OTT Releases: ಜೂನ್‌ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ವಿವರ
ಕನ್ನಡ ಸುದ್ದಿ  /  ಮನರಂಜನೆ  /  Ott Releases: ಜೂನ್‌ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ವಿವರ

OTT Releases: ಜೂನ್‌ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ವಿವರ

South OTT Releases In June: ಜೂನ್‌ ತಿಂಗಳ ಕೊನೆಯ ಹನ್ನೆರಡು ದಿನಗಳಲ್ಲಿ ಹಲವು ಹೊಸ ಸಿನಿಮಾ, ವೆಬ್‌ ಸರಣಿಗಳು ಒಟಿಟಿಗೆ ಆಗಮಿಸಲು ಸಿದ್ಧವಾಗಿವೆ. ವಿಶೇಷವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳು ಬಿಡುಗಡೆಯಾಗಲಿವೆ.

OTT Releases: ಜೂನ್‌ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ವಿವರ
OTT Releases: ಜೂನ್‌ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ವಿವರ

Upcoming South OTT Releases In June: ದಕ್ಷಿಣ ಭಾರತದ ಸಿನಿಮಾಗಳಿಗೆ ಈಗ ಒಟಿಟಿಯಲ್ಲಿ ಬೇಡಿಕೆ ಹೆಚ್ಚಾಗಿದೆ. ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿಯ ಕನ್ನಡ ಸಿನಿಮಾಗಳು, ಫಹಾದ್‌ ಫಾಸಿಲ್‌, ಪೃಥ್ವಿರಾಜ್‌ ಸುಕುಮಾರನ್‌ ಸಿನಿಮಾಗಳು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಟರ ಸಿನಿಮಾಗಳಿಗೆ ಜಾಗತಿಕವಾಗಿ ದೊಡ್ಡ ಪ್ರೇಕ್ಷಕರ ಬಳಗ ಇದೆ. ಈ ತಿಂಗಳಲ್ಲಿ ಒಟಿಟಿಯಲ್ಲಿ ಯಾವೆಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳು ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಈ ತಿಂಗಳ ಇನ್ನುಳಿದ ದಿನಗಳಲ್ಲಿ ಹಲವು ಬ್ಲಾಕ್‌ಬಸ್ಟರ್‌ ಸಿನಿಮಾಗಳು ಒಟಿಟಿಗೆ ಆಗಮಿಸಲಿವೆ. ಕೆಲವು ಹಾರರ್‌ ಸಿನಿಮಾಗಳೂ ಆಗಮಿಸಲಿದ್ದು, ಧೈರ್ಯವಂತರು ಮನೆಯಲ್ಲಿಯೇ ಇಂತಹ ಸಿನಿಮಾಗಳನ್ನು ನೋಡಬಹುದು. ಇನ್ನುಳಿದಂತೆ ರೋಮಾಂಟಿಕ್‌, ಹಾಸ್ಯ ಚಿತ್ರಗಳೂ ಮುಂದಿನ ದಿನಗಳಲ್ಲಿ ಒಟಿಟಿಗೆ ಆಗಮಿಸಲಿವೆ.

ಬ್ಯಾಚುಲರ್‌ ಪಾರ್ಟಿ

ದಿಗಂತ್‌, ಲೂಸ್‌ ಮಾದ ಮುಂತಾದ ಪ್ರಮುಖ ಕಲಾವಿದರು ನಟಿಸಿರುವ ಬ್ಯಾಚುಲರ್‌ ಪಾರ್ಟಿ ಕನ್ನಡ ಸಿನಿಮಾವು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

ಆಡುಜೀವಿತಂ: ದಿ ಗೋಟ್‌ ಲೈಫ್‌

ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಸರ್ವೈವಲ್ ಥ್ರಿಲ್ಲರ್ ಆಡುಜೀವಿತಂ ಇನ್ನೂ ಒಟಿಟಿಗೆ ಆಗಮಿಸಿಲ್ಲ. ಈ ತಿಂಗಳ ಅಂತ್ಯದೊಳಗೆ ಒಟಿಟಿಗೆ ಆಗಮಿಸಬಹುದು ಎನ್ನಲಾಗುತ್ತಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಅರಣ್ಮನೈ 4

ಅರಣ್ಮನೈ 4 ಒಂದು ಕಾಮಿಡಿ ಹಾರರ್ ಥ್ರಿಲ್ಲರ್ ಸಿನಿಮಾವಾಗಿದೆ. ಇದು ತಮಿಳಿನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಈ ಸಿನಿಮಾ ಜೂನ್ 21 ರಿಂದ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ರಾಶಿ ಖನ್ನಾ ಮತ್ತು ತಮನ್ನಾ ಇದರಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಗರುಡನ್

ಗರುಡನ್ 2024 ರಲ್ಲಿ ಬಿಡುಗಡೆಯಾದ ತಮಿಳು ಆಕ್ಷನ್ ಥ್ರಿಲ್ಲರ್ ಚಲನಚಿತ್ರಗಳಲ್ಲಿ ಒಂದಾಗಿದೆ. ವೆಟ್ರಿಮಾರನ್ ಕಥೆಯನ್ನು ಒಟಿಟಿಯಲ್ಲಿ ನೋಡಲು ಸಾಕಷ್ಟು ಜನರು ಕಾಯುತ್ತಿರಬಹುದು. ಆರ್‌ಎಸ್ ದುರೈ ಸೆಂಥಿಲ್ ಕುಮಾರ್ ನಿರ್ದೇಶನದ ಗರುಡನ್ ಜೂನ್ 28 ರಿಂದ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ ಎಂದು ವರದಿಗಳು ತಿಳಿಸಿವೆ.

ಗುರುವಾಯೂರ್ ಅಂಬಲನಡಾಯಿಲ್

ಗುರುವಾಯೂರ್ ಅಂಬಲನಾಡಾಯಿಲ್ ವಿಪಿನ್ ದಾಸ್ ನಿರ್ದೇಶನದ ಮಲಯಾಳಂ ಹಾಸ್ಯ ಸಿನಿಮಾವಾಗಿದೆ. ಪೃಥ್ವಿರಾಜ್ ಸುಕುಮಾರನ್, ಬೆಸಿಲ್ ಜೋಸೆಫ್, ನಿಖಿಲಾ ವಿಮಲ್, ಅನಸ್ವರ ರಾಜನ್ ಮತ್ತು ಕಾಲಿವುಡ್ ಹಾಸ್ಯನಟ ಯೋಗಿಬಾಬು ನಟಿಸಿರುವ ಈ ಚಿತ್ರವು ಜೂನ್ 28 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್‌ ಆಗಲಿದೆ.. ಈ ಚಿತ್ರದ ಮೂಲಕ ಯೋಗಿ ಬಾಬು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಗಮ್‌ ಗಮ್‌ ಗಣೇಶ

ಗಮ್ ಗಮ್ ಗಣೇಶವು ಆನಂದ್ ದೇವರಕೊಂಡ ಅಭಿನಯದ ಇತ್ತೀಚಿನ ತೆಲುಗು ಕಾಮಿಡಿ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಈ ಸಿನಿಮಾ ಮೇ 31 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತದೆ. ಇದು ಜೂನ್ ಕೊನೆಯ ವಾರದಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಪ್ರಸಾರವಾಗಲಿದೆ ಎಂದು ವರದಿಗಳು ಹೇಳಿವೆ. ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ಉಯಿರ್ ತಮಿಜುಕ್ಕು

ಉಯಿರ್ ತಮಿಜುಕ್ಕು ಅಜಯನ್ ಬಾಲಾ ಮತ್ತು ಮುರಳಿ ವರ್ಮನ್ ರಚನೆಯ ತಮಿಳು ರಾಜಕೀಯ ಥ್ರಿಲ್ಲರ್ ಸಿನಿಮಾವಾಗಿದೆ. 2021 ರ ತಮಿಳು ರಾಜಕೀಯದ ಮೇಲೆ ಬೆಳಕು ಬೀರುವ ಈ ಸಿನಿಮಾವು ಇದೇ ತಿಂಗಳು ಒಟಿಟಿಗೆ ಆಗಮಿಸಲಿದೆ ಎನ್ನಲಾಗಿದೆ. ಆದಂ ಭಾವ ನಿರ್ದೇಶನದ ಈ ಚಿತ್ರದಲ್ಲಿ ಅಮೀರ್ ಸುಲ್ತಾನ್, ಇಮ್ಮಾನ್ ಅಣ್ಣಾಚಿ ಮತ್ತು ಚಾಂದಿನಿ ಶ್ರೀಧರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆನಂದರಾಜ್, ಶರವಣ ಶಕ್ತಿ, ಸುಬ್ರಮಣ್ಯಂ ಶಿವ ಮತ್ತು ಮಹಾನದಿ ಶಂಕರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಟರ್ಬೊ

ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಅವರ ಇತ್ತೀಚಿನ ಮಲಯಾಳಂ ಸಸ್ಪೆನ್ಸ್ ಥ್ರಿಲ್ಲರ್ ಟರ್ಬೊ ಚಲನಚಿತ್ರವು ಜೂನ್ 28 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಕನ್ನಡ ನಟ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ವಿಜ್ರಂಭಿಸಿದ್ದಾರೆ.

Whats_app_banner