ಕನ್ನಡ ಸುದ್ದಿ  /  Entertainment  /  Ott News Upcoming Ott Releases Of This Week Maharani Season 3 Anweshippin Kandethum Damsel Hanuman Lalsalam Pcp

OTT Releases This Week: ಹನುಮಾನ್‌, ಲಾಲ್‌ ಸಲಾಮ್‌, ಮೇರಿಕ್ರಿಸ್ಮಸ್‌ ಈ ವಾರ ಒಟಿಟಿಯಲ್ಲಿ ಸಿನಿಮಾ, ವೆಬ್‌ ಸರಣಿ ಹಬ್ಬ, ಇಲ್ಲಿದೆ ವಿವರ

Upcoming OTT Releases Of This Week: ಈ ವಾರ ಹಲವು ಹೊಸ ಸಿನಿಮಾ ವೆಬ್‌ ಸರಣಿಗಳು ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುತ್ತಿವೆ. ಮಹಾರಾಣಿ ಸೀಸನ್‌ 3̧ ಅನ್ವೆಶಿಪಿನ್ ಕಂಡೆತುಂ, ದಮ್ಸೆಲ್‌, ಹನುಮಾನ್‌, ಲಾಲ್‌ ಸಲಾಮ್‌, ಲವರ್‌, ಮೇರಿಕ್ರಿಸ್ಮಸ್‌, ಶೋಟೈಮ್‌, ಯಾತ್ರಾ 2, ಕ್ವೀನ್‌ ಆಫ್‌ ಟಿಯರ್ಸ್‌ ಸೇರಿದಂತೆ ಹಲವು ಸಿನಿಮಾ, ಸರಣಿಗಳು ರಿಲೀಸ್‌ ಆಗುತ್ತಿವೆ.

ಹನುಮಾನ್‌, ಲಾಲ್‌ ಸಲಾಮ್‌, ಮೇರಿಕ್ರಿಸ್ಮಸ್‌ ಈ ವಾರ ಒಟಿಟಿಯಲ್ಲಿ ಸಿನಿಮಾ, ವೆಬ್‌ ಸರಣಿ ಹಬ್ಬ
ಹನುಮಾನ್‌, ಲಾಲ್‌ ಸಲಾಮ್‌, ಮೇರಿಕ್ರಿಸ್ಮಸ್‌ ಈ ವಾರ ಒಟಿಟಿಯಲ್ಲಿ ಸಿನಿಮಾ, ವೆಬ್‌ ಸರಣಿ ಹಬ್ಬ

Upcoming OTT Releases Of This Week: ಈ ವಾರ ಹಲವು ಹೊಸ ಸಿನಿಮಾ ವೆಬ್‌ ಸರಣಿಗಳು ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುತ್ತಿವೆ. ಈ ಶಿವರಾತ್ರಿ ಹಬ್ಬದ ಸಮಯದಲ್ಲಿ, ಮಹಿಳಾ ದಿನದ ಸಮಯದಲ್ಲಿ ಒಟ್ಟಾರೆ ಈ ವಾರ ಹಲವು ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಇದೇ ಸಮಯದಲ್ಲಿ ಹಲವು ವೆಬ್‌ ಸರಣಿಗಳು ರಿಲೀಸ್‌ ಆಗುತ್ತಿವೆ. ನೆಟ್‌ಫ್ಲಿಕ್ಸ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಜಿಯೋ ಸಿನಿಮಾ, ಪ್ರೈಮ್‌ವಿಡಿಯೋ, ಝೀ5 ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಬಿಡುಗಡೆಯಾಗುವ ಹೊಸ ವೆಬ್‌ ಸರಣಿ, ಸಿನಿಮಾಗಳ ವಿವರ ಇಲ್ಲಿದೆ. ತೇಜಾ ಸಜ್ಜಾ ನಟನೆಯ ಹನುಮಾನ್‌ ಸಿನಿಮಾ ಇನ್ನೂ ಥಿಯೇಟರ್‌ನಲ್ಲಿ ನೋಡಿಲ್ವ. ಚಿಂತೆ ಮಾಡಬೇಡಿ, ಇದನ್ನು ಈ ವಾರ ಮನೆಯಲ್ಲಿಯೇ ನೋಡಬಹುದು.

ಮಹಾರಾಣಿ ಸೀಸನ್‌ 3 (Maharani Season 3)

ಬಿಹಾರದಲ್ಲಿ 1990ರಲ್ಲಿ ನಡೆದ ಘಟನೆ ಆಧರಿತ ರಾಜಕೀಯ ವಿಷಯವನ್ನು ಮಹಾರಾಣಿ ಸೀಸನ್‌ 3 ಸರಣಿ ಹೊಂದಿದೆ. ಈ ವೆಬ್‌ ಸರಣಿಯಲ್ಲಿ ಹುಮಾ ಖುರೇಷಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೋಹುಮ್‌ ಶಾ, ಅಮಿತ್‌ ಸಿಯೆಲ್‌, ಕಣಿ ಕುಸ್ರುತಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ವೆಬ್‌ ಸರಣಿ ಮಾರ್ಚ್‌ 7ರಂದು ಸೋನಿಲಿವ್‌ನಲ್ಲಿ ಪ್ರಸಾರವಾಗಲಿದೆ.

ಅನ್ವೆಶಿಪಿನ್ ಕಂಡೆತುಂ (Anweshippin Kandethum)

ಆಘಾತಕಾರಿ ಕ್ರೂರ ಹತ್ಯೆ ಪ್ರಕರಣವೊಂದನ್ನು ತನಿಖೆ ಮಾಡುವ ಪೊಲೀಸ್‌ ಅಧಿಕಾರಿಯ ಕಥೆಯನ್ನು ಅನ್ವೇಶಿಪಿನ್‌ ಕಂಡೆತುಂ ಹೊಂದಿದೆ. ತೊವಿನೊ ಥಾಮಸ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿದ್ದಿಕ್ಕಿ, ಶಮಿ ತಿಲಕನ್‌, ಸಿದ್ದಿಕ್‌, ಬಾಬುರಾಜ್‌ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್‌ 8ರಂದು ಪ್ರಸಾರ ಕಾಣಲಿದೆ.

ದಮ್ಸೆಲ್‌ (Damsel)

ಮಿಲಿ ಬಾಬಿ ಬ್ರೌನ್‌, ರಾಯ್‌ ವಿನ್‌ಸ್ಟೋನ್‌, ನಿಕ್‌ ರಾಬಿನ್‌ಸನ್‌ ಮುಂತಾದವರು ನಟಿಸಿದ ಸಿನಿಮಾ. ಮಹಿಳೆಯೊಬ್ಬಳು ಸುಂದರ ಯುವಕನನ್ನು ಮದುವೆಯಾಗುವ ಕಥೆಯನ್ನು ಇದು ಹೊಂದಿದೆ ಮತ್ತು ಮದುವೆಯಾದ ಬಳಿಕ ತನ್ನನ್ನು ಟ್ರಾಪ್‌ನೊಳಗೆ ಸಿಲುಕಿಸಲಾಗಿದೆ ಎಂದು ಆಕೆಗೆ ತಿಳಿಯುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್‌ 8ರಂದು ಡಮ್ಸೆಲ್‌ ಸಿನಿಮಾ ಬಿಡುಗಡೆಯಾಗಲಿದೆ.

ಹನುಮಾನ್‌

ತೇಜ ಸಜ್ಜ ಹೀರೋ ಆಗಿರುವ ಸೂಪರ್‌ಹೀರೋ ಸಿನಿಮಾ ಹನುಮಾನ್‌ ಒಟಿಟಿಯಲ್ಲಿ ಮಾರ್ಚ್‌ 8ರಂದು ಬಿಡುಗಡೆಯಾಗುತ್ತಿದೆ. ಝೀ 5 ಒಟಿಟಿ ವೇದಿಕೆಯಲ್ಲಿ ಈ ಸಿನಿಮಾ ವೀಕ್ಷಿಸಬಹುದು. ಈ ಸಿನಿಮಾದಲ್ಲಿ ತೇಜ ಸಜ್ಜನ ಜತೆಗೆ ಅಮೃತ ಅಯ್ಯರ್‌, ವರಲಕ್ಷ್ಮಿ ಶರತ್‌ ಕುಮಾರ್‌, ವೆನೆಲ್ಲಾ ಕಿಶೋರ್‌, ಶಮುಥಿರಕಾಣಿ, ಸತ್ಯ ಮತ್ತು ವಿನಯ್‌ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹನುಮಾನ್‌ ಸಿನಿಮಾವು ಚಿತ್ರಮಂದಿರಗಳಲ್ಲಿ ಜನವರಿ 12ರಂದು ಬಿಡುಗಡೆಯಾಗಿತ್ತು.

ಲಾಲ್‌ ಸಲಾಮ್‌

ಲಾಲ್‌ ಸಲಾಮ್‌ ಸಿನಿಮಾ ಮಾರ್ಚ್‌ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಲೈಕಾ ಪ್ರೊಡಕ್ಷನ್‌ ನಿರ್ಮಾಣದ ಮತ್ತು ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆಯಾಗಿತ್ತು. ಲಾಲ್‌ ಸಲಾಮ್‌ನಲ್ಲಿ ರಜನಿಕಾಂತ್‌ ಅವರರು ಮೊಯ್ದೀನ್‌ ಬಾವಾ ಆಗಿ ಕಾಣಿಸಿಕೊಂಡಿದ್ದಾರೆ. ಲಾಲ್‌ ಸಲಾಮ್‌ ಸಿನಿಮಾದಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇವಲ್ಲದೆ ಲವರ್‌, ಮೇರಿಕ್ರಿಸ್ಮಸ್‌, ಶೋಟೈಮ್‌, ಯಾತ್ರಾ 2, ಕ್ವೀನ್‌ ಆಫ್‌ ಟಿಯರ್ಸ್‌ ಸೇರಿದಂತೆ ಹಲವು ಸಿನಿಮಾ, ವೆಬ್‌ ಸರಣಿಗಳು ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ.

IPL_Entry_Point