Thalavan Movie Ott: ಖಚಿತಗೊಂಡ ಥಳವನ್ ಒಟಿಟಿ ಬಿಡುಗಡೆ ದಿನಾಂಕ, ಓಣಂ ಹಬ್ಬದಂದು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್
Thalavan Movie Ott Release Date: ಬಹುನಿರೀಕ್ಷಿತ ಮಲಯಾಳಂ ಸಿನಿಮಾ "ಥಳವನ್" ಒಟಿಟಿ ಬಿಡುಗಡೆ ದಿನಾಂಕ ಖಚಿತಗೊಂಡಿದೆ. ಓಣಂ ಹಬ್ಬದಂದು ಈ ಸಿನಿಮಾ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಥಳವನ್ ಒಟಿಟಿ ಬಿಡುಗಡೆ ದಿನಾಂಕ, ಸ್ಟ್ರೀಮಿಂಗ್ ಪಾಟ್ನರ್ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.
Thalavan OTT Release Date: ಕೇರಳದ ಪ್ರಮುಖ ಹಬ್ಬವಾದ ಓಣಂ ದಿನದಂದು ಒಟಿಟಿ ಸಿನಿಮಾ ಪ್ರಿಯರಿಗೆ ಖುಷಿಯ ಸುದ್ದಿಯೊಂದು ಬಂದಿದೆ. ಬಹುನಿರೀಕ್ಷಿತ ಥಳವನ್ ಸಿನಿಮಾ ಅಂದೇ ಸೋನಿಲಿವ್‌ನಲ್ಲಿ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 10ರಂದು ತಲವಾನ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಖಚಿತಗೊಂಡಿದ್ದು, ಮಲಯಾಳಂ ಸಿನಿಪ್ರಿಯರಿಗೆ ಸಂಭ್ರಮ ಮೂಡಿದೆ.
ಚಿತ್ರಮಂದಿರಗಳಲ್ಲಿ ಥಳವನ್ ಸಿನಿಮಾ ಬಿಡುಗಡೆಯಾದ ಸಂದರ್ಭ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾದ ಪ್ರೊಡಕ್ಷನ್ ವಿಷಯ ಮತ್ತು ಕಲಾವಿದರ ನಟನೆ ಕುರಿತು ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿತ್ತು. ಝಿಸ್ ಜಾಯ್ ಎಂಬ ರೋಮ್ಯಾಂಟಿಕ್ ಕಾಮೆಡಿಯನ್ ಈ ಸಿಇಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾವನ್ನು ಅರುಣ್ ನಾರಾಯಣ್ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಲಾಗಿತ್ತು.
ಥಳವನ್ ಸಿನಿಮಾ ಒಟಿಟಿಗೆ
ಮಾಲಿವುಡ್‌ನ ಥಳವನ್ ಸಿನಿಮಾ ಮೇ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಆಸಿಫ್ ಅಲಿ ಮತ್ತು ಬಿಜು ಮೆನನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವು ಸಾಹಸ ಥ್ರಿಲ್ಲರ್ ಕಥೆಯ ಮೂಲಕ ಗಮನ ಸೆಳೆದಿದೆ. ಮಿಯಾ ಜಾರ್ಜ್, ದಿಲಿಶ್ ಪೋತನ್, ಅನುಶ್ರೀ, ಸುಜೀತ್ ಶಂಕರ್, ಶಂಕರ್ ರಾಮಕೃಷ್ಣನ್ ಮತ್ತು ರಂಜಿತ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ತಲವಾನ್ ಸಿನಿಮಾದ ಕಥೆ
ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಪೊಲೀಸರ ಕಥೆಯನ್ನು ತಲವಾನ್ ಹೊಂದಿದೆ. ಈ ಅಪರಾಧದ ತನಿಖೆಯ ಸುತ್ತವೇ ಈ ಸಿನಿಮಾ ಸಾಗುತ್ತದೆ. ಒಂದಿಷ್ಟು ತಿರುವುಗಳು, ಕೌತುಕಗಳನ್ನು ಹೊತ್ತುಕೊಂಡು ಈ ಸಿನಿಮಾ ಸಾಗುತ್ತದೆ. ಕಾಮಿಡಿಯನ್ ಆಗಿ ಜನಪ್ರಿಯತೆ ಪಡೆದ ಝಿಸ್ ಜಾಯ್ ಈ ಸಿನಿಮಾದ ಮೂಲಕ ಭಿನ್ನ ಬಗೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಸಿಐ ಜಯಶಂಕರ್ (ಬಿಜು ಮೆನನ್) ಮತ್ತು ಎಸ್‌ಐ ಕಾರ್ತಿಕ್ (ಆಸಿಫ್ ಅಲಿ) ಅವರ ಕಥೆ ಈ ಸಿನಿಮಾದಲ್ಲಿದೆ. ಸಿಐ ಜಯಶಂಕರ್ ಮನೆಯಲ್ಲಿ ಬಾಲಕಿಯ ಶವ ಪತ್ತೆಯಾದ ಬಳಿಕ ಪೊಲೀಸ್ ಆರೋಪಿಯಾಗುತಾನೆ. ವಿಚಾರಣೆಯ ಹೊಣೆ ಎಸ್‌ಐ ಕಾರ್ತಿಕ್‌ಗೆ ದೊರಕುತ್ತದೆ. ನಿಜವಾಗಿಯೂ ಕೊಲೆ ಮಾಡಿದವರು ಯಾರು? ಸಿಐ ಜಯಶಂಕರ್ ಅಪರಾಧಿಯೇ? ನಿರಾಪರಾಧಿಯೇ? ಹೀಗೆ ಕೊನೆಯವರೆಗೂ ಕೌತುಕ ಕಾಯ್ದುಕೊಂಡು ಚಿತ್ರಕಥೆ ಸಾಗುತ್ತದೆ.
ಥಳವನ್ ಸಿನಿಮಾದ ಟ್ರೇಲರ್
ಅರುಣ್ ನಾರಾಯಣ್ ಮತ್ತು ಸಿಜೋ ಸೆಬಾಸ್ಟಿಯನ್ ಅವರು ಅರುಣ್ ನಾರಾಯಣ್ ಪ್ರೊಡಕ್ಷನ್ಸ್, ಲಂಡನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಥಳವನ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ದೀಪಕ್ ದೇವ್ ಸಂಗೀತ, ಸರಣ್ ವೇಲಾಯುಧನ್ ಛಾಯಾಗ್ರಹಣ ಮತ್ತು ಸೂರಜ್ ಇಎಸ್ ಸಂಕಲನವಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 25 ಕೋಟಿ ರೂಪಾಯಿ ಬಾಚಿಕೊಂಡಿದೆ.
ಈ ವರ್ಷ ಮಲಯಾಳಂ ಸಿನಿರಂಗದಲ್ಲಿ ಬಿಡುಗಡೆಯಾದ ಹಲವು ಸಿನಿಮಾಗಳು ಸೂಪರ್‌ಹಿಟ್ ಆಗಿವೆ. ದೊಡ್ಡ ಬಜೆಟ್‌ನ ಚಿತ್ರಗಳ ಜತೆ ಕಡಿಮೆ ಬಜೆಟ್‌ನ ಚಿತ್ರಗಳು ಚಿತ್ರಮಂದಿರಗಳಲ್ಲಿ ಯಶಸ್ಸು ಪಡೆಯುತ್ತಿವೆ.