Thangalaan OTT: 8 ವಾರದಲ್ಲಿ ಒಟಿಟಿಗೆ ಬರಲಿದೆ ತಂಗಲಾನ್‌, ಚಿಯಾನ್‌ ವಿಕ್ರಮ್‌ ಸಿನಿಮಾ ಯಾವ ಒಟಿಟಿಯಲ್ಲಿ ಯಾವಾಗ ಸ್ಟ್ರೀಮಿಂಗ್‌?-ott news thangalaan ott release date when and where to watch chiyaan vikram pa ranjith thangalaan movie pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Thangalaan Ott: 8 ವಾರದಲ್ಲಿ ಒಟಿಟಿಗೆ ಬರಲಿದೆ ತಂಗಲಾನ್‌, ಚಿಯಾನ್‌ ವಿಕ್ರಮ್‌ ಸಿನಿಮಾ ಯಾವ ಒಟಿಟಿಯಲ್ಲಿ ಯಾವಾಗ ಸ್ಟ್ರೀಮಿಂಗ್‌?

Thangalaan OTT: 8 ವಾರದಲ್ಲಿ ಒಟಿಟಿಗೆ ಬರಲಿದೆ ತಂಗಲಾನ್‌, ಚಿಯಾನ್‌ ವಿಕ್ರಮ್‌ ಸಿನಿಮಾ ಯಾವ ಒಟಿಟಿಯಲ್ಲಿ ಯಾವಾಗ ಸ್ಟ್ರೀಮಿಂಗ್‌?

Thangalaan OTT Release Date: ನಿನ್ನೆಯಷ್ಟೇ ಚಿತ್ರಮಂದಿರಕ್ಕೆ ಬಂದಿರುವ ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ ಸಿನಿಮಾ ಒಟಿಟಿಗೆ ಎರಡು ತಿಂಗಳ ಬಳಿಕ ಆಗಮಿಸಲಿದೆ. ಕೆಜಿಎಫ್‌ನ ಬ್ರಿಟಿಷ್‌ ಕಾಲದ ಕಥೆ ಹೊಂದಿರುವ ತಂಗಲಾನ್‌ ಸಿನಿಮಾ ಯಾವ ಒಟಿಟಿಯಲ್ಲಿ, ಯಾವಾಗ ಸ್ಟ್ರೀಮಿಂಗ್‌ ಆಗಲಿದೆ ತಿಳಿಯೋಣ.

ತಂಗಲಾನ್‌ ಒಟಿಟಿ ಬಿಡುಗಡೆ ದಿನಾಂಕ
ತಂಗಲಾನ್‌ ಒಟಿಟಿ ಬಿಡುಗಡೆ ದಿನಾಂಕ

Thangalaan OTT Release Date: ತಂಗಲಾನ್‌ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿದರೆ ಅದ್ಭುತ ಅನುಭವ ದೊರಕಲಿದೆ ಎನ್ನುವುದು ನಿಜ. ವೈಯಕ್ತಿಕ ಅಥವಾ ಇತರೆ ಕಾರಣಗಳಿಂದ ಸಾಕಷ್ಟು ಜನರಿಗೆ ಚಿತ್ರಮಂದಿರಗಳಿಗೆ ಆಗಮಿಸಲು ಸಾಧ್ಯವಾಗುವುದಿಲ್ಲ. ಈಗ ಒಟಿಟಿ ಸಿನಿಮಾಗಳಿಗೆ ಬೇಡಿಕೆ ಹೆಚ್ಚು. ಇಂತಹ ಸಮಯದಲ್ಲಿ ತಂಗಲಾನ್‌ ಸಿನಿಮಾ ಯಾವಾಗ ಒಟಿಟಿಗೆ ಆಗಮಿಸಲಿದೆ ಎಂದು ಕಾಯುತ್ತಿರುವವರಿಗೆ ಸಿಹಿಸುದ್ದಿಯಿದೆ. ಚಿಯಾನ್‌ ವಿಕ್ರಮ್‌, ಮಾಳವಿಕಾ ಮೋಹನನ್‌ ನಟನೆಯ ತಂಗಲಾನ್‌ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ನೆಟ್‌ಫ್ಲಿಕ್ಸ್ ವಿಕ್ರಮ್ ಚಿತ್ರದ ಡಿಜಿಟಲ್ ಹಕ್ಕುಗಳನ್ನು 35 ಕೋಟಿಗೆ ಖರೀದಿಸಿದೆ ಎಂದು ವರದಿಯಾಗಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ತಂಗಲಾನ್ ಒಟಿಟಿಗೆ ಬರಲಿದೆ.

ಈ ಪಿರಿಯಾಡಿಕಲ್ ಆಕ್ಷನ್ ಕಥೆಯ ಸಿನಿಮಾವನ್ನು ಪಾ ರಂಜಿತ್ ನಿರ್ದೇಶಿಸಿದ್ದಾರೆ. ನಾಯಕಿಯರಾಗಿ ಪಾರ್ವತಿ ತಿರುವೋತ್ತು ಮತ್ತು ಮಾಳವಿಕಾ ಮೋಹನನ್ ನಟಿಸಿದ್ದಾರೆ. ಗುರುವಾರ ಸ್ವಾತಂತ್ರ್ಯೋತ್ಸವದ ಉಡುಗೊರೆಯಾಗಿ ತಮಿಳು ಹಾಗೂ ತೆಲುಗಿನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಕೆಜಿಎಫ್‌ ಇರುವ ಕರ್ನಾಟಕದ ಕಥೆ ಹೊಂದಿದ್ದರೂ ಕನ್ನಡದಲ್ಲಿ ಈ ಸಿನಿಮಾ ರಿಲೀಸ್‌ ಆಗಿಲ್ಲ. ತಂಗಲಾನ್‌ ಸಿನಿಮಾದಲ್ಲಿ ವಿಕ್ರಮ್ ಅವರ ನಟನೆ ಅದ್ಭುತ ಎಂದು ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಮರ್ಷಿಯಲ್ ಎಮೋಷನ್ಸ್‌ನಿಂದ ದೂರವಾಗಿ ಗ್ಲಾಮರ್ ಲುಕ್‌ನಲ್ಲಿ ವಿಕ್ರಮ್ ಕಾಣಿಸಿಕೊಂಡಿರುವ ರೀತಿ ಅದ್ಬುತ ಎನ್ನಲಾಗುತ್ತಿದೆ. ತಂಗಲಾನ್‌ ಚಿತ್ರದಲ್ಲಿ ನಟಿಸಿರುವ ವಿಕ್ರಮ್ ಹಾಗೂ ಪಾರ್ವತಿಗೆ ರಾಷ್ಟ್ರಪ್ರಶಸ್ತಿ ಖಂಡಿತಾ ಬರುತ್ತೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ದೃಶ್ಯ, ಸಂಗೀತ, ಸಾಹಸ ಅಂಶಗಳು ಚೆನ್ನಾಗಿವೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಮೊದಲ ದಿನ ತಂಗಲಾನ್‌ ಚಿತ್ರಕ್ಕೆ ಉತ್ತಮ ಓಪನಿಂಗ್‌ ದೊರಕಿದೆ. ಇದು ವಿಕ್ರಮ್ ಅವರ ವೃತ್ತಿಜೀವನದಲ್ಲಿ ಮೊದಲ ದಿನದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ತಂಗಲಾನ್‌ ಸ್ಟ್ರೀಮಿಂಗ್‌

ತಂಗಲಾನ್‌ ಸಿನಿಮಾದ ಒಟಿಟಿ ಸ್ಟ್ರೀಮಿಂಗ್‌ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಪಡೆದುಕೊಂಡಿದೆ. ತೆಲುಗು ಮತ್ತು ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಇದು ರಿಲೀಸ್‌ ಆಗಲಿದೆ. ಒಟಿಟಿಯಲ್ಲಿ ಕನ್ನಡ ಭಾಷೆಯಲ್ಲೂ ಲಭ್ಯವಿರಲಿದೆ. ನೆಟ್‌ಫ್ಲಿಕ್ಸ್‌ ಐದು ಭಾಷೆಗಳಲ್ಲಿ ತಂಗಲಾನ್‌ ಒಟಿಟಿ ಹಕ್ಕುಗಳನ್ನು 35 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ವರದಿಗಳು ತಿಳಿಸಿವೆ. ಎಂಟು ವಾರಗಳ ನಂತರ ಈ ಸಿನಿಮಾ ಒಟಿಟಿಗೆ ಆಗಮಿಸುವ ಸೂಚನೆಯಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಒಟಿಟಿಯಲ್ಲಿ ತಂಗಲಾನ್‌ ಬಿಡುಗಡೆ ಮಾಡಲು ನಿರ್ಮಾಪಕರು ನೆಟ್‌ಫ್ಲಿಕ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ.

ತಂಗಲಾನ್‌ ಕದನದ ಕಥೆ

ಬುಡಕಟ್ಟು ಜನಾಂಗವು ಸ್ವಾತಂತ್ರ್ಯ ಹೋರಾಟಕ್ಕೆ ನಿಧಿ ಹುಡುಕಾಟ ನಡೆಸುವುದು, ಕೆಜಿಎಫ್‌ನ ಚಿನ್ನದ ಶೋಧ ಇತ್ಯಾದಿ ಅಂಶಗಳನ್ನು ಸೇರಿಸಿ ಸಾಹಸಮಯ ಥ್ರಿಲ್ಲರ್ ಸಿನಿಮಾ ತಂಗಲಾನ್‌ ಅನ್ನು ಪಾ ರಂಜಿತ್ ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕಥೆಯು 1850 ಇಸವಿಯದ್ದು. ವೇಪ್ಪೂರಿನ ಬುಡಕಟ್ಟು ನಾಯಕ ತಂಗಲಾನ್‌ (ವಿಕ್ರಮ್‌) ತನ್ನ ಹೆಂಡತಿ ಗಂಗಮ್ಮ (ಪಾರ್ವತಿ) ಮತ್ತು ಐದು ಮಕ್ಕಳೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಾನೆ.

ಊರಿನ ಜಮೀನ್ದಾರನಿಗೆ ತಂಗಲಾನ್‌ ಮೇಲೆ ಕೋಪ. ತೆರಿಗೆ ಪಾವತಿಸದ ನೆಪದಲ್ಲಿ ತಂಗಲಾನ್‌ ಭೂಮಿಯನ್ನು ವಶಪಡಿಸಿಕೊಳ್ಳುತ್ತಾನೆ. ಜಮೀನ್ದಾರರು ಆಕ್ರಮಿಸಿಕೊಂಡಿದ್ದ ಭೂಮಿಯನ್ನು ಮರಳಿ ಪಡೆಯಲು ಬ್ರಿಟಿಷರೊಂದಿಗೆ ಕಾಡಿನಲ್ಲಿ ಚಿನ್ನದ ನಿಧಿಯನ್ನು ಹುಡುಕಲು ತಂಗಲಾನ್‌ ಹೋಗುತ್ತಾನೆ.

ಆ ನಿಧಿಯ ರಕ್ಷಣೆಯನ್ನು ಆರತಿ ಮಾಡುತ್ತಾಳೆ. ನಿಜವಾದ ಆರತಿ ಯಾರು? ತಂಗಲಾನ್ ಮತ್ತು ಅವನ ತಂಡವು ಚಿನ್ನವನ್ನು ಹುಡುಕಲು ಕಾಡಿಗೆ ಹೋದಾಗ ಯಾವ ಸವಾಲುಗಳನ್ನು ಎದುರಿಸಿದರು? ಬ್ರಿಟಿಷರ ಹಿಂದೆ ಹೋದ ತಂಗಲಾನ್‌ ಕೊನೆಗೆ ಅವರ ವಿರುದ್ಧ ಏಕೆ ತಿರುಗಿಬಿದ್ದ ಎಂಬುದೇ ಈ ಸಿನಿಮಾದ ಕಥೆ.

ಪಾ ರಂಜಿತ್ ಮೇಲಿನ ಟೀಕೆಗಳು

ತಂಗಲಾನ್‌ ಸಿನಿಮಾ ಮತ್ತು ವಿಕ್ರಮ್ ಅಭಿನಯದ ಪರಿಕಲ್ಪನೆ ಚೆನ್ನಾಗಿದೆ. ಆದರೂ ಈ ಸಿನಿಮಾವನ್ನು ಕೆಲವರು ಟೀಕಿಸಿದ್ದಾರೆ. ಕಥೆ ತುಂಬಾ ನಿಧಾನವಾಗಿ ಸಾಗಿರುವುದು ಮಾತ್ರವಲ್ಲದೆ, ದ್ವಿತೀಯಾರ್ಧದಲ್ಲಿ ನಿರ್ದೇಶಕರು ಕಥೆಯನ್ನು ಸ್ಪಷ್ಟವಾಗಿ ಹೇಳದೆ ಪ್ರೇಕ್ಷಕರನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ ಎನ್ನಲಾಗಿದೆ. ತಂಗಳನ್ ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಪಾ ರಂಜಿತ್ ಅವರು ಕೆ.ಇ.ಜ್ಞಾನವೇಲ್ ರಾಜಾ ಅವರೊಂದಿಗೆ ತಂಗಳನ್ ಚಿತ್ರವನ್ನು ನಿರ್ಮಿಸಿದ್ದಾರೆ. ಸುಮಾರು 150 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಲಾಗಿದೆ.