Kung Fu Panda 4 OTT: ಯೋ ಯೋ., ಮಕ್ಕಳೇ ನಿಮ್ಮ ಪ್ರೀತಿಯ ಕುಂಗ್‌ ಫು ಪಾಂಡ 4 ಸಿನಿಮಾವನ್ನು ಓಟಿಟಿಯಲ್ಲಿ ನೋಡಿ; ಕನ್ನಡ ಭಾಷೆಯಲ್ಲೂ ಲಭ್ಯ
ಕನ್ನಡ ಸುದ್ದಿ  /  ಮನರಂಜನೆ  /  Kung Fu Panda 4 Ott: ಯೋ ಯೋ., ಮಕ್ಕಳೇ ನಿಮ್ಮ ಪ್ರೀತಿಯ ಕುಂಗ್‌ ಫು ಪಾಂಡ 4 ಸಿನಿಮಾವನ್ನು ಓಟಿಟಿಯಲ್ಲಿ ನೋಡಿ; ಕನ್ನಡ ಭಾಷೆಯಲ್ಲೂ ಲಭ್ಯ

Kung Fu Panda 4 OTT: ಯೋ ಯೋ., ಮಕ್ಕಳೇ ನಿಮ್ಮ ಪ್ರೀತಿಯ ಕುಂಗ್‌ ಫು ಪಾಂಡ 4 ಸಿನಿಮಾವನ್ನು ಓಟಿಟಿಯಲ್ಲಿ ನೋಡಿ; ಕನ್ನಡ ಭಾಷೆಯಲ್ಲೂ ಲಭ್ಯ

Kung Fu Panda OTT release date: ಕುಂಗ್‌ ಫು ಪಾಂಡ ಎಂದಾಗ ಮಕ್ಕಳು ಯೋ ಯೋ ಎನ್ನಬಹುದು. ಮಕ್ಕಳನ್ನೂ ಮಾತ್ರವಲ್ಲದೆ ದೊಡ್ಡವರನ್ನೂ ಮನರಂಜಿಸುವ ಕುಂಗ್‌ ಫು ಪಾಂಡದ 4ನೇ ಸಿನಿಮಾ ಒಟಿಟಿಗೆ ಯಾವಾಗ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. ಸದ್ಯ ಇದು ಬಾಡಿಗೆ ಆಧಾರದಲ್ಲಿ ಲಭ್ಯವಿದ್ದು, ಇದೇ ಜುಲೈ 15ರಿಂದ ಒಟಿಟಿ ಪ್ರೇಕ್ಷಕರಿಗೆ ಬಾಡಿಗೆರಹಿತವಾಗಿ ಲಭ್ಯವಿದೆ.

Kung Fu Panda 4 OTT: ಕುಂಗ್‌ ಫು ಪಾಂಡ 4 ಸಿನಿಮಾವನ್ನು ಓಟಿಟಿಯಲ್ಲಿ ನೋಡಿ
Kung Fu Panda 4 OTT: ಕುಂಗ್‌ ಫು ಪಾಂಡ 4 ಸಿನಿಮಾವನ್ನು ಓಟಿಟಿಯಲ್ಲಿ ನೋಡಿ

Kung Fu Panda 4 OTT release date: ಕುಂಗ್‌ ಫು ಪಾಂಡ 4 ಎಂಬ ಸಾಹಸಮಯ ಹಾಸ್ಯ ಸಿನಿಮಾ ಇದೇ ಜುಲೈ 15ರಿಂದ ಜಿಯೋ ಸಿನೆಮಾ ಪ್ರೀಮಿಯಂ ಒಟಿಟಿಯಲ್ಲಿ ಲಭ್ಯವಿದೆ. ಅದಕ್ಕೂ ಮೊದಲು ನೋಡಬೇಕೆನ್ನುವವರು ರೆಂಟ್‌ (ಬಾಡಿಗೆ) ಹಣ ನೀಡಿ ನೋಡಬಹುದು. ನೀವು ಜಿಯೋ ಸಿನೆಮಾ ಪ್ರೀಮಿಯಂನ ಚಂದಾದಾರರಾಗಿದ್ದರೆ ಈ ಡ್ರಾಗನ್‌ ವಾರಿಯನ್‌ ಸಿನಿಮಾವನ್ನು ಕನ್ನಡ ಸೇರಿದಂತೆ ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಬೆಂಗಾಳಿ ಭಾಷೆಗಳಲ್ಲಿ ನೋಡಬಹುದು. ಹಿಂದಿ ಮತ್ತು ದಕ್ಷಿಣ ಭಾರತದ ಕೆಲವು ಸಿನಿಮಾಗಳು ಒಟಿಟಿಯಲ್ಲಿ ಕನ್ನಡದಲ್ಲಿ ಲಭ್ಯವಿಲ್ಲದೆ ಇದ್ದರೂ ಜಾಗತಿಕ ಸಿನಿಮಾ ಕನ್ನಡದಲ್ಲಿ ಲಭ್ಯವಾಗುವುದಕ್ಕೆ ಖುಷಿ ಪಡೋಣ.

ಕುಂಗ್‌ ಫು ಪಾಂಡ 4 ಸಿನಿಮಾದ ಕಥೆ, ಹೊಸ ಪಾತ್ರಗಳು

ಕುಂಗ್‌ ಫು ಪಾಂಡ 4 ಎನ್ನುವುದು ಬಹುನಿರೀಕ್ಷಿತ ಸಾಹಸಮಯ ಸಿನಿಮಾ. ಕುಂಗ್‌ ಫುನ ಹೊಸ ಸಾಹಸಗಳನ್ನು ಕಣ್ತುಂಬಿಕೊಳ್ಳುವ ಸಮಯ. ಜಾಕ್‌ ಬ್ಲ್ಕ್ಯಾಕ್‌ನ ಪೂ ಪಾತ್ರವು ಹೊಸ ಡ್ರ್ಯಾಗನ್‌ ಸೈನಿಕನಾಗಿ ಆಗಮಿಸುತ್ತಿದೆ. ಇವಿಲ್‌ ಚಾಮಿಲಿಯೊನ್‌ಗೆ ವಿಯೊಲಾ ಡೇವಿಸ್‌ ಧ್ವನಿ ನೀಡಿದ್ದಾರೆ. ತನ್ನ ಮುಂದಿನ ಉತ್ತರಾಧಿಕಾರಿಗೆ ಹುಡುಕಾಟ ನಡೆಸುವ ಇವಿಲ್‌ ಚಾಮಿಲಿಗೆ ಅನಿರೀಕ್ಷಿತ ಸವಾಲು ಎದುರಾಗುತ್ತದೆ. ಪೂನ ಥ್ರಿಲ್ಲರ್‌ ಸಾಹಸಗಳು ಈ ಸಿನಿಮಾದಲ್ಲೂ ಮುಂದುವರೆದಿದೆ. ಫಾಕ್ಸ್‌ ಝೆನ್‌ ಪಾತ್ರಕ್ಕೆ ಅಕಫಿನಾ ಧ್ವನಿ ನೀಡಿದ್ದಾರೆ.

ಮೈಕ್ ಮಿಚೆಲ್ ಮತ್ತು ಸ್ಟೆಫನಿ ಸ್ಟೈನ್ ಅವರ ಈ ಅನಿಮೇಟೆಡ್ ಸಿನಿಮಾದಲ್ಲಿ ಜ್ಯಾಕ್ ಬ್ಲ್ಯಾಕ್, ಡಸ್ಟಿನ್ ಹಾಫ್‌ಮನ್ (ಶಿಫು), ಜೇಮ್ಸ್ ಹಾಂಗ್ (ಲಿ ಶಾನ್), ಮತ್ತು ಬ್ರಿಯಾನ್ ಕ್ರಾನ್ಸ್‌ಟನ್ (ಮಿ. ಪಿಂಗ್) ಮುಂತಾದವರು ಸೇರಿದ್ದು, ಪ್ರಖ್ಯಾತ ಕುಂಗ್ ಫೂ ಪಾಂಡಾ ಕಥೆ ಇನ್ನಷ್ಟು ರೋಚಕವಾಗಿರುವ ಸೂಚನೆಯನ್ನು ನೀಡಿದೆ.

ಭಾರತದ ಬಾಕ್ಸ್‌ ಆಫೀಸ್‌ನಲ್ಲೂ ಸಕ್ಸಸ್‌

ಕುಂಗ್‌ ಫು ಪಾಂಡ 4 ಸಿನಿಮಾವು ಭಾರತದ ಚಿತ್ರಮಂದಿರಗಳಲ್ಲಿಯೂ ಯಶಸ್ಸು ಪಡೆದಿದೆ. ಗ್ರಾಸಿಂಗ್‌ ಆದಾಯ ಲೆಕ್ಕದಲ್ಲಿ ನಾಲ್ಕನೇ ಅತ್ಯಧಿಕ ಆದಾಯ ತಂದ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿತ್ತು. ಥಿಯೇಟರ್‌ಗಳಲ್ಲಿ ಇಂಗ್ಲಿಷ್‌, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಕನ್ನಡದಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವ ಧೈರ್ಯ ಮಾಡಿರಲಿಲ್ಲ. ಭಾರತದಲ್ಲಿ ಸುಮಾರು 20 ಥಿಯೇಟರ್‌ಗಳಲ್ಲಿ 100 ದಿನಗಳ ಕಾಲ ಪ್ರದರ್ಶನ ಕಂಡ ಕುಂಗ್‌ ಫು ಪಾಂಡ 4 ಸಿನಿಮಾವು ಸುಮಾರು 49 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಕುಂಗ್‌ ಫು ಪಾಂಡ 4 ಸಿನಿಮಾವು ಈಗ ಝೀ5ನಲ್ಲಿ ರೆಂಟ್‌ ಆಧಾರದಲ್ಲಿ ಲಭ್ಯವಿದೆ. ಒಟಿಟಿ ಪ್ಲೇ ಪ್ರೀಮಿಯಂ ಚಂದಾದಾರರಿಗೂ ಈ ಚಾನೆಲ್‌ ದೊರಕಲಿದೆ. ಭಾರತದಲ್ಲಿ ಇದೀಗ ಈ ಸಿನಿಮಾ ಒಟಿಟಿಯಲ್ಲಿ ರೆಂಟ್‌ ರಹಿತವಾಗಿ ದೊರಕುವ ಸಮಯ ಬಂದಿದೆ. ಕುಂಗ್‌ ಫು ಪಾಂಡ 3 ಸಿನಿಮಾ ಬಿಡುಗಡೆಯಾದ 8 ವರ್ಷಗಳ ಬಳಿಕ ಬಿಡುಗಡೆಯಾದ ಕುಂಗ್‌ ಫು ಪಾಂಡ 4 ಅನ್ನು ಇದೇ ಜುಲೈ 15ರಿಂದ ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ.

ಜಿಯೋ ಸಿನಿಮಾದಲ್ಲಿ ಇದೇ ಜುಲೈ 15ರಿಂದ ಈ ಸಿನಿಮಾವನ್ನು ನೋಡಬಹುದು. ಇನ್ನಷ್ಟು ಒಟಿಟಿ ಸಿನಿಮಾ, ಸರಣಿ ಅಪ್‌ಡೇಟ್‌ಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಒಟಿಟಿ ಸುದ್ದಿಗಳನ್ನು ಓದುತ್ತ ಇರಿ.

Whats_app_banner