Bahishkarana OTT: ಬಹಿಷ್ಕರಣ ತೆಲುಗು ವೆಬ್ ಸರಣಿ ಬಿಡುಗಡೆ ಯಾವಾಗ? ಬೋಲ್ಡ್ ದೃಶ್ಯಗಳೊಂದಿಗೆ ಸೇಡಿನ ಕಥೆ ಹೇಳುವ ವೆಬ್ ಸೀರಿಸ್
OTT Telugu Web Series Bahishkarana: ತೆಲುಗಿನಲ್ಲಿ ಸಾಮಾನ್ಯ ವೆಬ್ ಸರಣಿಗಳು ಮಾತ್ರವಲ್ಲದೆ ಬೋಲ್ಡ್ ದೃಶ್ಯಗಳ ವೆಬ್ ಸರಣಿಗಳು ಜನಪ್ರಿಯತೆ ಪಡೆಯುತ್ತಿವೆ. ತೆಲುಗು ವೆಬ್ ಸರಣಿ ಬಹಿಷ್ಕರಣ ಸದ್ಯದಲ್ಲಿಯೇ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಹೆಚ್ಚಿನ ವಿವರ ಇಲ್ಲಿದೆ.

OTT Web Series Bahishkarana Release Date: ಕನ್ನಡದಲ್ಲಿ ವೆಬ್ ಸರಣಿ ಮಾರುಕಟ್ಟೆ ತಳಮಟ್ಟದಲ್ಲಿದೆ. ಕನ್ನಡ ವೆಬ್ ಸರಣಿಗೆ ಸರಿಯಾದ ಮಾರುಕಟ್ಟೆಯೇ ಇಲ್ಲವೆಂದು ರಕ್ಷಿತ್ ಶೆಟ್ಟಿ ಅವರು ಏಕಂ ಎಂಬ ವೆಬ್ಸರಣಿಯನ್ನು ವೆಬ್ಸೈಟ್ ಮೂಲಕ ಬಿಡುಗಡೆ ಮಾಡಿದ್ದಾರೆ. ಆದರೆ, ಇತರೆ ಭಾಷೆಗಳ ಪ್ರಾದೇಶಿಕ ವೆಬ್ ಸರಣಿಗಳ ಪರಿಸ್ಥಿತಿ ಹೀಗೆ ಇಲ್ಲ. ನಮ್ಮ ನೆರೆಯ ಆಂಧ್ರಪ್ರದೇಶ, ತೆಲಂಗಾಣದಲ್ಲಿ ತೆಲುಗು ವೆಬ್ ಸರಣಿಗೆ ಬೇಡಿಕೆ ಹೆಚ್ಚಿದೆ. ಅಲ್ಲಿ ಸಾಮಾನ್ಯ ಒಟಿಟಿ ವೆಬ್ ಸರಣಿಗಳು ಮಾತ್ರವಲ್ಲದೆ ಬೋಲ್ಡ್ ದೃಶ್ಯಗಳ ವೆಬ್ ಸರಣಿಗಳೂ ಹೆಚ್ಚುತ್ತಿವೆ. ಬಹಿಷ್ಕರಣ ವೆಬ್ ಸರಣಿಯೂ ಇದೇ ಪ್ರಾಕಾರಕ್ಕೆ ಸೇರಿದ್ದು, ಹಳ್ಳಿಯಲ್ಲಿ ಸೇಡಿನ ಕಥೆ ಹೊಂದಿರುವ ವೆಬ್ ಸರಣಿ ಇದಾಗಿದೆ. ತೆಲುಗು ನಟ ನಾಗಾರ್ಜುನ ಈ ವೆಬ್ ಸರಣಿಗೆ ಸಾಥ್ ನೀಡಿದ್ದಾರೆ.
100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಹಾಗೂ ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಅಂಜಲಿ ಅವರು ಬಹಿಷ್ಕರಣ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಮುಕೇಶ್ ಪ್ರಜಾಪತಿ ನಿರ್ದೇಶನದ ಈ ಬಹಿಷ್ಕರಣ ವೆಬ್ ಸರಣಿಯ ಟ್ರೇಲರ್ ಅನ್ನು ಬಿಡುಗಡೆ ಮಾಡುವ ಮೂಲಕ ಕಿಂಗ್ ನಾಗಾರ್ಜುನ ಈ ವೆಬ್ ಸರಣಿ ತಂಡಕ್ಕೆ ಸಾಥ್ ನೀಡಿದ್ದಾರೆ.
ಬಹಿಷ್ಕರಣ ಟ್ರೇಲರ್ನಲ್ಲಿ ಏನಿದೆ?
ಮಂಚದಲ್ಲಿ ತಪ್ಪು ಮಾಡುವ ಡೈಲಾಗ್ನೊಂದಿಗೆ ಟ್ರೇಲರ್ ಆರಂಭವಾಗುತ್ತದೆ. ಚೆಡ್ಡೋಡಿ ಎಂಬ ಊರಿನ ಇತಿಹಾಸದ ಬಗ್ಗೆ ತಿಳಿಸುತ್ತದೆ. ಒಂದೆಡೆ ಹಸಿರಿನಿಂದ ಕೂಡಿದ ಹಳ್ಳಿ, ಅಂಜಲಿ, ಶ್ರೀತೇಜ್ ಮತ್ತು ಅನನ್ಯ ನಾಗಲ್ಲ ಪಾತ್ರಧಾರಿಗಳ ದೃಶ್ಯಗಳು ಈ ಟ್ರೇಲರ್ನಲ್ಲಿದೆ. ಊರಿನ ಹಿರಿಯರು ಮತ್ತು ಅಲ್ಲಿನ ಜನರು ಮಾಡುವ ದೌರ್ಜನ್ಯಗಳ ಕುರಿತು ವಿವರ ಟ್ರೇಲರ್ನಲ್ಲಿದೆ. ಇಂತಹ ಊರಿಗೆ ಪುಷ್ಪಾ ಎಂಬ ಯುವತಿ ಬರುತ್ತಾಳೆ. ಪುಷ್ಪಾ ಬಂದ ನಂತರ ಅಲ್ಲಿನ ಪರಿಸ್ಥಿತಿಗಳು ಬದಲಾಗುತ್ತವೆ. ಪುಷ್ಪಾ ಅಲ್ಲಿಂದ ಬಂದಿದ್ದು ಯಾಕೆ? ಅವಳಿಗೂ ಊರಿನ ಹಿರಿಯನಿಗೂ ಏನು ಸಂಬಂಧ? ಹುಡುಗಿಯರನ್ನು ಆಟಿಕೆಗಳಂತೆ ಕಂಡವರು ಏನಾದರು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ನೀಡಲಿದೆ ಬಹಿಷ್ಕರಣ ವೆಬ್ ಸರಣಿ.
ಇಲ್ಲಿ ಅಂಜಲಿ ಪಾತ್ರ ಎರಡು ಮುಖಗಳನ್ನು ಹೊಂದಿದೆ. ಒಂದೆಡೆ ಪ್ರೀತಿ ಸ್ಪುರಿಸುವ ಸುಂದರಿ. ಇನ್ನೊಂದೆಡೆ ಕೋಪದಿಂದ ಅಬ್ಬರಿಸುವ ವಿಲನ್. ಭಾವನಾತ್ಮಕವಾಗಿ ಬೆಚ್ಚಿ ಬೀಳಿಸುವಂತೆ ಅಂಜಲಿ ನಟಿಸಿದ್ದಾರೆ.
ಆ ಪ್ರಶಾಂತವಾದ ಗ್ರಾಮಕ್ಕೆ ಇವಳು ಯಾಕೆ ಬಂದಳು. ಅಲ್ಲಿ ಅವಳು ಎದುರಿಸಿದ ಸನ್ನಿವೇಶಗಳೇನು? ಅವಳು ಯಾರ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿದ್ದಾಳೆ? ಯಾಕೆ? ಅವಳಿಗೆ ಈ ದ್ವೇಷ? ಮುಂತಾದ ಹಲವು ವಿಚಾರಗಳ ಮೂಲಕ ಈ ವೆಬ್ ಸರಣಿ ಕುತೂಹಲ ಹೆಚ್ಚಿಸಿದೆ. ಈ ಟ್ರೇಲರ್ನಲ್ಲಿ ರೋಚಕ ಮತ್ತು ಬೋಲ್ಡ್ ದೃಶ್ಯಗಳು ಬೇಕಾದಷ್ಟಿವೆ.
ಯಾವ ಒಟಿಟಿಯಲ್ಲಿ? ಯಾವಾಗ ಸ್ಟ್ರೀಮಿಂಗ್?
ಬಹಿಷ್ಕರಣ ವೆಬ್ ಸರಣಿಯು ಝೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದೇ ಜುಲೈ 19ರಂದು ಒಟಿಟಿಯಲ್ಲಿ ರಿಲೇಸ್ ಆಗಲಿದೆ. ಬಹಿಷ್ಕರಣ ವೆಬ್ ಸರಣಿಯನ್ನು ZEE 5 ಮತ್ತು ಪಿಕ್ಸೆಲ್ ಪಿಕ್ಚರ್ಸ್ ಇಂಡಿಯಾ ಬ್ಯಾನರ್ನಡಿ ನಿರ್ಮಿಸಲಾಗಿದೆ. ಸುಮಾರು 6 ಕಂತುಗಳನ್ನು ಈ ವೆಬ್ ಸರಣಿ ಹೊಂದಿರಲಿದೆ.
ಈ ತೆಲುಗು ವೆಬ್ ಸರಣಿಗೆ ಸಿದ್ಧಾರ್ಥ್ ಸದಾಶಿವುನಿ ಸಂಗೀತ ನೀಡಿದ್ದು, ಪ್ರಸನ್ನ ಕುಮಾರ್ ಅವರ ಛಾಯಾಗ್ರಹಣವಿದೆ. ರವಿತೇಜ ಅವರು ಗಿರಿಜಾಲ ಪತ್ರಿಕೆಯ ಸಂಪಾದಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಅಂಜಲಿ, ರವೀಂದ್ರ ವಿಜಯ್, ಶ್ರೀತೇಜ್, ಅನನ್ಯ ನಾಗಲ್ಲ, ಷಣ್ಮುಕ್, ಚೈತನ್ಯ ಸಾಗಿರಾಜು, ಮೊಹಮ್ಮದ್ ಬಾಷಾ, ಬೇಬಿ ಚೈತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.