ರಜನಿಕಾಂತ್ ನಟನೆಯ ಈ ಚಿತ್ರಕ್ಕೆ ಡಿಮಾಂಡ್ ಕಮ್ಮಿ ಆಯ್ತಾ? ಲಾಲ್ ಸಲಾಂ ಸೇರಿ ಇನ್ನೂ ಹಲವು ಚಿತ್ರಗಳಿಗೆ ಸಿಗದ ಒಟಿಟಿ ಬಿಡುಗಡೆ ಭಾಗ್ಯ
ತೆಲುಗು ಮತ್ತು ತಮಿಳಿನಲ್ಲಿ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ ಕೆಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ನಾಲ್ಕೈದು ತಿಂಗಳಾದರೂ ಒಟಿಟಿಗೆ ಆಗಮಿಸಿಲ್ಲ. ಈ ಪಟ್ಟಿಯಲ್ಲಿ ಸ್ಟಾರ್ ಹೀರೋಗಳು ನಟಿಸಿದ ಸಿನಿಮಾಗಳ ಜತೆಗೆ ಥಿಯೇಟರ್‌ನಲ್ಲಿ ಬ್ಲಾಕ್‌ಬಸ್ಟರ್ ಆದ ಚಿತ್ರಗಳೂ ಇವೆ. ಹೀಗಿದೆ ನೋಡಿ ಆ ಲಿಸ್ಟ್.

OTT News: ಚಿತ್ರಮಂದಿರಗಳಲ್ಲಿ ತೆರೆಕಂಡ ಸಿನಿಮಾಗಳು ಅದ್ಯಾವಾಗ ಒಟಿಟಿಗೆ ಆಗಮಿಸುತ್ತವೋ ಎಂದು ಕಾಯುವ ದೊಡ್ಡ ವರ್ಗವೇ ಇದೆ. ಅದರಲ್ಲೂ ಸ್ಟಾರ್ ಹೀರೋಗಳ ಸಿನಿಮಾಗಳಿಗೆ ಥಿಯೇಟರ್‌ಗಿಂತ ದೊಡ್ಡ ವೀಕ್ಷಕ ಬಳಗ ಒಟಿಟಿಯಲ್ಲಿದೆ. ಅದೇ ರೀತಿ ಹಾಗಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಬಹುಪಾಲು ಸಿನಿಮಾಗಳ ಪೈಕಿ ಎಲ್ಲವೂ ಒಂದು ತಿಂಗಳೊಳಗೆ ಒಟಿಟಿಗೆ ಆಗಮಿಸುತ್ತವೆ. ಆದರೆ, ತೆಲುಗು ಮತ್ತು ತಮಿಳಿನಲ್ಲಿ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ ಕೆಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ನಾಲ್ಕೈದು ತಿಂಗಳಾದರೂ ಒಟಿಟಿಗೆ ಆಗಮಿಸಿಲ್ಲ. ಈ ಪಟ್ಟಿಯಲ್ಲಿ ಸ್ಟಾರ್ ಹೀರೋಗಳು ನಟಿಸಿದ ಸಿನಿಮಾಗಳ ಜತೆಗೆ ಥಿಯೇಟರ್‌ನಲ್ಲಿ ಬ್ಲಾಕ್‌ಬಸ್ಟರ್ ಆದ ಚಿತ್ರಗಳೂ ಇವೆ. ಹೀಗಿದೆ ನೋಡಿ ಆ ಲಿಸ್ಟ್.
ರಜನಿಕಾಂತ್ ಲಾಲ್ ಸಲಾಂ
ರಜನಿಕಾಂತ್ ಅಭಿನಯದ ಲಾಲ್ ಸಲಾಂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ನಾಲ್ಕು ತಿಂಗಳ ಮೇಲಾಗಿದೆ. ಆದರೆ ಈ ಚಿತ್ರದ ಓಟಿಟಿ ಬಿಡುಗಡೆ ದಿನಾಂಕದ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ರಜನಿಕಾಂತ್ ಅತಿಥಿ ಪಾತ್ರದಲ್ಲಿ ಆಕ್ಷನ್ ಸ್ಪೋರ್ಟ್ಸ್ ಡ್ರಾಮಾ ಕಥಾವಸ್ತುವಿನೊಂದಿಗೆ ತೆರೆಕಂಡ ಈ ಸಿನಿಮಾದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್, ಲಾಲ್ ಸಲಾಂ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಸುಮಾರು 90 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವ ಗಳಿಕೆ ಕಾಣಲಿಲ್ಲ. ಭಾರೀ ನಿರೀಕ್ಷೆಗಳ ನಡುವೆ ಫೆಬ್ರವರಿ 9ರಂದು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರವು ಪ್ಲಾಪ್ ಪಟಟ್ಟಿ ಪಡೆಯಿತು.
ಲಾಲ್ ಸಲಾಮ್ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಮತ್ತು ಸನ್ ನೆಕ್ಸ್ಟ್ ಪಡೆದುಕೊಂಡಿದೆ. ಈ ಎರಡು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಲಾಲ್‌ಸಲಾಮ್ ಚಿತ್ರದ ಒಟಿಟಿ ಬಿಡುಗಡೆಯ ಕುರಿತು ಈ ವರೆಗೂ ಯಾವುದೇ ಪ್ರಕಟಣೆ ಬಿಡುಗಡೆ ಮಾಡಿಲ್ಲ. ರಜಿನಿ ಸಿನಿಮಾ ಎಂದರೆ ವಿಶೇಷ ಕ್ರೇಜ್. ಚಿತ್ರಮಂದಿರಗಳಲ್ಲಿ ಅವರ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಹಬ್ಬದ ವಾತಾವರಣ. ಆದರೆ, ಲಾಲ್ ಸಲಾಮ್ ಸಿನಿಮಾ ವಿಚಾರದಲ್ಲಿ ಮಾತ್ರ ಹಾಗಾಗಲಿಲ್ಲ. ಸರಿಯಾಗಿ ಒಂದು ವಾರವೂ ಚಿತ್ರಮಂದಿರದಲ್ಲಿ ಈ ಸಿನಿಮಾ ಓಡಲಿಲ್ಲ. ರಜಿನಿ ಡಿಮಾಂಡ್ ಕಡಿಮೆ ಆಯ್ತಾ? ಈ ಕಾರಣಕ್ಕೂ ಒಟಿಟಿಗೆ ಈ ಸಿನಿಮಾ ಬಾರದಿರಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ರಜಾಕರ್
ತೆಲುಗು ಚಿತ್ರ ರಜಾಕರ್ ಮಾರ್ಚ್ 15ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ತೆಲಂಗಾಣ ಸಶಸ್ತ್ರ ಹೋರಾಟದ ಹಿನ್ನೆಲೆಯಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೋಲನ್ನೊಪ್ಪಿಕೊಂಡಿದೆ. ಆದರೆ ಇದುವರೆಗೂ ಈ ಚಿತ್ರ ಒಟಿಟಿಯಲ್ಲಿ ಬಂದಿಲ್ಲ. ಜೀ5 ಈ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ವರದಿಗಳಿವೆ. ಆದರೆ, ಅದ್ಯಾಕೂ ಈ ಸಿನಿಮಾ ಇನ್ನೂ ಒಟಿಟಿ ಅಂಗಳಕ್ಕೆ ಕಾಲಿರಿಸಿಲ್ಲ. ಈ ಚಿತ್ರದಲ್ಲಿ ವೇದಿಕಾ, ಅನಸೂಯಾ, ಇಂದ್ರಜಾ ಮತ್ತು ಬಾಬಿಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯಾತ ಸತ್ಯನಾರಾಯಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಏಜೆಂಟ್‌ಗೆ ಸಿಗದ ಒಟಿಟಿ ಬಿಡುಗಡೆ ಭಾಗ್ಯ
ಅಖಿಲ್ ಏಜೆಂಟ್ ಥಿಯೇಟರ್‌ಗಳಿಗೆ ಬಂದು ಒಂದು ವರ್ಷ ಕಳೆದಿದೆ, ಆದರೆ OTT ಪ್ರೇಕ್ಷಕರ ಮುಂದೆ ಬಂದಿಲ್ಲ. ಸೋನಿಲೈವ್ ತನ್ನ ಥಿಯೇಟ್ರಿಕಲ್ ಬಿಡುಗಡೆಗೂ ಮುನ್ನ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿತ್ತು. ಆದರೆ, ಅದ್ಯಾಕೋ ಈ ಸಿನಿಮಾ ಸಹ ಇನ್ನೂ ಸ್ಟ್ರೀಮಿಂಗ್ ಆಗಿಲ್ಲ. ಈ ವರೆಗೂ ಅಖಿಲ್ ಹೀರೋ ಆಗಿ ನಟಿಸಿದ ಎಲ್ಲ ಸಿನಿಮಾಗಳು ಪ್ಲಾಪ್ ಪಟ್ಟಿ ಸೇರಿವೆ. ಹೀಗಿರುವಾಗಲೇ ಏಜೆಂಟ್ ಸಿನಿಮಾ ಒಟಿಟಿ ಪ್ರಸಾರವೂ ಇನ್ನೂ ಘೋಷಣೆ ಆಗಿಲ್ಲ. ಈ ಮೂಲಕ ಸತತ ಸೋಲುಂಡ ಅಖಿಲ್‌ಗೆ ಮತ್ತೊಂದು ಹಿನ್ನೆಡೆ ಆಗಿದೆ.
ನಯನತಾರಾ ಕನೆಕ್ಟ್
ಸೌತ್‌ನ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕನೆಕ್ಟ್ ಸಿನಿಮಾಕ್ಕೂ ಒಟಿಟಿ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಎಕ್ಸಿಪಿರಿಮೆಂಟಲ್ ಹಾರ್ ಚಿತ್ರ 2022ರ ಡಿಸೆಂಬರ್‌ನಲ್ಲಿ ತೆರೆಕಂಡರೂ ಈ ವರೆಗೂ ಒಟಿಟಿ ಅಂಗಳ ಪ್ರವೇಶಿಸಿಲ್ಲ. ಚಿತ್ರಮಂದಿರಗಳಲ್ಲಿ ಹಿಟ್ ಪಟ್ಟ ಅಲಂಕರಿಸಿದ್ದ ಈ ಸಿನಿಮಾ, ಈ ವರೆಗೂ ಒಟಿಟಿಗೆ ಬಾರದೇ ಹಾಗೇ ಉಳಿದುಕೊಂಡಿದೆ. ಅಶ್ವಿನ್ ಸರವಣನ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ರೌಡಿ ಪಿಕ್ಚರ್ಸ್ ಈ ಸಿನಿಮಾ ನಿರ್ಮಾಣ ಮಾಡಿದೆ.
