OTT Release This Week: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳಿವು; ಸಾಲು ಸಾಲು ಕ್ರೈಂ ಥ್ರಿಲ್ಲರ್ ಚಿತ್ರ ಬಿಡುಗಡೆ
ಕನ್ನಡ ಸುದ್ದಿ  /  ಮನರಂಜನೆ  /  Ott Release This Week: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳಿವು; ಸಾಲು ಸಾಲು ಕ್ರೈಂ ಥ್ರಿಲ್ಲರ್ ಚಿತ್ರ ಬಿಡುಗಡೆ

OTT Release This Week: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳಿವು; ಸಾಲು ಸಾಲು ಕ್ರೈಂ ಥ್ರಿಲ್ಲರ್ ಚಿತ್ರ ಬಿಡುಗಡೆ

ಈ ವಾರ ಒಟಿಟಿಯಲ್ಲಿ ಕ್ರೈಂ ಥ್ರಿಲ್ಲರ್ ಚಿತ್ರಗಳ ಪಟ್ಟಿಯೇ ಹೆಚ್ಚಿದೆ. ಹಾಲಿವುಡ್‌ನಿಂದ, ಕಾಲಿವುಡ್‌ನ ವರೆಗೆ ಸಾಕಷ್ಟು ಸಿನಿಮಾಗಳು ಈ ವಾರ ನಿಮ್ಮನ್ನು ರಂಜಿಸಲಿದೆ. ಇಲ್ಲಿದೆ ಕೆಲವು ಸಿನಿಮಾಗಳ ಪಟ್ಟಿ, ಗಮನಿಸಿ.

 ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳಿವು
ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳಿವು

ಸಿನಿ ಪ್ರಿಯರು ಥಿಯೇಟರ್ ಮಾತ್ರವಲ್ಲ ಅದಕ್ಕಿಂತ ಹೆಚ್ಚಾಗಿ ಒಟಿಟಿಯಲ್ಲಿ ಸಿನಿಮಾ ನೋಡಲು ಬಯಸುತ್ತಾರೆ. ಅದಕ್ಕೆ ತಕ್ಕಂತೆ ಪ್ರತಿ ವಾರವೂ ಹೊಸ ಹೊಸ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಲೇ ಇರುತ್ತದೆ. ಆ ಪ್ರಕಾರ ಈ ವಾರ ನೀವು ಯಾವೆಲ್ಲ ಹೊಸ ಸಿನಿಮಾಗಳನ್ನು ಒಟಿಟಿಯಲ್ಲಿ ವೀಕ್ಷಿಸಬಹುದು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ಬೇರೆ ಬೇರೆ ಒಟಿಟಿಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಪಟ್ಟಿ ಇಲ್ಲಿದೆ.

ಪಬ್ಲಿಕ್ ಡಿಸಾರ್ಡರ್ - ನೆಟ್‌ಫ್ಲಿಕ್ಸ್‌
ಈ ಆಕ್ಷನ್-ಪ್ಯಾಕ್ಡ್ ಕ್ರೈಮ್ ಥ್ರಿಲ್ಲರ್ ಸರಣಿಯು ಜನವರಿ 15ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಆಕ್ಷನ್ ಸಿನಿಮಾ ಇಷ್ಟಪಡುವವರಿಗೆ ಈ ವೆಬ್‌ ಸರಣಿ ಬೆಸ್ಟ್‌. ಒಂದಾದ ಮೇಲೊಂದು ಕಥೆಗಳನ್ನು ಜೋಡಿಸಿಕೊಂಡು ಕೊನೆಯವರೆಗೂ ಕುತೂಹಲ ಕಾಡುವಂತೆ ನಿರ್ಮಾಣ ಮಾಡಲಾದ ಈ ವೆಬ್‌ ಸಿರೀಸ್‌ಅನ್ನು ನೀವು ಈ ವಾರಾಂತ್ಯಕ್ಕೆ ನೋಡಬಹುದು.

ಹೆರಿಡಿಟರಿ -ನೆಟ್‌ಫ್ಲಿಕ್ಸ್‌
ಈ ಸಿನಿಮಾ ಹಾರರ್ ಸಿನಿಮಾ ಆಗಿದ್ದು, ಆರಂಭದಿಂದ ಕೊನೆಯವರೆಗೂ ನಿಮ್ಮನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿರುವ ಸಿನಿಮಾ ಆಗಿದೆ. ಸಿನಿಮಾ ನೋಡುತ್ತಿದ್ದರೆ ನಿಮಗೆಲ್ಲೂ ಬೋರ್ ಆಗುವುದಿಲ್ಲ. ಈ ಸಿನಿಮಾವನ್ನು ನೀವು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಜನವರಿ 15ರಿಂದ ವೀಕ್ಷಣೆಗೆ ಲಭ್ಯ

ಚಿಡಿಯಾ ಉಡ್ - ಅಮೆಜಾನ್‌

ಜಾಕಿ ಶ್ರಾಫ್ , ಸಿಕಂದರ್ ಖೇರ್ ಮತ್ತು ಭೂಮಿಕಾ ಮೀನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಈ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯವಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ ಭೂಗತ ಜಗತ್ತಿನ ಕ್ರಿಮಿನಲ್‌ಗಳ ನಡುವಿನ ಕ್ರಾಸ್‌ಫೈರ್‌ನಲ್ಲಿ ಸಿಕ್ಕಿಬಿದ್ದ ರಾಜಸ್ಥಾನದ ಸೆಹೆರ್ ಎಂಬ 20 ವರ್ಷದ ಮಹಿಳೆಯ ಕಥೆಯನ್ನು ಈ ಸಿನಿಮಾದಲ್ಲಿ ನಿರೂಪಿಸಲಾಗಿದೆ. ಜನವರಿ 15ರಿಂದ ವೀಕ್ಷಣೆಗೆ ಲಭ್ಯ.

ಪಾತಾಳ್ ಲೋಕ್‌ ಸೀಸನ್ 2 -ಅಮೆಜಾನ್ ಪ್ರೈಮ್ ವಿಡಿಯೋ

ಅಮೆಜಾನ್ ಪ್ರೈಮ್ ವಿಡಿಯೋ, ತನ್ನ ಜನಪ್ರಿಯ ಕ್ರೈಮ್ ಥ್ರಿಲ್ಲರ್ ವೆಬ್‌ ಸರಣಿ ಪಾತಾಳ್ ಲೋಕ್ ಸೀಸನ್ 2 ಬಿಡುಗಡೆ ಮಾಡಲಿದೆ. ತಿಲ್ಲೋಟಮಾ ಶೋಮ್ , ಇಶ್ವಾಕ್ ಸಿಂಗ್, ಮತ್ತು ಗುಲ್ ಪನಾಗ್ ಹಾಗೂ ಇನ್ನಿತರ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ಇದೊಂದು ಕೊಲೆ ಪ್ರಕರಣವನ್ನು ಭೇದಿಸುವ ಕಥೆಯನ್ನು ಹೊಂದಿದೆ. ಜೈದೀಪ್ ಅಹ್ಲಾವತ್ ಇನ್ಸ್‌ಪೆಕ್ಟರ್ ಹಾಥಿರಾಮ್ ಚೌಧರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 17ರಿಂದ ವೀಕ್ಷಣೆಗೆ ಲಭ್ಯ.

ವಿದುತಲೈ ಭಾಗ 2 - ZEE5
ಅತ್ಯಂತ ನಿರೀಕ್ಷಿತ ಆಕ್ಷನ್-ಪ್ಯಾಕ್ಡ್ ಕ್ರೈಮ್ ಥ್ರಿಲ್ಲರ್ ವಿದುತಲೈ 2, OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ಗೆ ತಯಾರಿ ನಡೆಸಿದೆ. ಇನ್ನೆರಡು ದಿನಗಳಲ್ಲಿ ಅಂದರೆ ಜನವರಿ 17ರಿಂದ ಜೀ5 ಒಟಿಟಿಯಲ್ಲಿ ನೀವು ‘ವಿದುತಲೈ ಭಾಗ 2’ ನೋಡಬಹುದು. ವಿಜಯ್ ಸೇತುಪತಿ ಅಭಿನಯದ ಈ ಸಿನಿಮಾ ನೋಡಲು ಸಾಕಷ್ಟು ಅಭಿಮಾನಿಗಳು ಈಗಾಗಲೇ ಕಾದಿದ್ದು, ಇನ್ನೆರಡೇ ದಿನಗಳಲ್ಲಿ ಈ ಸಿನಿಮಾ ಒಟಿಟಿಗೆ ಬರಲಿದೆ ಎಂದು ಸಂತಸದಲ್ಲಿದ್ದಾರೆ. ಸಾಕಷ್ಟು ಮೆಚ್ಚುಗೆ ಪಡೆದುಕೊಂಡ ಈ ಸಿನಿಮಾ ಒಟಿಟಿಯಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಳ್ಳುವ ಸಾಧ್ಯತೆಯೂ ಇದೆ.

ಚಿತ್ರದಲ್ಲಿ ಮಂಜು ವಾರಿಯರ್ ಕೂಡ ನಟಿಸಿದ್ದಾರೆ. ವಿಜಯ್ ಸೇತುಪತಿ ಅವರ ಪವರ್ ಪ್ಯಾಕ್ಡ್ ಅಭಿನಯಕ್ಕಾಗಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ರೈಫಲ್ ಕ್ಲಬ್ -ನೆಟ್‌ಫ್ಲಿಕ್ಸ್
ಜನವರಿ 16, 2025ರಿಮದ ರೈಫಲ್ ಕ್ಲಬ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಅನುರಾಗ್ ಕಶ್ಯಪ್ ಮತ್ತು ದಿಲೀಶ್ ಪೋತನ್‌ರಂತಹ ಚಲನಚಿತ್ರ ನಿರ್ಮಾಪಕರು-ನಟರಿಂದ ಹಿಡಿದು ಮಲಯಾಳಂನ ಹೆಸರಾಂತ ನಟಿಯರಾದ ದರ್ಶನಾ ರಾಜೇಂದ್ರನ್ ಮತ್ತು ವಾಣಿ ವಿಶ್ವನಾಥ್ ಕೂಡ ಈ ಸಿನಿಮಾದಲ್ಲಿ ಭಾಗಿಯಾಗಿದ್ದಾರೆ. ಉತ್ತಮ ಚಿತ್ರತಂಡ ನಿರ್ಮಾಣ ಮಾಡಿದ ಸಿನಿಮಾ ಇದಾಗಿದ್ದು, ಇದು ಶಸ್ತ್ರಾಸ್ತ್ರ ವ್ಯಾಪಾರಿಗಳ ಕುರಿತು ಹಾಗೂ ಅವರನ್ನು ಎದುರಿಸಿದ ರೀತಿಯ ಬಗ್ಗೆ ಇರುವ ಕಥನವನ್ನು ಹೊಂದಿದೆ.

Whats_app_banner