ಕನ್ನಡ ಸುದ್ದಿ  /  Entertainment  /  Ott News Watch Main Atal Hoon In Ott Where And When To Watch Pankaj Tripathi's Hit Movie? Here Is The Detail Rst

ಒಟಿಟಿಗೆ ಬಂದೇ ಬಿಡ್ತು ಮೇ ಅಟಲ್‌ ಹೂಂ; ಪಂಕಜ್‌ ತ್ರಿಪಾಠಿ ನಟನೆಯ ಹಿಟ್‌ ಸಿನಿಮಾವನ್ನು ಎಲ್ಲಿ ನೋಡಬಹುದು? ಇಲ್ಲಿದೆ ವಿವರ

ರಾಜಕೀಯ ರಂಗದ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಜೀವನಾಧಾರಿತ ʼಮೇ ಅಟಲ್‌ ಹೂಂʼ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ವಾಜಪೇಯಿ ಪಾತ್ರದಲ್ಲಿ ಖ್ಯಾತ ನಟ ಪಂಕಜ್‌ ತ್ರಿಪಾಠಿ ಮನೋಜ್ಞವಾಗಿ ಅಭಿನಯಿಸಿರುವ ಚಿತ್ರವಿದು. ಈ ಚಿತ್ರವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು? ಇಲ್ಲಿದೆ ವಿವರ.

ಒಟಿಟಿಗೆ ಬಂದೇ ಬಿಡ್ತು ಮೇ ಅಟಲ್‌ ಹೂಂ
ಒಟಿಟಿಗೆ ಬಂದೇ ಬಿಡ್ತು ಮೇ ಅಟಲ್‌ ಹೂಂ

Main Atal Hoon OTT Release Update: ಬಿಜೆಪಿಯ ಅಜಾತಶತ್ರು ಎಂದೇ ಖ್ಯಾತಿಯಾಗಿರುವ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಚಿತ್ರ ಮೇ ಅಟಲ್‌ ಹೂಂ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಪಂಕಜ್‌ ತ್ರಿಪಾಠಿ ನಟನೆಯ ಈ ಹಿಟ್‌ ಸಿನಿಮಾ ಇಂದು (ಮಾರ್ಚ್‌ 15) ಒಟಿಟಿಗೆ ಪದಾರ್ಪಣೆ ಮಾಡಿದೆ. ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದ್ದ ಮೇ ಅಟಲ್‌ ಹೂಂ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿ ಕೊಂಡಾಡಿದ್ದರು. ಇದೀಗ ಸಿನಿಮಾವು ಆನ್‌ಲೈನ್‌ ಪ್ರೇಕ್ಷಕರನ್ನು ಸೆಳೆಯಲು ಸಿದ್ಧವಾಗಿದೆ. ಅಟಲ್‌ ಅವರ ಜೀವನಕಥೆಯನ್ನು ಕಣ್ತುಂಬಿಕೊಳ್ಳಲು ಈ ಸಿನಿಮಾ ನೋಡಲು ಮರೆಯದಿರಿ. ಸಿನಿಮಾ ಯಾವ ಓಟಿಟಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಮೇ ಅಟಲ್‌ ಹೂಂ ಚಿತ್ರದ ಪಾತ್ರವರ್ಗ, ಕಥಾವಸ್ತು

ಅಟಲ್‌ ಬಿಹಾರಿ ವಾಜಪೇಯಿ ಅವರ ವೈಯಕ್ತಿಕ ಜೀವನದಿಂದ ರಾಜಕೀಯ ಬದುಕಿನವರೆಗಿನ ಕ್ಷಣಗಳನ್ನು ಚಿತ್ರದಲ್ಲಿ ಅನಾವರಣ ಮಾಡಲಾಗಿದೆ. ಇದರಲ್ಲಿ ಅವರ ಬಹುಮುಖಿ ವ್ಯಕ್ತಿತ್ವದ ಪರಿಚಯವೂ ಇದೆ. ಅಟಲ್‌ ಅವರು ಉತ್ತಮ ನಾಯಕ ಮಾತ್ರವಲ್ಲದೆ, ಕವಿಯೂ ಹೌದು. ಉತ್ತಮ ರಾಜನೀತಿಜ್ಞನಾಗಿದ್ದ ಇವರು ಸಜ್ಜನ ವ್ಯಕ್ತಿತ್ವದಿಂದ ರಾಜಕೀಯ ರಂಗದಲ್ಲಾಗಿ, ವೈಯಕ್ತಿಕ ಜೀವನದಲ್ಲಾಗಿ ಯಾವುದೇ ಶತ್ರುಗಳನ್ನು ಹೊಂದಿರಲಿಲ್ಲ. ಅವರ ಬದುಕಿಗೆ ಸಿನಿರೂಪ ನೀಡಿದ್ದು ರವಿ ಜಾಧವ್‌.

ನಟರಂಗ, ಬಾಲಗಂಧರ್ವದಂತಹ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾಗಳನ್ನು ನೀಡಿರುವ ರವಿ ಜಾಧವ್‌ ಈ ಸಿನಿಮಾದ ನಿರ್ದೇಶಕದ ಚುಕ್ಕಾಣಿ ಹಿಡಿದಿದ್ದಾರೆ. ಸುಂದರ ಹಾಡುಗಳು, ಅದ್ಭುತ ಕಥಾಹಂದರ ಮೂಲಕ ಸೆಳೆಯುವ ಚಿತ್ರ ಇದಾಗಿದೆ.

ಖ್ಯಾತ ನಟ ಪಂಕಜ್‌ ತ್ರಿಪಾಠಿ ವಾಜಪೇಯಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಪಿಯೂಷ್‌ ಮಿಶ್ರಾ, ದಯಾ ಶಂಕರ್‌ಪಾಂಡೆ, ರಾಜ ಸೇವಕ ಮತ್ತು ಏಕ್ತಾ ಕೌಲ್‌ ಮುಂತಾದ ಪ್ರಮುಖ ನಟರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರವಿ ಜಾಧವ್‌ ಹಾಗೂ ರಿಷಿ ವೀರಮಾನಿ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ವಿನೋದ್‌ ಭಾನುಶಾಲಿ, ಸಂದೀಪ್‌ ಸಿಂಗ್‌ ಮತ್ತು ಕಮಲೇಶ್‌ ಭಾನುಶಾಲಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಮೇ ಅಟಲ್‌ ಹೂಂ ಸಿನಿಮಾವನ್ನು ಎಲ್ಲಿ ನೋಡಬಹುದು

ಈ ಹಿಟ್‌ ಚಿತ್ರವು ಜೀ 5ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಈ ಸುದ್ದಿಯನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ ಜೀ ಸಂಸ್ಥೆ. ʼಕವಿ, ರಾಜಕಾರಣಿ, ನಮ್ಮೆಲ್ಲರ ನೆಚ್ಚಿನ ನಾಯಕ ಅಟಲ್‌ ಜಿ ಪ್ರಜಾಪ್ರಭುತ್ವವನ್ನು ಹೇಗೆ ಜಾಗತಿಕ ಮಟ್ಟಕ್ಕೆ ಏರಿಸಿದ್ದಾರೆ ನೋಡಿʼ ಎಂದು ಶೀರ್ಷಿಕೆ ಬರೆದುಕೊಂಡು ಪೋಸ್ಟ್‌ ಮಾಡಿದೆ ಜೀ 5.

ಅಟಲ್‌ ಬಿಹಾರಿ ವಾಜಪೇಯಿ ಅವರ ರಾಜಕೀಯ ಜೀವನದ ಇಂಚಿಂಚನ್ನು ತಿಳಿಯುವ ಬಯಕೆ ಇದ್ದವರು ತಪ್ಪದೇ ಮೇ ಅಟಲ್‌ ಹೂಂ ಸಿನಿಮಾ ನೋಡಿ.

ಇದನ್ನೂ ಓದಿ

OTT Movies: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರೂಪೇಶ್‌ ಶೆಟ್ಟಿ ನಟನೆಯ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 9 ಮತ್ತು ಬಿಗ್‌ಬಾಸ್‌ ಕನ್ನಡ ಓಟಿಟಿ ಸೀಸನ್‌ ಒಂದರ ವಿಜೇತ ರೂಪೇಶ್‌ ಶೆಟ್ಟಿ ನಟನೆಯ ಮಂಕು ಭಾಯ್‌ ಫಾಕ್ಸಿ ರಾಣಿ ಸಿನಿಮಾವು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. “ನನ್ನ ನಟನೆಯ, ಗಗನ್ ನಿರ್ದೇಶನದ ಸಿನಿಮಾ ಮಂಕು ಭಾಯಿ ಫಾಕ್ಸಿ ರಾಣಿ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ, ಈ ಕನ್ನಡ ಸಿನಿಮಾ ನೋಡಿ ಆಶೀರ್ವದಿಸಿ” ಎಂದು ರೂಪೇಶ್‌ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

IPL_Entry_Point

ವಿಭಾಗ