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಆರಂಭಿಸಲಿದೆ. ಈ ರೋಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ವಂದನಾ ಕಟಾರಿಯಾ ನಿರ್ದೇಶಿಸಿದ್ದಾರೆ. ಲವ್ ಸಿತಾರ ಚಿತ್ರದಲ್ಲಿ ರಾಜೀವ್ ಸಿದ್ಧಾರ್ಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ವಾಳೈ

ಕಾಲಿವುಡ್‌ನಲ್ಲಿ ಆಗಸ್ಟ್‌ನಲ್ಲಿ ತೆರೆಗೆ ಬಂದಿದ್ದ ವಾಳೈ ಸಿನಿಮಾ ಸೆಪ್ಟೆಂಬರ್ 27ರಂದು ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿ ಸ್ಟ್ರೀಮಿಂಗ್‌ಗೆ ಬರಲಿದೆ. ಕರ್ಣಂ ಮತ್ತು ಮಾಮನ್ನನ್ ಚಿತ್ರಗಳನ್ನು ನಿರ್ದೇಶಿಸಿದ್ದ ಮಾರಿ ಸೆಲ್ವರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕಥೆ ಮಕ್ಕಳ ನಡುವಿನದ್ದು. ಚಿತ್ರವು ಆಗಸ್ಟ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪೊನ್ವೆಲ್, ರಘುಲ್, ಕಲೈಯರಸನ್, ನಿಖಿಲಾ ವಿಮಲ್, ಕರ್ಣನ್ ಜಾನಕಿ ವಾಲೈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

mysore-dasara_Entry_Point