Griselda: 30ರ ಪ್ರಾಯದಲ್ಲಿ ಪರವಾಗಿಲ್ಲ, ಈ ಐವತ್ತರ ವಯಸ್ಸಿನಲ್ಲಿ ಲೈಂಗಿಕ ದೃಶ್ಯಗಳಲ್ಲಿ ನಟಿಸುವುದು ಕಷ್ಟ ಎಂದ ನಟಿ ಸೋಫಿಯಾ
ನೆಟ್‌ಫ್ಲಿಕ್ಸ್‌ನ ಹೊಸ ಒಟಿಟಿ ಶೋ ಗ್ರಿಸೆಲ್ಡಾ (Griselda)ದಲ್ಲಿ ನಟಿಸಿದ ಅನುಭವವನ್ನು ನೆಟ್‌ಫ್ಲಿಕ್ಸ್ ಕಾರ್ಯಕ್ರಮದಲ್ಲಿ ಮಾಡರ್ನ್ ಫ್ಯಾಮಿಲಿ ನಟಿ ಸೋಫಿಯಾ ವರ್ಗರಾ ಹಂಚಿಕೊಂಡಿದ್ದಾರೆ. ಈ ಒಟಿಟಿ ಶೋನಲ್ಲಿ ಲೈಂಗಿಕ ದೃಶ್ಯಗಳನ್ನು ಶೂಟಿಂಗ್ ಮಾಡುವಾಗ ಅಭದ್ರತೆ ಉಂಟಾಯಿತು ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ನೆಟ್‌ಫ್ಲಿಕ್ಸ್‌ನಲ್ಲಿ ಗ್ರಿಸೆಲ್ಡಾ ಜನಪ್ರಿಯ ಕ್ರೈಮ್ ಡ್ರಾಮಾ. ಗ್ರಿಸೆಲ್ಡಾ ಸರಣಿಯ 2024ರ ಆವೃತ್ತಿಯ ಶೂಟಿಂಗ್‌ನಲ್ಲಿ ಭಾಗವಹಿಸಿದ ಅನುಭವವನ್ನು ನಟಿ ಸೋಪಿಯಾ ವರ್ಗಾರ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಈ ನೆಟ್‌ಫ್ಲಿಕ್ಸ್ ಶೋನಲ್ಲಿ ಲೈಂಗಿಕ ದೃಶ್ಯಗಳ ಶೂಟಿಂಗ್‌ನಲ್ಲಿ ಭಾಗವಹಿಸುವಾಗ ಟೆನ್ಷನ್ ಆಯ್ತು, ನನ್ನಲ್ಲಿ ಅಸುರಕ್ಷಿತ ಭಾವನೆ ಉಂಟಾಯಿತು ಎಂದು ಸೋಫಿಯಾ ವರ್ಗರಾ ಹೇಳಿದ್ದಾರೆ. ಜೂನ್ 2ರಂದು ನಡೆದ ನೆಟ್‌ಫ್ಲಿಕ್ಸ್ ಎಫ್‌ವೈಎಸ್‌ಇಇ ಕಾರ್ಯಕ್ರಮದಲ್ಲಿ 51 ವರ್ಷ ವಯಸ್ಸಿನ ಎಮ್ಮಿ ನಾಮನಿರ್ದೇಶನಗೊಂಡ ಈ ಜನಪ್ರಿಯ ನಟಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಈ ಕಿರುಸರಣಿಯಲ್ಲಿ ಹಲವು ಆಪ್ತವಾದ ದೃಶ್ಯಗಳಲ್ಲಿ ನಟಿಸಬೇಕಿತ್ತು.. ಜಗತ್ತಿನ ಅತ್ಯಂತ ಲಾಭದಾಯಕ ಡ್ರಗ್ ಕಾರ್ಟೆಲ್‌ಗಳಲ್ಲಿ ಒಂದಾದ ಗ್ರಿಸೆಲ್ಡಾನಲ್ಲಿ ಪ್ರಮುಖ ಮಾಸ್ಟರ್ ಮೈಂಡ್ ಗ್ರಿಸೆಲ್ಡಾ ಬ್ಲಾಂಕೋ ಪಾತ್ರವನ್ನು ಸೋಫಿಯಾ ನಿರ್ವಹಿಸಿದ್ದಾರೆ. "ನಾನು ಎಂದಿಗೂ ಲೈಂಗಿಕ ದೃಶ್ಯಗಳಲ್ಲಿ ನಟಿಸಿಲ್ಲ. ಆದರೆ, ಗ್ರಿಸೆಲ್ಡಾದಲ್ಲಿ ಮಾಡಬೇಕಾಯಿತು" ಎಂದು ಅವರು ಹೇಳಿದ್ದಾರೆ.
"ನನಗೆ ಈಗ 50 ವರ್ಷ ಕಳೆದಿದೆ. ನನಗೆ 30 ವರ್ಷ ವಯಸ್ಸಾಗಿದ್ದರೆ ನಾನು ಚಿಂತೆ ಮಾಡುತ್ತಿರಲಿಲ್ಲ. ನಾನು ಈ ಸರಣಿಯಲ್ಲಿ ಭಯಾನಕವಾಗಿ ಕಾಣಲಿದ್ದೇನೆ ಎಂಬ ಚಿಂತೆಯಾಗುತ್ತಿದೆ" ಎಂದು ಅವರು ಹೇಳಿದ್ದಾರೆ. "ಆಂಡಿ ತುಂಬಾ ಕಲಾತ್ಮಕ ನಿರ್ದೇಶಕ. ಇಂತಹ ದೃಶ್ಯಗಳ ಶೂಟಿಂಗ್‌ನಲ್ಲಿ ನನಗೆ ಆರಾಮದಾಯಕ ಭಾವನೆ ನೀಡಿದರು. ನಿಮ್ಮ ಮೇಲೆ ಹೆಚ್ಚು ಹೊತ್ತು ಕ್ಯಾಮೆರಾ ಫೋಕಸ್ ಮಾಡುವುದಿಲ್ಲ ಎಂಬ ಭರವಸೆಯನ್ನು ಡೈರೆಕ್ಟರ್ ನೀಡಿದರು. ಇದು ತುಸು ನಿರಾಳತೆ ಉಂಟು ಮಾಡಿತು" ಎಂದು ಸೋಫಿಯಾ ಹೇಳಿದ್ದಾರೆ.
"ಈ ಸರಣಿಯಲ್ಲಿ ನನ್ನ ಹೇರ್ ಸ್ಟೈಲ್ ಎಲ್ಲರನ್ನೂ ಸೆಳೆದಿದೆ. ನಾನು ವಿಭಿನ್ನ ಅವಧಿಗಳಲ್ಲಿ ಐದು ಬಗೆಯ ವಿಗ್‌ಗಳನ್ನು ಬಳಸಿದ್ದೇನೆ. ಪ್ರಾಸ್ಥೆಟಿಕ್ ಹುಬ್ಬು ಕವರ್‌ಗಳನ್ನು ಅಳವಡಿಸಿದ್ದೇನೆ. ಮೂಗು ಮತ್ತು ಹಲ್ಲುಗಳ ಪ್ಲೇಟ್ ತುಸು ಬಾಗಿಸಲಾಗಿದೆ" ಎಂದು ಗ್ರಿಸೆಲ್ಡಾದಲ್ಲಿ ತನ್ನ ರೂಪಾಂತರದ ಬಗ್ಗೆಯೂ ಸೋಫಿಯಾ ಮಾಹಿತಿ ನೀಡಿದ್ದಾರೆ.
ಗ್ರಿಸೆಲ್ಡಾ ವೆಬ್ ಸರಣಿ ಕುರಿತು
ಇದು ಅಮೆರಿಕದ ಕ್ರೈಮ್ ಡ್ರಾಮಾ ಟೆಲಿವಿಷನ್ ಸರಣಿ. ಆಂಡ್ರಿ ಬೈಜ್ ನಿರ್ದಶನದ ಎರಿಕ್ ನ್ಯೂಮಾನ್ ನಿರ್ಮಾಣದ ಈ ಸರಣಿಯಲ್ಲಿ ಸೋಫಿಯಾ ವರ್ಗರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟೋರಿಯಸ್ ಕೊಲಂಬಿಯನ್ ಡ್ರಗ್ ಲಾರ್ಡ್ ಬಗ್ಗೆ ಈ ಸರಣಿ ಕಥೆ ಹೊಂದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಜನವರಿ 25, 2024ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಆರು ಗಂಟೆಗಳ ದೀರ್ಘಾವಧಿಯ ಎಪಿಸೋಡ್‌ಗಳಿವೆ. ಈ ಸರಣಿ ಬಿಡುಗಡೆಯಾದ ಸಂದರ್ಭದಲ್ಲಿ ನೆಟ್‌ಫ್ಲಿಕ್ಸ್‌ನ ಟಾಪ್ 10 ಟಿವಿ ಶೋಗಳಲ್ಲಿ ಒಂದಾಗಿ ಜನಪ್ರಿಯತೆ ಪಡೆಯಿತು.
ಸೋಫಿಯಾ ಮಾರ್ಗರಿಟಾ ವರ್ಗರಾ ಬಗ್ಗೆ
ಇವರು ಜನಪ್ರಿಯ ಕೊಲಂಬಿಯ ಮತ್ತು ಅಮೆರಿಕದ ನಟಿ. ಟೆಲಿವಿಷನ್ ಶೋಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಎಬಿಸಿ ಸಿಟ್‌ಕಾಮ್ ಮಾಡರ್ನ್ ಫ್ಯಾಮಿಲಿ (2009-2020) ನಲ್ಲಿ ಗ್ಲೋರಿಯಾ ಡೆಲ್ಗಾಡೊ-ಪ್ರಿಟ್‌ಚೆಟ್ ಪಾತ್ರ ಮತ್ತು ನೆಟ್‌ಫ್ಲಿಕ್ಸ್ ಕಿರುಸರಣಿ ಗ್ರಿಸೆಲ್ಡಾ (2024) ನಲ್ಲಿ ಡ್ರಗ್ ಲಾರ್ಡ್ ಗ್ರಿಸೆಲ್ಡಾ ಬ್ಲಾಂಕೊ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇವರಿಗೆ ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ದೊರಕಿವೆ. ನಾಲ್ಕು ಎಮ್ಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದರು. ಈಕೆ ಅಮೆರಿಕದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿ.