ಗ್ಯಾಂಗ್ಸ್ ಆಫ್ ಗೋದಾವರಿ ಒಟಿಟಿಯಲ್ಲಿ ಯಾವಾಗ ಬಿಡುಗಡೆ? ಮನೆಯಲ್ಲೇ ನೋಡಿ ವಿಶ್ವಕ್ ಸೇನ್, ನೇಹಾ ಶೆಟ್ಟಿ, ಅಂಜಲಿ ನಟನೆಯ ಸಿನಿಮಾ
Gangs Of Godavari OTT: ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಗ್ಯಾಂಗ್ಸ್ ಆಫ್ ಗೋದಾವರಿ ಎಂಬ ತೆಲುಗು ಸಿನಿಮಾವನ್ನು ಒಟಿಟಿಯಲ್ಲಿ ನೋಡಬಯಸುವವರಿಗೆ ಇಲ್ಲೊಂದಿಷ್ಟು ವಿವರ ನೀಡಲಾಗಿದೆ. ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ಮೂಲದ ನೇಹಾ ಶೆಟ್ಟಿ ಕೂಡ ನಟಿಸಿದ್ದಾರೆ.
Gangs Of Godavari OTT Release: ಈ ವಾರ ಕನ್ನಡದಲ್ಲಿ ಯಾವುದೇ ಪ್ರಮುಖ ಸಿನಿಮಾಗಳು ರಿಲೀಸ್ ಆಗಿಲ್ಲ. ಟಾಲಿವುಡ್‌ನಲ್ಲಿ ಗ್ಯಾಂಗ್ಸ್ ಆಫ್ ಗೋದಾವರಿ ಮತ್ತು ಬಾಲಿವುಡ್‌ನಲ್ಲಿ ಮಿಸ್ಟರ್ ಆಂಡ್ ಮಿಸೆಸ್ ಮಹೀ ಬಿಡುಗಡೆಯಾಗಿತ್ತು. ಸಾಕಷ್ಟು ಜನರು ಈ ಸಿನಿಮಾಗಳಲ್ಲಿ ಥಿಯೇಟರ್‌ನಲ್ಲಿ ನೋಡಿರಬಹುದು. ಒಳ್ಳೆಯ ಕನ್ನಡ ಸಿನಿಮಾ ಬಂದಾಗ ಟಾಕೀಸ್‌ಗೆ ಹೋಗೋಣ, ಅಲ್ಲಿಯವರೆಗೆ ಒಟಿಟಿಯಲ್ಲೇ ಸಿನಿಮಾ ನೋಡೋಣ ಎಂದುಕೊಳ್ಳುವವರಿಗೆ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಒಟಿಟಿ ಅಪ್‌ಡೇಟ್ ಇಲ್ಲಿ ನೀಡಲಾಗಿದೆ. ಶ್ರೀಕರ ಸ್ಟುಡಿಯೋಸ್‌ನ ಈ ಸಿನಿಮಾಆವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ಸೂರ್ಯದೇವರ ನಾಗವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಿಸಿದ್ದಾರೆ. ವೆಂಕಟ್ ಉಪ್ಪತ್ತೂರಿ ಮತ್ತು ಗೋಪಿಚಂದ್ ಇನ್ನುಮುರಿ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ನಂದಮೂರಿ ಬಾಲಕೃಷ್ಣ ಬೆಂಬಲ
ಕೃಷ್ಣ ಚೈತನ್ಯ ನಿರ್ದೇಶನದ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದಲ್ಲಿ ನೇಹಾ ಶೆಟ್ಟಿ ಮತ್ತು ಅಂಜಲಿ ನಾಯಕಿಯರಾಗಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಟ್ರೇಲರ್, ಪೋಸ್ಟರ್ ಮತ್ತು ಪ್ರಚಾರದ ವಿಷಯವು ಉತ್ತಮ ಬಜ್ ಅನ್ನು ಸೃಷ್ಟಿಸಿದೆ. ಅದರಲ್ಲೂ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಂದಮೂರಿ ಬಾಲಕೃಷ್ಣ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಹೈಪ್ ಹೆಚ್ಚಿಸಿದೆ. ಈ ಸಮಯದಲ್ಲಿ ನಟಿ ಅಂಜಲಿಯನ್ನು ಬಾಲಯ್ಯ ತಳ್ಳಿದ್ದು ವಿವಾದವಾಗಿತ್ತು.
ಒಟಿಟಿ ಅಪ್‌ಡೇಟ್
ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಗ್ಯಾಂಗ್ಸ್ ಆಫ್ ಗೋದಾವರಿ ಮೇ 31 ರಂದು ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ. ಆದರೆ, ಚಿತ್ರಮಂದಿರಗಳಲ್ಲಿ ಈ ಸಿನಿಮಾ ನೋಡುವವರ ಪ್ರಮಾಣ ಅಷ್ಟೇನೂ ಉತ್ತಮವಾಗಿಲ್ಲ. ಇದೇ ಸಮಯದಲ್ಲಿ ಈ ಚಿತ್ರ ಯಾವ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿ ಇದೆ.
ಒಟಿಟಿ ಹಕ್ಕು ಖರೀದಿಸಿದ ನೆಟ್‌ಫ್ಲಿಕ್ಸ್
ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರವನ್ನು ಜನಪ್ರಿಯ ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್ ಭರ್ಜರಿ ಬೆಲೆಗೆ ಖರೀದಿಸಿದೆ ಎಂದು ವರದಿಯಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿ ನೆಟ್‌ಫ್ಲಿಕ್ಸ್ ಚಿತ್ರದ ಒಟಿಟಿ ಹಕ್ಕುಗಳನ್ನು ಖರೀದಿಸಿದೆ. ಅಲ್ಲದೆ, ಥಿಯೇಟರ್ ಬಿಡುಗಡೆಯಾದ ನಂತರ ಒಂದು ತಿಂಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಮಾಡಲು ಒಪ್ಪಂದವನ್ನು ನಿಗದಿಪಡಿಸಲಾಗಿದೆ. ಅಂದರೆ ಮೇ 31 ರಂದು ಬಿಡುಗಡೆಯಾದ ಗ್ಯಾಂಗ್ಸ್ ಆಫ್ ಗೋದಾವರಿ ಜುಲೈನಲ್ಲಿ ಮೊದಲ ವಾರದಲ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಸೂಚನೆಯಿದೆ. ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತು ಪ್ರೇಕ್ಷಕರ ಬಾಯಿ ಮಾತಿಗೆ ಅನುಗುಣವಾಗಿ ಡಿಜಿಟಲ್ ಸ್ಟ್ರೀಮಿಂಗ್ ದಿನಾಂಕವೂ ಬದಲಾಗುವ ಸಾಧ್ಯತೆ ಇದೆ. ಅದೇನೇ ಇರಲಿ. ಕೆಲವರ ಪ್ರಕಾರ ಈ ತಿಂಗಳ ಅಂತ್ಯದಲ್ಲಿಯೇ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.
90 ರ ದಶಕದಲ್ಲಿ ಗೋದಾವರಿ ಜಿಲ್ಲೆಯ ಲಂಕಾ ಪ್ರದೇಶದಲ್ಲಿ ನಡೆಯುವ ಕಥೆಯಂತೆ ಗ್ಯಾಂಗ್ಸ್ ಆಫ್ ಗೋದಾವರಿಯನ್ನು ಚಿತ್ರೀಕರಿಸಲಾಗಿದೆ. ಯುವಕನೊಬ್ಬ ರಾಜಕೀಯವನ್ನು ಬಳಸಿಕೊಂಡು ಹೇಗೆ ಉನ್ನತ ಸ್ಥಾನಕ್ಕೆ ಏರಿದ ಎಂಬುದೇ ಚಿತ್ರದ ಕಥೆ ಎನ್ನುತ್ತಾರೆ ನಿರ್ಮಾಪಕ ನಾಗವಂಶಿ. ಅಲ್ಲದೇ ಇದು ಗ್ಯಾಂಗ್ ಸ್ಟರ್ ಸಿನಿಮಾ ಅಲ್ಲ ಎಂದು ನಿರ್ದೇಶಕ ಕೃಷ್ಣ ಚೈತನ್ಯ ಸ್ಪಷ್ಟಪಡಿಸಿದ್ದಾರೆ.