ಒಟಿಟಿಗೆ ಎಂಟ್ರಿಕೊಟ್ಟಿವೆ ಚಿತ್ರಮಂದಿರಗಳಲ್ಲಿ ಹಿಟ್ ಆದ ಮೂರು ಸಿನಿಮಾಗಳು, ಒಂದು ಚಿತ್ರ ನೇರವಾಗಿ ಡಿಜಿಟಲ್ ಸ್ಟ್ರೀಮಿಂಗ್
ಈ ವಾರ ಓಟಿಟಿಗಳಲ್ಲಿ ತೆಲುಗಿನಲ್ಲಿ ನಾಲ್ಕು ಸಿನೆಮಾಗಳು ಬಂದಿವೆ. ಅವು ವಿವಿಧ ಪ್ರಕಾರಗಳಲ್ಲಿವೆ. ಇದರಲ್ಲಿ ಎರಡು ಡಬ್ಬಿಂಗ್ ಸಿನೆಮಾಗಳಿವೆ. ತೆಲುಗಿನಲ್ಲಿ ಬಂದ ಆ ನಾಲ್ಕು ಸಿನೆಮಾಗಳು ಯಾವುವೆಂದರೆ...

ಈ ವಾರ ಒಟಿಟಿಗಳಲ್ಲಿ ಹಲವು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಆ ಪೈಕಿ ತೆಲುಗು, ತಮಿಳು ಮತ್ತು ಮಲಯಾಳಂನ ಒಟ್ಟು ನಾಲ್ಕು ಸಿನಿಮಾಗಳು ಆಸಕ್ತಿದಾಯಕ ಎನಿಸಿವೆ. ನಾಲ್ಕು ಸಿನಿಮಾಗಳ ಪೈಕಿ ಒಂದು ಚಿತ್ರ, ನೇರವಾಗಿ ಒಟಿಟಿಗೆ ಆಗಮಿಸಿದರೆ, ಇನ್ನು ಮೂರು ಸಿನಿಮಾಗಳು ಚಿತ್ರಮಂದರಿಗಳಲ್ಲಿ ತೆರೆಕಂಡು, ಡಿಜಿಟಲ್ ಪ್ರೀಮಿಯರ್‌ಗೆ ಬಂದಿವೆ. ಆ ಸಿನಿಮಾಗಳು ಯಾವವು? ಇಲ್ಲಿದೆ ವಿವರ.
ಅರ್ಜುನ್ ಸನ್ ಆಫ್ ವೈಜಯಂತಿ
ತೆಲುಗು ಆಕ್ಷನ್ ಮೂವಿ ʻಅರ್ಜುನ್ ಸನ್ ಆಫ್ ವೈಜಯಂತಿʼ ಈ ಶುಕ್ರವಾರ ಮೇ 16ರಂದು ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್‌ಗೆ ಬಂದಿದೆ. ಈ ಸಿನಿಮಾದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಹೀರೋ ಆಗಿ ನಟಿಸಿದ್ದು, ಹಿರಿಯ ನಟಿ ವಿಜಯಶಾಂತಿ ಮತ್ತೊಂದು ಮುಖ್ಯವಾದ ಪಾತ್ರ ಮಾಡಿದ್ದಾರೆ. ಆಕ್ಷನ್, ಜತೆಗೆ ತಾಯಿ- ಮಗನ ಸೆಂಟಿಮೆಂಟ್‌ನೊಂದಿಗೆ ಸಾಗುವ ಈ ಮೂವಿಗೆ ಪ್ರದೀಪ್ ಚಿಲುಕೂರಿ ನಿರ್ದೇಶನ ಮಾಡಿದ್ದಾರೆ.
ಏಪ್ರಿಲ್ 18ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಕಮರ್ಷಿಯಲ್ ಆಗಿ ಯಶಸ್ಸು ಗಳಿಸಲಿಲ್ಲ. ಇದೀಗ ಇದೇ ʻಅರ್ಜುನ್ ಸನ್ ಆಫ್ ವೈಜಯಂತಿʼ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ನೋಡಬಹುದು. ಈ ಚಿತ್ರದಲ್ಲಿ ಸಾಯಿ ಮಂಜ್ರೇಕರ್, ಶ್ರೀಕಾಂತ್, ಸೋಹೇಲ್ ಖಾನ್, ಬಬ್ಲೂ ಪೃಥ್ವಿರಾಜ್ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜನೀಶ ಲೋಕನಾಥ್ ಸಂಗೀತ ನೀಡಿದ್ದಾರೆ.
ಅನಗನಗ
ʻಅನಗನಗʼ ಸಿನೆಮಾ ನೇರವಾಗಿ ಒಟಿಟಿಯಲಿ ಸ್ಟ್ರೀಮಿಂಗ್ ಆಗುತ್ತಿದೆ. ಸುಮಂತ್ ನಾಯಕನಾಗಿ ನಟಿಸಿರುವ ಈ ಎಮೋಷನಲ್ ಫ್ಯಾಮಿಲಿ ಡ್ರಾಮಾ ಸಿನಿಮಾ, ಏಪ್ರಿಲ್ 15ರಿಂದಲೇ ಇಟಿವಿ ವಿನ್ ಒಟಿಟಿಯಲ್ಲಿ ಲಭ್ಯವಿದೆ. ಕಾರ್ಪೊರೇಟ್ ಶಾಲೆಗಳಲ್ಲಿನ ಶಿಕ್ಷಣ ವ್ಯವಸ್ಥೆ, ತಂದೆ-ಮಗನ ಬಾಂಧವ್ಯದ ಸುತ್ತ ಈ ಮೂವಿ ಸಾಗುತ್ತದೆ. ಈ ಚಿತ್ರವನ್ನು ಸನ್ನಿ ಸಂಜಯ್ ನಿರ್ದೇಶನ ಮಾಡಿದ್ದಾರೆ. ಸುಮಂತ್ ಜೊತೆಗೆ ಕಾಜಲ್ ಚೌದರಿ, ಮಾಸ್ಟರ್ ವಿಹರ್ಷ್, ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಮರಣಮಾಸ್
ಮಲಯಾಳಂ ಡಾರ್ಕ್ ಕಾಮಿಡಿ ಸಿನೆಮಾ ʻಮರಣಮಾಸ್ʼ ಮೇ 14ರಂದು ಸಂಜೆ ಸೋನಿಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ಮೂವಿ ತೆಲುಗು ಡಬ್ಬಿಂಗ್‌ನಲ್ಲೂ ಲಭ್ಯವಿದೆ. ಮಲಯಾಳಂ, ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ. ಏಪ್ರಿಲ್ 10ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಸಿನೆಮಾ ಹಿಟ್ ಪಟ್ಟಿ ಸೇರಿದೆ. ಬಾಸಿಲ್ ಜೋಸೆಫ್ ಹೀರೋ ಆಗಿ ನಟಿಸಿರುವ ʻಮರಣಮಾಸ್ʼ ಮೂವಿಗೆ ಶಿವಪ್ರಸಾದ್ ನಿರ್ದೇಶನ ಮಾಡಿದ್ದಾರೆ. ರಾಜೇಶ್ ಮಾಧವನ್, ಬಾಬು ಆಂಟೋನಿ, ಸಿಜು ಸನ್ನಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಕಾಮಿಡಿ, ಕ್ರೈಮ್, ಟ್ವಿಸ್ಟ್‌ಗಳೊಂದಿಗೆ ಸಾಗುವ ಈ ಚಿತ್ರ ಸೋನಿ ಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
ಗ್ಯಾಂಗರ್ಸ್
ತಮಿಳು ಆಕ್ಷನ್ ಕಾಮಿಡಿ ಮೂವಿ ಗ್ಯಾಂಗರ್ಸ್ ಈ ಶುಕ್ರವಾರ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್‌ಗೆ ಬಂದಿದೆ. ಈ ಸಿನಿಮಾದಲ್ಲಿ ಸುಂದರ್ ಸಿ, ವಡಿವೇಲು, ವಾಣಿ ಭೋಜನ್, ಕ್ಯಾಥರೀನ್ ಥೆರೆಸಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ ಜೊತೆಗೆ ತೆಲುಗು, ಕನ್ನಡ, ಹಿಂದಿಯಲ್ಲಿಯೂ ಈ ಸಿನಿಮಾ ಸ್ಟ್ರೀಮ್ ಆಗುತ್ತಿದೆ. ಏಪ್ರಿಲ್ 24ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆದ ಈ ಸಿನಿಮಾ, ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆರಂಭಿಸಿದೆ.