OTT Releases: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುವ 6 ಸಿನಿಮಾ, ವೆಬ್ ಸರಣಿಗಳು; ನೆಟ್‌ಫ್ಲಿಕ್ಸ್, ಪ್ರೈಮ್, ಡಿಸ್ನಿ, ಝೀ5 ಅಪ್‌ಡೇಟ್
Upcoming OTT Releases This Week: ಒಟಿಟಿಯಲ್ಲಿ ಈ ವಾರ ಅತ್ಯುತ್ತಮ ಗುಣಮಟ್ಟದ ಕಂಟೆಂಟ್‌ಗಳನ್ನು ನೋಡಲು ಬಯಸಿದರೆ ನಿಮಗೆ ಹಲವು ಆಯ್ಕೆಗಳು ದೊರಕಲಿವೆ. ಲಾಲ್ ಸಲಾಮ್, ಅಮರ್ ಸಿಂಗ್ ಚಂಪಿಕಾ, ಗಾಮಿ, ಪ್ರೇಮಲು ಸೇರಿದಂತೆ ಹಲವು ಸಿನಿಮಾಗಳನ್ನು ನೋಡಬಹುದು.

ನೆಟ್‌ಫ್ಲಿಕ್ಸ್, ಜಿಯೋ ಸಿನೆಮಾ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋ ಮುಂತಾದ ಒಟಿಟಿಗಳಿಗೆ ಚಂದಾದಾರರಾಗಿರುವವರಿಗೆ ಈ ಬೇಸಿಗೆಯಲ್ಲಿ ಮನೆಯಲ್ಲಿದ್ದುಕೊಂಡೇ ಸಾಕಷ್ಟು ಮನರಂಜನೆ ಪಡೆಯಲು ಅವಕಾಶ ಇದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ. ಲಾಲ್ ಸಲಾಮ್, ಅಮರ್ ಸಿಂಗ್ ಚಂಪಿಕಾ, ಗಾಮಿ, ಪ್ರೇಮಲು ಸೇರಿದಂತೆ ಹಲವು ಸಿನಿಮಾ, ವೆಬ್ ಸರಣಿಗಳನ್ನು ಕಣ್ತುಂಬಿಕೊಳ್ಳಬಹುದು. ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುವ ವಿವಿಧ ಸಿನಿಮಾ, ಶೋಗಳ ವಿವರ ಇಲ್ಲಿದೆ.
ಅಮರ್ ಸಿಂಗ್ ಚಾಂಕಿಲಾ (Amar Singh Chamkila)
ದಿಲ್‌ಜಿತ್ ದೋಸಂಜ್ ಮತ್ತು ಪರಿಣಿತಿ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಇದಾಗಿದೆ. ಎಲ್ವಿಸ್ ಆಫ್ ಪಂಜಾಬ್ ಎಂದು ಜನಪ್ರಿಯ ಪಡೆದಿರುವ ಜನಪ್ರಿಯ ಪಂಜಾಬಿ ಹಾಡುಗಾರನ ಜೀವನಚರಿತ್ರೆ ಇದಾಗಿದೆ. ಈ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 12, 2024ರಂದು ರಿಲೀಸ್ ಆಗುತ್ತಿದೆ.
ಗಾಮಿ
ಹಿಮಾಲಯದ ಅಘೋರರ ಸುತ್ತ ನಡೆಯುವ ಕಥೆಯಿದು. ವಿಶಾಂಕ್ ಸೇನ್, ಚಾಂದಿನಿ ಚೌಧರಿ, ಎಂಜಿ ಅಭಿನಯ, ಮಹಮ್ಮದ್ ಸಮದ್, ದಯಾನಂದ ರೆಡ್ಡಿ, ಹರಿಕಾ ಪೆಡದಾ, ರಮ್ಯ ಪಸಲೆಟಿ, ಶಾಂತಿ ರಾವ್, ಮಯಾಂಕ್ ಪರೇಕ್, ಜಾನ್ ಕೊಟೊಲಿ, ಬೊಮ್ಮಾ ಶ್ರೀಧರ್, ರಜನೀಶ್ ಶರ್ಮಾ, ಕೆಆರ್ ಉಣ್ಣಿಕೃಷ್ಣ ಮತ್ತು ಬಿ ವೆಂಕಟ್ ರಾಮನ್ ರಾವ್ ನಟಿಸಿದ ಸಿನಿಮಾ ಇದಾಗಿದೆ. ಝೀ5ನಲ್ಲಿ ಏಪ್ರಿಲ್ 12ರಂದು ಗಾಮಿ ಸಿನಿಮಾ ಬಿಡುಗಡೆಯಾಗಲಿದೆ.
ಲಾಲ್ ಸಲಾಮ್
ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಮತ್ತು ಸೆಂಥಿಲ್ ನಟಿಸಿದ್ದಾರೆ. ಈ ಸಿನಿಮಾ ಸನ್‌ನೆಕ್ಸ್ಟ್‌ನಲ್ಲಿ ಏಪ್ರಿಲ್ 12ರಂದು ರಿಲೀಸ್ ಆಗಲಿದೆ.
ಪ್ರೇಮಲು
ಇಬ್ಬರು ರೊಮ್ಯಾಂಟಿಕ್ ಪಾಟ್ನರ್‌ಗಳ ಸುತ್ತ ಸಚಿನ್‌ನ ಪ್ರೇಮಕಥೆ ಇದಾಗಿದೆ. ಈ ಸಿನಿಮಾದಲ್ಲಿ ನಸ್ಲೆನ್ ಕೆ ಗಾಫೂರ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಏಪ್ರಿಲ್ 12, 2024ರಂದು ರಿಲೀಸ್ ಆಗಲಿದೆ.
ಪೊನ್ ಒಂದ್ರು ಕಂಡೆನ್
ಅಶೋಕ್ ಸೆಲ್ವನ್, ಐಶ್ವರ್ಯಾ ಲಕ್ಷ್ಮಿ ಮತ್ತು ವಸಂತ್ ರವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪೊನ್ ಒಂದ್ರು ಕಂಡೆನ್ ಸಿನಿಮಾವು ಜಿಯೋ ಸಿನಿಮಾದಲ್ಲಿ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.
ಹೈಟೌನ್ ಸೀಸನ್ 3
ಹೈಟೌನ್ ಸೀಸನ್ 3 ಸರಣಿಯು ಏಪ್ರಿಲ್ 12ರಂದು ಲಯನ್ಸ್‌ಗೇಟ್ ಪ್ಲೇಯಲ್ಲಿ ಬಿಡುಗಡೆಯಾಗಲಿದೆ. ಕೊಲೆ ಅಪರಾಧ ತನಿಖೆಗೆ ಸಂಬಂಧಪಟ್ಟ ಕಥೆ ಹೊಂದಿರುವ ಈ ಸರಣಿಯಲ್ಲಿ ಮೋನಿಕಾ ರೇಮಂಡ್, ರಿಲೆ ವೋಯಕಲ್, ಅಟ್ನಿನ್ಸ್ ಮುಂತಾದವರು ನಟಿಸಿದ್ದಾರೆ.