ಒಟಿಟಿಯಲ್ಲಿ ಸಿನಿಮಾ ಜಾತ್ರೆ, ಈ ವಾರ ಡಿಜಿಟಲ್‌ ವೇದಿಕೆಗೆ ಬರಲಿವೆ ಒಟ್ಟು 23 ಹೊಸ ಸಿನಿಮಾ, ವೆಬ್‌ ಸಿರೀಸ್‌ಗಳು
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ ಸಿನಿಮಾ ಜಾತ್ರೆ, ಈ ವಾರ ಡಿಜಿಟಲ್‌ ವೇದಿಕೆಗೆ ಬರಲಿವೆ ಒಟ್ಟು 23 ಹೊಸ ಸಿನಿಮಾ, ವೆಬ್‌ ಸಿರೀಸ್‌ಗಳು

ಒಟಿಟಿಯಲ್ಲಿ ಸಿನಿಮಾ ಜಾತ್ರೆ, ಈ ವಾರ ಡಿಜಿಟಲ್‌ ವೇದಿಕೆಗೆ ಬರಲಿವೆ ಒಟ್ಟು 23 ಹೊಸ ಸಿನಿಮಾ, ವೆಬ್‌ ಸಿರೀಸ್‌ಗಳು

ಈ ವಾರ 23 ಸಿನೆಮಾಗಳು ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗಲಿವೆ. ಆ 23 ಸಿನಿಮಾಗಳಲ್ಲಿ 8 ಸಿನಿಮಾಗಳು ವಿಶೇಷ ಎನಿಸಿವೆ. ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ಸೋನಿ ಲಿವ್ ಒಟಿಟಿಗಳಲ್ಲಿ ಈ ವಾರ ಬಿಡುಗಡೆಯಾಗುವ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳ ಮಾಹಿತಿ ಇಲ್ಲಿದೆ.

ಒಟಿಟಿಯಲ್ಲಿ ಸಿನಿಮಾ ಜಾತ್ರೆ, ಈ ವಾರ ಡಿಜಿಟಲ್‌ ವೇದಿಕೆಗೆ ಬಂದಿವೆ ಒಟ್ಟು 23 ಹೊಸ ಸಿನಿಮಾ, ವೆಬ್‌ ಸಿರೀಸ್‌ಗಳು
ಒಟಿಟಿಯಲ್ಲಿ ಸಿನಿಮಾ ಜಾತ್ರೆ, ಈ ವಾರ ಡಿಜಿಟಲ್‌ ವೇದಿಕೆಗೆ ಬಂದಿವೆ ಒಟ್ಟು 23 ಹೊಸ ಸಿನಿಮಾ, ವೆಬ್‌ ಸಿರೀಸ್‌ಗಳು

ಒಟಿಟಿಗೆ ಎಂದಿನಂತೆ ಈ ವಾರವೂ 23 ಸಿನಿಮಾ ಮತ್ತು ವೆಬ್‌ಸರಣಿಗಳು ಡಿಜಿಟಲ್ ಸ್ಟ್ರೀಮಿಂಗ್ ಆಗಲಿವೆ. ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ಸೋನಿ ಲಿವ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಹೊಸ ಸಿನಿಮಾಗಳು ಆಗಮಿಸಲಿವೆ. ಆ ಸಿನಿಮಾಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ನೆಟ್‌ಫ್ಲಿಕ್ಸ್ ಒಟಿಟಿ

  • ಚೆಫ್ಸ್ ಟೇಬಲ್: ಲೆಜೆಂಡ್ಸ್ (ಇಂಗ್ಲಿಷ್ ಡಾಕ್ಯುಮೆಂಟರಿ ವೆಬ್ ಸರಣಿ)- ಏಪ್ರಿಲ್ 28
  • ಆಸ್ಟರಿಕ್ಸ್ ಅಂಡ್ ಒಬೆಲಿಕ್ಸ್: ದಿ ಬಿಗ್ ಫೈಟ್ (ಇಂಗ್ಲಿಷ್ ಅನಿಮೇಷನ್ ವೆಬ್ ಸರಣಿ)- ಏಪ್ರಿಲ್ 30
  • ಎಕ್ಸ್‌ಟೆರಿಟೋರಿಯಲ್ (ಇಂಗ್ಲಿಷ್ ಆಕ್ಷನ್ ಥ್ರಿಲ್ಲರ್ ಚಿತ್ರ)- ಏಪ್ರಿಲ್ 30
  • ದಿ ಎಟರ್ನಾಟ್ (ಸ್ಪ್ಯಾನಿಷ್ ಸೈನ್ಸ್ ಫಿಕ್ಷನ್ ವೆಬ್ ಸರಣಿ)- ಏಪ್ರಿಲ್ 30
  • ದಿ ಟರ್ನಿಂಗ್ ಪಾಯಿಂಟ್: ದಿ ವಿಯೆಟ್ನಾಂ ವಾರ್ (ಇಂಗ್ಲಿಷ್ ಡಾಕ್ಯುಮೆಂಟರಿ ಸರಣಿ)- ಏಪ್ರಿಲ್ 30
  • ದಿ ರಾಯಲ್ಸ್ (ಹಿಂದಿ ರೊಮ್ಯಾಂಟಿಕ್ ಫ್ಯಾಮಿಲಿ ಕಾಮೆಡಿ ಡ್ರಾಮಾ ವೆಬ್ ಸರಣಿ)- ಮೇ 1
  • ದಿ ಬಿಗ್ಗೆಸ್ಟ್ ಫ್ಯಾನ್ (ಇಂಗ್ಲಿಷ್ ರೊಮ್ಯಾಂಟಿಕ್ ಡ್ರಾಮಾ ಚಿತ್ರ)- ಮೇ 1
  • ಯಾಂಗಿ: ಫೇಕ್ ಲೈಫ್, ಟ್ರೂ ಕ್ರೈಮ್ (ಸ್ಪ್ಯಾನಿಷ್ ಡಾಕ್ಯುಮೆಂಟರಿ ಸರಣಿ)- ಮೇ 1
  • ದಿ ಫೋರ್ ಸೀಸನ್ಸ್ (ಇಂಗ್ಲಿಷ್ ಕಾಮಿಡಿ ವೆಬ್ ಸರಣಿ) - ಮೇ 1
  • ಬ್ಯಾಡ್ ಬಾಯ್ (ಇಂಗ್ಲಿಷ್ ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ವೆಬ್ ಸರಣಿ)- ಮೇ 2
  • ಜಿಯೋ ಹಾಟ್‌ಸ್ಟಾರ್ ಒಟಿಟಿ
  • ಕುಲ್ಲ್: ದಿ ಲೆಗಸಿ ಆಫ್ ದಿ ರೈಸಿಂಗ್ಸ್ (ಹಿಂದಿ ಫ್ಯಾಮಿಲಿ ಥ್ರಿಲ್ಲರ್ ಡ್ರಾಮಾ ವೆಬ್ ಸರಣಿ)- ಮೇ 2
  • ದಿ ಬ್ರೌನ್ ಹಾರ್ಟ್ (ಇಂಗ್ಲಿಷ್ ಡಾಕ್ಯುಮೆಂಟರಿ ಸರಣಿ)- ಮೇ 3

ಇದನ್ನೂ ಓದಿ: ಒಟಿಟಿಗೆ ಬರ್ತಿದೆ ಮತ್ತೊಂದು ಕ್ರೈಮ್ ಥ್ರಿಲ್ಲರ್ ವೆಬ್‌ಸರಣಿ; ಮೇ 2 ರಿಂದ ಬ್ಲ್ಯಾಕ್ ವೈಟ್ ಅಂಡ್ ಗ್ರೇ ಲವ್ ಕಿಲ್ಸ್‌ ಪ್ರಸಾರ

ಅಮೆಜಾನ್ ಪ್ರೈಮ್ ಒಟಿಟಿ

  • ವಿಯರ್ ವಾಟ್ ಎವರ್ ದಿ ಫ ಯೂ ವಾಂಟ್ (ಅಮೆರಿಕನ್ ರಿಯಾಲಿಟಿ ಟಿವಿ ಸರಣಿ)- ಏಪ್ರಿಲ್ 29
  • ಅನೆದರ್ ಸಿಂಪಲ್ ಫೇವರ್ (ಇಂಗ್ಲಿಷ್ ಮಿಸ್ಟರಿ ಥ್ರಿಲ್ಲರ್ ಕಾಮಿಡಿ ಚಿತ್ರ)- ಮೇ 1

ಸೋನಿ ಲಿವ್ ಒಟಿಟಿ

  • ಬ್ರೊಮಾನ್ಸ್ (ಮಲಯಾಳಂ ಅಡ್ವೆಂಚರ್ ಕಾಮಿಡಿ ಸಿನೆಮಾ)- ಮೇ 1
  • ಬ್ಲಾಕ್, ವೈಟ್ ಅಂಡ್ ಗ್ರೆ: ಲವ್ ಕಿಲ್ಸ್ (ಹಿಂದಿ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ)- ಮೇ 1

ಆಪಲ್ ಪ್ಲಸ್ ಟಿವಿ: ಕೇರ್‌ಮೀ (ಇಂಗ್ಲಿಷ್ ಹಿಸ್ಟಾರಿಕಲ್ ಡ್ರಾಮಾ ವೆಬ್ ಸರಣಿ)- ಏಪ್ರಿಲ್ 30

ಚೌಪಾಲ್ ಒಟಿಟಿ: ಚಲ್ ಮೇರಾ ಪುಟ್ 2 (ಪಂಜಾಬಿ ಕಾಮಿಡಿ ಡ್ರಾಮಾ ಸಿನೆಮಾ)- ಏಪ್ರಿಲ್ 30

ಜೀ5 ಒಟಿಟಿ: ಕೊಸ್ಟಾವೋ (ಹಿಂದಿ ಬಯಾಗ್ರಫಿಕಲ್ ಕ್ರೈಮ್ ಡ್ರಾಮಾ ಚಿತ್ರ)- ಮೇ 1

ಆಹಾ ಒಟಿಟಿ: ವೇರೆ ಲೆವೆಲ್ ಆಫೀಸ್ ರೀಲೋಡೆಡ್ (ತೆಲುಗು ಕಾಮಿಡಿ ಡ್ರಾಮಾ ವೆಬ್ ಸರಣಿ)- ಮೇ 1

ಎಮ್ಎಕ್ಸ್ ಪ್ಲೇಯರ್ ಒಟಿಟಿ: ಇಎಮ್‌ಐ (ತಮಿಳು ಫ್ಯಾಮಿಲಿ ಡ್ರಾಮಾ ಸಿನೆಮಾ)- ಮೇ 1

ಹೊಯ್‌ಚೊಯ್ ಒಟಿಟಿ: ಭೋಗ್ (ಬೆಂಗಾಲಿ ಹಾರರ್ ಥ್ರಿಲ್ಲರ್ ವೆಬ್ ಸರಣಿ)- ಮೇ 1

ಟುಬಿ ಒಟಿಟಿ: ಸಿಸ್ಟರ್ ಮಿಡ್‌ಸೈಟ್ (ಹಿಂದಿ ಕಾಮಿಡಿ ಡ್ರಾಮಾ ಮೂವಿ)- ಮೇ 2

ಈ ವಾರ 23 ಸಿನಿಮಾಗಳು

ಈ ವಾರ (ಏಪ್ರಿಲ್ 28 ರಿಂದ ಮೇ 4) ಸಿನಿಮಾಗಳು, ವೆಬ್ ಸರಣಿಗಳು ಸೇರಿ ಒಟ್ಟು 23 ಕಂಟೆಂಟ್‌ಗಳು ಸ್ಟ್ರೀಮಿಂಗ್‌ಗೆ ಬರಲಿವೆ. ಇವುಗಳಲ್ಲಿ ಕಾಮಿಡಿ, ಹಾರರ್‌, ಥ್ರಿಲ್ಲರ್‌ ಸಿನಿಮಾ ಮತ್ತು ವೆಬ್‌ ಸಿರೀಸ್‌ಗಳು ವೀಕ್ಷಕರನ್ನು ಸೆಳೆಯಲಿವೆ. ಹಾರರ್ ಥ್ರಿಲ್ಲರ್ ಭೋಗ್, ಸಿಸ್ಟರ್ ಮಿಡ್‌ನೈಟ್, ಮನೋಜ್ ಬಾಜ್‌ಪಾಯ್ ಅವರ ಕೊಸ್ಟಾವೋ, ಮಲಯಾಳಂನ ಬ್ರೊಮಾನ್ಸ್, ದಿ ರಾಯಲ್ಸ್, ಬ್ಲಾಕ್, ವೈಟ್ ಅಂಡ್ ಗ್ರೆ: ಲವ್ ಕಿಲ್ಸ್ ಸಿನಿಮಾಗಳು ವಿಶೇಷ ಎನಿಸಿವೆ. ಅಚ್ಚರಿಯ ವಿಚಾರ ಏನೆಂದರೆ ಕೆಲ ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗಿ ಪ್ರಸಾರ ಕಾಣಲು ಸಜ್ಜಾಗಿವೆಯಾದರೂ, ಕನ್ನಡದ ಒಂದೇ ಒಂದು ಸಿನಿಮಾ ಒಟಿಟಿಯತ್ತ ಮುಖ ಮಾಡಿಲ್ಲ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.