ಕನ್ನಡ ಸುದ್ದಿ  /  ಮನರಂಜನೆ  /  Shaitaan Ott Release: ಚಿತ್ರಮಂದಿರದಲ್ಲಿ ಭಯಬೀಳಿಸಿದ್ದ ‘ಶೈತಾನ್‌’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಲಾಕ್‌; ಅಧಿಕೃತ ಘೋಷಣೆಯಷ್ಟೇ ಬಾಕಿ

Shaitaan OTT Release: ಚಿತ್ರಮಂದಿರದಲ್ಲಿ ಭಯಬೀಳಿಸಿದ್ದ ‘ಶೈತಾನ್‌’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಲಾಕ್‌; ಅಧಿಕೃತ ಘೋಷಣೆಯಷ್ಟೇ ಬಾಕಿ

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮೋಡಿ ಮಾಡಿದ್ದ ಬಾಲಿವುಡ್‌ನ ಶೈತಾನ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆಯನ್ನೇ ತೆಗೆದಿದೆ. 63 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ 200 ಕೋಟಿ ಕಲೆಕ್ಷನ್‌ ಮಾಡಿದೆ. ಈಗ ಇದೇ ಚಿತ್ರ ಒಟಿಟಿ ಕಡೆಗೂ ಮುಖ ಮಾಡಲು ರೆಡಿಯಾಗಿದೆ.

Shaitaan OTT Release: ಚಿತ್ರಮಂದಿರದಲ್ಲಿ ಭಯಬೀಳಿಸಿದ್ದ ‘ಶೈತಾನ್‌’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಲಾಕ್‌; ಅಧಿಕೃತ ಘೋಷಣೆಯಷ್ಟೇ ಬಾಕಿ
Shaitaan OTT Release: ಚಿತ್ರಮಂದಿರದಲ್ಲಿ ಭಯಬೀಳಿಸಿದ್ದ ‘ಶೈತಾನ್‌’ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಲಾಕ್‌; ಅಧಿಕೃತ ಘೋಷಣೆಯಷ್ಟೇ ಬಾಕಿ

Shaitaan OTT Release Date: ಬಾಲಿವುಡ್‌ನ ಶೈತಾನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್‌ ಪಟ್ಟ ಪಡೆದುಕೊಂಡಿದೆ. ಸೂಪರ್ ನ್ಯಾಚುರಲ್ ಹಾರರ್ ಥ್ರಿಲ್ಲರ್ ಶೈಲಿಯ ಈ ಚಿತ್ರ ಕಲೆಕ್ಷನ್ ವಿಚಾರದಲ್ಲೂ ಮೋಡಿ ಮಾಡಿದೆ. ಮಾರ್ಚ್ 8ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಕ್ರಮೇಣ ಪಾಸಿಟಿವ್ ಟಾಕ್‌ನೊಂದಿಗೆ ಮುಂದಡಿ ಇರಿಸಿತು. ಅದರಂತೆ ಈ ವರೆಗೂ ಶೈತಾನ್‌ ಸಿನಿಮಾ 200 ​​ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಅಜಯ್ ದೇವಗನ್, ತಮಿಳು ಸ್ಟಾರ್‌ಗಳಾದ ಜ್ಯೋತಿಕಾ ಮತ್ತು ಮಾಧವನ್ ಪ್ರಮುಖ ಪಾತ್ರಗಳಲ್ಲಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಹಾಗಾದರೆ ಈ ಬ್ಲಾಕ್ ಬಸ್ಟರ್ ಶೈತಾನ್‌ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ.

ಟ್ರೆಂಡಿಂಗ್​ ಸುದ್ದಿ

ಯಾವ ಒಟಿಟಿಯಲ್ಲಿ ರಿಲೀಸ್?

ಶೈತಾನ್ ಸಿನಿಮಾ OTT ರಿಲೀಸ್‌ಗಾಗಿ ಸಾಕಷ್ಟು ಪ್ರೇಕ್ಷಕರು ಕಾಯುತ್ತಿದ್ದಾರೆ. ಇತ್ತ ಇದೇ  ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಜನಪ್ರಿಯ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಶೈತಾನ್ ಚಿತ್ರವು ಮೇ 3ರಂದು ನೆಟ್‌ಫ್ಲಿಕ್ಸ್ OTT ನಲ್ಲಿ ಸ್ಟ್ರೀಮ್ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಹೊರಬೀಳಬೇಕಿದೆ.

ಶೈತಾನ್ ಚಿತ್ರಕ್ಕೆ ಆರಂಭದಿಂದಲೂ ಪಾಸಿಟಿವ್ ಟಾಕ್ ಸಿಕ್ಕಿದೆ. ಹಾಗಾಗಿಯೇ ಓಪನಿಂಗ್ ಸಾಧಾರಣವಾಗಿಯೇ ಇದ್ದರೂ ಆ ನಂತರ ಈ ಸಿನಿಮಾದ ಕಲೆಕ್ಷನ್ ಹೆಚ್ಚಾಯಿತು. ಕ್ರಮೇಣ ಚಿತ್ರವು ರೂ.200 ಕೋಟಿ ಕಲೆಕ್ಷನ್‌ ಗಡಿ ದಾಟಿತು. ಇತ್ತೀಚಿನ ಸುದ್ದಿ ಏನೆಂದರೆ,‌ ಶೈತಾನ್ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 8 ವಾರಗಳ ಬಳಿಕ‌, ಅಂದರೆ ನೆಟ್‌ಫ್ಲಿಕ್ಸ್ OTT ಅಂಗಳಕ್ಕೆ ಮೇ 3ರಂದು ಆಗಮಿಸಲಿದೆ.

65 ಕೋಟಿ ಬಜೆಟ್‌, 200 ಕೋಟಿ ಗಳಿಕೆ

ಗುಜರಾತಿ ವರ್ಷ್ ಚಿತ್ರದ ರಿಮೇಕ್ ಈ ಶೈತಾನ್. ಶೈತಾನ್ ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶಿಸಿದ್ದಾರೆ. ಅಜಯ್ ದೇವಗನ್, ಜ್ಯೋತಿಕಾ, ಮಾಧವನ್ ಜೊತೆಗೆ ಜಾನಕಿ ಬೋಡಿವಾಲಾ ಮತ್ತು ಅಂಗದ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮಿತ್ ತ್ರಿವೇದಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ವಿಕಾಸ್ ಬಹ್ಲ್, ಜ್ಯೋತಿ ದೇಶಪಾಂಡೆ, ಅಜಯ್ ದೇವಗನ್, ಅಭಿಷೇಕ್ ಪಾಠಕ್ ಮತ್ತು ಕುಮಾರ್ ಮಂಗತ್ ಪಾಠಕ್ ಜಂಟಿಯಾಗಿ ನಿರ್ಮಿಸಿದ್ದಾರೆ. 65 ಕೋಟಿ ಬಜೆಟ್‌ನಲ್ಲಿ ಶೈತಾನ್ ಸಿನಿಮಾ ನಿರ್ಮಾಣವಾಗಿದೆ.

ಶುರುವಾಗಿದೆ ಮೈದಾನ್‌ ಆಟ

ಅಜಯ್ ದೇವಗನ್ ಅವರ ಮೈದಾನ ಚಿತ್ರವು ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೈದರಾಬಾದ್‌ನ ಹೆಮ್ಮೆಯ ಫುಟ್‌ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನಾಧಾರಿತ ಚಿತ್ರ ಇದಾಗಿದೆ. 1952 ರಿಂದ 1962ರ ವರೆಗೆ ರಹೀಮ್ ಅವರ ತರಬೇತಿಯನ್ನು ಭಾರತೀಯ ಫುಟ್ಬಾಲ್ ಇತಿಹಾಸದಲ್ಲಿ ಸುವರ್ಣ ಯುಗ ಎಂದು ಪರಿಗಣಿಸಲಾಗಿದೆ. ಮೈದಾನ್ ಸಿನಿಮಾದಲ್ಲಿ ರಹೀಮ್ ಪಾತ್ರದಲ್ಲಿ ಅಜಯ್‌ ದೇವಗನ್‌ ಕಾಣಿಸಿಕೊಂಡಿದ್ದು, ಆ ಪಾತ್ರಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಚಿತ್ರಕ್ಕೆ ಪಾಸಿಟಿವ್‌ ಟಾಕ್‌ ಕೇಳಿಬಂದರೂ ಕಲೆಕ್ಷನ್‌ ಸಾಧಾರಣವಾಗಿದೆ.

IPL_Entry_Point