ಕನ್ನಡ ಸುದ್ದಿ  /  ಮನರಂಜನೆ  /  Turbo Ott Release: ಮಮ್ಮುಟ್ಟಿ ನಟನೆಯ ಟರ್ಬೊ ಶೀಘ್ರದಲ್ಲಿ ಒಟಿಟಿಗೆ; ಮನೆಯಲ್ಲೇ ನೋಡಿ ರಾಜ್‌ ಬಿ ಶೆಟ್ಟಿ ಖಳನಾಯಕನಾಗಿ ಅಬ್ಬರಿಸಿದ ಸಿನಿಮಾ

Turbo OTT release: ಮಮ್ಮುಟ್ಟಿ ನಟನೆಯ ಟರ್ಬೊ ಶೀಘ್ರದಲ್ಲಿ ಒಟಿಟಿಗೆ; ಮನೆಯಲ್ಲೇ ನೋಡಿ ರಾಜ್‌ ಬಿ ಶೆಟ್ಟಿ ಖಳನಾಯಕನಾಗಿ ಅಬ್ಬರಿಸಿದ ಸಿನಿಮಾ

Turbo OTT release Date: ಮಮ್ಮುಟ್ಟಿ ಟರ್ಬೊ ಜೋಸ್‌ ಆಗಿ ನಟಿಸಿರುವ, ಕನ್ನಡ ನಟ ರಾಜ್‌ ಬಿ ಶೆಟ್ಟಿ ವಿಲನ್‌ ಪಾತ್ರದಲ್ಲಿ ಅಬ್ಬರಿಸಿದ ಟರ್ಬೊ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಸಿನಿಮಾ ಯಾವಾಗ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ ಎಂಬ ವಿವರ ಇಲ್ಲಿದೆ.

ಟರ್ಬೊ ಟ್ರೇಲರ್‌ ಬಿಡುಗಡೆ: ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಮುಂದಿನ ವಾರ ರಿಲೀಸ್‌
ಟರ್ಬೊ ಟ್ರೇಲರ್‌ ಬಿಡುಗಡೆ: ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಮುಂದಿನ ವಾರ ರಿಲೀಸ್‌

ಬೆಂಗಳೂರು: ಮಮ್ಮುಟ್ಟಿ ನಟನೆಯ ಮಲಯಾಳಂ ಸಿನಿಮಾ "ಟರ್ಬೊ" ಈಗಾಗಲೇ ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಗಳಿಕೆ ಮಾಡಿದೆ. ಇತ್ತೀಚೆಗೆ ಥಿಯೇಟರ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಇದೀಗ ಒಟಿಟಿಗೆ ಬರಲು ಸಜ್ಜಾಗಿದೆ. ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದೆ ಇರುವವರು ಮನೆಯಲ್ಲಿ ನೋಡಬಹುದಾಗಿದೆ.

ಟರ್ಬೊ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ

ಮಮ್ಮುಟ್ಟಿಯ ಈ ಸಾಹಸ ಮತ್ತು ಮನರಂಜನಾ ಸಿನಿಮಾ ಜನಪ್ರಿಯ ಡಿಜಿಟಲ್‌ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಒಟಿಟಿ ಪ್ಲೇ ವರದಿ ಮಾಡಿದೆ. ವರದಿಗಳ ಪ್ರಕಾರ ಟರ್ಬೊ ಸಿನಿಮಾದ ಸ್ಟ್ರೀಮಿಂಗ್‌ ಹಕ್ಕುಗಳನ್ನು ಸೋನಿ ಲಿವ್‌ ಪಡೆದಿದೆಯಂತೆ. ಈ ಸಿನಿಮಾ ಜುಲೈ 2022ರ ಮೊದಲ ವಾರದಲ್ಲಿ ಒಟಿಟಿಗೆ ಆಗಮಿಸಲಿದೆ ಎನ್ನಲಾಗಿದೆ. ಆದರೆ, ಈ ಕುರಿತು ಸೋನಿ ಲಿವ್‌ ಅಧಿಕೃತವಾಗಿ ಪ್ರಕಟಿಸಿಲ್ಲ.

ಟರ್ಬೊ ಸಿನಿಮಾವು ಟರ್ಬೊ ಜೋಸ್‌ ಎಂದು ಕರೆಯಲ್ಪಡುವ ಅರುವಿಪುರುತು ಜೋಸ್‌ನ ಸಾಹಸ ಕಥೆಯನ್ನು ಹೊಂದಿದೆ. ಜೋಸ್‌ನ ಪಾತ್ರದಲ್ಲಿ ಮಮ್ಮುಟ್ಟಿ ಮಿಂಚಿದ್ದಾರೆ. ತನ್ನ ಸ್ನೇಹಿತ ಜೆರ್ರಿ ಮತ್ತು ಇಂದುಲೇಖಾ ಎಂಬ ಮಹಿಳೆಯ ಜತೆ ಚೆನ್ನೈಗೆ ಜೋಸ್‌ ಹೋಗುತ್ತಾರೆ. ಚೆನ್ನೈಗೆ ಆಗಮಿಸುವ ಸಂದರ್ಭದಲ್ಲಿ ವಿಲನ್‌ (ರಾಜ್‌ ಬಿ ಶೆಟ್ಟಿ) ಕಡೆಯಿಂದ ತೊಂದರೆಯಾಗುತ್ತದೆ. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಗಳಿಕೆ ಮಾಡಿತ್ತು. ಹೊಡೆದಾಟದ ಸೀನ್‌ಗಳು ಮಮ್ಮುಟ್ಟಿಯ ಅಭಿಮಾನಿಗಳನ್ನು ರಂಜಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಇದೇ ಸಮಯದಲ್ಲಿ ಕನ್ನಡದ ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್‌ ಬಿ ಶೆಟ್ಟಿಯ ವಿಲನ್‌ ರೋಲ್‌ ಕೂಡ ಫೇಮಸ್‌ ಆಗಿತ್ತು. ಈಗಾಗಲೇ ಟೋಬಿ, ಗರುಡ ಗಮನ ವೃಷಭ ವಾಹನದಂತಹ ಚಿತ್ರಗಳಿಂದ ರಾಜ್‌ ಬಿ ಶೆಟ್ಟಿ ಪ್ಯಾನ್‌ ಇಂಡಿಯಾ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಕನ್ನಡ ನಟ ರಾಜ್‌ ಬಿ ಶೆಟ್ಟಿ ಈಗಾಗಲೇ ತನ್ನ ವಿಶಿಷ್ಟ ಪ್ರತಿಭೆ ಮೂಲಕ ಎಲ್ಲರ ಸೆಳೆದಿದ್ದಾರೆ. ಇವರು ನಿರ್ದೇಶಿಸಿ ನಟಿಸಿದ ಒಂದು ಮೊಟ್ಟೆಯ ಕಥೆಯಂತೂ ಹಲವು ಭಾಷೆಗಳಲ್ಲಿ ಬೇರೆಬೇರೆ ರೂಪದಲ್ಲಿ ರಿಲೀಸ್‌ ಆಗಿತ್ತು. ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಇವರ ರಗಡ್‌ ಪಾತ್ರ ಸಾಕಷ್ಟು ಫೇಮಸ್‌ ಆಗಿತ್ತು. ಟೋಬಿ ಚಿತ್ರವು ಅಷ್ಟೇನೂ ಜನಪ್ರಿಯತೆ ಪಡೆಯದೆ ಇದ್ದರೂ ಇವರ ಲುಕ್‌ ಮತ್ತು ಮೌನ ಪಾತ್ರ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಮಿಥುನ್ ಮ್ಯಾನುವಲ್ ಥಾಮಸ್ ಅವರು ಟರ್ಬೊ ಸಿನಿಮಾದ ಕಥೆ ಬರೆದಿದ್ದಾರೆ. ಮಮ್ಮುಟ್ಟಿಯವರ ಒಡೆತನದ 'ಮಮ್ಮುಟ್ಟಿ ಕಂಪನಿ' ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಇನ್ನಿತರರ ದೊಡ್ಡ ತಾರಾಗಣವೇ ನಟಿಸಿದೆ. ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ' ಲೈಟರ್ ಬುದ್ಧ ಫಿಲಂಸ್' ಹಂಚಿಕೆ ಮಾಡಿತ್ತು. ಮೇ 23ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿದ್ದ ಟರ್ಬೊ ಸಿನಿಮಾ ಇದೀಗ ಒಟಿಟಿಯತ್ತ ಮುಖ ಮಾಡಿದೆ.

ಹೇಗಿದೆ ಟರ್ಬೊ ಸಿನಿಮಾ? ವಿಮರ್ಶೆ ಓದಿ

ಮೊದಲಾರ್ಧ ಉತ್ತಮವಾಗಿದೆ. ಈ ಸಿನಿಮಾ ಶೋನ ಪ್ರಮುಖ ಆತ್ಮ ರಾಜ್‌ ಬಿ ಶೆಟ್ಟಿ. ಎಂತಹ ನಟನೆ, ಇವರ ಪರಿಚಯ ಸೀನ್‌ಗೆ ಇಡೀ ಥಿಯೇಟರ್‌ ರೋಮಾಂಚಗೊಂಡಿದೆ. ಮಮ್ಮುಟ್ಟಿಯ ಮೊದಲ ಇಂಟ್ರೋ ಕೂಡ ಉತ್ತಮವಾಗಿದೆ. ಕಾಮಿಡಿ, ಸ್ಟೈಲಿಶ್‌ ಆಕ್ಷನ್‌ ಗಮನ ಸೆಳೆಯುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಅತ್ಯುತ್ತಮ ಆಕ್ಷನ್‌ ಸಿನಿಮಾ. ಅತ್ಯುತ್ತಮ ನಿರ್ದೇಶನ, ಸಂಗೀತ, ಸಿನಿಮಾಟ್ರೊಗ್ರಫಿ, ಅತ್ಯುತ್ತಮ ಸ್ಕ್ರೀನ್‌ಪ್ಲೇ. ಹಾಸ್ಯವೂ ಇಷ್ಟವಾಗುತ್ತದೆ. ಮಮ್ಮುಟ್ಟಿಯವರ ಶಕ್ತಿ, ಸಾಹಸ ಅತ್ಯುತ್ತಮ. ರಾಜ್‌ ಬಿ ಶೆಟ್ಟಿ ವಿಲನ್‌ ಆಗಿ ಬೆರಗುಗೊಳಿಸುತ್ತಾರೆ. ಈ ಸಿನಿಮಾದ ಪೂರ್ತಿ ವಿಮರ್ಶೆ ಇಲ್ಲಿದೆ ಓದಿ.