OTT Release This Week: ಆಕ್ಷನ್ ಪ್ರಿಯರಿಗೆ ಹಬ್ಬದೂಟ ಹಾಕಿಸಲು ಬರ್ತಿವೆ ಸಾಲು ಸಾಲು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು
ಈ ವಾರ ಅಂದರೆ ಸೆಪ್ಟೆಂಬರ್ 6 ರಂದು ಹಿಂದಿ ಸಿನಿಮಾಗಳ ಜತೆಗೆ ಹಾಲಿವುಡ್‌ನ ಆಕ್ಷನ್ ಸಿನಿಮಾಗಳೂ ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಚಿತ್ರಗಳು ಮತ್ತು ವೆಬ್‌ಸರಣಿಗಳ ವೀಕ್ಷಣೆ ಯಾವ ಒಟಿಟಿಯಲ್ಲಿ? ಇಲ್ಲಿದೆ ಮಾಹಿತಿ.
Hindi OTT Release This Week: ಈ ವಾರ ಅಂದರೆ ಸೆಪ್ಟೆಂಬರ್ 6 ರಂದು ಹಿಂದಿ ಸಿನಿಮಾಗಳ ಜತೆಗೆ ಹಾಲಿವುಡ್‌ನ ಆಕ್ಷನ್ ಸಿನಿಮಾಗಳೂ ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಸಿನಿಮಾಗಳು ಮತ್ತು ವೆಬ್‌ಸಿರೀಸ್‌ಗಳು ಯಾವ ಒಟಿಟಿಯಲ್ಲಿ ವೀಕ್ಷಿಸಬಹುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಕಿಲ್ Kill (Disney Hotstar)
ಲಕ್ಷ್ಯ ಲಾಲ್ವಾನಿಯ ಬಾಲಿವುಡ್ ಚೊಚ್ಚಲ ಚಿತ್ರ ಕಿಲ್, ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸೆಪ್ಟೆಂಬರ್ 6ರಂದು ಪ್ರೀಮಿಯರ್ ಆಗಲಿದೆ. ಈ ಚಿತ್ರವು ಎನ್‌ಎಸ್‌ಜಿ ಕಮಾಂಡೋ ಆಗಿರುವ ಅಮೃತ್ ರಾಥೋಡ್ ತನ್ನ ಇಚ್ಛೆಗೆ ವಿರುದ್ಧವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ತನ್ನ ಗೆಳತಿ ತುಲಿಕಾಳನ್ನು ರಕ್ಷಿಸುವ ಸಲುವಾಗಿ ಹೋರಾಡುವ ಹತಾಶ ಕಥೆಯಾಗಿದೆ. ವೈರಿಗಳ ದಾಳಿಯಲ್ಲಿ ತುಲಿಕಾಳ ದುರಂತ ಸಾವಿನ ನಂತರ, ಸೇಡಿಗಾಗಿ ಅಮೃತ್ ಹೇಗೆ ಸೆಣಸುತ್ತಾನೆ ಎಂಬುದೇ ಒಂದೆಳೆ. ಚಿತ್ರದಲ್ಲಿ ರಾಘವ್ ಜುಯಲ್, ತಾನ್ಯಾ ಮಾಣಿಕ್ತಾಲಾ, ಅಭಿಷೇಕ್ ಚೌಹಾಣ್ ಮತ್ತು ಆಶಿಶ್ ವಿದ್ಯಾರ್ಥಿ ಸೇರಿ ಇತರರು ನಟಿಸಿದ್ದಾರೆ.
ಕಾಲ್ ಮಿ ಬೇ Call Me Bae (Prime Video)
ಅನನ್ಯಾ ಪಾಂಡೆ ನಟನೆಯ ಕಾಲ್ ಮಿ ಬೇ ಒಂದು ಕಾಮಿಡಿ ಎಳೆಯ ಸಿನಿಮಾ. ಬೆಲ್ಲಾ ಚೌಧರಿ ಎಂಬ ಯುವತಿ ತನ್ನ ಕೋಟ್ಯಾಧಿಪತಿ ಕುಟುಂಬದಿಂದ ಹೊರಬಂದು ಹೇಗೆ ಸಾಮಾನ್ಯರ ಜತೆ ಜೀವನ ದೂಡುತ್ತಾಳೆ ಎಂಬುದೇ ಈ ವೆಬ್‌ಸಿರೀಸ್‌ನ ಕಥೆ. ಈ ಸಿರೀಸ್‌ನಲ್ಲಿ ವೀರ ದಾಸ್, ಗುರ್ಫತೆ ಪಿರ್ಜಾದಾ ಮತ್ತು ವರುಣ್ ಸೂದ್ ನಟಿಸಿದ್ದಾರೆ. ಕಾಲ್ ಮಿ ಬೇ ಸೆಪ್ಟೆಂಬರ್ 6ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಲಿದೆ.
ಫರ್ಫೆಕ್ಟ್ ಕಪಲ್ Perfect Couple (Netflix)
ಎಲಿನ್ ಹಿಲ್ಡರ್‌ಬ್ರಾಂಡ್‌ನ ಹೆಚ್ಚು ಮಾರಾಟವಾದ ಕಾದಂಬರಿಯನ್ನೇ ಆಧರಿಸಿದ ಸಿರೀಸ್ ಫರ್ಫೆಕ್ಟ್ ಕಪಲ್. ಒಟ್ಟು ಆರು ಕಂತುಗಳ ಈ ವೆಬ್‌ಸಿರೀಸ್ ನಾಂಟುಕೆಟ್ ದ್ವೀಪದಲ್ಲಿ ನಡೆಯುವ ಕಥೆಯಾಗಿದೆ. ಒಂದಷ್ಟು ರೋಚಕ ಅಂಶಗಳಿರುವ ಈ ಸಿರೀಸ್ ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
ತಾನವ್ ಸೀಸನ್ 2 Tanaav Season 2 (Sony LIV)
ತಾನವ್ ಸೀಸನ್ 2 ಸೋನಿ ಲೀವ್‌ನಲ್ಲಿ ಪ್ರಸಾರ ಆರಂಭಿಸಿದೆ. ಮೊದಲ ಸೀಸನ್ ತಾನವ್ ಕೊನೆಗೊಂಡಿದ್ದರಿಂದಲೇ ಎರಡನೇ ಸೀಸನ್ ಆರಂಭವಾಗಿದೆ. ಈ ಸಿರೀಸ್‌ನಲ್ಲಿ ಮಾನವ್ ವಿಜ್, ಅರ್ಬಾಜ್ ಖಾನ್, ಡ್ಯಾನಿಶ್ ಹುಸೇನ್, ಏಕ್ತಾ ಕೌಲ್, M. K. ರೈನಾ, ರಜತ್ ಕಪೂರ್, ಸತ್ಯದೀಪ್ ಮಿಶ್ರಾ, ಶಶಾಂಕ್ ಅರೋರಾ, ಸುಮಿತ್ ಕೌಲ್ ಸೇರಿ ಹಲವರು ನಟಿಸಿದ್ದಾರೆ.
ಬ್ಯಾಡ್ ಬಾಯ್ಸ್: ರೈಡ್ ಆರ್ ಡೈ Bad Boys: Ride Or Die (Netflix)
ಆಕ್ಷನ್- ಕಾಮಿಡಿ ಫ್ರ್ಯಾಂಚೈಸ್‌ನ ನಾಲ್ಕನೇ ಚಾಪ್ಟರ್, ಬ್ಯಾಡ್ ಬಾಯ್ಸ್: ರೈಡ್ ಆರ್ ಡೈ ನೆಟ್‌ಫ್ಲಿಕ್ಸ್‌ನಲ್ಲಿ ಸೆ. 6ರಿಂದಲೇ ಸ್ಟ್ರೀಮಿಂಗ್ ಆರಂಭಿಸಲಿದೆ. ಜೂನ್ 7ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಮಾಯಿ ಮಾಡಿತ್ತು. ಇದೀಗ ಇದೇ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಆಗಮಿಸಲು ಸಜ್ಜಾಗಿದೆ. ವಿಲ್ ಸ್ಮಿತ್ ಮತ್ತು ಮಾರ್ಟಿನ್ ಲಾರೆನ್ಸ್‌ರನ್ನು ಮಿಯಾಮಿಯ ಡಿಟೆಕ್ಟಿವ್‌ಗಳಾಗಿ ಎಂಟ್ರಿಕೊಟ್ಟಿದ್ದಾರೆ.