ಕನ್ನಡ ಸುದ್ದಿ  /  ಮನರಂಜನೆ  /  Ott Release: ಒಟಿಟಿಯತ್ತ ಮುಖ ಮಾಡಿದ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ; ರಣದೀಪ್‌ ಹೂಡಾ ಹೀಗಂದ್ರು ನೋಡಿ

OTT Release: ಒಟಿಟಿಯತ್ತ ಮುಖ ಮಾಡಿದ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ; ರಣದೀಪ್‌ ಹೂಡಾ ಹೀಗಂದ್ರು ನೋಡಿ

Swatantrya Veer Savarkar on OTT: ಝೀ 5 ಒಟಿಟಿಯಲ್ಲಿ ಮೇ 28ರಂದು ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ. ಒಟಿಟಿ ರಿಲೀಸ್‌ ಸಮಯದ ಪ್ರಮೋ ವಿಡಿಯೋದಲ್ಲಿ ಸಾರ್ವಕರ್‌ ಪಾತ್ರದಲ್ಲಿ ನಟಿಸಿರುವ ರಣದೀಪ್‌ ಹೂಡಾ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

OTT Release: ಒಟಿಟಿಯತ್ತ ಮುಖ ಮಾಡಿದ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ
OTT Release: ಒಟಿಟಿಯತ್ತ ಮುಖ ಮಾಡಿದ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ

ಬೆಂಗಳೂರು: ರಣದೀಪ್‌ ಹೂಡ ನಟನೆಯ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾವು ಚಿತ್ರಮಂದಿರಗಳಲ್ಲಿ ಮಾಡಗಾಂವ್‌ ಎಕ್ಸ್‌ಪ್ರೆಸ್‌ ಸಿನಿಮಾದ ಜತೆ ಪೈಪೋಟಿ ನಡೆಸಿತ್ತು. ಇವೆರಡೂ ಸಿನಿಮಾಗಳು ಮಾರ್ಚ್‌ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದವು. ಚಿತ್ರಮಂದಿರಗಳಲ್ಲಿ ಈ ಎರಡೂ ಸಿನಿಮಾಗಳು ಹೇಳಿಕೊಳ್ಳುವಷ್ಟು ಗಳಿಕೆ ಮಾಡಿರಲಿಲ್ಲ. ಆದರೆ, ವೀರ ಸಾವರ್ಕರ್‌ ಸಿನಿಮಾದ ಕುರಿತು ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೂಡ ಅಭಿನಯಕ್ಕೂ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಈ ಸಿನಿಮಾ ಒಟಿಟಿ ರಿಲೀಸ್‌ಗೆ ಸಜ್ಜಾಗಿದೆ. ಇದೇ ಮೇ 28ರಂದು ಝೀ5ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಚಿತ್ರಮಂದಿರಗಳಲ್ಲಿ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ ನೋಡದೆ ಇರುವವರು ಮನೆಯಲ್ಲೇ ನೋಡಬಹುದಾಗಿದೆ. ಒಟಿಟಿ ರಿಲೀಸ್‌ ಸಮಯದಲ್ಲಿ ರಣದೀಪ್‌ ಹೂಡಾ ಅವರು ವಿನಾಯಕ ದಾಮೋದರ ಸಾವರ್ಕರ್‌ ಕುರಿತು ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಾವರ್ಕರ್‌ ಬಗ್ಗೆ ರಣದೀಪ್‌ ಹೀಗಂದ್ರು

ಝೀ5 ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಕುರಿತು ಪ್ರಮೋ ವಿಡಿಯೋ ಕ್ಲಿಪ್‌ ಬಿಡುಗಡೆ ಮಾಡಲಾಗಿದೆ. ಈ ಕ್ಲಿಪ್‌ನಲ್ಲಿ ರಣದೀಪ್‌ ಹೂಡಾ ಅವರು ಧೈರ್ಯವಂತ ಕ್ರಾಂತಿಕಾರಿ ವಿನಾಯಕ ದಾಮೋದರ್‌ ಸಾವರ್ಕರ್‌ ಕುರಿತು ಮಾತನಾಡಿದ್ದಾರೆ. ನಾವು ಈ ಹೆಸರನ್ನು ಇತಿಹಾಸ ಪುಸ್ತಕದಲ್ಲಿ ಓದಿರುತ್ತೇವೆ. ಆದರೆ, ಆಗಾಗ ನಾವು ಇವರ ಜೀವನದ ಕಥೆಯನ್ನು ನೆನಪಿಸಿಕೊಳ್ಳುತ್ತಿಲ್ಲ. ಸ್ವಾತಂತ್ರ್ಯಕ್ಕಾಗಿ ಕಾಲಪಾನಿ ಶಿಕ್ಷೆ ಅನುಭವಿಸಿದ್ದಾರೆ" ಎಂದು ರಣದೀಪ್‌ ಹೂಡಾ ಹೇಳಿದ್ದಾರೆ.

ಭಾರತವು ಹಿಂದೆಂದೂ ಕಂಡರಿಯದ ಅಪಾಯಕಾರಿ ಕ್ರಾಂತಿಕಾರಿಯ ಕುರಿತು ಯಾರಿಗೂ ತಿಳಿದಯ ಕಥೆಗಳಿಗೆ ಸಾಕ್ಷಿಯಾಗಿ ಎಂದು ಝೀ5 ಕ್ಯಾಪ್ಷನ್‌ ನೀಡಿದೆ. ಮೇ 28ರಂದು ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾವನ್ನು ಝೀ5 ಒಟಿಟಿಯಲ್ಲಿ ಮಾತ್ರ ನೋಡಬಹುದಾಗಿದೆ ಎಂದು ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ವೀರ್‌ ಸಾವರ್ಕರ್‌ ಪಾತ್ರದಲ್ಲಿ ರಣದೀಪ್‌ ಹೂಡಾ

ಈ ಸಿನಿಮಾದಲ್ಲಿ ಸಾವರ್ಕರ್‌ ಪಾತ್ರವನ್ನು ರಣದೀಪ್‌ ಹೂಡಾ ನಿರ್ವಹಿಸಿದ್ದಾರೆ. "ಈ ಪ್ರಾಜೆಕ್ಟ್‌ಗೆ ಕೆಲಸ ಮಾಡಲು ಆರಂಭಿಸಿದ ಬಳಿಕ ಈ ಸ್ಪೂರ್ತಿದಾಯಕ ಹೀರೋನ ಕುರಿತು ಸಾಕಷ್ಟು ವಿಷಯಗಳನ್ನು ತಿಳಿದುಕೊಂಡೆ. ಈ ಜನಪ್ರಿಯ ಹೋರಾಟಗಾರನ ಕುರಿತು ತಪ್ಪಾದ ಮಾಹಿತಿಗಳನ್ನು ಕೇಳುತ್ತ ಬಂದವರಿಗೆ ಸತ್ಯ ಕಥೆಯನ್ನು ಈ ಸಿನಿಮಾದ ಮೂಲಕ ಹೇಳಿದ್ದೇನೆ. ಇಂತಹ ಸೇನಾನಿಯ ಪಾತ್ರ ಮಾಡಲು ನನಗೆ ಅವಕಾಶ ದೊರಕಿರುವುದು ನಿಜಕ್ಕೂ ಅದೃಷ್ಟ" ಎಂದು ರಣದೀಪ್‌ ಹೇಳಿದ್ದಾರೆ.

ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ವೀರ್‌ ಸಾವರ್ಕರ್‌ ಸಿನಿಮಾ ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಚಿತ್ರಮಂದಿರದಲ್ಲಿ ರಿಲೀಸ್‌ ಆಗಿತ್ತು. ಇದೀಗ ಲೋಕಸಭಾ ಚುನಾವಣಾ ಫಲಿತಾಂಶದ ಮೊದಲೇ ಒಟಿಟಿಗೆ ಆಗಮಿಸುತ್ತಿದೆ. ರಣದೀಪ್‌ ಹೂಡಾ ಅವರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಪಾತ್ರದಲ್ಲಿ ನೋಡುಗರನ್ನು ಸೆಳೆದಿದ್ದರು. ಬರೀ ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಅವರಿಗಿದು ಮೊದಲ ಸಿನಿಮಾವಾಗಿತ್ತು. ಜೀ5 ಒಟಿಟಿಯಲ್ಲಿ ಮೇ 28ರಂದು ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ. ವಿಶೇಷ ಏನೆಂದರೆ ಮೇ 28, ವಿನಾಯಕ ದಾಮೋದರ್ ಸಾವರ್ಕರ್ ಅವರ 141ನೇ ಜಯಂತಿ. ಅಂದೇ ಆನ್‌ಲೈನ್‌ನಲ್ಲಿ ಈ ಸಿನಿಮಾ ವೀಕ್ಷಿಸಬಹುದು.

ಟಿ20 ವರ್ಲ್ಡ್‌ಕಪ್ 2024