Kalki 2898 AD OTT: ಪ್ರಭಾಸ್, ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಆನ್‌ಲೈನ್ ಸ್ಟ್ರೀಮಿಂಗ್ ವಿವರ
Kalki 2898 AD OTT Release Date: ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಬ್ ಬಚ್ಚನ್ ನಟನೆಯ ಕಲ್ಕಿ 2898 ಎಡಿ ಒಟಿಟಿಯಲ್ಲಿ ಬಿಡುಗಡೆ ಈ ಹಿಂದೆ ಅಂದುಕೊಂಡಷ್ಟು ಬೇಗ ಆಗುತ್ತಿಲ್ಲ. ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್ ಕಂಪನಿಗಳು ಒಟಿಟಿ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದಿವೆ.

ಬೆಂಗಳೂರು: ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಬ್ ಬಚ್ಚನ್ ನಟನೆಯ ಬ್ಲಾಕ್‌ಬಸ್ಟರ್ ಕಲ್ಕಿ 2898 ಎಡಿ ಸಿನಿಮಾವು ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ವಿವಿಧ ಕಾರಣಗಳಿಂದ ಥಿಯೇಟರ್‌ನಲ್ಲಿ ಈ ಸಿನಿಮಾ ನೋಡಲಾಗದೆ ಇರುವವರು ಮನೆಯಲ್ಲಿಯೇ ಕುಳಿತು ಈ ಅದ್ಧೂರಿ ಬಜೆಟ್‌ನ ಸಿನಿಮಾವನ್ನು ನೋಡಲು ಕಾಯುತ್ತಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ಒಟಿಟಿಗೆ ಆಗಮಿಸುವ ನಿರೀಕ್ಷೆಯಿತ್ತು. ಆದರೆ, ವರದಿಗಳು ಈ ವದಂತಿಯನ್ನು ಅಲ್ಲಗೆಳೆದಿದೆ.
ಕಲ್ಕಿ 2898 ಎಡಿ ಒಟಿಟಿಯಲ್ಲಿ ಬಿಡುಗಡೆ ಯಾವಾಗ?
ಕಲ್ಕಿ 2898 ಎಡಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 10 ವಾರಗಳ ಬಳಿಕವಷ್ಟೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಹೀಗಾಗಿ, ಆಗಸ್ಟ್ ತಿಂಗಳಲ್ಲಿ ಕಲ್ಕಿ ಒಟಿಟಿಗೆ ಬರಲಿದೆ ಎಂಬ ವದಂತಿ ಸುಳ್ಳಾಗಲಿದೆ. ಈ ಸಿನಿಮಾ ಜೂನ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಎಂಟು ವಾರದಲ್ಲಿ ಒಟಿಟಿಗೆ ಆಗಮಿಸುವುದಾದರೆ ಆಗಸ್ಟ್ ತಿಂಗಳಲ್ಲಿ ಒಟಿಟಿಗೆ ರಿಲೀಸ್ ಆಗಬೇಕಿತ್ತು. ಹತ್ತು ವಾರದ ಬಳಿಕ ಎಂದರೆ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಆನ್‌ಲೈನ್‌ನಲ್ಲಿ ಕಲ್ಕಿ ಸಿನಿಮಾವನ್ನು ನೋಡಬಯಸುವವರು ಸೆಪ್ಟೆಂಬರ್ ತಿಂಗಳವರೆಗೆ ಕಾಯಬೇಕಿದೆ.
ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕಲ್ಕಿ 2898 ಎಡಿ ಸಿನಿಮಾವು ಭರ್ಜರಿ ಹಣ ಮಾಡುತ್ತಿರುವುದರಿಂದ ಒಟಿಟಿ ರಿಲೀಸ್ ವಿಳಂಬವಾಗಲಿದೆ. ಭಾರತ ಮಾತ್ರವಲ್ಲದೆ ಜಗತ್ತಿನ ವಿವಿಧ ಮಾರುಕಟ್ಟೆಗಳಲ್ಲಿ ಈ ಸಿನಿಮಾದಿಂದ ಗಳಿಕೆ ಹೆಚ್ಚಿಸಿಕೊಳ್ಳಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಈ ಕಾರಣದಿಂದ ಎರಡು ವಾರ ತಡವಾಗಿಯೇ ಒಟಿಟಿಗೆ ಆಗಮಿಸಲಿದೆ.
ಕಲ್ಕಿ 2898 ಎಡಿ ಸಿನಿಮಾ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇಂಗ್ಲಿಷ್ ಸಬ್‌ಟೈಟಲ್‌ಗಳೊಂದಿಗೆ ಬಿಡುಗಡೆಯಾಗಲಿದೆ. ಹಿಂದಿ ವರ್ಷನ್‌ನ ಕಲ್ಕಿ 2898 ಎಡಿ ಸಿನಿಮಾವು ನೆಟ್‌ಪ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಭಾರತದ ದುಬಾರಿ ಸಿನಿಮಾವೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಈ ಸಿನಿಮಾವು ಈಗಾಗಲೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿದೆ. ಇದೇ ಸಮಯದಲ್ಲಿ ಈ ಸಿನಿಮಾ ಒಟಿಟಿಗೆ ಯಾವಾಗ ಆಗಮಿಸಲಿದೆ ಎಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಅಪ್‌ಡೇಟ್ ನೀಡುವುದನ್ನು ಕಾಯುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ 3ಡಿಯಲ್ಲಿ ನೋಡಿದರೆ ಉತ್ತಮ ಅನುಭವ ಸಿಗುತ್ತದೆ. ಇದೇ ಕಾರಣಕ್ಕೆ ಬಹುತೇಕ ಸಿನಿಮಾ ಪ್ರೇಮಿಗಳು ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಕಣ್ತುಂಬಿಕೊಂಡಿದ್ದು, ಇನ್ನೊಂದು ಬಾರಿ ಒಟಿಟಿಯಲ್ಲಿ ನೋಡಲು ಕಾತರರಾಗಿದ್ದಾರೆ.
ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾವು ಜಾಗತಿಕ ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ಈ ಹಿಂದೆ ನಾಗ್ ಅಶ್ವಿನ್ ಅವರು ಮಹಾನಟಿ ಮತ್ತು ಯೆವಡೆ ಸುಬ್ರಹ್ಮಣ್ಯಂನಂತಹ ಮೂವಿಗಳನ್ನು ಇವರು ಮಾಡಿದ್ದರು. ಕಲ್ಕಿ ಸಿನಿಮಾವನ್ನು ವೈಜಯಂತಿ ಮೂವಿಸ್‌ನಡಿ ನಿರ್ಮಾಣ ಮಾಡಲಾಗಿದೆ. ಕಲ್ಕಿ ಸಿನಿಮಾದಲ್ಲಿ ಹಾಲಿವುಡ್‌ನ ಹಲವು ಸಿನಿಮಾಗಳ ಪ್ರಭಾವ, ಸ್ಪೂರ್ತಿ ಹೆಚ್ಚಿದೆ.
