Thangalaan OTT: ಒಟಿಟಿಗೆ ಇನ್ನೂ ಬಾರದ ತಂಗಲಾನ್‌ ಸಿನಿಮಾ; ಯಾವಾಗ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌? ಈ ವಾರ ಅಥವಾ ಮುಂದಿನ ವಾರ?-ott news thangalaan movie ott new release date when and where to watch chiyaan vikram pa ranjith movie online pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Thangalaan Ott: ಒಟಿಟಿಗೆ ಇನ್ನೂ ಬಾರದ ತಂಗಲಾನ್‌ ಸಿನಿಮಾ; ಯಾವಾಗ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌? ಈ ವಾರ ಅಥವಾ ಮುಂದಿನ ವಾರ?

Thangalaan OTT: ಒಟಿಟಿಗೆ ಇನ್ನೂ ಬಾರದ ತಂಗಲಾನ್‌ ಸಿನಿಮಾ; ಯಾವಾಗ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌? ಈ ವಾರ ಅಥವಾ ಮುಂದಿನ ವಾರ?

Thangalaan OTT: ಕಳೆದ ವಾರ ಆನ್‌ಲೈನ್‌ನಲ್ಲಿ ಬಿಡುಗಡೆಯಾಗುತ್ತದೆ ಎಂದುಕೊಂಡಿದ್ದ ತಂಗಲಾನ್‌ ಸಿನಿಮಾ ಇನ್ನೂ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗಿಲ್ಲ. ಪಾ ರಂಜಿತ್‌ ನಿರ್ದೇಶನದ, ಚಿಯಾನ್‌ ಚಿಕ್ರಮ್‌ ಅಭಿನಯದ ತಂಗಲಾನ್‌ ಒಟಿಟಿ ಬಿಡುಗಡೆ ಅಪ್‌ಡೇಟ್‌ ಇಲ್ಲಿದೆ.

Thangalaan OTT:  ತಂಗಲಾನ್‌ ಸಿನಿಮಾವು ಒಟಿಟಿಗೆ ಅಕ್ಟೋಬರ್‌ ಮೊದಲ ವಾರ ಅಥವಾ ಎರಡನೇ ವಾರ ಆಗಮಿಸುವ ನಿರೀಕ್ಷೆಯಿದೆ.
Thangalaan OTT: ತಂಗಲಾನ್‌ ಸಿನಿಮಾವು ಒಟಿಟಿಗೆ ಅಕ್ಟೋಬರ್‌ ಮೊದಲ ವಾರ ಅಥವಾ ಎರಡನೇ ವಾರ ಆಗಮಿಸುವ ನಿರೀಕ್ಷೆಯಿದೆ.

Thangalaan OTT Release New date: ಕಳೆದ ವಾರ ತಂಗಲಾನ್‌ ಸಿನಿಮಾ ನೋಡಬೇಕೆಂದು ಒಟಿಟಿ ಪ್ರಿಯರು ನೆಟ್‌ಫ್ಲಿಕ್ಸ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಹುಡುಕಾಡಿದ್ದೇ ಹುಡುಕಾಡಿದ್ದು. ಆದರೆ, ಎಷ್ಟೇ ಹುಡುಕಿದರೂ ತಂಗಲಾನ್‌ ಸಿನಿಮಾದ ಸುಳಿವು ಇರಲಿಲ್ಲ. ಕಳೆದ ವಾರ ಬರಬಹುದೆಂದುಕೊಂಡಿದ್ದ ತಂಗಲಾನ್‌ ಸಿನಿಮಾ ಇನ್ನೂ ಒಟಿಟಿಗೆ ಬಂದಿಲ್ಲ. ಭಾರೀ ನಿರೀಕ್ಷೆಗಳ ನಡುವೆ ಬಂದ ತಂಗಲಾನ್ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಕಲೆಕ್ಷನ್ ಮಾಡಿತ್ತು. ಫಸ್ಟ್ ಲುಕ್‌ನಿಂದ ಟ್ರೇಲರ್‌ವರೆಗೂ ಈ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚುತ್ತಲೇ ಇತ್ತು. ಆದರೆ, ಬಿಡುಗಡೆಯಾದ ಬಳಿಕ ಒಳ್ಳೆಯ ವಿಮರ್ಶೆ ಪಡೆದರೂ ಕಲೆಕ್ಷನ್‌ನಲ್ಲಿ ದೊಡ್ಡಮಟ್ಟದ ದಾಖಲೆಯಾಗಲಿಲ್ಲ. ಚಿಯಾನ್ ವಿಕ್ರಮ್ ಅಭಿನಯದ ತಂಗಲಾನ್ ಚಿತ್ರ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಪಿರೆಯಿಡಿಕಲ್‌ ಆಕ್ಷನ್ ಸಿನಿಮಾವನ್ನು ಪಾ ರಂಜಿತ್ ನಿರ್ದೇಶಿಸಿದ್ದಾರೆ.

ಸಾಕಷ್ಟು ಜನರು ಈ ಚಿತ್ರವನ್ನು ಈಗಾಗಲೇ ಚಿತ್ರಮಂದಿರಗಳಲ್ಲಿ ನೋಡಿದ್ದಾರೆ. ಚಿತ್ರ ಬಿಡುಗಡೆಯಾದ ಬಳಿಕ ಸಿನಿಮಾದ ಕುರಿತು ದೊಡ್ಡಮಟ್ಟದ ಹೈಪ್‌ ಉಂಟಾಗದೆ ಇದ್ದ ಕಾರಣ ಸಾಕಷ್ಟು ಜನರು ಒಟಿಟಿಯಲ್ಲಿ ಬಂದ ಮೇಲೆ ನೋಡಿದರೆ ಸಾಕು ಅಂದುಕೊಂಡ್ರು. ಒಟಿಟಿಯಲ್ಲಿ ತಂಗಲಾನ್ ಚಿತ್ರದ ಬಿಡುಗಡೆಗಾಗಿ ಅನೇಕ ವೀಕ್ಷಕರು ಕಾಯುತ್ತಿದ್ದಾರೆ. ಈ ಚಿತ್ರವು ಸೆಪ್ಟೆಂಬರ್‌ನಲ್ಲಿಯೇ ಒಟಿಟಿಗೆ ಬರಲಿದೆ ಎಂಬ ಊಹಾಪೋಹಗಳು ಮೊದಲು ಇದ್ದವು. ಆದರೆ ಸೆಪ್ಟೆಂಬರ್‌ನಲ್ಲಿ ಇದು ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿಲ್ಲ. ಈ ಚಿತ್ರದ ಒಟಿಟಿ ಬಿಡುಗಡೆ ವಿಳಂಬವಾಗಿದೆ. ಚಿತ್ರಮಂದಿರಗಳಲ್ಲಿ ರನ್ನಿಂಗ್‌ ನಿಂತಿದ್ದರೂ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿಲ್ಲ. ತಂಗಲಾನ್‌ ಒಟಿಟಿ ಬಿಡುಗಡೆ ಕುರಿತು ಇದೀಗ ಕೊಂಚ ಮಾಹಿತಿ ಲಭ್ಯವಾಗಿದೆ.

ಒಟಿಟಿಯಲ್ಲಿ ತಂಗಲಾನ್‌ ಸ್ಟ್ರೀಮಿಂಗ್‌ ಯಾವಾಗ?

ತಂಗಲಾನ್ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಒಟಿಟಿ ತನ್ನದಾಗಿಸಿಕೊಂಡಿದೆ. ಈ ಸಿನಿಮಾದ ಕುರಿತು ಜನರ ಕ್ರೇಜ್‌ ನೋಡಿದ ನೆಟ್‌ಫ್ಲಿಕ್ಸ್‌ ಸಿನಿಮಾ ಬಿಡುಗಡೆಗೆ ಮುನ್ನವೇ ಭಾರಿ ಬೆಲೆಗೆ ಸ್ಟ್ರೀಮಿಂಗ್‌ ಹಕ್ಕುಗಳನ್ನು ತನ್ನದಾಗಿಸಿಕೊಂಡಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ಇಲ್ಲದಿದ್ದರೆ ಎರಡನೇ ವಾರದಲ್ಲಿ ತಂಗಲಾನ್‌ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ವದಂತಿ ಹರಿದಾಡುತ್ತಿದೆ. ಕೆಲವರ ಪ್ರಕಾರ ಅಕ್ಟೋಬರ್ ಎರಡನೇ ವಾರದಲ್ಲಿ ಸ್ಟ್ರೀಮಿಂಗ್ ಆಗಲಿದೆಯಂತೆ. ಸ್ಟ್ರೀಮಿಂಗ್ ದಿನಾಂಕದ ಕುರಿತು ನೆಟ್‌ಫ್ಲಿಕ್ಸ್ ಒಟಿಟಿಯಿಂದ ಅಧಿಕೃತ ಪ್ರಕಟಣೆ ಇನ್ನೂ ಬರಬೇಕಿದೆ.

ನೆಟ್‌ಫ್ಲಿಕ್ಸ್‌ ಅಕ್ಟೋಬರ್‌ ತಿಂಗಳಲ್ಲಿ ಈ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದು ಪಕ್ಕಾ ಎನ್ನಲಾಗಿದೆ. ಯಾವುದಕ್ಕೂ ನೆಟ್‌ಫ್ಲಿಕ್ಸ್‌ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ನಿರ್ದೇಶಕ ಪಾ ರಂಜಿತ್ ಅವರು ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಬ್ರಿಟಿಷ್ ಆಳ್ವಿಕೆಯ ಸಂದರ್ಭದ ಕಥೆಯನ್ನು ಬಳಸಿಕೊಂಡಿದ್ದಾರೆ. ಆ ಸಮಯದ ತಂಗಲಾನ್‌ ಎಂಬ ವೀರನ ಕಥೆಯನ್ನು ಈ ಸಿನಿಮಾ ಹೇಳುತ್ತದೆ. 1850ರ ದಶಕದ ಈ ಕಥೆಯು ಕರ್ನಾಟಕದ ಕೋಲಾರ ಚಿನ್ನದ ಗಣಿಯ ಮೂಲ ಕಥೆಯನ್ನು ಹೊಂದಿದೆ. ಈ ಸಿನಿಮಾ ಐಡಿಯಾಲಜಿ ಹೊಂದಿದೆ.

ತಂಗಲಾನ್‌ ಸಿನಿಮಾದಲ್ಲಿ ವಿಕ್ರಮ್‌ ಜತೆಗೆ ಮಾಳವಿಕಾ ಮೋಹನನ್, ಪಶುಪತಿ, ಪಾರ್ವತಿ ತಿರವೋತು, ಡೇನಿಯಲ್ ಕಾಲ್ಟಗಿರೋನ್, ಆನಂದಸಾಮಿ ಮತ್ತು ವೆಟ್ಟೈ ಮುತ್ತುಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಕಿಶೋರ್ ಕುಮಾರ್ ಅವರ ಸಿನಿಮಾಟೋಗ್ರಫಿ ಕುರಿತು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

mysore-dasara_Entry_Point