OTT Play Awards 2025: ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟ ಶ್ರೀಮುರಳಿಗೆ ಒಟಿಟಿ ಪ್ಲೇ ಪ್ರಶಸ್ತಿ
OTT Play Awards 2025 Winners List: ಒಟಿಟಿ ಪ್ಲೇ ಅವಾರ್ಡ್ಸ್ 2025ರ ಮೂರನೇ ಆವೃತ್ತಿಯು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಶನಿವಾರ (ಮಾ. 22) ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಿತು. ಆ ಪೈಕಿ ಗರ್ಲ್ಸ್ ವಿಲ್ ಬಿ ಗರ್ಲ್ಸ್ ಸಿನಿಮಾಕ್ಕೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ. ಇಲ್ಲಿದೆ ಒಟಿಟಿ ಪ್ಲೇ ಅವಾರ್ಡ್ಸ್ ವಿಜೇತರ ಸಂಪೂರ್ಣ ಪಟ್ಟಿ.

OTT Play Awards 2025 Winners List: 2025ರ ಮೂರನೇ ಆವೃತ್ತಿಯ ಒಟಿಟಿ ಪ್ಲೇ ಅವಾರ್ಡ್ ಕಾರ್ಯಕ್ರಮ ಮುಂಬೈನಲ್ಲಿ ಶನಿವಾರ (ಮಾ. 22) ಅದ್ಧೂರಿಯಾಗಿ ನೆರವೇರಿದೆ. ಈ ಸಮಾರಂಭದಲ್ಲಿ ಬಾಲಿವುಡ್ ಮಾತ್ರವಲ್ಲದೆ, ಸೌತ್‌ನ ಸಾಕಷ್ಟು ಕಲಾವಿದರೂ ಭಾಗವಹಿಸಿದ್ದರು. Hindustan Times ಸಂಸ್ಥೆಯ ಸೋದರ ಸಂಸ್ಥೆಯಾಗಿರುವ OTT Play "ಒನ್ ನೇಷನ್- ಒನ್ ಅವಾರ್ಡ್" ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಸಲದ ಪ್ರಶಸ್ತಿಗಳನ್ನು ನೀಡಿದೆ. ಇಲ್ಲಿದೆ ಮೂರನೇ ಆವೃತ್ತಿಯ ವಿಜೇತರ ಸಂಪೂರ್ಣ ಪಟ್ಟಿ. ಇದರಲ್ಲಿ ಕನ್ನಡದಿಂದ ನಟ ಶ್ರೀಮುರಳಿ ಮತ್ತು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೂ ಅವಾರ್ಡ್ ಸಿಕ್ಕಿದೆ.
ವಿಜೇತರ ಪಟ್ಟಿ..
ಅತ್ಯುತ್ತಮ ಚಿತ್ರ - ಗರ್ಲ್ಸ್ ವಿಲ್ ಬಿ ಗರ್ಲ್ಸ್ (ಅಲಿ ಫಜಲ್ ಮತ್ತು ರಿಚಾ ಚಡ್ಡಾ)
ಅತ್ಯುತ್ತಮ ನಿರ್ದೇಶಕ- ಇಮ್ತಿಯಾಜ್ (ಚಿತ್ರ- ಅಮರ್ ಸಿಂಗ್ ಚಮ್ಕಿಲಾ),
ಅತ್ಯುತ್ತಮ ನಟ (ಕ್ರಿಟಿಕ್) - ಅನುಪಮ್ ಖೇರ್ (ವಿಜಯ್ 69, ದಿ ಸಿಗ್ನೇಚರ್)
ಅತ್ಯುತ್ತಮ ನಟ (ಪಾಪ್ಯುಲರ್) - ಮನೋಜ್ ಬಾಜಪೇಯಿ (ಡಿಸ್ಪ್ಯಾಚ್ ಸಿನಿಮಾ)
ಅತ್ಯುತ್ತಮ ನಟಿ (ಕ್ರಿಟಿಕ್) - ಪಾರ್ವತಿ ತಿರುವೋತ್ತು (ಮನೋರಥಂಗಳ್)
ಅತ್ಯುತ್ತಮ ನಟಿ (ಪಾಪ್ಯುಲರ್) - ಕಾಜೋಲ್ (ದೋ ಪತ್ತಿ)
ಅತ್ಯುತ್ತಮ ಖಳನಾಯಕ - ಸನ್ನಿ ಕೌಶಲ್ (ಫಿರ್ ಆಯೆ ಹಸೀನಾ ದಿಲ್ರುಬಾ)
ಅತ್ಯುತ್ತಮ ಹಾಸ್ಯ ನಟಿ - ಪ್ರಿಯಾಮಣಿ (ಭಾಮಕಲಾಪಂ 2)
ನಟನೆಯಲ್ಲಿ ಉತ್ತಮ ಸಾಧನೆ ಮಾಡಿದ ನಟ - ಅವಿನಾಶ್ (ತಿವಾರಿ ದಿ ಮೆಹ್ತಾ ಬಾಯ್ಸ್)
ನಟನೆಯಲ್ಲಿ ಉತ್ತಮ ಸಾಧನೆ ಮಾಡಿದ ನಟಿ - ಶಾಲಿನಿ ಪಾಂಡೆ (ಮಹಾರಾಜ್)
ಅತ್ಯುತ್ತಮ ವೆಬ್ ಸರಣಿ - ಪಂಚಾಯತ್ 3
ಅತ್ಯುತ್ತಮ ನಿರ್ದೇಶಕ - ನಿಖಿಲ್ ಅಡ್ವಾಣಿ (ಫ್ರೀಡಂ ಅಟ್ ಮಿಡ್‌ನೈಟ್)
ಅತ್ಯುತ್ತಮ ನಟ (ಪಾಪ್ಯುಲರ್) - ರಾಘವ್ ಜ್ಯುವೆಲ್ (ಗ್ಯಾರಾ ಗ್ಯಾರಾ)
ಅತ್ಯುತ್ತಮ ನಟ (ಕ್ರಿಟಿಕ್) - ಜೈದೀಪ್ ಅಹ್ಲಾವತ್ (ಪಾತಾಳ್ ಲೋಕ್ ಸೀಸನ್ 2)
ಅತ್ಯುತ್ತಮ ಪೋಷಕ ನಟ - ರಾಹುಲ್ ಭಟ್ (ಬ್ಲ್ಯಾಕ್ ವಾರಂಟ್)
ಅತ್ಯುತ್ತಮ ಪೋಷಕ ನಟಿ - ಜ್ಯೋತಿಕಾ (ಡಬ್ಬಾ ಕಾರ್ಟೆಲ್)
ಅತ್ಯುತ್ತಮ ಹಾಸ್ಯನಟ - ನೀರಜ್ ಮಾಧವ್ (ಲವ್ ಅಂಡರ್ ಕನ್‌ಸ್ಟ್ರಕ್ಷನ್ )
ನಟನೆಯಲ್ಲಿ ಉತ್ತಮ ಸಾಧನೆ ಮಾಡಿದ ನಟ - ಅಭಿಷೇಕ್ ಕುಮಾರ್ (ತಲೈವೆಟೈಯಾನ್ ಪಾಲಯಂ)
ನಟನೆಯಲ್ಲಿ ಉತ್ತಮ ಸಾಧನೆ ಮಾಡಿದ ನಟಿ - ಪತ್ರಲೇಖಾ (ಐಸಿ 814)
ಅತ್ಯುತ್ತಮ ಟಾಕ್ ಶೋ ನಿರೂಪಕ - ರಾಣಾ ದಗ್ಗುಬಾಟಿ (ರಾಣಾ ದಗ್ಗುಬಾಟಿ)
ಅತ್ಯುತ್ತಮ ನಾನ್ ಸ್ಕ್ರಿಪ್ಟ್ ಕಾರ್ಯಕ್ರಮ- ಶಾರ್ಕ್ ಟ್ಯಾಂಕ್ (ಬಿಮಲ್ ಉನ್ನಿ ಕೃಷ್ಣನ್, ರಾಹುಲ್ ಹೊಟ್ಚಂದಾನಿ)
ಟ್ರಯಲ್ ಬ್ಲೇಜರ್ ಆಫ್ ದಿ ಇಯರ್ ( ಕನ್ನಡ ನಟ) - ಶ್ರೀಮುರಳಿ (ಚಿತ್ರ- ಬಘೀರ)
ಟ್ರಯಲ್ ಬ್ಲೇಜರ್ ಆಫ್ ದಿ ಇಯರ್ (ನಟಿ) - ದಿವ್ಯಾ ದತ್ತಾ (ಶರ್ಮಾಜಿ ಕಿ ಬೇಟಿ, ಬ್ಯಾಂಡಿಶ್ ಬ್ಯಾಂಡಿಟ್ಸ್ ಸೀಸನ್ 2)
ವರ್ಸಟೇಲ್ ಫರ್ಫಾಮರ್ ಆಫ್ ದಿ ಇಯರ್ (ನಟಿ) - ಕಾನಿ ಕುಶ್ರುತಿ
ಅತ್ಯುತ್ತಮ ಸಾಕ್ಷ್ಯಚಿತ್ರ ಸರಣಿ - ದಿ ರೋಶನ್ಸ್ (ರಾಜೇಶ್ ರೋಷನ್, ರಾಕೇಶ್ ರೋಷನ್, ಶಶಿ ರಂಜನ್)
ಪಯನೀರ್ ಕಾಂಟ್ರಿಬ್ಯೂಷನ್ ಟು ನ್ಯೂ ವೇವ್ ಸಿನಿಮಾ; ಅಶ್ವಿನಿ ಪುನೀತ್ ರಾಜ್‌ಕುಮಾರ್
ಭರವಸೆಯ ನಟ - ಅಪರ್ಶಕ್ತಿ ಖುರಾನಾ (ದಿ ಬರ್ಲಿನ್)
ಭರವಸೆಯ ನಟಿ - ಹೀನಾ ಖಾನ್ (ಗೃಹಲಕ್ಷ್ಮಿ ವೆಬ್ ಸರಣಿ)
ಅತ್ಯುತ್ತಮ ಒಟಿಟಿ ಸರಣಿ ಚೊಚ್ಚಲ - ವೇದಿಕಾ (ಯಕ್ಷಿಣಿ)
ವರ್ಷದ ಉದಯೋನ್ಮುಖ ತಾರೆ - ಅವನೀತ್ ಕೌರ್ (ಪಾರ್ಟಿ ಟಿಲ್ ಐ ಡೈ)
ನಟ ಶ್ರೀಮುರಳಿ ಭಾಗಿ
ಮುಂಬೈನಲ್ಲಿ ನಡೆದ ಈ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಟಾಲಿವುಡ್ ನಟ ರಾಣಾ ದಗ್ಗುಬಾಟಿ, ಪ್ರಿಯಾಮಣಿ, ವೇದಿಕಾ, ಶಾಲಿನಿ ಪಾಂಡೆ, ಜ್ಯೋತಿಕಾ, ಅದಿತಿ ರಾವ್ ಹೈದರಿ, ಮನೋಜ್ ಬಾಜಪೇಯಿ, ಕಾಜೋಲ್, ಅನುಪಮ್ ಖೇರ್ ಮತ್ತು ಶ್ರೀಮುರಳಿ ಈ ವರ್ಷದ ಒಟಿಟಿ ಪ್ಲೇ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಒಟಿಟಿ ಬೋಲ್ಡ್ ಚಿತ್ರಕ್ಕಾಗಿ ಗರ್ಲ್ಸ್ ವಿಲ್ ಬಿ ಗರ್ಲ್ಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದರೆ, ಕಾನಿ ಕುಶ್ರುತಿ ಬಹುಮುಖಿ ನಟಿ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದರು.

ವಿಭಾಗ