ಒಟಿಟಿಗೆ ಬಂತು ಹನುಮಾನ್ ಫಿಲಂ, ತೇಜ ಸಜ್ಜಾ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಇವತ್ತು ಮನೆಯಲ್ಲೇ ನೋಡಿ-ott news update hanuman movie available on ott after an initial delay know when where to watch bollywood news uks ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಗೆ ಬಂತು ಹನುಮಾನ್ ಫಿಲಂ, ತೇಜ ಸಜ್ಜಾ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಇವತ್ತು ಮನೆಯಲ್ಲೇ ನೋಡಿ

ಒಟಿಟಿಗೆ ಬಂತು ಹನುಮಾನ್ ಫಿಲಂ, ತೇಜ ಸಜ್ಜಾ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಇವತ್ತು ಮನೆಯಲ್ಲೇ ನೋಡಿ

ತೇಜ ಸಜ್ಜಾ ಅಭಿನಯದ ಹನುಮಾನ್ ಸಿನಿಮಾ ಚಿತ್ರಮಂದಿರಗಳಲ್ಲಿ ಜನವರಿ 12ರಂದು ಬಿಡುಗಡೆಯಾಗಿ ಭಾರಿ ಜನಮೆಚ್ಚುಗೆ ಗಳಿಸಿತ್ತು. ಈಗ ಒಟಿಟಿಗೆ ಬಂತು ಹನುಮಾನ್ ಫಿಲಂ. ತೇಜ ಸಜ್ಜಾ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಇವತ್ತು ಮನೆಯಲ್ಲೇ ನೋಡಿ. ಇಲ್ಲಿದೆ ಯಾವ ಒಟಿಟಿ ಪ್ಲಾಟ್‌ಫಾರಂ ಎಂಬಿತ್ಯಾದಿ ವಿವರ.

ಪ್ರಶಾಂತ್ ವರ್ಮಾ ನಿರ್ದೇಶನದ ಸೂಪರ್ ಹೀರೋ ಸಿನಿಮಾ "ಹನುಮಾನ್" ನಲ್ಲಿ ತೇಜ ಸಜ್ಜ ಪ್ರಮುಖ ಪಾತ್ರದಲ್ಲಿದ್ದಾರೆ. ಒಟಿಟಿಗೆ ಬಂತು ಈ ಹನುಮಾನ್ ಫಿಲಂ.
ಪ್ರಶಾಂತ್ ವರ್ಮಾ ನಿರ್ದೇಶನದ ಸೂಪರ್ ಹೀರೋ ಸಿನಿಮಾ "ಹನುಮಾನ್" ನಲ್ಲಿ ತೇಜ ಸಜ್ಜ ಪ್ರಮುಖ ಪಾತ್ರದಲ್ಲಿದ್ದಾರೆ. ಒಟಿಟಿಗೆ ಬಂತು ಈ ಹನುಮಾನ್ ಫಿಲಂ.

ಭಾರತದಲ್ಲಿ 40 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ತಯಾರಾದ ಹನುಮಾನ್‌ ಸಿನಿಮಾ 200 ಕೋಟಿ ರೂಪಾಯಿ ಗಳಿಕೆಯೊಂದಿಗೆ ಬ್ಲಾಕ್‌ಬಸ್ಟರ್ ಫಿಲಂ ಎಂದೆನಿಸಿಕೊಂಡಿದೆ. ಈ ಸಿನಿಮಾ ಜನವರಿ 12ರಂದು ಥಿಯೆಟರ್‌ಗಳಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ತೇಜ ಸಜ್ಜಾ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಒಟಿಟಿ ಬರಲಿದೆ ಎಂಬ ಸುದ್ದಿ ಪದೇಪದೆ ಬಂದಿತ್ತಾದರೂ, ಸ್ವಲ್ಪ ವಿಳಂಬವಾಗಿ ನಿನ್ನೆ ಒಟಿಟಿಗೆ ಬಂದಿದೆ.

ಹೌದು, ಒಟಿಟಿಗೆ ಬಂತು ಹನುಮಾನ್ ಫಿಲಂ. ತೇಜ ಸಜ್ಜಾ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಇವತ್ತು ಮನೆಯಲ್ಲೇ ನೋಡಿ. ಈ ಸಿನಿಮಾ ಪ್ರೇಕ್ಷಕರ ಪ್ರೀತಿಗಳಿಸಿರುವುದಷ್ಟೇ ಅಲ್ಲ, ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿದೆ ಎಂಬುದು ಅಗ್ಗಳಿಕೆ.

ಒಟಿಟಿಯಲ್ಲಿ ಹನುಮಾನ್ ಸಿನಿಮಾ ಬಿಡುಗಡೆ

ಅತ್ಯುತ್ತಮ ನಿರೂಪಣೆ, ಆಕರ್ಷಕವಾದ ಕಥಾಹಂದರ ಮತ್ತು ಮನಮೋಹಕ ದೃಶ್ಯ ಸಂಯೋಜನೆಯೊಂದಿಗೆ ಹನುಮಾನ್ ಸಿನಿಮಾ ನಿನ್ನೆ (ಮಾರ್ಚ್ 16) ಒಟಿಟಿಗೆ ಬಂದಿದೆ. ನಿನ್ನೆ ರಾತ್ರಿ 8 ಗಂಟೆಗೆ ಮೊದಲ ಪ್ರದರ್ಶನ ಕಂಡಿದೆ. ಜಿಯೋ ಸಿನಿಮಾ ಮತ್ತು ಕಲರ್ಸ್‌ ಸಿನಿಪ್ಲೆಕ್ಸ್‌ನಲ್ಲಿ ಮೊದಲ ಪ್ರದರ್ಶನ ಪ್ರಸಾರವಾಗಿದೆ. ಜಿಯೋ ಸಿನಿಮಾದಲ್ಲಿ ನಿನ್ನೆಯಿಂದ ಈ ಸಿನಮಾ ವೀಕ್ಷಕರಿಗೆ ನೋಡುವುದಕ್ಕೆ ಲಭ್ಯವಿದೆ.

ಚಿತ್ರದ ಕಥಾವಸ್ತುವು ಅಂಜನಾದ್ರಿಯ ಕಾಲ್ಪನಿಕ ಹಳ್ಳಿಯ ಸುತ್ತ ಸುತ್ತುತ್ತದೆ. ಹನುಮಾನ್‌ ಚಿತ್ರದ ನಾಯಕನಿಗೆ ಹನುಮಂತನ ಶಕ್ತಿಯ ಆಶೀರ್ವಾದ ಇರುತ್ತದೆ. ಆತ ತನ್ನ ಇರುವ ದುರ್ಜನರನ್ನು ಹಿಮ್ಮೆಟ್ಟಿಸಲು ಅದನ್ನು ಬಳಸುತ್ತಾನೆ. ತೆಲುಗು ನಟ ತೇಜ ಸಜ್ಜ ಹನುಮಂತನ ಪಾತ್ರವನ್ನು ಸುಂದರವಾಗಿ, ಸಮರ್ಥನೀಯವಾಗಿ ನಿಭಾಯಿಸಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸಿದ್ದಾರೆ. ಅಮೃತ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಸಮುದ್ರಕಣಿ ಮುಂತಾದ ತಾರಾಗಣ ಚಿತ್ರದಲ್ಲಿದೆ.

ಹನುಮಾನ್ ಒಟಿಟಿ ಮತ್ತು ಟಿವಿ ಪ್ರೀಮಿಯರ್ ರಿಲೀಸ್

ಹನುಮಾನ್‌ ಸಿನಿಮಾದ ಒಟಿಟಿ ಮತ್ತು ಟಿವಿ ಪ್ರೀಮಿಯರ್ ಬಿಡುಗಡೆಯನ್ನು ಅಧಿಕೃತವಾಗಿ ಪ್ರಕಟಿಸಿದ ಬಳಿಕ ನಾಯಕ ನಟ ತೇಜ ಸಜ್ಜಾ, “ನನ್ನ ಅಭಿನಯದ ಸಿನಿಮಾ “ಹನುಮಾನ್‌” ವಿಶೇಷ ರೀತಿ, ಮೊಟ್ಟ ಮೊದಲ ವಿಶೇಷ ಪ್ರೀಮಿಯರ್ ಪ್ರದರ್ಶನ ಕಾಣುತ್ತಿದೆ. ಇದು ಅವಿಸ್ಮರಣೀಯ ಮತ್ತು ಈ ರೀತಿ ಗೌರವ ಸಿನಿಮಾಕ್ಕೆ ಸಿಗುತ್ತಿರುವುದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಈ ಚಿತ್ರವು ನನಗೆ ಬಹಳ ವಿಶೇಷವಾದುದು. ಕಲರ್ಸ್ ಸಿನೆಪ್ಲೆಕ್ಸ್ ಮತ್ತು ಜಿಯೋಸಿನಿಮಾದಲ್ಲಿ ಏಕಕಾಲದಲ್ಲಿ ಪ್ರಥಮ ಪ್ರದರ್ಶನ ಕಾಣುವ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು, ವಿಶೇಷವಾಗಿ ಕಿರಿಯರನ್ನು ತಲುಪಲು ಸೂಕ್ತವಾದ ಮಾರ್ಗ ಎಂದು ನಾನು ನಂಬುತ್ತೇನೆ." ಎಂದು ಹೇಳಿದ್ದರು.

“ಹನುಮಂತನ ಶಕ್ತಿಯನ್ನು ಹೆಚ್ಚು ಸರಳ ಮತ್ತು ಆನಂದದಾಯಕ. ಅತಿ ಹೆಚ್ಚು ಶಕ್ತಿ ತುಂಬುವ ಹನುಮಂತನ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಚಲನಚಿತ್ರವು ಮಕ್ಕಳಿಗೆ ಇಷ್ಟವಾಗುತ್ತದೆ” ಎಂದು ಅವರು ಹೇಳಿದರು.

ಈ ಸಿನಿಮಾವು ಜಾಗತಿಕವಾಗಿ 330 ಕೋಟಿ ರೂಪಾಯಿ ಗಳಿಕೆ ಹೊಂದಿದ್ದು, 2024ರ 8ನೇ ಅತಿಹೆಚ್ಚು ಗಳಿಕೆ ಚಲನಚಿತ್ರವಾಗಿ ದಾಖಲೆ ನಿರ್ಮಿಸಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)