OTT Releases: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸರಣಿಗಳ ಪಟ್ಟಿ; ಕ್ರಿಸ್‌ಮಸ್‌ ಲಾಂಗ್‌ ರಜೆ ಇರುವವರು ತಪ್ಪದೇ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Ott Releases: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸರಣಿಗಳ ಪಟ್ಟಿ; ಕ್ರಿಸ್‌ಮಸ್‌ ಲಾಂಗ್‌ ರಜೆ ಇರುವವರು ತಪ್ಪದೇ ನೋಡಿ

OTT Releases: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸರಣಿಗಳ ಪಟ್ಟಿ; ಕ್ರಿಸ್‌ಮಸ್‌ ಲಾಂಗ್‌ ರಜೆ ಇರುವವರು ತಪ್ಪದೇ ನೋಡಿ

OTT Releases Of This Week: ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸೇರಿದಂತೆ ವಿವಿಧ ಒಟಿಟಿ ವೇದಿಕೆಗಳಲ್ಲಿ ಈ ವಾರ ಹಲವು ಸಿನಿಮಾಗಳು, ವೆಬ್‌ ಸರಣಿಗಳು ಬಿಡುಗಡೆಯಾಗಲಿವೆ. ಕ್ರಿಸ್‌ಮಸ್‌ನಿಂದ ಹೊಸ ವರ್ಷ ಆರಂಭದವರೆಗಿನ ಅವಧಿಯಲ್ಲಿ ಇವುಗಳನ್ನು ನೋಡಬಹುದು.

OTT Releases: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸರಣಿಗಳ ಪಟ್ಟಿ
OTT Releases: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸರಣಿಗಳ ಪಟ್ಟಿ

ಕ್ರಿಸ್‌ಮಸ್‌ ರಜೆ ಬಂದಿದೆ ಏನು ಮಾಡೋದು ಎಂದು ಸಾಕಷ್ಟು ಜನರಿಗೆ ಈಗಾಗಲೇ ಪ್ಲಾನಿಂಗ್‌ ಮಾಡಿಯಾಗಿರಬಹುದು. ರಜಾ ದಿನದ ಆನಂದ ಅನುಭವಿಸಲು ಪ್ರವಾಸ, ಪ್ರಯಾಣ ಕೈಗೊಂಡಿರಬಹುದು. ಇನ್ನೊಂದಿಷ್ಟು ಜನರು ಈ ರಜೆಯಲ್ಲಿ ಹೊರಗೆ ರಶ್‌ಗೆ ಯಾಕೆ ಹೋಗೋದು ಮನೆಯಲ್ಲಿ ಆರಾಮವಾಗಿರೋಣ ಎಂದುಕೊಂಡಿರಬಹುದು. ಕೆಲವರು ಸಲಾರ್‌, ಡಂಕಿಯಂತಹ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿರಬಹುದು. ಇದೇ ಸಮಯದಲ್ಲಿ ಒಟಿಟಿಯಲ್ಲಿ ಒಳ್ಳೊಳ್ಳೆಯ ಸಿನಿಮಾ, ವೆಬ್‌ ಸರಣಿ ನೋಡುತ್ತ ಮನೆಯಲ್ಲಿ ಕಾಲ ಕಳೆಯೋಣ ಎಂದು ಸಾಕಷ್ಟು ಜನರು ಪ್ಲಾನ್‌ ಮಾಡಿರಬಹುದು. ಇದನ್ನು ಓದಿ: ಬೃಂದಾ ಜತೆ ವಾಸುಕಿ ವೈಭವ್‌ ನಗು ಎಷ್ಟು ಚಂದ; ಮದುವೆ ಫೋಟೋಗಳನ್ನು ಹಂಚಿಕೊಂಡು ಹ್ಯಾಪಿ ಕ್ರಿಸ್‌ಮಸ್‌ ಅಂದ ಹಾಡುಗಾರ

ಒಟಿಟಿಯಲ್ಲಿ ಈ ವಾರ ಹಲವು ಹೊಸ ಸಿನಿಮಾಗಳು, ವೆಬ್‌ ಸರಣಿಗಳು ಬಿಡುಗಡೆಯಾಗಿವೆ. ಈ ಕ್ರಿಸ್‌ಮಸ್‌ ಅವಧಿಯಲ್ಲಿ ಲಾಂಗ್‌ ವೀಕೆಂಡ್‌ ಇರುವವರು ಮನೆಯಲ್ಲಿರುವಾಗ ಅಥವಾ ಔಟಿಂಗ್‌ ಹೋಗಿದ್ದಾಗ ಬಿಡುವು ಮಾಡಿಕೊಂಡು ಇವುಗಳನ್ನು ನೋಡಬಹುದು. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸೇರಿದಂತೆ ವಿವಿಧ ಒಟಿಟಿ ವೇದಿಕೆಗಳಲ್ಲಿ ಸಾಕಷ್ಟು ಒಳ್ಳೆಯ ಸಿನಿಮಾಗಳಿವೆ.

ಈಗಾಗಲೇ ಡ್ರೈ ಡೇ, ಹ್ಯೂಮರಸ್ಲಿ ಯುವರ್ಸ್‌ ಸೀಸನ್‌ 3, ಸಾಲ್ಟ್‌ಬರ್ನ್‌, ರೆಬಲ್‌ ಮೂನ್‌- ಪಾರ್ಟ್‌ ಒನ್‌, ಎ ಚೈಲ್ಡ್‌ ಆಫ್‌ ಫೈರ್‌, ಕರ್ರಿ ಆಂಡ್‌ ಸೈನೈಡ್‌ ಮುಂತಾದ ಹಲವು ಸಿನಿಮಾಗಳು, ವೆಬ್‌ ಸರಣಿಗಳು ಬಿಡುಗಡೆಯಾಗಿವೆ. ಈ ವಾರ ಒಟಿಟಿಯಲ್ಲಿ ನೋಡಬಹುದಾದ ಅಂತಹ ಎಂಟು ವೆಬ್‌ ಸರಣಿಗಳು, ಸಿನಿಮಾಗಳ ವಿವರ ಇಲ್ಲಿದೆ.

ಬಾರ್ಬಿ

ಜಿಯೋಸಿನೆಮಾದಲ್ಲಿ ಬಾರ್ಬಿ ಎಂಬ ಸಿನಿಮಾ ಬಿಡುಗಡೆಯಾಗಿದೆ. ಬಾರ್ಬಿ ಪ್ರಿಯರಿಗೆ ಈ ಸಿನಿಮಾ ಹೊಸ ಜಗತ್ತನ್ನು ತೋರಿಸಲಿದೆ. ಇದು ಡಿಸೆಂಬರ್‌ 21ರಂದು ಬಿಡುಗಡೆಯಾಗಿದೆ. ಈ ಕ್ರಿಸ್‌ಮಸ್‌ ರಜೆಯಲ್ಲಿ ತಪ್ಪದೇ ನೋಡಬಹುದು. ಇದನ್ನು ಓದಿ: Salaar Box Office: 3 ದಿನ, 200 ಕೋಟಿ; ಪ್ರಭಾಸ್‌ ನಟನೆಯ ಸಲಾರ್‌ಗೆ ಯಾರಿದ್ದಾರೆ ಸರಿಸಾಟಿ? ಇಲ್ಲಿದೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವರದಿ

ಡ್ರೈ ಡೇ

ಅಮೆಜಾನ್‌ ಪ್ರೈಮ್‌ನಲ್ಲಿ ಡ್ರೈ ಡೇ ಎಂಬ ಸಿನಿಮಾ ಬಿಡುಗಡೆಯಾಗಿದೆ. ಅಜಯ್‌ ಮತ್ತು ಪಲ್ಲವಿ ಎಂಬ ದಂಪತಿ ಡಿವೋರ್ಸ್‌ ನೀಡಲು ಮುಂದಾಗುತ್ತಾರೆ. ಅಜಯ್‌ನ ಈ ನಿರ್ಧಾರವನ್ನು ಬದಲಾಯಿಸಲು ಆತನ ಸ್ನೇಹಿತರು ಹೇಗೆಲ್ಲ ಪ್ರಯತ್ನಿಸುತ್ತಾರೆ ಎಂದು ಈ ಸಿನಿಮಾದಲ್ಲಿ ನೋಡಬಹುದು.

ಮ್ಯಾಸ್ಟ್ರೋ

ಬೆರ್ನ್‌ಸ್ಟಿನ್‌ ಜೀವನಕಥೆ ಈಗ ಮ್ಯಾಸ್ಟ್ರೊ ಹೆಸರಿನ ಸಿನಿಮಾವಾಗಿದೆ. ಕೋಸ್ಟರಿಕಾನ್‌ ನಟಿ ಫೆಲಿಸಿಯಾ ಜತೆ ಈತನ ಪ್ರೀತಿ, ಬಾಂಧವ್ಯದ ಕಥೆಯನ್ನು ಇದು ಹೊಂದಿದೆ. ಇದನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.

ಪೆರ್ಸಿ ಜಾಕ್ಸನ್‌ ಆಂಡ್‌ ದಿ ಒಲಿಪಿಯನ್ಸ್‌

ಹನ್ನೆರಡು ವರ್ಷದ ಆಧುನಿಕ ಡೆಮಿಗಾಡ್‌ ಪೆರ್ಸಿ ಜಾಕ್ಸನ್‌ನ ಕಥೆಯಿದು. ಈತನಿಗೆ ಆಕಾಶದ ದೇವರಿಂದ ಹೊಸ ಪವರ್‌ ದೊರಕಿರುತ್ತದೆ. ಈ ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

ರೆಬಲ್‌ ಮೂನ್‌- ಪಾರಟ್‌ ಒನ್‌: ಎ ಚೈಲ್ಡ್‌ ಆಫ್‌ ಫೈರ್‌

ಅಪರಿಚಿತ ವ್ಯಕ್ತಿಯೊಬ್ಬ ಕೃಷಿ ಪ್ರಧಾನ ಗ್ರಾಮಕ್ಕೆ ಭೇಟಿ ನೀಡುತ್ತಾನೆ. ಆ ಸಮಯದಲ್ಲಿ ಕ್ರೂರ ಮದರ್‌ವರ್ಲ್ಡ್‌ ಆರ್ಮಿ ಅಲ್ಲಿಗೆ ಪ್ರವೇಶಿಸುತ್ತದೆ. ಇಂತಹ ರೋಚಕ ಕಥೆಯನ್ನು ಹೊಂದಿರುವ ಈ ಸರಣಿಯನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.

ಜಿಯೊನ್ಸೆಂಗ್‌ ಕ್ರಿಯೇಚರ್‌

ಹಾರರ್‌ ಸಿನಿಮಾ ಇಷ್ಟಪಡುವವರಿಗೆ ಜಿಯೊನ್ಸೆಂಗ್‌ ಕ್ರಿಯೇಚರ್‌ ಇಷ್ಟವಾಗಬಹುದು. 1945ರಲ್ಲಿ ಜಿಯೋನ್ಸೆಂಗ್‌ ಎಂಬ ಊರಲ್ಲಿ ಒಂದಿಷ್ಟು ಯುವಕ ಯುವತಿಯರು ಇರುತ್ತಾರೆ. ಅಲ್ಲಿನ ದೆವ್ಚದ ಕತೆಗಳು ಜತೆಯಾಗುತ್ತವೆ. ಈ ಭಯಾನಕ ಜಗತ್ತಿನಲ್ಲಿ ಮಾನವ ಜಗತ್ತಿನ ಕುರಿತಾದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ.

ಹ್ಯೂಮರಸಲ್ಲಿ ಯುವರ್ಸ್‌ ಸೀಸನ್‌ 3

ಹಾಸ್ಯನಟ ವಿಫುಲ್‌ ಗೋಯಲ್‌ ಅವರು ಶೀಘ್ರದಲ್ಲಿ ಖ್ಯಾತಿ ಪಡೆಯಲು ಮತ್ತು ಮೆಚ್ಚುಗೆ ಗಳಿಸುವ ಸಲುವಾಗಿ ಹೊಸ ಸವಾಲು ತೆಗೆದುಕೊಳ್ಳುವ ಕಥೆಯಿದು. ಈ ಸೀರಿಸ್‌ ಅನ್ನು ಝೀ5ನಲ್ಲಿ ನೋಡಬಹುದು.

Whats_app_banner